ಸೋಯಾಬೀನ್

ಅಸ್ಕೋಚಿಟ ಬ್ಲೈಟ್

Didymella rabiei

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ, ಕಾಂಡಗಳು ಅಥವಾ ಬೀಜಕೋಶಗಳಲ್ಲಿ ಬೂದು ಬಣ್ಣದ ನೀರಿನಲ್ಲಿ ನೆನೆದಂತಹ ಕಲೆಗಳು ಕಾಣಬಹುದು.
  • ಮುಂದೆ ಗಾಯಗಳು ಕಂದು ಬಣ್ಣಕ್ಕೆ ತಿರುಗುತ್ತವೆ.
  • ಎಲೆಗಳ ಮೇಲೆ ಅವು ಕೇಂದ್ರೀಕೃತ ಉಂಗುರಗಳನ್ನು ಉಂಟು ಮಾಡುತ್ತವೆ.
  • ದೂರದಿಂದಲೇ ಹೊಲಗಳಲ್ಲಿ ರೋಗಗ್ರಸ್ತ ಬೆಳೆಯ ತೇಪೆಗಳನ್ನು ಕಾಣಬಹುದು.

ಇವುಗಳಲ್ಲಿ ಸಹ ಕಾಣಬಹುದು


ಸೋಯಾಬೀನ್

ರೋಗಲಕ್ಷಣಗಳು

ಹಳೆಯ ಸಸ್ಯಗಳಲ್ಲಿ, ಈ ರೋಗವು ಮೊದಲಿಗೆ ಎಲೆಗಳ ಮೇಲೆ ತಿಳಿಯಾದ ನೀರು-ನೆನೆಸಿದ ತಾಣಗಳಾಗಿ ಕಂಡುಬರುತ್ತದೆ. ಕಾಲಾನಂತರದಲ್ಲಿ, ಈ ಗಾಯಗಳು ಕಂದು ಬಣ್ಣಕ್ಕೆ ತಿರುಗುತ್ತವೆ ಮತ್ತು ಸಣ್ಣ ಕಪ್ಪು ಮುಳ್ಳುಗಳು ಕೇಂದ್ರದಲ್ಲಿ ಬೆಳೆಯಲು ಪ್ರಾರಂಭವಾಗುತ್ತವೆ. ಇವು ಗಾಢವಾದ ಅಂಚುಗಳಿರುವ ಏಕಕೇಂದ್ರಿತ ಉಂಗುರಗಳನ್ನು ರೂಪಿಸುತ್ತವೆ. ಕಪ್ಪು ಮುಳ್ಳುಗಳೊಂದಿಗೆ ಉದ್ದವಾದ ಅಂಡಾಕಾರದ ಕಂದು ಗಾಯಗಳು ಸಹ ಕಾಂಡದ ಮೇಲೆ ಉಂಟಾಗುತ್ತವೆ. ತೀವ್ರ ಸಂದರ್ಭಗಳಲ್ಲಿ, ಅವುಗಳು ಸುತ್ತುಗಟ್ಟುತ್ತವೆ ಮತ್ತು ಅಂತಿಮವಾಗಿ ಪ್ರತಿಕೂಲ ಹವಾಮಾನದ ಸಮಯದಲ್ಲಿ ಒಡೆಯುತ್ತವೆ. ಬೀಜಕೋಶದ ಗಾಯಗಳು ಎಲೆಯ ಗಾಯಗಳನ್ನೇ ಹೋಲುತ್ತವೆ. ಇಡೀ ಸಸ್ಯಗಳು ರೋಗಗ್ರಸ್ತವಾಗಬಹುದು.ಇದು ಹೊಲದಲ್ಲಿ ಕಂದು ತೇಪೆಗಳಂತೆ ಕಾಣುತ್ತವೆ. ಬೀಜಗಳು ಸೋಂಕಿಗೊಳಗಾಗಬಹುದು ಮತ್ತು ಸಸಿಗಳಿಗೆ ರೋಗವನ್ನು ಒಯ್ಯಬಹುದು. ಇದು ಕಾಂಡದ ತಳದಲ್ಲಿ ಗಾಢ ಕಂದು ಗಾಯಗಳನ್ನು ಉಂಟುಮಾಡುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕ್ಷಮಿಸಿ, ಆಸ್ಕೋಚಿತಾ ರಬೀಯಿ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ಗೊತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದಾದರೋ ಮಾಹಿತಿ ನಿಮಗೆ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಿಮ್ಮ ಉತ್ತರದ ನಿರೀಕ್ಷೆಯಲ್ಲಿ ಇರುತ್ತೇವೆ.

