Ramularia collo-cygni
ಶಿಲೀಂಧ್ರ
ಶಿಲೀಂಧ್ರದ ಸೋಂಕು ಸಸ್ಯದ ಬೆಳವಣಿಗೆಯ ಸಮಯದಲ್ಲಿ ಸಂಭವಿಸಬಹುದು ಆದರೆ ಮೊದಲ ರೋಗಲಕ್ಷಣಗಳು ಋತುವಿನ ಕೊನೆಯಲ್ಲಿ ಮಾತ್ರ ಗೋಚರಿಸುತ್ತವೆ. ರೋಗದ ಆರಂಭಿಕ ಹಂತದಲ್ಲಿ, ಸಣ್ಣ ಕಂದು ಅನಿಯಮಿತ "ಮೆಣಸಿನ ಚುಕ್ಕೆಗಳು" ಎಲೆಯ ಮೇಲ್ಮೈ ಅಥವಾ ಕವಚದ ಮೇಲೆ ಕಾಣಿಸಿಕೊಳ್ಳುತ್ತವೆ. ನಂತರ, ಈ ಕಲೆಗಳು 1 ರಿಂದ 3 ಮಿಮೀ ಗಾತ್ರದೊಂದಿಗೆ ಆಯತಾಕಾರದ, ಕೆಂಪು-ಕಂದು ನೆಕ್ರೋಟಿಕ್ ಕಲೆಗಳಾಗಿ ವಿಸ್ತರಿಸುತ್ತವೆ ಮತ್ತು ಬೆಳೆಯುತ್ತವೆ. ಚುಕ್ಕೆಗಳು ಎಲೆಯ ನಾಳಗಳಿಂದ ನಿರ್ಬಂಧಿಸಲ್ಪಟ್ಟಿರುತ್ತವೆ. ಎಲೆ ಮೇಲ್ಮೈ ನ ಎರಡೂ ಬದಿಯಲ್ಲಿ ಗೋಚರಿಸುತ್ತವೆ ಮತ್ತು ಸಾಮಾನ್ಯವಾಗಿ ತಿಳಿ ಕಂದು ಅಥವಾ ಹಳದಿ ಹೊರವಲಯದಿಂದ ಸುತ್ತುವರಿದಿರುತ್ತವೆ. ರೋಗದ ನಂತರದ ಹಂತಗಳಲ್ಲಿ, ಮಚ್ಚೆಗಳು ಒಗ್ಗೂಡಿ ದೊಡ್ಡ ಕಪ್ಪು ಪ್ರದೇಶಗಳನ್ನು ರೂಪಿಸಬಹುದು ಮತ್ತು ಎಲೆಯ ದೊಡ್ಡ ಭಾಗಗಳು ನೆಕ್ರೋಟಿಕ್ ಆಗಬಹುದು. ರೋಗಲಕ್ಷಣಗಳು ಎಲೆಯ ಪೊರೆಗಳು ಮತ್ತು ಮುಳ್ಳುಗಳ ಮೇಲೆ ಸಹ ಗೋಚರಿಸುತ್ತವೆ. ಭೂತಗನ್ನಡಿಯನ್ನು ಬಳಸಿ, ಎಲೆಗಳ ಕೆಳಭಾಗದಲ್ಲಿ ಶಿಲೀಂಧ್ರಗಳ ಬೆಳವಣಿಗೆಯ ಬಿಳಿ ಗೊಂಚಲುಗಳನ್ನು ಗಮನಿಸಬಹುದು. ಎಲೆಗೆ ಆದ ಹಾನಿಯು ಎಲೆಗಳ ಅಕಾಲಿಕ ಕೊಳೆತಕ್ಕೆ ಕಾರಣವಾಗಬಹುದು ಮತ್ತು ನಷ್ಟವನ್ನು ಉಂಟುಮಾಡಬಹುದು.
ಕ್ಷಮಿಸಿ, ರಾಮುಲೇರಿಯಾ ಕೊಲೊ-ಸಿಗ್ನಿ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ತಿಳಿದಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುವ ಏನಾದರೂ ನಿಮಗೆ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಿಮ್ಮ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದೇನೆ.
ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಟ್ರಯಾಜೋಲ್ ಆಧಾರಿತ ಶಿಲೀಂಧ್ರನಾಶಕಗಳೊಂದಿಗೆ ಎಲೆಗಳ ಸಿಂಪಡಣೆಯನ್ನು ರೋಗ ತಡೆಗಟ್ಟುವ ಕ್ರಮವಾಗಿ ಮತ್ತು ಒಮ್ಮೆ ಪತ್ತೆಯಾದ ನಂತರ ರೋಗ ಗುಣಪಡಿಸುವ ಆಯ್ಕೆಯಾಗಿ ಬಳಸಬಹುದು. ಪ್ರಸ್ತುತ ಲಭ್ಯವಿರುವ ಬೀಜ ಚಿಕಿತ್ಸೆಗಳು ಶಿಲೀಂಧ್ರದ ಮೇಲೆ ಹೆಚ್ಚಿನ ಪರಿಣಾಮ ಹೊಂದಿಲ್ಲ.
ಬೀಜಗಳು, ತಾವಾಗಿಯೇ ಬೆಳೆದ ಸಸ್ಯಗಳು, ಇತರ ಏಕದಳ ಆಶ್ರಯದಾತ ಸಸ್ಯಗಳ ಅಥವಾ ಮಣ್ಣಿನ ಮೇಲಿನ ಸಸ್ಯದ ಉಳಿಕೆಗಳಲ್ಲಿ ಬದುಕಬಲ್ಲ ರಾಮುಲೇರಿಯಾ ಕೊಲೊ-ಸಿಗ್ನಿ ಎಂಬ ಶಿಲೀಂಧ್ರದಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಬೀಜಕಗಳು ಗಾಳಿ ಮತ್ತು ಮಳೆಯ ಮೂಲಕ ಹರಡುತ್ತವೆ. ಸಸ್ಯದ ಬೆಳವಣಿಗೆಯ ಯಾವುದೇ ಹಂತದಲ್ಲಿ ಸೋಂಕು ಸಂಭವಿಸಬಹುದಾದರೂ ಸಹ, ಋತುವಿನ ಕೊನೆಯಲ್ಲಿ ಸಸ್ಯ ಸಂತಾನೋತ್ಪತ್ತಿ ಬೆಳವಣಿಗೆಗೆ ಬದಲಾಗುವ ಸಮಯದಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಶಿಲೀಂಧ್ರವು ಎಲೆಗಳ ಮೇಲಿನ ನೈಸರ್ಗಿಕ ರಂಧ್ರಗಳ ಮೂಲಕ ಸಸ್ಯವನ್ನು ಪ್ರವೇಶಿಸುತ್ತದೆ ಮತ್ತು ಆಂತರಿಕ ಅಂಗಾಂಶಗಳನ್ನು ಆಕ್ರಮಿಸುತ್ತವೆ. ಇದು ಸಸ್ಯಕ್ಕೆ ಹಾನಿಕಾರಕವಾದ ವಿಷವನ್ನು ಉತ್ಪಾದಿಸುತ್ತದೆ. ಶಿಲೀಂಧ್ರವು ಮೊಳಕೆಯೊಡೆಯಲು ಮತ್ತು ಬೆಳವಣಿಗೆಗೆ ಎಲೆಯ ಮೇಲ್ಮೈಯಲ್ಲಿ ತೇವಾಂಶದ(ಮಳೆ ಅಥವಾ ಇಬ್ಬನಿಯ ನಂತರ ಎಲೆಗಳ ತೇವ) ಅಗತ್ಯವಿರುತ್ತದೆ. ಆರ್ದ್ರ ವಾತಾವರಣ ಅಥವಾ ಇಬ್ಬನಿಯೊಂದಿಗೆ ಬೆಚ್ಚಗಿನ ದಿನಗಳು ಶಿಲೀಂಧ್ರಗಳ ಬೆಳವಣಿಗೆ ಮತ್ತು ಸೋಂಕಿನ ಪ್ರಮಾಣವನ್ನು ಹೆಚ್ಚಿಸುತ್ತವೆ.