Alternaria alternata
ಶಿಲೀಂಧ್ರ
ಆರಂಭದಲ್ಲಿ, ಚಿಕ್ಕ ಎಲೆಗಳ ಮೇಲೆ ಸಣ್ಣ ಕಂದು ಅಥವಾ ಕಪ್ಪು ಬಣ್ಣದ ಕಲೆಗಳ ರೀತಿಯಲ್ಲಿ ಗಾಯಗಳು ಬರುತ್ತವೆ. ಅದರ ಸುತ್ತ ಹಳದಿ ಬಣ್ಣದ ಪ್ರಭಾವಾಲಯಗಳಿರುತ್ತವೆ, ಸಾಮಾನ್ಯವಾಗಿ ಅಂಚಿನಲ್ಲಿ. ಗಾಯಗಳು ಅನಿಯಮಿತ ಅಥವಾ ವೃತ್ತಾಕಾರದ ನೆಕ್ರೋಟಿಕ್ ಗಾಯಗಳಾಗಿ ಹರಡಿ ಎಲೆಗಳ ಬಹುಪಾಲು ಎಲ್ಲಾ ಭಾಗವನ್ನು ಆವರಿಸುತ್ತವೆ. ನೆಕ್ರೋಸಿಸ್ ಮತ್ತು ಕ್ಲೋರೋಸಿಸ್ ಎಲೆಗಳ ಸಿರೆಗಳಲ್ಲಿ ಸಹ ಹರಡಬಹುದು. ಗಾಯಗಳು ಚಪ್ಪಟೆಯಾಗಿರುತ್ತವೆ ಮತ್ತು ಎಲೆಗಳ ಮೇಲೆ ಎರಡೂ ಬದಿಗಳಲ್ಲಿ ಕಾಣುತ್ತವೆ. ಹಳೆಯ ಗಾಯಗಳ ಮಧ್ಯದಲ್ಲಿ ಪುಡಿಯಾದ ಕಾಗದದಂತಹ ವಿನ್ಯಾಸ ಕಂಡುಬರುತ್ತದೆ. ಬಲಿಯದ ಹಣ್ಣುಗಳಲ್ಲಿ ಹಳದಿ ಪ್ರಭಾವಾಲಯವಿರುವ ಸ್ವಲ್ಪ ಕುಳಿಬಿದ್ದ ಗಾಢ ಬಣ್ಣದ ಕಲೆಗಳು ಕಂಡುಬರುತ್ತವೆ. ಪಕ್ವವಾಗಿರುವ ಹಣ್ಣಿನ ಮೇಲೆ, ಗಾಯಗಳು ಸಣ್ಣ ಚುಕ್ಕೆಗಳಿಂದ ದೊಡ್ಡ ಕಲೆಗಳಾಗಿ ಬದಲಾಗಬಹುದು. ಹಣ್ಣಿನ ಸಿಪ್ಪೆಯ ಮೇಲೆ ಗಡುಸಾದ ಅಂಗಾಂಶದ ಪದರ ರೂಪುಗೊಳ್ಳುತ್ತದೆ. ಇದು ಮೇಲ್ಭಾಗದಿಂದ ಹೊರಬಂದಂತೆ ಕಂಡುಬರುತ್ತದೆ. ಗಡುಸಾದ ಅಂಗಾಂಶವು ಬಿದ್ದುಹೋದರೆ, ಕುಳಿಗಳು ಅಥವಾ ಕಲೆಗಳು ಕಾಣಿಸುತ್ತವೆ. ಹಣ್ಣು ಅಕಾಲಿಕವಾಗಿ ಉದುರುವುದು ಸಾಮಾನ್ಯವಾಗಿರುತ್ತದೆ.
