ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಮಾಲ್ ಸೆಕ್ಕೋ

Phoma tracheiphila

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಯ ಮತ್ತು ಚಿಗುರುಗಳ ಅಂತರ್ ನಾಳ ಕ್ಲೋರೋಸಿಸ್ ಕಂಡುಬರುತ್ತದೆ ಮತ್ತು ವಸಂತಕಾಲದಲ್ಲಿ ಕೊಂಬೆಗಳು ಸಾಯುತ್ತವೆ.
  • ಸೋಂಕಿತ ಕೊಂಬೆಗಳು ಮತ್ತು ಬೇರು ಕಾಂಡಗಳ ಮೇಲೆ ಕ್ರಮವಾಗಿ ಮೊಗ್ಗುಗಳು ಮತ್ತು ಬೇರುಗಳು ಬೆಳೆಯುತ್ತವೆ.
  • ಗುಲಾಬಿ ಅಥವಾ ಕಿತ್ತಳೆ ಬಣ್ಣದಲ್ಲಿ ಕಾಣುವಂತೆ, ಆಂತರಿಕ ನಾಳಗಳ ಒಳಗೆ ಗೋಂದು ಉತ್ಪಾದನೆಯಾಗುತ್ತದೆ.


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ಮೊದಲಿಗೆ ಪ್ರತ್ಯೇಕ ಶಾಖೆಗಳು ಅಥವಾ ವಲಯಗಳಲ್ಲಿ ರೋಗಲಕ್ಷಣಗಳು ಕಂಡುಬರಬಹುದು. ಮತ್ತು ಅದನ್ನು ಸರಿಪಡಿಸದೇ ಇದ್ದಲ್ಲಿ, ಮರದ ಉಳಿದ ಭಾಗಕ್ಕೆ ಹರಡಬಹುದು. ಇವು ನಂತರ ಸಾಯಬಹುದು. ಮೊಟ್ಟಮೊದಲ ರೋಗಲಕ್ಷಣಗಳು ವಸಂತಕಾಲದಲ್ಲಿ ಎಲೆ ಮತ್ತು ಚಿಗುರುಗಳ ಅಂತರ್ ನಾಳ ಕ್ಲೋರೋಸಿಸ್ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಕೊಂಬೆಗಳು ಮತ್ತು ಶಾಖೆಗಳು ಸಾಯುತ್ತವೆ. ಮುರುಟಿದ ಕೊಂಬೆಗಳ ಮೇಲೆ ಸೀಸದ- ಅಥವಾ ಬೂದು ಬಣ್ಣದ ಪ್ರದೇಶಗಳೊಳಗಿನ ಉಬ್ಬಿದ ಕಪ್ಪು ಬಣ್ಣದ ಚುಕ್ಕೆಗಳು ಬೀಜಕದ ಗುಂಪನ್ನು ಸೂಚಿಸುತ್ತದೆ. ಸೋಂಕಿತ ಶಾಖೆಗಳ ತಳದಿಂದ ಮೊಗ್ಗುಗಳು ಮತ್ತು ಬೇರುಕಾಂಡದಿಂದ ಹೀರುಬೇರುಗಳ ಬೆಳವಣಿಗೆ ರೋಗಕ್ಕೆ ಆಶ್ರಯದಾತ ಸಸ್ಯ ತೋರುವ ಅತ್ಯಂತ ಸಾಮಾನ್ಯ ಪ್ರತಿಕ್ರಿಯೆಯಾಗಿದೆ. ಸೋಂಕಿತ ಕೊಂಬೆಗಳ ಮರ, ಶಾಖೆಗಳು ಅಥವಾ ಕಾಂಡವನ್ನು ಕತ್ತರಿಸಿ ಅಥವಾ ತೊಗಟೆಯನ್ನು