ಹುರುಳಿ

ಹುರುಳಿಯ ಒಣ ಬೇರು ಕೊಳೆತ

Fusarium solani f. sp. phaseoli

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಸಸಿಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಒಣಗಲು ಪ್ರಾರಂಭಿಸುತ್ತವೆ.
  • ಸಸ್ಯ ಹೊರಹೊಮ್ಮಿದ ಕೆಲವೇ ದಿನಗಳಲ್ಲಿ ಕೆಂಪು ಗಾಯಗಳು ಮುಖ್ಯ ಬೇರಿನಲ್ಲಿ ಕಾಣಿಸಿಕೊಳ್ಳುತ್ತವೆ.
  • ಈ ಗಾಯಗಳು ಗಾಢ ಕಂದು ಬಣ್ಣಕ್ಕೆ ತಿರುಗಿ, ಒಟ್ಟುಗೂಡಿ, ಬೇರಿನ ಅಕ್ಷದ ಉದ್ದಕ್ಕೂ ಬಿರುಕುಗಳನ್ನು ಉಂಟುಮಾಡಬಹುದು.
  • ಅಂಗಾಂಶಗಳು ಮೃದುವಾಗಿ ಕೊಳೆಯುವುದಿಲ್ಲ.
  • ಇದರಿಂದಾಗಿ ರೋಗದ ಸಾಮಾನ್ಯ ಹೆಸರು "ಒಣ ಬೇರು ಕೊಳೆತ".
  • ಸಸ್ಯಗಳು ಬದುಕಿ ಉಳಿದರೆ, ಸೋಂಕಿತ ಸಸ್ಯಗಳು ಕೆಲವು ಬೀಜಗಳಿರುವ ಕೆಲವು ಬೀಜಕೋಶಗಳನ್ನು ಮಾತ್ರ ಉತ್ಪಾದಿಸುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಹುರುಳಿ

ರೋಗಲಕ್ಷಣಗಳು

ಬಿತ್ತನೆ ಮಾಡಿದ ಕೆಲವು ವಾರಗಳ ನಂತರ, ಸೋಂಕಿತ ಸಸಿಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಬಾಡಲು ಪ್ರಾರಂಭಿಸುತ್ತವೆ. ಪರಿಸರ ಪರಿಸ್ಥಿತಿಗಳು ರೋಗಕ್ಕೆ ಅನುಕೂಲವಾಗಿದ್ದರೆ ಸಸ್ಯಗಳ ಬೆಳವಣಿಗೆ ಕುಂಠಿತವಾಗಬಹುದು ಮತ್ತು ಹೊರಹೊಮ್ಮಿದ ಕೆಲವೇ ದಿನಗಳಲ್ಲಿ ಅವು ಸಾಯಬಹುದು. ಸಸ್ಯ ಹೊರಹೊಮ್ಮಿದ ಕೇವಲ ಒಂದು ವಾರದಲ್ಲಿ ಭೂಗತ ರೋಗಲಕ್ಷಣಗಳು ಮುಖ್ಯವಾಗಿ ಕೆಂಪು ಗಾಯಗಳು ಅಥವಾ ಗೆರೆಗಳ ರೂಪದಲ್ಲಿ, ಮುಖ್ಯ ಬೇರಿನಲ್ಲಿ ಕಾಣಿಸಿಕೊಳ್ಳುತ್ತವೆ. ಈ ಗಾಯಗಳು ಗಾಡ ಕಂದು ಬಣ್ಣಕ್ಕೆ ತಿರುಗಿ, ಒಟ್ಟುಗೂಡುತ್ತವೆ. ಅವು ಒಣಗುತ್ತಾ ಹೋದಂತೆ ಬೇರಿನ ಅಕ್ಷದ ಉದ್ದಕ್ಕೂ ಬಿರುಕುಗಳನ್ನು ಉಂಟುಮಾಡಬಹುದು. ಪಾರ್ಶ್ವ ಬೇರುಗಳು ಮತ್ತು ಬೇರಿನ ತುದಿಗಳು ಕುಗ್ಗಬಹುದು ಮತ್ತು ಸಾಯಬಹುದು ಆದರೆ ಸಸ್ಯಗಳ ಮೇಲೆಯೇ ಇರುತ್ತವೆ. ಹೊಸ ತಂತು ಬೇರುಗಳು ಈ ಗಾಯಗಳ ಮೇಲೆ ಮಣ್ಣಿನ ಸಾಲಿಗೆ ಹತ್ತಿರವಾಗಿ ಬೆಳೆಯುತ್ತವೆ. ಅಂಗಾಂಶಗಳು ಮೃದುವಾಗಿ ಕೊಳೆಯುವುದಿಲ್ಲ. ಇದರಿಂದಾಗಿ ರೋಗದ ಸಾಮಾನ್ಯ ಹೆಸರು "ಒಣ ಬೇರು ಕೊಳೆತ". ಅವು ಪ್ರತಿಕೂಲ ಪರಿಸ್ಥಿತಿಯಲ್ಲಿ ಉಳಿದುಕೊಂಡರೆ, ಸಸ್ಯಗಳು ಕೆಲವು ಬೀಜಗಳಿರುವ, ಕೆಲವೇ ಬೀಜಕೋಶಗಳನ್ನು ಮಾತ್ರ ಉತ್ಪಾದಿಸುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ರೈಜೋಬಿಯಮ್ ಟ್ರೋಪಿಕೈದೊಂದಿಗೆ ಬಾಸಿಲ್ಲಸ್ ಸಬ್ಟಿಲಿಸ್ ನಂತಹ ಜೈವಿಕ ನಿಯಂತ್ರಣ ಏಜೆಂಟ್ ಗಳೊಂದಿಗೆ ಬೀಜ ಚಿಕಿತ್ಸೆಗಳು ಕೆಲಸ ಮಾಡಬಹುದು. ಸೂಕ್ಷ್ಮಾಣುಜೀವಿಗಳೊಂದಿಗಿನ ಇತರ ಚಿಕಿತ್ಸೆಗಳಲ್ಲಿ ಟ್ರೈಕೋಡರ್ಮಾ ಹಾರ್ಜಿಯನಂ ಆಧರಿಸಿದ ದ್ರಾವಣಗಳು ಸೇರಿವೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಫ್ಯುಸಾರಿಯಮ್ ಬೇರು ಕೊಳೆತವನ್ನು ನಿಯಂತ್ರಿಸುವಲ್ಲಿ ಶಿಲೀಂಧ್ರನಾಶಕಗಳು ಸಾಮಾನ್ಯವಾಗಿ ಪರಿಣಾಮಕಾರಿಯಾಗಿರುವುದಿಲ್ಲ.