ತಾಮ್ರದ ಆಕ್ಸಿಕ್ಲೋರೈಡ್ ಆಧಾರಿತ ಜೈವಿಕ ಶಿಲೀಂಧ್ರನಾಶಕಗಳು ಆಲ್ಟರ್ನೇರಿಯಾ ಬ್ರೌನ್ ಸ್ಪಾಟ್ ವಿರುದ್ಧ ಉತ್ತಮ ಫಲಿತಾಂಶವನ್ನು ತೋರಿಸುತ್ತವೆ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದಾದರೂ ವಿಧ ನಿಮಗೆ ತಿಳಿದಿದ್ದರೆ ದಯವಿಟ್ಟು ನಮಗೆ ತಿಳಿಸಿ. ನಿಮ್ಮ ಪ್ರತಿಕ್ರಿಯೆಯನ್ನು ನಾವು ಎದುರು ನೋಡುತ್ತೇವೆ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಇಪ್ರೊಡಿಯಾನ್, ಕ್ಲೋರೊಥಲೋನಿಲ್ ಮತ್ತು ಅಜೋಕ್ಸಿಸ್ಟ್ರೋಬಿನ್ಗಳನ್ನು ಆಧರಿಸಿದ ಶಿಲೀಂಧ್ರನಾಶಕಗಳು ಆಲ್ಟರ್ನೇರಿಯಾ ಬ್ರೌನ್ ಸ್ಪಾಟ್ ಅನ್ನು ಸರಿಯಾಗಿ ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ. ಪ್ರೊಪಿಕಾನಜೋಲ್ ಮತ್ತು ಥಿಯೋಪನೇಟ್ ಮಿಥೈಲ್ ಆಧಾರಿತ ಉತ್ಪನ್ನಗಳನ್ನು ಸಹ ಹೆಚ್ಚು ಪರಿಣಾಮಕಾರಿ ಎಂದು ಸಾಬೀತುಪಡಿಸಲಾಗಿದೆ. ಪ್ರತಿರೋಧದ ಬೆಳವಣಿಗೆಯನ್ನು ತಡೆಗಟ್ಟಲು ನಿಗದಿತ ಸಾಂದ್ರತೆಯನ್ನು ಅನುಸರಿಸುವುದು ಮತ್ತು ವಿಭಿನ್ನ ವಿಧಾನಗಳ ಕ್ರಮಗಳೊಂದಿಗೆ ಶಿಲೀಂಧ್ರನಾಶಕಗಳನ್ನು ಬಳಸುವುದು ಮುಖ್ಯವಾಗಿದೆ.
ಆಲ್ಟರ್ನೇರಿಯಾ ಆಲ್ಟರ್ನೇಟಾ ಎಂಬ ಶಿಲೀಂಧ್ರದಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಇದು ವಾಯುಗಾಮಿ ಬೀಜಕಗಳಿಂದ ಗಾಳಿ ಅಥವಾ ನೀರಿನ ಹನಿಗಳ ಮೂಲಕ ಹರಡುತ್ತದೆ. ಮಳೆಗಾಲ ಅಥವಾ ಸಾಪೇಕ್ಷ ಆರ್ದ್ರತೆಯಲ್ಲಿ ಹಠಾತ್ ಬದಲಾವಣೆಗಳು, ಎಲೆ, ಕೊಂಬೆ ಅಥವಾ ಹಣ್ಣಿನ ಕಲೆಗಳಲ್ಲಿರುವ ಶಿಲೀಂಧ್ರಗಳ ಭಾಗಗಳಿಂದ ಉಂಟಾಗುವ ಬೀಜಕಗಳ ಉತ್ಪಾದನೆ ಮತ್ತು ಬಿಡುಗಡೆಗೆ ಅನುಗುಣವಾಗಿರುತ್ತವೆ. ಆಲ್ಟರ್ನೇರಿಯಾ ಬ್ರೌನ್ ಸ್ಪಾಟ್ ಸಾಮಾನ್ಯವಾಗಿ ಮಾನವರಿಂದ ಸಾಗಿಸಲ್ಪಟ್ಟ ನರ್ಸರಿ ಸ್ಟಾಕ್ಗಳಲ್ಲಿರುವ ತೋಪುಗಳಲ್ಲಿ ಹರಡುತ್ತದೆ. ಎಳೆ ಎಲೆಗಳಲ್ಲಿ, ಸೋಂಕಾದ ನಂತರ 36 ಮತ್ತು 48 ಗಂಟೆಗಳ ನಡುವೆ ಮೊದಲ ರೋಗಲಕ್ಷಣಗಳು ಕಂಡುಬರುತ್ತವೆ. ದಳಗಳು ಉದುರಿದ ನಂತರ 4 ತಿಂಗಳವರೆಗೆ ಹಣ್ಣುಗಳಿಗೆ ಸೋಂಕಾಗುವ ಸಂಭಾವ್ಯತೆ ಹೆಚ್ಚು.