Glomerella gossypii
ಶಿಲೀಂಧ್ರ
ಹತ್ತಿಯ ಆಂಥ್ರಾಕ್ನೋಸ್, ಸಸ್ಯದ ಎಲ್ಲಾ ಬೆಳವಣಿಗೆಯ ಹಂತಗಳಲ್ಲಿ ತಗುಲಬಹುದು ಮತ್ತು ಇದು ಎಲ್ಲಾ ಅಂಗಾಂಶಗಳ ಮೇಲೂ ಪರಿಣಾಮ ಬೀರಬಹುದು. ಸಸಿಗೆ ಸೋಂಕು ತಗುಲಿದರೆ ಅದು, ಕಪ್ಪು ಕೊಳೆತದಂತಹ ಅಂಚಿರುವ, ಕೆಂಪು ಬಣ್ಣದಿಂದ ಕಂದುಬಣ್ಣದ ಸಣ್ಣ ವೃತ್ತಾಕಾರದ ಚುಕ್ಕೆಗಳನ್ನು ಸಸಿ ಎಲೆಗಳ ಮತ್ತು ಪ್ರಾಥಮಿಕ ಎಲೆಗಳ ಮೇಲೆ ಉಂಟುಮಾಡುತ್ತದೆ. ಕಾಲರ್ ಭಾಗದ ಮೇಲೆ ಈ ಗಾಯಗಳು ಉಂಟಾದರೆ, ಅದು ಕಾಂಡವನ್ನು ಆವರಿಸಿ, ಸಸಿ ಅಥವಾ ಸಣ್ಣ ಸಸ್ಯಗಳು ಒಣಗಿ ಸಾಯುವಂತೆ ಮಾಡುತ್ತದೆ. ಬೆಳೆದ ಸಸ್ಯಗಳಲ್ಲಿ, ಕಾಂಡದ ಸೋಂಕು ಮತ್ತು ವಸಾಹತುವಿನಿಂದ ತೊಗಟೆಯು ಬೇರ್ಪಟ್ಟು, ಉದುರಿ ಹೋಗುವ ಸಂಭವ ಇರುತ್ತದೆ. ಬಾಧಿತವಾದ ಬೀಜಗಳು ಆರ್ದ್ರ ಸ್ಥಿತಿಗಳಲ್ಲಿ, ವೃತ್ತಾಕಾರದ, ನೀರಿನಲ್ಲಿ-ನೆನೆಸಿದಂತಹ ಸಣ್ಣ ಚುಕ್ಕಿಗಳನ್ನು ಪಡೆಯುತ್ತವೆ. ಇವುಗಳು ಗುಳಿಬಿದ್ದ, ಹಳದಿ ಮತ್ತು ಕಂದು ಗಾಯಗಳಾಗಿ ವೇಗವಾಗಿ ಬೆಳೆಯುತ್ತವೆ. ಲಿಂಟ್ ಗಳು(ಹತ್ತಿಯ ತೆಳುವಾದ ಎಳೆಗಳು) ಹಳದಿಯಿಂದ ಕಂದು ಬಣ್ಣಕ್ಕೆ ತಿರುಗಿ ಅಸ್ತವ್ಯಸ್ತವಾದ ಮತ್ತು ಸುಲಭವಾಗಿ ಮುರಿಯುವಂತಹ ನಾರಿನ ರಾಶಿಯಾಗುತ್ತದೆ. ಸೋಂಕು ತಗುಲಿದ ಬೀಜಗಳು ಬೆಳೆಯುವುದನ್ನು ನಿಲ್ಲಿಸುತ್ತವೆ, ಒಣಗಿ ಹೋಗುತ್ತವೆ ಮತ್ತು ಅಕಾಲಿಕವಾಗಿ ಒಡೆಯಬಹುದು.
ಇದುವೆರಗೂ ಯಾವುದೇ ಜೈವಿಕ ನಿಯಂತ್ರಣ ವಿಧಾನಗಳು ತಿಳಿದು ಬಂದಿಲ್ಲ. ರೋಗದ ಸಂಭವನೀಯತೆ ಅಥವಾ ರೋಗಲಕ್ಷಣದ ಗಂಭೀರತೆಯನ್ನು ಕಡಿಮೆ ಮಾಡುವ ಯಶಸ್ವಿ ವಿಧಾನ ನಿಮಗೆ ತಿಳಿದಿದ್ದರೆ, ದಯವಿಟ್ಟು ನಮಗೆ ತಿಳಿಸಿ.