ಅದಕ್ಕೆ ಏನು ಕಾರಣ

ಫ್ಯುಸಾರಿಯಮ್ ಬೇರು ಕೊಳೆತವು ಫ್ಯುಸಾರಿಯಮ್ ಸೊಲಾನಿ ಶಿಲೀಂಧ್ರದಿಂದ ಉಂಟಾಗುತ್ತದೆ. ಇದು ಹಲವು ವರ್ಷಗಳ ಕಾಲ ಮಣ್ಣಿನ ಅವಶೇಷಗಳಲ್ಲಿ ಉಳಿದುಕೊಂಡಿರುತ್ತದೆ. ಶಿಲೀಂಧ್ರವು ಮೊಳಕೆಯೊಡೆದ ಸ್ವಲ್ಪ ಸಮಯದಲ್ಲೇ ಬೆಳೆಯುವ ಸಸಿಗಳೊಳಗೆ ಸೇರಿಕೊಂಡು ನೀರು ಮತ್ತು ಪೋಷಕಾಂಶ ಸಾಗಿಸುವ ಅಂಗಾಂಶಗಳಲ್ಲಿ ನೆಲೆಗೊಳ್ಳುತ್ತದೆ. ಅಲ್ಲಿ ಶಿಲೀಂಧ್ರದ ಇರುವಿಕೆಯು ಸಾಮಾನ್ಯವಾಗಿ, ಒತ್ತಡವಿಲ್ಲದ, ಆರೋಗ್ಯಕರ ಸಸ್ಯಗಳಿಗೆ ಕಡಿಮೆ ಹಾನಿ ಮಾಡುತ್ತದೆ. ಆದಾಗ್ಯೂ, ಪರಿಸರ ಪರಿಸ್ಥಿತಿಗಳು ವ್ಯತಿರಿಕ್ತವಾಗಿದ್ದರೆ (ಬರ, ಪ್ರವಾಹದ ಮಣ್ಣು, ಕಳಪೆ ಪೋಷಕಾಂಶ, ಆಳವಾಗಿ ನೆಡುವುದು, ಸಾಂದ್ರೀಕೃತ ಮಣ್ಣು, ಸಸ್ಯನಾಶಕ ಗಾಯ), ನೀರು ಮತ್ತು ಪೋಷಕಾಂಶಗಳ ಸಾಗಣೆ ನಿರ್ಬಂಧಿತವಾಗಿ. ಒತ್ತಡ ಹೆಚ್ಚಿ, ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ಪ್ರಮುಖ ಇಳುವರಿ ನಷ್ಟವನ್ನು ನಿರೀಕ್ಷಿಸಬಹುದು.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಮಾರುಕಟ್ಟೆಯಲ್ಲಿ ಲಭ್ಯವಿದ್ದರೆ ಸಹಿಷ್ಣು ಅಥವಾ ನಿರೋಧಕ ಪ್ರಭೇದಗಳನ್ನು ಬಳಸಿ.
  • ಆಳವಿಲ್ಲದ ಬೀಜಪಾತಿಗಳಲ್ಲಿ ಅಥವಾ ನೇಗಿಲು ಸಾಲುಗಳಲ್ಲಿ ಸಸ್ಯಗಳನ್ನು ನೆಡಿ.
  • ಮಣ್ಣು ಬೆಚ್ಚಗಿರುವ ಋತುವಿನಲ್ಲಿ ತಡವಾಗಿ ಬಿತ್ತನೆ ಮಾಡಿ.
  • ಸಸ್ಯಗಳ ನಡುವೆ ವಿಶಾಲ ಅಂತರ ಇರಲಿ.
  • ಹೊಲದ ಒಳಚರಂಡಿ ಸುಧಾರಿಸಿ.
  • ಬರ/ಜಲಕ್ಷಾಮವನ್ನು ತಪ್ಪಿಸಲು ನಿಯಮಿತವಾಗಿ ಸಸ್ಯಗಳಿಗೆ ನೀರು ಹಾಕಿ.
  • ಮಣ್ಣಿನ ಸಂಕುಚನವನ್ನು ಕಡಿಮೆಗೊಳಿಸಿ ಮತ್ತು ಗಟ್ಟಿ ಮಣ್ಣಿನ ಹೆಂಟೆಗಳ ರಚನೆ ತಡೆಯಿರಿ.
  • ಉತ್ತಮ ರಸಗೊಬ್ಬರ ಒದಗಿಸಿ.
  • ಜಮೀನಿನ ಕೆಲಸದ ಸಮಯದಲ್ಲಿ ಸಸ್ಯಗಳಿಗೆ ಹಾನಿ ಮಾಡದಂತೆ ಎಚ್ಚರಿಕೆಯಿಂದಿರಿ.
  • ದ್ವಿದಳವಲ್ಲದ ಬೆಳೆಗಳೊಂದಿಗೆ 4 ರಿಂದ 5 ವರ್ಷಗಳ ದೀರ್ಘಕಾಲೀನ ಬೆಳೆ ಸರದಿ ಶಿಫಾರಸು ಮಾಡಲಾಗಿದೆ.
  • ಸಸ್ಯದ ಅವಶೇಷಗಳನ್ನು ಹೂತು ಹಾಕಲು ಆಳವಾಗಿ ಉಳುಮೆ ಮಾಡಿ.
  • ಭೂಮಿ ಉತ್ತಿ ಮತ್ತು ಮಣ್ಣಿನ ಸೌರೀಕರಣವನ್ನು ಬಳಸಿ.
  • ಸೋಂಕಿತ ಸಸ್ಯಗಳ ಹುಲ್ಲುಗಳನ್ನು ಪ್ರಾಣಿಗಳಿಗೆ ಆಹಾರವಾಗಿ ಕೊಡಬೇಡಿ.
  • ಗೊಬ್ಬರವು ಶಿಲೀಂಧ್ರವನ್ನು ವರ್ಗಾಯಿಸುತ್ತದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