Phyllosticta citricarpa
ಶಿಲೀಂಧ್ರ
ಶಿಲೀಂಧ್ರವು ವಿವಿಧ ರೀತಿಯ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ, ಮುಖ್ಯವಾಗಿ ಅವು ಹಣ್ಣುಗಳ ಮೇಲೆ ಕಂಡುಬರುತ್ತದೆ. ಗಟ್ಟಿಯಾದ ಕಲೆಯ ಗಾಯಗಳು ವ್ಯಾಸದಲ್ಲಿ ಹಲವಾರು ಮಿಲಿಮೀಟರ್ಗಳಿರುತ್ತವೆ. ಈ ಕಲೆಗಳು ಗುಂಡಿ ರೀತಿಯಲ್ಲಿದ್ದು, ಅವುಗಳ ಮಧ್ಯಭಾಗ ತಿಳಿ ಬಣ್ಣವಾಗಿರುತ್ತದೆ, ಗಾಢ ಕಂದು ಅಥವಾ ಕಪ್ಪು ಬಣ್ಣದ ಅಂಚಿರುತ್ತದೆ, ಮತ್ತು ಸಾಮಾನ್ಯವಾಗಿ ಕಳಿತ ಕಿತ್ತಳೆ ಹಣ್ಣಿನ ಮೇಲೆ ಹಸಿರು ಬಣ್ಣದ ಪ್ರಭಾಲಯವಿರುತ್ತದೆ. ಹುಸಿಯಾದ ಮೆಲನೋಸ್ ಎಂದರೆ ಊದಿದ ಗಾಢ ಕಂದು ಅಥವಾ ಕಪ್ಪು ಬಣ್ಣದ ಮಚ್ಚೆಗಳು ಮತ್ತು ಅವು ಹಸಿರು ಬಣ್ಣದ ಹಣ್ಣುಗಳ ಮೇಲೆ ಒಂದುಗೂಡಿ ದೊಡ್ಡದಾಗುತ್ತವೆ. ಚುಕ್ಕೆಗಳುಳ್ಳ ಕಲೆಗಳು ಕಿತ್ತಳೆ ಅಥವಾ ಕೆಂಪು ಬಣ್ಣದ್ದಾಗಿದ್ದು, ಚಪ್ಪಟೆಯಾಗಿರುತ್ತವೆ, 1-3 ಮಿಮೀ ವ್ಯಾಸವಿರುತ್ತದೆ ಮತ್ತು ಅವು ಋತುವಿನ ಕೊನೆಯಲ್ಲಿ ಬರುತ್ತವೆ. ಕಲೆಗಳು ಬೆಳೆದಂತೆ ಕಂದು ಬಣ್ಣಕ್ಕೆ ತಿರುಗುತ್ತವೆ. ವಿಷಯುಕ್ತ ಕಲೆಗಳು ದೊಡ್ಡದಾಗಿರುತ್ತವೆ, ಸ್ವಲ್ಪ ಗುಳಿಬಿದ್ದಿರುತ್ತವೆ ಮತ್ತು ಕಳಿತ ಹಣ್ಣಿನ ಅಗಲಕ್ಕೂ ಅನಿಯಮಿತವಾಗಿ ಹರಡುತ್ತವೆ. ಎಲೆಗಳ ಮೇಲೆ ಗಾಯಗಳು ಅಷ್ಟಾಗಿ ಕಂಡುಬರುವುದಿಲ್ಲವಾದರೂ, ಕೆಲವೊಮ್ಮೆ ನಿಂಬೆ ಮರಗಳಲ್ಲಿ ಚಿಕ್ಕದಾದ, ಗುಳಿಬಿದ್ದ ನೆಕ್ರೋಟಿಕ್ ಕಲೆಗಳಿರುತ್ತವೆ ಮತ್ತು ಅವುಗಳ ಮಧ್ಯ ಭಾಗ ತಿಳಿ ಬಣ್ಣವಾಗಿದ್ದು, ಗಾಢ ಬಣ್ಣದ ಅಂಚು ಮತ್ತು ಕ್ಲೋರೋಟಿಕ್ ಪ್ರಭಾಲಯವಿರುತ್ತದೆ.
