Physopella zeae
ಶಿಲೀಂಧ್ರ
ಈ ರೋಗದ ಲಕ್ಷಣಗಳೆಂದರೆ, ಎಲೆಗಳ ಹೊರಚರ್ಮದ ಕೆಳಗೆ ಅಂಡಾಕಾರದ ಅಥವಾ ಗುಂಡಾಕಾರದ ಬಿಳಿ ಗುಳ್ಳೆಗಳು. ಈ ಗುಳ್ಳೆಗಳು ಎಲೆಗಳ ಎರಡೂ ಕಡೆಗಳಲ್ಲಿ ಎಲೆ ಸಿರೆಗಳಿಗೆ ಸಮಾನಾಂತರವಾಗಿ ಒಂದು ಗುಂಪಿನ ರೀತಿಯಲ್ಲಿ ಕಂಡುಬರುತ್ತವೆ. ಅವು ದೊಡ್ಡದಾಗುತ್ತಿದ್ದಂತೆ, ಕಪ್ಪು ಬಣ್ಣ ಅಥವಾ ನೇರಳೆ ಬಣ್ಣಕ್ಕೆ ತಿರುಗುತ್ತವೆ ಮತ್ತು ಅಂತಿಮವಾಗಿ ಒಡೆದುಹೋಗಿ, ಅದರ ಮಧ್ಯದಲ್ಲಿ ಪ್ರಕಾಶಮಾನವಾದ ತೂತಿರುವ ಗಾಯವನ್ನು ಕಾಣಬಹುದು. ಸೋಂಕು ತೀವ್ರವಾದಾಗ, ಗುಳ್ಳೆಗಳು ಒಂದುಗೂಡುತ್ತವೆ ಮತ್ತು ಎಲೆಗಳು ಅಕಾಲಿಕವಾಗಿ ಉದುರುತ್ತವೆ. ಶಿಲೀಂಧ್ರವು ವಿನಾಶಕಾರಿಯಾದುದು ಮತ್ತು ಇದು ಹೂಬಿಡುವ ಹಂತಕ್ಕೆ ಮುಂಚಿತವಾಗಿಯೇ ಸಸ್ಯಗಳಿಗೆ ಸೋಂಕನ್ನುತಗುಲಿಸಿದರೆ ಇದು ಇಳುವರಿಯಲ್ಲಿ ಅಧಿಕ ನಷ್ಟವನ್ನು ಉಂಟುಮಾಡಬಹುದು.
ಫಿಸೊಪೆಲ್ಲಾ ಝೀಯಾ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆ ಇಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದಾದರೂ ವಿಧ ನಿಮಗೆ ತಿಳಿದಿದ್ದರೆ ದಯವಿಟ್ಟು ನಮಗೆ ತಿಳಿಸಿ. ನಿಮ್ಮ ಪ್ರತಿಕ್ರಿಯೆಯನ್ನು ನಾವು ಎದುರು ನೋಡುತ್ತೇವೆ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಹೆಚ್ಚಿನ ಮೌಲ್ಯದ ಬೆಳೆಗಳಲ್ಲಿ ಮೊದಲ ರೋಗಲಕ್ಷಣಗಳು ಕಂಡುಬಂದಾಗ ಶಿಲೀಂಧ್ರನಾಶಕಗಳನ್ನು ಎಲೆಗಳ ಮೇಲೆ ಸಿಂಪಡಿಸುವುದು ಪರಿಣಾಮಕಾರಿಯಾಗಿದೆ. ಅಜೋಕ್ಸಿಸ್ಟ್ರೋಬಿನ್, ಟೆಬುಕೋನಜೋಲ್, ಪ್ರೊಪಿಕೊನಜೋಲ್ ಅಥವಾ ಅದರ ಸಂಯೋಜನೆಯನ್ನು ಒಳಗೊಂಡಿರುವ ಶಿಲೀಂಧ್ರನಾಶಕಗಳು ರೋಗದ ಹರಡುವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.
ಈ ಶಿಲೀಂಧ್ರವು ವಿರಳವಾಗಿದ್ದು, ಅಮೆರಿಕಾ ಖಂಡದ ಬೆಚ್ಚನೆಯ, ಆರ್ದ್ರ ಉಷ್ಣವಲಯದಲ್ಲಿ ಮಾತ್ರ ಕಂಡುಬರುತ್ತದೆ. ಇದೊಂದು ಕಡ್ಡಾಯ ಪರಾವಲಂಬಿಯಾಗಿದ್ದು, ಇದು ಸೂಕ್ತವಾದ ಹೋಸ್ಟ್ ಇಲ್ಲದೆ ತನ್ನ ಜೀವನಚಕ್ರವನ್ನು ಸಂಪೂರ್ಣಗೊಳಿಸಲಾರದು. ಇದು ಮಣ್ಣಿನಲ್ಲಿ ಅಥವಾ ಸಸ್ಯದ ಉಳಿಕೆಗಳಲ್ಲಿ ಚಳಿಗಾಲವನ್ನು ಕಳೆಯುವುದಿಲ್ಲ, ಹೀಗಾಗಿ ಒಂದೇ ಹೊಲದ ಋತುಗಳ-ಮಧ್ಯದ ಸೋಂಕುಗಳನ್ನು ಸುಲಭವಾಗಿ ತಡೆಗಟ್ಟಬಹುದು. ಇದು ಮುಖ್ಯವಾಗಿ ಸಸ್ಯದಿಂದ ಸಸ್ಯಕ್ಕೆ ಅಥವಾ ವಿವಿಧ ಪ್ರದೇಶಗಳ ನಡುವೆ ಗಾಳಿಯಿಂದ ಹರಡುತ್ತದೆ. ಉಷ್ಣವಲಯದ ಬೂಷ್ಟು ರೋಗಕ್ಕೆ ಸೂಕ್ತ ಹವಾಮಾನಗಳೆಂದರೆ, ಅಧಿಕ ತಾಪಮಾನ (22 ರಿಂದ 30 °C), ಹೆಚ್ಚಿನ ತೇವಾಂಶ ಮತ್ತು ಅಧಿಕ ಮಟ್ಟದ ಸೌರ ವಿಕಿರಣ. ಎಲೆ ಮೇಲ್ಮೈ ಮೇಲೆ ನೀರು ಇದ್ದರೆ ಅದು ಬೀಜಕಗಳು ಕುಡಿಯೊಡೆಯುವುದನ್ನು ಪ್ರಚೋದಿಸುತ್ತದೆ. ಮೆಕ್ಕೆ ಜೋಳವನ್ನು ಋತುವಿನ ಅಂತ್ಯದಲ್ಲಿ ಕಡಿಮೆ ಎತ್ತರದ ಪ್ರದೇಶಗಳಲ್ಲಿ ನಾಟಿ ಮಾಡಿದಾಗ ಉಷ್ಣವಲಯದ ಬೂಷ್ಟು ರೋಗ ಬರುತ್ತದೆ.