ಮೆಕ್ಕೆ ಜೋಳ

ಮುಸುಕಿನ ಜೋಳದ ಬೂದಿ ಎಲೆ ಚುಕ್ಕೆ ರೋಗ

Cercospora zeae-maydis

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಕೆಳಗಿನ ಎಲೆಗಳಲ್ಲಿ ಹಳದಿ ಕ್ಲೋರೋಟಿಕ್ ಮಚ್ಚೆಗಳೊಂದಿಗೆ ಸಣ್ಣ, ಕಂದು ಬಣ್ಣದ ಅಥವಾ ಹಳದಿ ಕಂದು ಬಣ್ಣದ ಕಲೆಗಳು ಕಂಡುಬರುತ್ತವೆ, ಸಾಮಾನ್ಯವಾಗಿ ಹೂಬಿಡುವುದಕ್ಕಿಂತ ಮೊದಲು.
  • ಕಲೆಗಳು ಬೂದು ಬಣ್ಣಕ್ಕೆ ತಿರುಗಿ ಉದ್ದವಾದ, ಆಯತಾಕಾರದ ಗಾಯಗಳಾಗಿ ಹರಡುತ್ತವೆ ಮತ್ತು ಅವು ಎಲೆ ಸಿರೆಗಳಿಗೆ ಸಮಾನಾಂತರವಾಗಿ ಹರಡುತ್ತವೆ.
  • ಸೂಕ್ತ ಸ್ಥಿತಿಯಲ್ಲಿ ಕಲೆಗಳು ಅಧಿಕವಾಗಿ ಹರಡಿ ಇಡೀ ಎಲೆಯನ್ನು ಆವರಿಸುತ್ತವೆ.
  • ಎಲೆಗಳ ರೋಗವು ಸಸ್ಯಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಕೆಲವೊಮ್ಮೆ ತೊಟ್ಟುಗಳನ್ನು ಮೃದುಗೊಳಿಸಿ, ನೀರು ನಿಲ್ಲುವ ಹಾಗೆ ಮಾಡುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮೆಕ್ಕೆ ಜೋಳ

ರೋಗಲಕ್ಷಣಗಳು

ಕೆಳಗಿನ ಎಲೆಗಳಲ್ಲಿ ಸಣ್ಣ (ಕಂದು ಅಥವಾ ತಿಳಿ ಕಂದು ಬಣ್ಣ) ನೆಕ್ರೋಟಿಕ್ ಕಲೆಗಳ ಜೊತೆ ಹಳದಿ ಕ್ಲೋರೋಟಿಕ್ ಪ್ರಭಾವಲಯ ಕಂಡುಬರುತ್ತವೆ, ಸಾಮಾನ್ಯವಾಗಿ ಹೂಬಿಡುವುದಕ್ಕಿಂತ ಮೊದಲು. ಈ ಗಾಯಗಳು ಕ್ರಮೇಣ ಬೂದು ಬಣ್ಣಕ್ಕೆ ತಿರುಗುತ್ತವೆ ಮತ್ತು ಎಳೆಯ ಎಲೆಗಳಲ್ಲೂ ಕಾಣಿಸಿಕೊಳ್ಳುತ್ತವೆ. ರೋಗವು ಮುಂದುವರೆದಂತೆ, ಅವು ಉದ್ದವಾದ, ಆಯತಾಕಾರದ ಗಾಯಗಳಾಗಿ ಹರಡುತ್ತವೆ ಮತ್ತು ಅವು ಎಲೆ ಸಿರೆಗಳಿಗೆ ಸಮಾನಾಂತರವಾಗಿ ಹರಡುತ್ತವೆ. ಸೂಕ್ತವಾದ ಸ್ಥಿತಿಗಳಲ್ಲಿ (ಬೆಚ್ಚಗಿನ ತಾಪಮಾನಗಳು, ಅಧಿಕ ಆರ್ದ್ರತೆ ಮತ್ತು ಆರ್ದ್ರ ಎಲೆಗಳು), ಅವು ಒಂದಾಗಿ ಸಂಪೂರ್ಣ ಎಲೆಗೆ ಹರಡುತ್ತವೆ. ಕಾಳುಗಳು ಹುಟ್ಟುವ ಮೊದಲೇ ಈ ರೀತಿಯಾದಲ್ಲಿ ಇಳುವರಿಯಲ್ಲಿ ಗಣನೀಯವಾದ ನಷ್ಟವಾಗುತ್ತದೆ. ಎಲೆಗಳ ರೋಗವು ಸಸ್ಯಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಕೆಲವೊಮ್ಮೆ ತೊಟ್ಟುಗಳನ್ನು ಮೃದುಗೊಳಿಸಿ, ನೀರು ನಿಲ್ಲುವ ಹಾಗೆ ಮಾಡುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಈ ರೋಗವನ್ನು ನಿಯಂತ್ರಿಸಲು ಯಾವುದೇ ಜೈವಿಕ ನಿಯಂತ್ರಣ ಲಭ್ಯವಿಲ್ಲ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ರೋಗವು ಆರಂಭಿಕ ಹಂತಗಳಲ್ಲಿ ಬಂದರೆ ಎಲೆಗಳ ಶಿಲೀಂಧ್ರನಾಶಕ ಚಿಕಿತ್ಸೆ ರೋಗವನ್ನು ನಿರ್ವಹಿಸುವ ಒಂದು ಮಾರ್ಗವಾಗಿದೆ ಆದರೆ ಹವಾಮಾನ ಪರಿಸ್ಥಿತಿಗಳು, ಸಂಭವನೀಯ ಇಳುವರಿ ನಷ್ಟ ಮತ್ತು ಸಸ್ಯದ ಮೇಲೆ ರೋಗದಿಂದಾಗುವ ಪ್ರಭಾವದ ಆಧಾರದ ಮೇಲೆ ಚಿಕಿತ್ಸೆ ನೀಡಬೇಕಾಗುತ್ತದೆ. ಪಿರಾಕ್ಲೋಸ್ಟ್ರೋಬಿನ್ ಮತ್ತು ಸ್ಟ್ರೋಬಿಲರಿನ್ ಹೊಂದಿರುವ ಶಿಲೀಂಧ್ರನಾಶಕಗಳು, ಅಥವಾ ಅಜೋಕ್ಸಿಸ್ಟ್ರೋಬಿನ್ ಮತ್ತು ಪ್ರೊಪಿಕಾನಜೋಲ್, ಪ್ರೋಥಿಯೊಕೊನಜೋಲ್ ಮತ್ತು ಟ್ರೈಫ್ಲೋಕ್ಸಿಸ್ಟ್ರೋಬಿನ್ ಗಳ ಸಂಯೋಜನೆಗಳು ಶಿಲೀಂಧ್ರವನ್ನು ನಿಯಂತ್ರಿಸುವಲ್ಲಿ ಚೆನ್ನಾಗಿ ಕೆಲಸ ಮಾಡುತ್ತವೆ.

