Mycosphaerella angulata
ಶಿಲೀಂಧ್ರ
ರೋಗಕಾರಕ ಜೀವಿಗಳು ಎಲೆಗಳನ್ನು ಮಾತ್ರ ಆಕ್ರಮಿಸುತ್ತವೆ. ರೋಗದ ಆರಂಭಿಕ ಹಂತಗಳಲ್ಲಿ, ಸೋಂಕಿತ ಬಳ್ಳಿಗಳ ಎಲೆಗಳು ಮಸುಕಾದ, ಕ್ಲೋರೋಟಿಕ್ ಕಲೆಗಳನ್ನು ಹೊಂದುತ್ತವೆ. ಇದು ಹೆಚ್ಚಾಗಿ ಎಲೆಯ ಕೆಳ ಮೇಲ್ಮೈ ಮೇಲೆ ಗಣನೀಯವಾಗಿರುತ್ತದೆ. ಗಾತ್ರದಲ್ಲಿ ಬೆಳೆದಂತೆ, ಅನಿಯಮಿತ ಕಂದುಬಣ್ಣದ ಚುಕ್ಕೆಗಳು ಹಳದಿ ಕಲೆಗಳ ಮಧ್ಯಭಾಗದಲ್ಲಿ ಬೆಳೆಯುತ್ತವೆ. ಇದರಿಂದ ಇವುಗಳಿಗೆ ಕೋನೀಯ ಲಕ್ಷಣ ಬರುತ್ತದೆ ಮತ್ತು ಅವುಗಳು ಹೆಚ್ಚು ಎದ್ದು ಕಾಣುತ್ತವೆ. ರೋಗವು ಎಲೆಯ ಉಳಿದ ಭಾಗಗಳಿಗೆ ವಿಸ್ತರಿಸಬಹುದು ಮತ್ತು ಅಂತಿಮವಾಗಿ ಹಳದಿ ಬಣ್ಣಕ್ಕೆ ತಿರುಗಿ ಎಲೆ ಸಾಯಬಹುದು. ರೋಗ ಮುಂದುವರೆದಂತೆ, ಋತುವಿನ ಅಂತ್ಯದ ವೇಳೆಗೆ ಎಲೆ ಉದುರುವಿಕೆಗೆ ಕಾರಣವಾಗಬಹುದು. ಎಲೆಗಳ ಕೊರತೆ ಸಸ್ಯದ ಚಟುವಟಿಕೆ ಮತ್ತು ಇಳುವರಿ ಕಡಿಮೆಯಾಗಲು ಹಾಗು ದ್ರಾಕ್ಷಿಯ ಗುಣಮಟ್ಟ ಕಡಿಮೆಯಾಗಲು ಕಾರಣವಾಗುತ್ತದೆ.
ಕ್ಷಮಿಸಿ, ಮೈಕೋಸ್ಫರೆಲ್ಲಾ ಆಂಗ್ಯುಲೇಟಾ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ಗೊತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದಾದರೂ ವಿಧಾನ ನಿಮಗೆ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಿಮ್ಮ ಉತ್ತರದ ನಿರೀಕ್ಷೆಯಲ್ಲಿರುತ್ತೇವೆ.
ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳಿರುವ ಸಮಗ್ರ ಮಾರ್ಗ ಲಭ್ಯವಿದ್ದರೆ ಅದನ್ನು ಯಾವಾಗಲೂ ಮೊದಲು ಪರಿಗಣಿಸಿ. ಕೋನೀಯ ಎಲೆಚುಕ್ಕೆಯನ್ನು ಸಾಂಪ್ರದಾಯಿಕ ಶಿಲೀಂಧ್ರನಾಶಕಗಳ ಸಕಾಲಿಕ ಬಳಕೆಯ ಮೂಲಕ ನಿಯಂತ್ರಿಸಬಹುದು. ಋತುವಿನ ಆರಂಭದಲ್ಲಿ ಶಿಲೀಂಧ್ರನಾಶಕಗಳ ಪುನರಾವರ್ತಿತ ಬಳಕೆ ಸೋಂಕನ್ನು ತಪ್ಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ.
ಸಸ್ಯ ರೋಗಕಾರಕ ಶಿಲೀಂಧ್ರವಾದ ಮೈಕೋಸ್ಫೆರೆಲ್ಲಾ ಆಂಗ್ಯುಲೇಟಾದಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಮಸ್ಕಡೀನ್ ದ್ರಾಕ್ಷಿಗೆ (ವಿಟಿಸ್ ರೋಟಂಡಿಫೋಲಿಯಾ) ಬರುವ ಪ್ರಮುಖ ರೋಗವಾಗಿದೆ. ಆದರೆ ಇತರ ದ್ರಾಕ್ಷಿಗಳ ಮೇಲೂ ಕೂಡಾ ಪರಿಣಾಮ ಬೀರಬಹುದು. ಬೀಜಗಳು ಗಾಳಿ ಮತ್ತು ನೀರಿನ ತುಂತುರುಗಳಿಂದ ಇತರ ಎಲೆಗಳು ಮತ್ತು ಸಸ್ಯಗಳಿಗೆ ಹರಡುತ್ತವೆ. ಅವು ಎಲೆಗಳ ಮೇಲಿರುವ ನೈಸರ್ಗಿಕ ರಂಧ್ರಗಳು ಅಥವಾ ಗಾಯಗಳ ಮೂಲಕ ಸಸ್ಯಗಳ ಅಂಗಾಂಶಗಳನ್ನು ಪ್ರವೇಶಿಸುತ್ತವೆ. ಮತ್ತು ಸೋಂಕು ತರುತ್ತವೆ. ಸೋಂಕಿತ ಎಲೆಗಳಲ್ಲಿ ದ್ಯುತಿಸಂಶ್ಲೇಷಣೆ ಕಳಪೆಯಾಗಿರುತ್ತದೆ ಮತ್ತು ಇದು ಎಲೆಗಳು ಉದುರಲು ಕಾರಣವಾಗುತ್ತದೆ. ಮತ್ತು ಬಳ್ಳಿಗಳ ಚಟುವಟಿಕೆ ಕಡಿಮೆಯಾಗಲು ಮತ್ತು ದ್ರಾಕ್ಷಿಗಳು ಸೂರ್ಯನ ಕಿರಣಗಳಿಗೆ ನೇರವಾಗಿ ತೆರೆದುಕೊಂಡು ಸುಟ್ಟಂತಾಗುತ್ತವೆ. ಹಣ್ಣು ಬೆಳೆಯುವ ಮೊದಲೇ ಇದು ಸಂಭವಿಸಿದರೆ, ಪೂರ್ತಿ ಬೆಳೆಯುವ ಮುನ್ನವೇ ಸೋಂಕು ಹಣ್ಣುಗಳ ಬೆಳವಣಿಗೆಯನ್ನು ನಿಧಾನಗೊಳಿಸಬಹುದು ಅಥವಾ ನಿಲ್ಲಿಸಬಹುದು. ಬೆಳವಣಿಗೆಯ ಅವಧಿಯ ಮೊದಲಿಗೆ ವಿಶೇಷವಾಗಿ ಬೆಚ್ಚಗಿನ, ಆರ್ದ್ರ ಸ್ಥಿತಿಯಲ್ಲಿ ರೋಗಕಾರಕವು ಹುಲುಸಾಗಿ ಬೆಳೆಯುತ್ತದೆ.