ರಾಸಾಯನಿಕ ನಿಯಂತ್ರಣ

ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಒಟ್ಟಾಗಿರುವ ಸಮಗ್ರ ವಿಧಾನ ಲಭ್ಯವಿದ್ದರೆ ಯಾವಾಗಲೂ ಅದನ್ನು ಪರಿಗಣಿಸಿ. ಬೀಜಗಳನ್ನು ಬಿತ್ತನೆ ಮಾಡುವ ಮೊದಲು ತಿರಾಮ್ ಅಥವಾ ತಿರಾಮ್ ಮತ್ತು ತಿಯಬೆಂಡಜೋಲ್ ಆಧಾರಿತ ಬೀಜ ಡ್ರೆಸ್ಸಿಂಗ್ ಮೂಲಕ ಚಿಕಿತ್ಸೆ ನೀಡಬಹುದು. ರೋಗದ ಬೆಳವಣಿಗೆಯನ್ನು ತಪ್ಪಿಸಲು ಹೂಬಿಡುವ ಹಂತದ ಮೊದಲು ತಡೆಗಟ್ಟುವ ಶಿಲೀಂಧ್ರನಾಶಕಗಳನ್ನು (ಉದಾಹರಣೆಗೆ ಕ್ಲೋರೊಥಲೋನಿಲ್) ಬಳಸಬಹುದು. ರೋಗ ಪತ್ತೆಯಾದ ನಂತರ, ಎಲೆಗಳ ಶಿಲೀಂಧ್ರನಾಶಕಗಳನ್ನು ಸರದಿಯಲ್ಲಿ, ವ್ಯವಸ್ಥಿತ ಕ್ರಮದಲ್ಲಿ ಮಾಡುವಂತೆ ಶಿಫಾರಸು ಮಾಡಲಾಗುತ್ತದೆ (ಬೊಸ್ಕ್ಯಾಲಿಡ್, ಮನ್ಕೊಜೆಬ್, ಪಿರಾಕ್ಲೋಸ್ಟ್ರೋಬಿನ್ + ಫ್ಲಕ್ಸಪೈರೋಕ್ಸಡ್ ಅಥವಾ ಟ್ರೈಯಝೋಲಿಂಥಿಯಾನ್ ವರ್ಗಗಳ ಉತ್ಪನ್ನಗಳು). ಗಂಭೀರ ಇಳುವರಿ ನಷ್ಟವನ್ನು ತಪ್ಪಿಸಲು ಬೆಳೆ ಋತುವಿನ ಉದ್ದಕ್ಕೂ ಚಿಕಿತ್ಸೆಯನ್ನು ಮಾಡಬಹುದು.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಮೊದಲಿಗೆ ಅಸ್ಕೋಚಿಟ ರಬಿಯಾ ಎಂದು ಕರೆಯಲ್ಪಡುತ್ತಿದ್ದ ಡಿಡಿಮೆಲ್ಲಾ ರಬಿಯ ಶಿಲೀಂಧ್ರದಿಂದ ಉಂಟಾಗುತ್ತವೆ. ಇವು ಹಲವಾರು ವರ್ಷಗಳ ಕಾಲ ಸಸ್ಯದ ಅವಶೇಷಗಳಲ್ಲಿ ಚಳಿಗಾಲ ಕಳೆಯಬಲ್ಲವು. ಅನುಕೂಲಕರ ಪರಿಸ್ಥಿತಿಗಳಲ್ಲಿ, ಇದು ಬೀಜಕಗಳನ್ನು ಉತ್ಪಾದಿಸುತ್ತವೆ ಮತ್ತು ನಂತರ ಅವುಗಳು ಗಾಳಿ ಮತ್ತು ಮಳೆಯ ತುಂತುರುಗಳಿಂದ ಹರಡುತ್ತವೆ, ಕೆಲವೊಮ್ಮೆ ಕೆಲವು ಕಿಲೋಮೀಟರ್ ಗಳವರೆಗೂ ಹರಡುತ್ತವೆ. ತಂಪು ಮತ್ತು ಆರ್ದ್ರ ಹವಾಮಾನ, ಅಧಿಕ ಆರ್ದ್ರತೆ, ಬೆಳಗ್ಗಿನ ಇಬ್ಬನಿ ಮತ್ತು