Colletotrichum gloeosporioides
ಶಿಲೀಂಧ್ರ
ಎಲೆಗಳ ಮೇಲೆ ನೇರಳೆ ಬಣ್ಣದ ಅಂಚುಗಳಿರುವ ತೆಳು ಹಳದಿ-ಕಂದು ಬಣ್ಣದ ಹೆಚ್ಚು ಅಥವಾ ಕಡಿಮೆ ವೃತ್ತಾಕಾರದ ಕಲೆಗಳು ಬರುತ್ತವೆ. ಈ ಕಲೆಗಳ ಮಧ್ಯಭಾಗವು ಕ್ರಮೇಣ ಬೂದು ಬಣ್ಣಕ್ಕೆ ತಿರುಗುತ್ತದೆ ಮತ್ತು ಸೋಂಕಿನ ನಂತರದ ಹಂತಗಳಲ್ಲಿ, ಇದರ ಮೇಲೆ ಸಣ್ಣ ಕಪ್ಪು ಬಣ್ಣದ ಗುಂಡಿಯಿರುವ ಚುಕ್ಕೆಗಳು ಕಂಡುಬರುತ್ತವೆ. ಪರಿಸರದ ಅಂಶಗಳಿಂದ (ಕೀಟಗಳಿಂದಾದ ಹಾನಿ ಅಥವಾ ಏಟುಗಳಿಂದಾದ ಗಾಯಗಳು) ಗಾಯಗೊಂಡ ಅಂಗಾಂಶಗಳು ಆಂಥ್ರಾಕ್ನೋಸ್ ಶಿಲೀಂಧ್ರಗಳ ವಸಾಹತೀಕರಣಕ್ಕೆ ಸೂಕ್ಷ್ಮವಾಗಿರುತ್ತವೆ. ಸೂರ್ಯನ ಬೆಳಕು, ರಾಸಾಯನಿಕ ಸುಡುವಿಕೆ, ಕೀಟ ಹಾನಿ, ಮೂಗೇಟುಗಳು, ಅಥವಾ ಪ್ರತಿಕೂಲವಾದ ಶೇಖರಣಾ ಸ್ಥಿತಿಗತಿಗಳಂತಹ ಇತರ ಏಜೆಂಟ್ಗಳಿಂದ ಹಿಂದೆ ಗಾಯಗೊಂಡ ಹಣ್ಣುಗಳಿಗೆ ವಿಶೇಷವಾಗಿ ಅಂಥ್ರಾಕ್ನೋಸ್ ನ ಸೋಂಕಾಗುವ ಸಾಧ್ಯತೆಗಳಿವೆ. ಹಣ್ಣಿನ ರೋಗಲಕ್ಷಣಗಳೆಂದರೆ ಗಟ್ಟಿಯಾದ, ಕಂದು ಬಣ್ಣ ಅಥವಾ ಕಪ್ಪು ಬಣ್ಣದ, ಸುಮಾರು 1.5 ಮಿ.ಮೀ. ವ್ಯಾಸದ ಕಲೆಗಳು. ಗಾಯಗಳ ಮೇಲೆ ಬೆಳೆಯುವ ಬೀಜಕ ದ್ರವ್ಯಗಳು ಸಾಮಾನ್ಯವಾಗಿ ಕಂದು ಅಥವಾ ಕಪ್ಪು ಬಣ್ಣದ್ದಾಗಿರುತ್ತವೆ, ಆದರೆ ಆರ್ದ್ರ ಪರಿಸ್ಥಿತಿಗಳಲ್ಲಿ ಅವು ಗುಲಾಬಿ ಅಥವಾ ಸಾಲ್ಮನ್ ಬಣ್ಣಗಳಿಗೆ ಬದಲಾಗಬಹುದು.
