Elsinoe fawcettii
ಶಿಲೀಂಧ್ರ
ಗಿಡದ ಪ್ರಭೇದಗಳು ಮತ್ತು ಪರಿಸರದ ಸ್ಥಿತಿಗಳನ್ನು ಅವಲಂಬಿಸಿ ರೋಗಲಕ್ಷಣಗಳು ಕೊಂಚ ಬದಲಾಗುತ್ತವೆ. ಸಾಮಾನ್ಯವಾಗಿ ಮೊದಲಿಗೆ, ಹೊಸ ಎಲೆಗಳಲ್ಲಿ, ಸಣ್ಣ ನೀರಿನಲ್ಲಿ-ನೆನೆಸಿದಂತಹ ಕಲೆಗಳು ಕಾಣಿಸಿಕೊಳ್ಳುತ್ತವೆ. ನಂತರ ಇವು ಎಲೆಗಳ ಎರಡೂ ಬದಿಗಳಲ್ಲಿ ಕೆನೆ-ಹಳದಿ ಅಥವಾ ಗಾಢ ಬಣ್ಣದ ಗಂಟುಗಳಾಗಿ ಬೆಳೆಯುತ್ತವೆ. ರೋಗ ಮುಂದುವರಿದಂತೆ, ಈ ಗಂಟುಗಳು ಗುಂಪುಗಳಾಗಿ ಅನಿಯಮಿತ, ಕಂದು ಬಣ್ಣದ, ನಯವಾದ ತುದಿಯಿರುವ, ಶಂಕುವಿನಾಕಾರದ ವಿರೂಪಗಳಾಗಿ ಮಾರ್ಪಾಡಾಗುತ್ತವೆ. ಇದು ಎಲೆಯ ಬಹು ಭಾಗವನ್ನು ಆವರಿಸುತ್ತದೆ. ಹಳೆಯ ಗಾಯಗಳು, ಗುಳ್ಳೆಯಂತಹ ತುದಿಗಳನ್ನು ಹೊಂದಿದ್ದು ಬಿರುಕುಗಳಿಂದಾಗಿ ಮೇಲ್ಭಾಗ ಒರಟಾಗಿ ಕಾಣಿಸುತ್ತದೆ. ಬಾಧಿತ ಎಲೆಗಳು ಹರಿದ ಅಂಚುಗಳೊಂದಿಗೆ, ರೂಪ ಕಳೆದುಕೊಂಡು, ಸುಕ್ಕುಗಟ್ಟಿದಂತೆ ಅಥವಾ ನೆರಿಗೆಗಟ್ಟಿದಂತೆ ಕಾಣುತ್ತವೆ. ಎಳೆಯ ಕೊಂಬೆಗಳು, ಚಿಗುರುಗಳು ಮತ್ತು ಕಾಂಡಗಳು ಕೂಡ ಇದೇ ರೋಗಲಕ್ಷಣಗಳನ್ನು ತೋರಿಸಬಹುದು. ಕುಂಠಿತ ಮತ್ತು ಪೊದೆಯಂತಹ ಬೆಳವಣಿಗೆ ಸಾಮಾನ್ಯ ಲಕ್ಷಣಗಳಾಗಿವೆ. ಸೋಂಕು ತೀವ್ರವಾದಾಗ, ಎಲೆ ಉದುರುತ್ತದೆ. ಹಣ್ಣುಗಳಲ್ಲಿ, ಈ ಗಂಟುಗಳು ಸ್ವಲ್ಪ ಊದಿದಂತಿರುತ್ತವೆ ಮತ್ತು ಗುಲಾಬಿ ಅಥವಾ ತಿಳಿ ಕಂದು ಬಣ್ಣದಲ್ಲಿರುತ್ತವೆ. ಇವು ಪ್ರೌಢಾವಸ್ಥೆ ತಲುಪಿದಾಗ, ದಟ್ಟವಾದ ನರಹುಲಿಗಳಂತಹ ಗಂಟುಗಳಾಗಿ ಹಳದಿ ಮಿಶ್ರಿತ ಕಂದು ಅಥವಾ ಬೂದು ಬಣ್ಣವನ್ನು ಹೊಂದಿರುತ್ತವೆ.
ಈ ಶಿಲೀಂಧ್ರಗಳ ವಿರುದ್ಧ ಯಾವುದೇ ಜೈವಿಕ ಚಿಕಿತ್ಸೆ ಲಭ್ಯವಿಲ್ಲ. ತಾಮ್ರವನ್ನು ಆಧರಿಸಿದ ಪ್ರಮಾಣೀಕೃತ ಸಾವಯವ ಶಿಲೀಂಧ್ರನಾಶಕಗಳನ್ನು ಹೊಸ ಸೋಂಕು ಮತ್ತು ಶಿಲೀಂಧ್ರಗಳ ಹರಡುವಿಕೆಯನ್ನು ತಡೆಗಟ್ಟಲು ಬಳಸಬಹುದು. ಸರಿಯಾಗಿ ಬಳಸದಿದ್ದಲ್ಲಿ ತಾಮ್ರವು ವಿಷಕಾರಿ ಆಗಿರುವುದರಿಂದ ಹೆಚ್ಚಿನ ಎಚ್ಚರ ಅಗತ್ಯ.
ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ಹೊಂದಿರುವ ಸಮಗ್ರ ಮಾರ್ಗವಿದ್ದರೆ ಅದನ್ನು ಮೊದಲು ಪರಿಗಣಿಸಿ. ಥೀರಮ್, ಡಿಫೆನೊಕೊನಜೋಲ್ ಮತ್ತು ಕ್ಲೋರೊಥಲೋನಿಲ್ಗಳನ್ನು ಆಧರಿಸಿದ ರಕ್ಷಿತ ಶಿಲೀಂಧ್ರನಾಶಕಗಳನ್ನು, ಸೋಂಕಿನ ವ್ಯಾಪಕತೆಯನ್ನು ತಡೆಗಟ್ಟಲು ಬಳಸಬಹುದು. ವ್ಯವಸ್ಥಿತ ಶಿಲೀಂಧ್ರನಾಶಕಗಳು ಮತ್ತೊಂದು ಆಯ್ಕೆ. ಶಿಲೀಂಧ್ರನಾಶಕ-ಸಹಿಷ್ಣು ರೋಗಕಾರಕ ತಳಿಗಳು ಕಂಡುಬಂದಿವೆ.
ನಿಂಬೆ ಗಿಡದ ವಿವಿಧ ಜಾತಿಗಳಲ್ಲಿ ವಿಭಿನ್ನ ರೀತಿಯ ರೋಗಲಕ್ಷಣಗಳನ್ನು ಉಂಟುಮಾಡುವ ಶಿಲೀಂಧ್ರಗಳಾದ ಎಲ್ಸಿನೋ ಫಾಸ್ಸೆಟ್ಟಿ ಮತ್ತು ಇ. ಆಸ್ಟ್ರೇಲಿಸ್ ರೋಗಗಳಿಗೆ ಕಾರಣ. ನಿಂಬೆಹಣ್ಣು, ದ್ರಾಕ್ಷಿ , ಕಿತ್ತಳೆ ಈ ಎರಡೂ ಶೀಲೀಂಧ್ರಗಳ ದಾಳಿಗೆ ಒಳಗಾಗುತ್ತವೆ. ಎಲ್ಸಿನೊ ಫಾಸ್ಸೆಟ್ಟಿ ಮುಖ್ಯವಾಗಿ ಹುಳಿ ಕಿತ್ತಳೆ ಮತ್ತು ಕೆಲವು ರೀತಿಯ ಸಿಹಿ ಕಿತ್ತಳೆಗಳಿಗೆ ಮಾತ್ರ ಸೋಂಕು ತರುತ್ತದೆ. ಇದಕ್ಕೆ ವಿರುದ್ಧವಾಗಿ, ಇ. ಆಸ್ಟ್ರೇಲಿಸ್ ಸಿಹಿ ಕಿತ್ತಳೆ ಮತ್ತು ಲೈಮ್ ಸ್ಕ್ಯಾಬ್ ಉಂಟುಮಾಡುತ್ತದೆ ಆದರೆ ಹುಳಿ ಕಿತ್ತಳೆಗೆ ಹಾನಿ ಮಾಡುವುದಿಲ್ಲ. ಎಲೆಗಳ ಮೇಲೆ ಗುಲಾಬಿಯಿಂದ ಕಂದು ಬಣ್ಣದ ಗುಂಪು ಗುಂಪಾದ ರಚನೆಗಳು ಮತ್ತು ಹಣ್ಣಿನ ಮೇಲಿನ ಗಂಟುಗಳಂತಹ ರಚನೆಗಳು ಬೀಜಕಗಳಾಗಿವೆ. ಇವು ಮಳೆ ಮಂಜು, ಗಾಳಿ ಅಥವಾ ಓವರ್ಹೆಡ್ ನೀರಾವರಿಯಿಂದ ಪ್ರಸರಣಗೊಳ್ಳುತ್ತವೆ. ಸಿಟ್ರಸ್ ಸ್ಕ್ಯಾಬ್ ನ ರೋಗಕಾರಕಗಳ ಪೈಕಿ ಇ. ಫಾಸ್ಸೆಟ್ಟಿ ಹೆಚ್ಚು ವ್ಯಾಪಕವಾಗಿದೆ. ಆದರೆ, ಆರ್ಥಿಕ ದೃಷ್ಚಿಯಿಂದ ಇ. ಆಸ್ಟ್ರೇಲಿಸ್ ಹೆಚ್ಚು ಮಹತ್ವದ್ದಾಗಿದೆ. ಏಕೆಂದರೆ, ಇದು ಹೆಚ್ಚು ವ್ಯಾಪಕವಾಗಿ ಬೆಳೆಯಲ್ಪಡುವ ಬೆಳೆಗೆ ಹಾನಿ ಉಂಟುಮಾಡುತ್ತದೆ.