ತೆಗೆದಾಗ, ಮರದ ಮೇಲೆ ವಿಶಿಷ್ಟವಾದ ತಿಳಿ-ಗುಲಾಬಿ ಅಥವಾ ಕಿತ್ತಳೆ-ಕೆಂಪು ಬಣ್ಣವನ್ನು ನೋಡಬಹುದು. ಈ ಆಂತರಿಕ ರೋಗಲಕ್ಷಣವು ನಾಳಗಳಲ್ಲಿ ಗೊಂದು ಉತ್ಪಾದನೆಯಿಂದಾಗಿ ಉಂಟಾಗುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ತಾಮ್ರ ಆಧಾರಿತ ಶಿಲೀಂಧ್ರನಾಶಕಗಳನ್ನು ರೋಗಕಾರಕದ ವಿರುದ್ಧ ಬಳಸಬಹುದು. ರಕ್ಷಿತ ತಾಮ್ರದ ಶಿಲೀಂಧ್ರನಾಶಕಗಳನ್ನು, ಸೋಂಕಿಗೆ ಒಳಗಾಗುವ ಸಾಧ್ಯತೆ ಅತೀ ಹೆಚ್ಚಾಗಿರುವ ಅವಧಿಯಲ್ಲಿ ಅಂದರೆ ಚಳಿಗಾಲದಿಂದ ವಸಂತಕಾಲದವರೆಗೆ ಮೇಲಾವರಣಕ್ಕೆ ಪುನರಾವರ್ತಿತವಾಗಿ ಸಿಂಪಡಿಸುತ್ತಿರಬೇಕು. ರೈಜೋಸ್ಫಿಯರ್ ನಲ್ಲಿ ವಾಸಿಸುವ ಸ್ಯೂಡೋಮೊನಸ್ ಬ್ಯಾಕ್ಟೀರಿಯಾಗಳಾದ ಸ್ಯೂಡೋಮೊನಸ್ ಫ್ಲೋರೊಸೆನ್ಸ್ ಮತ್ತು ಸ್ಯೂಡೋಮೊನಸ್ ಪುಟಿಡಾಗಳು ಅಂಗಾಂಶ ಕೃಷಿಯಲ್ಲಿ ಫೋಮಾ ಟ್ರಾಚಿಪ್ಹಿಲಾ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ ಎಂಬುದು ತಿಳಿದು ಬಂದಿದೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ಸೇರಿಸಿದ ಸಮಗ್ರವಾದ ಮಾರ್ಗ ಲಭ್ಯವಿದ್ದರೆ ಅದನ್ನು ಮೊದಲು ಪರಿಗಣಿಸಿ. ಫೋಮಾ ಟ್ರಾಚಿಪ್ಹಿಲಾ ನಿಯಂತ್ರಣದಲ್ಲಿ ಝಿರಾಮ್ ( ಝಿಂಕ್ ಡೈಮೀಥೆಲ್ಡಿಲ್ಡಿಕಾರ್ಕಾರ್ಬ್ಯಾಮೆಟ್) ಆಧಾರಿತ ಉತ್ಪನ್ನಗಳು ಬಹಳ ಪರಿಣಾಮಕಾರಿ. ಕಾರ್ಬೊಕ್ಸಿನ್ ಮತ್ತು ಬೆಂಜೈಮಿಡಾಜೋಲ್ನಂತಹ ವ್ಯವಸ್ಥಿತ ಉತ್ಪನ್ನಗಳು ಸಹ ತಡೆಗಟ್ಟುವ ಚಿಕಿತ್ಸೆಗಳಲ್ಲಿ ಪರಿಣಾಮಕಾರಿಯಾಗಿದೆ. ರಕ್ಷಕ ಮತ್ತು ವ್ಯವಸ್ಥಿತ ಶಿಲೀಂಧ್ರನಾಶಕದ ಮಿಶ್ರಣ ಒಳ್ಳೆಯದು. ಅದರಲ್ಲೂ, ಶೀತ ಹವಾಮಾನ ಆಲಿಕಲ್ಲು, ಅಥವಾ ಭಾರೀ ಗಾಳಿಯಿಂದ ಮರಕ್ಕೆ ಗಾಯಗಳಾದಾಗ.