ಬಲೆಗಳ ಮೂಲಕ ಬೀಜಕಗಳನ್ನು ಪರಿಶೀಲಿಸುವುದು ಮತ್ತು ಮಳೆ ಮತ್ತು ಇಬ್ಬನಿಯ ಮಾಪನಗಳನ್ನು ಮಾಡುವ ಮೂಲಕ ಶಿಲೀಂಧ್ರನಾಶಕಗಳನ್ನು ಸಿಂಪಡಿಸುವ ಸಮಯವನ್ನು ನಿರ್ಧರಿಸಲು ಸಹಾಯವಾಗುತ್ತದೆ. ತಾಮ್ರದ ಉತ್ಪನ್ನಗಳನ್ನು ಈ ರೋಗಕಾರಕದ ವಿರುದ್ಧ ಬಳಸಬಹುದಾಗಿದೆ. ಬಿಸಿನೀರನ್ನು ಬಳಸಿ ಕೊಯ್ಲಿನ ನಂತರ ಸಂಸ್ಕರಣೆ ಮಾಡುವುದು ಅಥವಾ ಹಣ್ಣುಗಳ ವ್ಯಾಕ್ಸಿಂಗ್ ಸಹ ರೋಗಕಾರಕದ ಕಾರ್ಯಸಾಧ್ಯತೆ ಮತ್ತು ರೋಗಲಕ್ಷಣಗಳ ತೋರಿಕೆಯನ್ನು ಕಡಿಮೆಮಾಡುತ್ತದೆ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಸಾಗಾಣಿಕೆ ಅಥವಾ ಶೇಖರಣೆಯ ಸಮಯದಲ್ಲಿ ಹಣ್ಣುಗಳ ಮೇಲೆ ಬರಬಹುದಾದ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಕೊಯ್ಲಿಗೆ ಮುಂಚಿತವಾಗಿ ಬೆಂಜಿಮಿಡಜೋಲ್ ಶಿಲೀಂಧ್ರನಾಶಕಗಳನ್ನು ಸಿಂಪಡಿಸಬಹುದು. ಬ್ಲಾಕ್ ಸ್ಪಾಟ್ ಗಾಯಗಳಲ್ಲಿ ಗುಜಟೈನ್ ಅಥವಾ ಇಮಾಜಲಿಲ್ನೊಂದಿಗಿನ ಚಿಕಿತ್ಸೆಗಳು ರೋಗಕಾರಕದ ಕಾರ್ಯಸಾಧ್ಯತೆಯನ್ನು ಕಡಿಮೆಮಾಡುತ್ತವೆ. ಸ್ಟ್ರೋಬಿಲ್ಲುರಿನ್ಸ್, ಡಿಥಿಯೊಕಾರ್ಬಮೇಟ್ಸ್ ಮತ್ತು ಬೆಂಜೈಮಿಡಾಜೋಲ್ಸ್ ಗಳಂತಹ ಶಿಲೀಂಧ್ರನಾಶಕಗಳು ಸಹ ಶಿಲೀಂಧ್ರದ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ, ಆದರೆ ಅನೇಕ ಪ್ರದೇಶಗಳಲ್ಲಿ ಇವುಗಳಿಗೆ ಪ್ರತಿರೋಧಗಳು ಸಹ ಬೆಳೆದಿವೆ.
ಶಿಲೀಂಧ್ರವು ಎಲೆಯ ಉಳಿಕೆಗಳಲ್ಲಿ ಚಳಿಗಾಲವನ್ನು ಕಳೆಯುತ್ತದೆ ಮತ್ತು ವಸಂತಕಾಲದಲ್ಲಿ ಬೀಜಕಗಳನ್ನು ಉತ್ಪತ್ತಿ ಮಾಡಲು ಪ್ರಾರಂಭಿಸುತ್ತದೆ, ಈ ಪ್ರಕ್ರಿಯೆಯು ಎಲೆಯ ಉಳಿಕೆಗಳು ಸತತವಾಗಿ ತೇವಗೊಳ್ಳುವುದು ಮತ್ತು ಒಣಗುವ ಮೂಲಕ ವೇಗವಾಗುತ್ತದೆ. ಮಳೆ ಅಥವಾ ನೀರಾವರಿ ಸಮಯದಲ್ಲಿ ಬೀಜಕಗಳನ್ನು ಹೊರಹಾಕಲಾಗುತ್ತದೆ, ಅವು ಗಾಳಿ ಮತ್ತು ನೀರಿನಿಂದ ಹರಡುತ್ತವೆ ಮತ್ತು ಸೂಕ್ಷ್ಮ ಅಂಗಾಂಶದ ಮೇಲೆ ಅಂಟಿಕೊಂಡ ಮೇಲೆ ಕುಡಿಯೊಡೆಯುತ್ತವೆ. ಎಲೆಗಳು ಸುಮಾರು 10 ತಿಂಗಳ ವರೆಗೆ ದುರ್ಬಲವಾಗಿರುತ್ತವೆ, ಹಣ್ಣುಗಳು ಬೆಳೆದ ನಂತರ ಸುಮಾರು 4-5 ತಿಂಗಳುಗಳ ಸಮಯದವರೆಗೆ ದುರ್ಬಲವಾಗಿರುತ್ತವೆ. ಸೋಂಕಿನ ನಂತರ, ಶಿಲೀಂಧ್ರವು ಹೊರಪೊರೆ ಮತ್ತು ಎಪಿಡರ್ಮಿಸ್ ನಡುವಿನ ಭಾಗವನ್ನು ವಸಾಹತುಗೊಳಿಸುತ್ತದೆ. ಹಣ್ಣು ಪಕ್ವವಾಗುವ ತನಕ ಸೋಂಕು ಸುಪ್ತವಾಗಿರುತ್ತದೆ ಮತ್ತು ಅಗೋಚರವಾಗಿರುತ್ತದೆ. ಎಲೆಗಳಲ್ಲಿರುವ ಸೋಂಕು ಸಾಮಾನ್ಯವಾಗಿ ಸುಪ್ತವಾಗಿ ಉಳಿಯುತ್ತದೆ, ಆದರೆ ಎಲೆಗಳ ಕಲೆಗಳು ಹಳೆಯ ಎಲೆಗಳಲ್ಲಿ ಕಂಡುಬರುತ್ತವೆ. ಎಲೆಯ ಗಾಯಗಳು ಸಾಮಾನ್ಯವಾಗಿ ಜೆಲಟಿನ್‌ನಂಥ ದ್ರವ್ಯರಾಶಿಯಲ್ಲಿ ಬೀಜಕಗಳನ್ನು ಉತ್ಪತ್ತಿ ಮಾಡುತ್ತವೆ, ಇದು ಒದ್ದೆಯಾದ ಪರಿಸ್ಥಿತಿಗಳಲ್ಲಿ ಕರಗುತ್ತದೆ. ಆಗಾಗ್ಗೆ ಬರುವ ಮಳೆ ಅಥವಾ ನೀರಿನ ಎರಚಲ ಮೂಲಕ ರೋಗವು ವೇಗವಾಗಿ ಹರಡುತ್ತದೆ.