Rhizoctonia solani
ಶಿಲೀಂಧ್ರ
ಕೆಲವೊಮ್ಮೆ ಮೊಟ್ಟೆಯಾಕಾರದಲ್ಲಿಯೂ, ಮತ್ತೆ ಕಲವೊಮ್ಮೆ ಅನಿಯಮಿತ ಆಕಾರದಲ್ಲಿಯೂ ಇರುವ ಕೆಂಪು ಮಿಶ್ರಿತ ಕಂದು ಬಣ್ಣದಿಂದ ಹಿಡಿದು ಕಪ್ಪು ಬಣ್ಣದಲ್ಲಿರಬಹುದಾದ ಗುಳಿ ಬಿದ್ದ ಗಾಯಗಳು ಸಸಿಯ ಕಾಂಡದಲ್ಲಿ ಕಂಡು ಬರುತ್ತದೆ. ಗಾಯಗಳು ಹತ್ತಿ ಸಸಿಯ ಕಾಂಡಗಳನ್ನು ಸುತ್ತುವರಿದಂತೆ ಸಸಿಗಳು ಸಾಯುತ್ತವೆ. ಮಣ್ಣಿನ ಕಣಗಳು ಆಗಾಗ್ಗೆ ಅಂಟಿಕೊಳ್ಳುವ ಗಾಯದ ಮೇಲ್ಮೈಯಲ್ಲಿ ಶಿಲೀಂಧ್ರಗಳ ಬೆಳವಣಿಗೆ ಕಂಡುಬರಬಹುದು. ಈ ಶಿಲೀಂಧ್ರದ ಬೆಳವಣಿಗೆ ಹೆಚ್ಚು ಆಳಕ್ಕಿರುವುದಿಲ್ಲ. ಸೋಂಕು ಮತ್ತು ಗಾಯದ ಬೆಳವಣಿಗೆಗಳು ಸಾಮಾನ್ಯವಾಗಿ ಮಣ್ಣಿನ ರೇಖೆಯ ಕೆಳಗೆ ಸಂಭವಿಸುತ್ತವೆ. ಆದರೆ ಕಾಂಡವು ಬೆಳೆಯುತ್ತಾ ಉದ್ದವಾಗುವುದರಿಂದ, ಮಣ್ಣಿನ ಮೇಲಕ್ಕಿರುವ ಕಾಂಡದಲ್ಲಿಯೂ ಗಾಯಗಳು ಗೋಚರಿಸತೊಡಗುತ್ತವೆ.
ಮುಂದಿನ 4 -5 ದಿನಗಳಲ್ಲಿ ತಣ್ಣಗಿನ ಹವಾಮಾನ ಅಥವಾ ಮಳೆಯ ನಿರೀಕ್ಷೆಯಿದ್ದರೆ ಬಿತ್ತನೆ ಮಾಡಬೇಡಿ. 5 ಸೆಂ.ಮೀ ಗಿಂತ ಹೆಚ್ಚು ಆಳವಾಗಿ ನೆಡಬೇಡಿ.
ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಎಟ್ರಿಡಿಯಾಜೋಲ್, ತಾಮ್ರಜದ ಆಕ್ಸಿಕ್ಲೋರೈಡ್, ಟಾಲ್ಕ್ಲೋಫೊಸ್-ಮೀಥೈಲ್, ಥಿಯಾಬೆನ್ಡಾಝೋಲ್ ಥೈರಾಮ್ಮತ್ತು ಕ್ಯಾಪ್ಟನ್ಗಳಂತಹ ಶಿಲೀಂಧ್ರನಾಶಕ ಸಂಯುಕ್ತಗಳ ಚಿಕಿತ್ಸೆ ಗಮನಾರ್ಹವಾಗಿ ಸಸಿ ಬೆಳವಣಿಗೆಯ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುತ್ತವೆ ಮತ್ತು ಹತ್ತಿ ಸಸಿಗಳಲ್ಲಿ ರೋಗ ಸೂಚಿಯನ್ನು ಕಡಿಮೆಗೊಳಿಸುತ್ತವೆ.
ಮಣ್ಣಿನಲ್ಲಿರುವ ಶಿಲೀಂಧ್ರವಾದ ರೈಝಾಕ್ಟೊನಿಯಾ ಸೊಲಾನಿಯಿಂದಾಗಿ ಈ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಹಲವಾರು ಆಶ್ರಯದಾತ ಗಿಡಗಳಲ್ಲಿ ಸೋಂಕನ್ನುಂಟು ಮಾಡುತ್ತದೆ. ಸಸಿಗಾದ ಯಾಂತ್ರಿಕ ಪೆಟ್ಟುಗಳು ,ಉದಾಹರಣೆಗೆ – ಸಸಿ ನೆಡುವಾಗ) ಸೋಂಕನ್ನು ಬೆಂಬಲಿಸುತ್ತವೆ. ಮಣ್ಣಿನ ಸಾಲಿನ ಬಳಿ ಗಾಯಗಳಾದಾಗ, ಅದು ಗಾಳಿಯಿಂದಾಗಿ ರೆಂಬೆಯು ಗಡುಸಾದ ಮಣ್ಣಿಗೆ ಒರೆಸಿ ಉಂಟಾದ ಗಾಯವೆಂದು ತಪ್ಪು ತಿಳಿಯುವ ಸಾಧ್ಯತೆ ಇದೆ. ಸಸಿ ಬೆಳೆದಂತೆ ಬೇರಿನ ವ್ಯವಸ್ಥೆ ಹೆಚ್ಚು ವಿಸ್ತಾರವಾಗುವುದರಿಂದ ಮತ್ತು ಬೇರಿನ ಜೀವಕೋಶಗಳು ಲಿಗ್ನಿನ್ ಎಂಬ ಪದಾರ್ಥದ ಶೇಖರಣೆಯಿಂದ ಗಟ್ಟಿಯಾಗುವುದರಿಂದ ಸೋಂಕಿಗೆ ನೈಸರ್ಗಿಕವಾಗಿ ನಿರೋಧ ಬೆಳೆಯುತ್ತದೆ.