ಅದಕ್ಕೆ ಏನು ಕಾರಣ

ಶಿಲೀಂಧ್ರವು ಎಲೆಗಳು, ಕೊಂಬೆಗಳು ಮತ್ತು ಬೇರುಗಳಲ್ಲಿನ ಗಾಯಗಳ ಮೂಲಕ ಪ್ರವೇಶಿಸುತ್ತದೆ. ಬೀಜಕಗಳು ನೀರಿನಲ್ಲಿ ಉತ್ಪಾದನೆಯಾಗುತ್ತವೆ ಎಂದು ಭಾವಿಸಲಾಗಿದೆ. ಮಣ್ಣಿನಲ್ಲಿರುವ ಸೋಂಕಿತ ಕೊಂಬೆಗಳು ಅಥವಾ ಶಾಖೆಗಳಲ್ಲಿ ಶಿಲೀಂಧ್ರವು ನಾಲ್ಕು ತಿಂಗಳುಗಳಿಗಿಂತ ಹೆಚ್ಚಿನ ಕಾಲ ಬದುಕಬಲ್ಲದು. ಇದು ಹಲವಾರು ವಾರಗಳವರೆಗಿನ ರಕ್ಷಿತಕಾಲವಧಿಯ ಪ್ರಮುಖ ಮೂಲವಾಗಿದೆ. ಮಳೆ ಅಥವಾ ಓವರ್ಹೆಡ್ ನೀರಾವರಿ ಮೂಲಕ ಮರಗಳು ಮತ್ತು ಉಳಿಕೆಗಳಿಂದ ಬೀಜಕಗಳು ಹರಡುತ್ತವೆ. ಕೆಲವು ಗಾಳಿ ಮೂಲಕ ಹರಡಬಹುದು. ಶಿಲೀಂಧ್ರ ಸಾಮಾನ್ಯವಾಗಿ ಸ್ವಲ್ಪ ದೂರದವರೆಗೆ ಮಾತ್ರ ಹರಡುತ್ತದೆ. ಅಂದರೆ, ಆರಂಭಿಕ ಸ್ಥಾನದಿಂದ ಸುಮಾರು 15 ರಿಂದ 20 ಮೀ ನಡುವೆ. ಆದರೂ, ಗಾಳಿಯ ದಿಕ್ಕು ದೂರವನ್ನು ಹೆಚ್ಚಿಸಬಹುದು. ಸೋಂಕು ಉಂಟಾಗುವ ತಾಪಮಾನದ ವ್ಯಾಪ್ತಿಯು 14 ರಿಂದ 28 °C ನಡುವೆ ಇರುತ್ತದೆ. 20-25 °C ಅತ್ಯಂತ ಅನುಕೂಲಕರವಾಗಿದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣಿತ ಮೂಲಗಳಿಂದ ಬೀಜಗಳನ್ನು ಖರೀದಿಸಿ.
  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ನೆಡಿ.
  • ರೋಗವು ಸಾಮಾನ್ಯವಾಗಿರುವ ಪ್ರದೇಶಗಳ ನರ್ಸರಿಗಳಿಂದ ಸಸ್ಯಗಳನ್ನು ತರಬೇಡಿ.
  • ಮೊದಲ ರೋಗಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಗಿಡಗಳನ್ನು ಕತ್ತರಿಸಿ.
  • ನಿಯಮಿತವಾಗಿ ತೋಟದ ಮೇಲ್ವಿಚಾರಣೆ ಮಾಡಿ ಮತ್ತು ಬೇರುಸಮೇತ ಕಿತ್ತ ಮರದ ಕಾಂಡವೂ ಸೇರಿದಂತೆ ಬೇಗನೆ ಸೋಂಕಿತ ಸಸ್ಯದ ಭಾಗಗಳನ್ನು ನಾಶಮಾಡಿ.
  • ಕೃಷಿ ಕೆಲಸದ ಸಮಯದಲ್ಲಿ ಗಾಯವಾಗುವುದನ್ನು ತಪ್ಪಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