Colletotrichum truncatum
ಶಿಲೀಂಧ್ರ
ಆಂಥ್ರಾಕ್ನೋಸ್ ಸೋಯಾಬೀನಿನ ಕಾಂಡಗಳು, ಬೀಜಕೋಶಗಳು ಮತ್ತು ಎಲೆಗಳಿಗೆ ಸೋಂಕು ತಗುಲಿಸಬಹುದು, ಸಾಮಾನ್ಯವಾಗಿ ಯಾವುದೇ ರೋಗಲಕ್ಷಣಗಳಿಲ್ಲದೆ. ಸಂತಾನೋತ್ಪತ್ತಿಯ ಬೆಳವಣಿಗೆಯ ಹಂತಗಳಲ್ಲಿ ಮಾತ್ರ ರೋಗಲಕ್ಷಣಗಳು ಗೋಚರಿಸಬಹುದು. ವಾತಾವರಣವು ಬೆಚ್ಚಗೆ ಮತ್ತು ತೇವವಾಗಿದ್ದಾಗ, ಬೀಜಕೋಶಗಳು ಮತ್ತು ಕಾಂಡಗಳ ಮೇಲೆ ಸಣ್ಣ ಕಂದು ಬಣ್ಣದ ಅನಿಯಮಿತ ಕಲೆಗಳು ಕಾಣಿಸಿಕೊಳ್ಳುತ್ತವೆ. ಈ ಕಲೆಗಳ ಮೇಲೆಯೇ ಸಣ್ಣ ಕಪ್ಪು ಚುಕ್ಕೆಗಳಿರುತ್ತವೆ. ಎಲೆಗಳು ಸುರುಳಿಯಾಗುತ್ತವೆ ಮತ್ತು ಸಿರೆಗಳು ಕಂದು ಬಣ್ಣಕ್ಕೆ ತಿರುಗುತ್ತವೆ. ತೀವ್ರವಾಗಿ ಸೋಂಕಿಗೊಳಗಾದ ಬೀಜಕೋಶಗಳಲ್ಲಿ ಸಣ್ಣ, ಕೊಳೆತ ಬರಡಾದ ಬೀಜಗಳು ಇರುತ್ತವೆ. ಸಸಿಗಳಿಗೆ ಬೇಗ ಸೋಂಕು ತಗುಲಿದರೆ ಅವು ಸೊರಗಿಹೋಗುತ್ತವೆ.
ಇಲ್ಲಿಯವರೆಗೆ ಅಂಥ್ರಾಕ್ನೋಸ್ ವಿರುದ್ಧ ಯಾವುದೇ ಜೈವಿಕ ಚಿಕಿತ್ಸೆಯ ಬಗ್ಗೆ ತಿಳಿದುಬಂದಿಲ್ಲ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. 5% ಕ್ಕಿಂತ ಹೆಚ್ಚು ಬೀಜಗಳು ಸೋಂಕಿಗೆ ಒಳಗಾಗಿದ್ದರೆ, ಶಿಲೀಂಧ್ರನಾಶಕಗಳೊಂದಿಗಿನ ಸಂಸ್ಕರಣೆಯನ್ನು ಸೂಚಿಸಲಾಗುತ್ತದೆ. ಕ್ಲೋರೊಥಲೋನಿಲ್,ಮ್ಯಾಂಕೊಜೆಬ್, ತಾಮ್ರದ ದ್ರವೌಷಧಗಳು ಅಥವಾ ಪ್ರೊಪಿಕೊನಜೋಲ್ ಮತ್ತು ವ್ಯವಸ್ಥಿತ ಶಿಲೀಂಧ್ರನಾಶಕ ಥಿಯೊಫನೇಟ್-ಮೀಥೈಲ್ ಅನ್ನು ಬಳಸಬಹುದು.
ರೋಗಕಾರಕವು ಸಸ್ಯದ್ರವ್ಯದ ಮೇಲೆ ಒಂದು ವರ್ಷದವರೆಗೆ ಬದುಕಬಲ್ಲದು. ಸೋಂಕಿತ ಉಳಿಕೆಗಳ ಮೇಲೆ ಉತ್ಪತ್ತಿಯಾದ ಬೀಜಕಗಳು ಗಾಳಿ ಮತ್ತು ಮಳೆಯ ಮೂಲಕ ಮೇಲಿನ ಎಲೆಗಳಿಗೆ ಹರಡುತ್ತವೆ. ಎಲೆಗಳು ತೇವವಾಗಿದ್ದಾಗ ಮತ್ತು ಮಳೆ ಅಥವಾ ಇಬ್ಬನಿ ಸಮಯಗಳು ದಿನಕ್ಕೆ 12 ಗಂಟೆಯನ್ನು ಮೀರಿದಾಗ ಸೋಂಕು ತಗುಲುತ್ತದೆ. ಒಟ್ಟಾರೆಯಾಗಿ, ರೋಗವು ಇಳುವರಿಯ ಮೇಲೆ ಅಷ್ಟಾಗಿ ಪರಿಣಾಮ ಬೀರದೇ ಇದ್ದರು, ಸಸ್ಯ ಉಳಿಯುವ ಸಾಮರ್ಥ್ಯ ಮತ್ತು ಬೀಜದ ಗುಣಮಟ್ಟವನ್ನು ಕಡಿಮೆ ಮಾಡಬಹುದು. ಅನುಕೂಲಕರ ಪರಿಸ್ಥಿತಿಗಳು (ಆರ್ದ್ರ ಮಣ್ಣು, ಬೆಚ್ಚಗಿನ ಮತ್ತು ಆರ್ದ್ರ ವಾತಾವರಣ) ಇರುವ ಪ್ರದೇಶಗಳಲ್ಲಿ, ಇಳುವರಿ ನಷ್ಟಗಳು ಅಧಿಕವಾಗಬಹುದು.