ಅದಕ್ಕೆ ಏನು ಕಾರಣ

ಬೂದಿ ಎಲೆ ಚುಕ್ಕೆ ರೋಗವು ಸರ್ಕೊಸ್ಪೊರಾ ಜೀಯಾ-ಮೇಯ್ಡಿಸ್ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಇದು ದೀರ್ಘಕಾಲದವರೆಗೆ ಮಣ್ಣಿನಲ್ಲಿರುವ ಸಸ್ಯದ ಉಳಿಕೆಗಳಲ್ಲಿ ಬದುಕುತ್ತದೆ. ವಸಂತಕಾಲದಲ್ಲಿ, ಮಳೆಯ ಹನಿ ಮತ್ತು ಗಾಳಿಯು ಬೀಜಕಗಳನ್ನು ಕೆಳಗಿನ ಎಲೆಗಳಿಗೆ ಒಯ್ಯುತ್ತವೆ. ಅದರ ಜೀವನಚಕ್ರಕ್ಕೆ ಸೂಕ್ತವಾದ ಸ್ಥಿತಿಗಳೆಂದರೆ ಅಧಿಕ ತಾಪಮಾನ (25 ರಿಂದ 30 °C), ಹೆಚ್ಚಿನ ಆರ್ದ್ರತೆ (ಇಬ್ಬನಿ, ಮಂಜು) ಮತ್ತು ದೀರ್ಘಕಾಲದವರೆಗೆ ಎಲೆಗಳ ಆರ್ದ್ರತೆ. ಉಷ್ಣತೆ, ಶುಷ್ಕ ಹವಾಮಾನವು ಅದರ ಬೆಳವಣಿಗೆಯನ್ನು ತಡೆಗಟ್ಟುತ್ತದೆ. ರೋಗಲಕ್ಷಣಗಳು ವಿವಿಧ ಸಸ್ಯ ಪ್ರಭೇದಗಳಲ್ಲಿ ಸ್ವಲ್ಪ ಭಿನ್ನವಾಗಿರುತ್ತದೆ. ಶಿಲೀಂಧ್ರವು ಸೋಂಕಿಗೆ ಬೇಗ ಈಡಾಗುವ ಪ್ರಭೇದಗಳಲ್ಲಿ 14-21 ದಿನಗಳಲ್ಲಿ ಮತ್ತು ನಿರೋಧಕ ಪ್ರಭೇದಗಳಲ್ಲಿ 21-28 ದಿನಗಳಲ್ಲಿ ತನ್ನ ಜೀವನಚಕ್ರವನ್ನು (ಸೋಂಕಿನಿಂದ ಹೊಸ ಬೀಜಕಗಳ ಉತ್ಪಾದನೆ) ಪೂರ್ಣಗೊಳಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ನೆಡಿ.
  • ಸಸ್ಯಗಳಿಗೆ ಪ್ರತಿಕೂಲ ಪರಿಸ್ಥಿತಿಯನ್ನು ತಡೆಗಟ್ಟಲು ತಡವಾಗಿ ನಾಟಿ ಮಾಡಿ.
  • ಸಸ್ಯಗಳ ನಡುವಿನ ಜಾಗವನ್ನು ಅಗಲವಾಗಿರಿಸುವುದರ ಮೂಲಕ ಗಾಳಿಯಾಡುವಂತೆ ನೋಡಿಕೊಳ್ಳಿ.
  • ಆಳವಾಗಿ ಉಳುಮೆ ಮಾಡಿ ಕೊಯ್ಲಿನ ನಂತರ ಸಸ್ಯದ ಎಲ್ಲಾ ಉಳಿಕೆಗಳನ್ನು ನೆಲದಲ್ಲಿ ಹೂಳಿ.
  • ಹೋಸ್ಟ್ ಅಲ್ಲದ ಸಸ್ಯಗಳೊಂದಿಗೆ ದೀರ್ಘಕಾಲಿಕ ಸರದಿ ಬೆಳೆಯನ್ನು ಯೋಜಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