ಬ್ಯಾಸಿಲಸ್ ಸಬ್ಟಿಲಿಸ್ ಅಥವಾ ಬ್ಯಾಸಿಲಸ್ ಮೈಲೊಲಿಕ್ಫ್ಯಾಸಿಯನ್ಸ್ ಆಧರಿಸಿದ ಜೈವಿಕ-ಶಿಲೀಂಧ್ರನಾಶಕಗಳನ್ನು ಅನುಕೂಲಕರ ಹವಾಮಾನದ ಸಂದರ್ಭಗಳಲ್ಲಿ ಸಿಂಪಡಿಸಿದರೆ ಅದು ಚೆನ್ನಾಗಿ ಕೆಲಸ ಮಾಡುತ್ತದೆ. ಬೀಜಗಳು ಅಥವಾ ಹಣ್ಣುಗಳಿಗೆ ಬಿಸಿ ನೀರಿನ ಸಂಸ್ಕರಣೆ ಮಾಡಿದರೆ (48°C ನಲ್ಲಿ 20 ನಿಮಿಷಗಳ ಕಾಲ) ಅದು ಉಳಿದಿರುವ ಶಿಲೀಂಧ್ರಗಳನ್ನು ಕೊಲ್ಲುತ್ತದೆ ಮತ್ತು ಹೊಲದಲ್ಲಿ ಅಥವಾ ಸಾಗಣೆ ಸಮಯದಲ್ಲಿ ರೋಗದ ಹರಡುವಿಕೆಯನ್ನು ತಡೆಗಟ್ಟುತ್ತದೆ. ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ತಾಮ್ರದ ಸಲ್ಫೇಟ್ ಅನ್ನು ಒಳಗೊಂಡಿರುವ ಶಿಲೀಂಧ್ರನಾಶಕಗಳೊಂದಿಗೆ ಎಲೆಗಳ ಮೇಲೆ ದ್ರವೌಷಧಗಳ ಸಿಂಪರಿಕೆ ಅಥವಾ ಬೀಜ ಸಂಸ್ಕರಣೆಯನ್ನು ಮಾಡಬಹುದು.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಅಜೋಕ್ಸಿಸ್ಟ್ರೋಬಿನ್ ಅಥವಾ ಕ್ಲೋರೊಥಲೋನಿಲ್ ಹೊಂದಿರುವ ಶಿಲೀಂಧ್ರನಾಶಕಗಳನ್ನು ನಿಯಮಿತವಾಗಿ ಸಿಂಪಡಿಸಬಹುದಾಗಿದೆ. ಈ ಸಂಯುಕ್ತಗಳೊಂದಿಗೆ ಬೀಜ ಸಂಸ್ಕರಣೆಯನ್ನು ಸಹ ಮಾಡಬಹುದು. ಅಂತಿಮವಾಗಿ, ಸಾಗರೋತ್ತರ ಮಾರುಕಟ್ಟೆಗಳಿಗೆ ಕಳುಹಿಸಲ್ಪಡುವ ಹಣ್ಣುಗಳ ಮೇಲೆ ರೋಗದ ಸಂಭವವನ್ನು ಕಡಿಮೆ ಮಾಡಲು ಕೊಯ್ಲಿನ ನಂತರ, ಶಿಲೀಂಧ್ರನಾಶಕಗಳನ್ನು ಆಹಾರ-ದರ್ಜೆಯ ಮೇಣದೊಂದಿಗೆ ಸೇರಿಸಿ ಬಳಸಬಹುದು.
ಅಂಥ್ರಾಕ್ನೋಸ್ ಕ್ಯಾನೋಪಿಯಲ್ಲಿರುವ ಸತ್ತ ಮರದ ಮೇಲೆ ಬೆಳೆಯುತ್ತದೆ, ಮತ್ತು ಇದು ಮಳೆಯ ಎರಚಲು, ತೀವ್ರವಾದ ಇಬ್ಬನಿ, ಮತ್ತು ಓವರ್ಹೆಡ್ ನೀರಾವರಿ ಮೂಲಕ ಸ್ವಲ್ಪ ದೂರದವರೆಗೆ ಹರಡುತ್ತದೆ. ಈ ರೀತಿಯಾಗಿ, ಇದು ಎಳೆಯ ಎಲೆಗಳು ಮತ್ತು ಹಣ್ಣುಗಳ ಸೂಕ್ಷ್ಮ ಅಂಗಾಂಶವನ್ನು ತಲುಪುತ್ತದೆ, ಮತ್ತು ರೋಗಲಕ್ಷಣಗಳನ್ನು ಪ್ರಚೋದಿಸಿ ಬೆಳೆಯಲು ಪ್ರಾರಂಭಿಸುತ್ತದೆ. ಎಲೆಗಳು ಮತ್ತು ಹಣ್ಣುಗಳ ಮೇಲಿರುವ ಕಲೆಗಳು ಮತ್ತು ಗಾಯಗಳ ಮೇಲೆ ಬೆಳೆಯುತ್ತಿರುವ ಲೈಂಗಿಕ ಭಾಗಗಳಲ್ಲಿ ಬೀಜಕಗಳ ಹೊಸ ಬ್ಯಾಚ್ಗಳು ಬೆಳೆಯುತ್ತವೆ. ಈ ಬೀಜಕಗಳು ವಾಯುಗಾಮಿಯಾಗಿ ಪರಿಣಮಿಸಬಹುದು ಮತ್ತು ತರುವಾಯ ದೂರದ ಜಾಗಾಗಳಿಗೆ ರೋಗವನ್ನು ಹರಡಬಹುದು. ಬೀಜಕಗಳು ಒಮ್ಮೆ ಕುಡಿಯೊಡೆದರೆ ಅವು ವಿಶ್ರಾಂತಿ ಸ್ಥಿತಿಗೆ ಹೋಗುತ್ತವೆ, ಮತ್ತು ಗಾಯಗಳು ಆಗುವವರೆಗೂ ಅಥವಾ ಕೊಯ್ಲಿನ ನಂತರ ಹಣ್ಣಿನ ಸಂಸ್ಕರಣೆ ಮಾಡುವವರೆಗೂ (ಉದಾಹರಣೆಗೆ ಡಿಗ್ರೀನಿಂಗ್) ಅವು ಸುಪ್ತವಾಗಿರುತ್ತವೆ. ಶಿಲೀಂಧ್ರದ ಬೆಳವಣಿಗೆಗೆ ಸೂಕ್ತವಾದ ಪರಿಸ್ಥಿತಿಗಳೆಂದರೆ ಅಧಿಕ ಆರ್ದ್ರತೆ ಮತ್ತು 25-28 °C ನ ಉಷ್ಣತೆ, ಆದರೆ ಸಾಮಾನ್ಯವಾಗಿ 20-30 °C ನಲ್ಲಿ ಸೋಂಕು ಹರಡಬಹುದು.