ದೀರ್ಘಕಾಲದ ಎಲೆಯ ತೇವ (2 ಗಂಟೆಗಳ ಅಥವಾ ಅದಕ್ಕಿಂತ ಹೆಚ್ಚು) ಕಾಯಿಲೆಯ ಹರಡುವಿಕೆಗೆ ಅನುಕೂಲವಾಗುತ್ತದೆ. ಶಿಲೀಂಧ್ರವು ವಿಶಾಲ ಶ್ರೇಣಿಯ ತಾಪಮಾನದಲ್ಲಿ (5-30 ° ಸಿ) ಬೆಳೆಯಬಲ್ಲದು. ಆದರೆ 15-25 ° ಸಿ ನಡುವೆ ಉತ್ತಮವಾಗಿ ಬೆಳೆಯುತ್ತವೆ. ಪರಿಸ್ಥಿತಿಗಳು ಅನುಕೂಲಕರವಾಗಿದ್ದರೆ ಬೆಳವಣಿಗೆಯ ಋತುವಿನ ಅವಧಿಯಲ್ಲಿ ಸೋಂಕಿನ ಅನೇಕ ಚಕ್ರಗಳು ಸಂಭವಿಸಬಹುದು.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ಹೆಚ್ಚು ಚೇತರಿಸಿಕೊಳ್ಳುವ ಪ್ರಭೇದಗಳನ್ನು ಆರಿಸಿ.
  • ಲಭ್ಯವಿದ್ದರೆ ಹೆಚ್ಚು ಚೇತರಿಸಿಕೊಳ್ಳುವ ಪ್ರಭೇದಗಳನ್ನು ಆರಿಸಿಕೊಳ್ಳಿ.
  • ಪ್ರಮಾಣೀಕೃತ ರೋಗಮುಕ್ತ ಬೀಜವನ್ನು ಬಳಸಿ.
  • ಪರ್ಯಾಯವಾಗಿ, ಆರೋಗ್ಯಕರ ಹೊಲದಿಂದ ಬೀಜಗಳನ್ನು ಬಳಸಿ.
  • ಬೀಜ ದರಗಳಿಗೆ ಸಂಬಂಧಿಸಿದಂತೆ ಶಿಫಾರಸುಗಳನ್ನು ಅನುಸರಿಸಿ.
  • ರೋಗದ ಕೆಟ್ಟ ಪರಿಣಾಮವನ್ನು ತಪ್ಪಿಸಲು ತಡವಾಗಿ ನೆಡಿ.
  • ರೋಗದ ಚಿಹ್ನೆಗಳಿಗಾಗಿ ಹೊಲದ ಮೇಲ್ವಿಚಾರಣೆ ಮಾಡಿ.
  • ತಾವಾಗೇ ಬೆಳೆದ ಸಸ್ಯಗಳು ಮತ್ತು ಹೊಲದ ಸುತ್ತ ಕಳೆಗಳನ್ನು ತೆಗೆಯಿರಿ.
  • ಇಳುವರಿ ಮೇಲೆ ಕೆಟ್ಟ ಪರಿಣಾಮಗಳನ್ನು ತಪ್ಪಿಸಲು ಸಾಧ್ಯವಾದಷ್ಟು ಬೇಗ ಕೊಯ್ಲು ಮಾಡಿ.
  • ಕೃಷಿ ಭೂಮಿಯ ಉತ್ತಮ ನೈರ್ಮಲ್ಯ ಪದ್ಧತಿಗಳನ್ನು ಅನುಸರಿಸಿ.
  • ಉದಾಹರಣೆಗೆ ಹೊಲದ ಪರೀಕ್ಷೆ ನಂತರ ಬೂಟ್ ಗಳು ಮತ್ತು ಬಟ್ಟೆಗಳನ್ನು ತೊಳೆಯುವುದು.
  • ಮೂರು ವರ್ಷಗಳಲ್ಲಿ ಒಮ್ಮೆ ಮಾತ್ರ ಒಂದೇ ಹೊಲದಲ್ಲಿ (ಬೆಳೆ ಸರದಿ) ಕಡಲೆ ಬೆಳೆಯಿರಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