ಲಭ್ಯವಿದ್ದಲ್ಲಿ, ಜೈವಿಕ ಚಿಕಿತ್ಸೆ ಮತ್ತು ತಡೆಗಟ್ಟುವ ಕ್ರಮಗಳಿರುವ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಬೀಜಗಳನ್ನು, ಕ್ಯಾಪ್ಟಾನ್, ಕಾರ್ಬಾಕ್ಸಿನ್ ಅಥವಾ ಥಿರಾಮ್ (ಸಾಮಾನ್ಯವಾಗಿ 2 ಗ್ರಾಂ / ಕೆಜಿ ಬೀಜಗಳು) ನಂತಹ ಶಿಲೀಂಧ್ರನಾಶಕಗಳಿಗೆ ಒಡ್ಡುವುದರಿಂದ ರೋಗದ ಸಂಭವನೀಯತೆ ಕಡಿಮೆಯಾಗುತ್ತದೆ. ಮಂಕೋಜೆಬ್, ತಾಮ್ರದ ಆಕ್ಸಿಕ್ಲೋರೈಡ್ ಅನ್ನು ಬೀಜ ಕೋಶ ರಚನೆಯ ಹಂತದಲ್ಲಿರುವ ಬೆಳೆಗಳ ಎಲೆಗಳ ಮೇಲೆ ಸಿಂಪಡಿಸುವುದರಿಂದಲೂ ರೋಗಲಕ್ಷಣಗಳ ಗಂಭೀರತೆಯನ್ನು ಕಡಿಮೆ ಮಾಡಬಹುದು. (2.5 ಮಿ. ಲೀ / ಲೀ ನೀರು )
ಗ್ಲುಮೆರೆಲ್ಲಾ ಗೊಸ್ಸಿಪಿ ಎಂದೂ ಕೂಡ ಕರೆಯಲ್ಪಡುವ ಶಿಲೀಂಧ್ರವಾದ ಕಲೆಕ್ಟೋರಿಯಮ್ ಗೊಸಿಪಿಯಂ ನಿಂದಾಗಿ ಈ ರೋಗಲಕ್ಷಣಗಳು ಉಂಟಾಗುತ್ತವೆ. ಮಣ್ಣಿನಲ್ಲಿರುವ ಸೋಂಕಿತ ಬೀಜಗಳ ಒಳಗೆ ಅಥವಾ ಮೇಲೆ ಸುಪ್ತವಾಗಿ ಉಳಿದು, ವಾತಾವರಣವು ಅನುಕೂಲಕರವಾದ ನಂತರ ಬೆಳವಣಿಗೆಯನ್ನು ಮುಂದುವರಿಸುವ ಮೂಲಕ ಇವು ಒಂದು ಋತುವಿನಿಂದ ಇನ್ನೊಂದಕ್ಕೆ ಸಾಗುತ್ತವೆ. ಸೋಂಕಿತ ಸಸ್ಯದ ಉಳಿಕೆಗಳ ಮೂಲಕ, ಕೊಳೆತ ಬೀಜಗಳು ಅಥವಾ ಸೋಂಕಿತ ಬೀಜಗಳಿಂದ ಇವು ದೂರದವರೆಗೂ ಹರಡಬಹುದು. ಜಮೀನಿನೊಳಗೆ, ಗಾಳಿ, ಮಳೆ, ಮಳೆ-ತುಂತುರು ಮತ್ತು ಕೀಟಗಳಿಂದ ಹರಡುವ ಬೀಜಕಗಳಿಂದ ದ್ವಿತೀಯ ಸೋಂಕು ಉಂಟಾಗುತ್ತದೆ. ರೋಗಕಾರಕ ಜೀವಿಗಳು, ಆಶ್ರಯದಾತ ಕಳೆಗಳಾದ ಅರಿಸ್ಟೋಲಾಚಿಯ ಬ್ರ್ಯಾಕ್ಟಿಯಾಟಾ ಮತ್ತು ಹೈಬಿಸ್ಕಸ್ ಡೈವರ್ಸಿಫೋಲಿಯಸ್ ಗಳಲ್ಲಿ ಸಹ ಬದುಕುಳಿಯುತ್ತವೆ. ಇದರ ಬೆಳವಣಿಗೆಗೆ ಬೆಚ್ಚಗಿನ ಮತ್ತು ಆರ್ದ್ರ ವಾತಾವರಣ (29 ರಿಂದ 33°C), ಬೀಜಕೋಶ ಬೆಳೆಯುವ ಸಮಯದಲ್ಲಿ ದೀರ್ಘಾವಧಿಯ ಮಳೆ ಅಥವಾ ಗಿಡಗಳ ನಡುವಣ ಕಡಿಮೆ ಅಂತರ ಅನುಕೂಲಕರವಾಗಿರುತ್ತದೆ.