ಗೋಧಿ

ಕಂದು ಬಣ್ಣದ ಚುಕ್ಕೆ

Pyrenophora tritici-repentis

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಮೇಲಿನ ಮತ್ತು ಕೆಳ ಎಲೆಗಳ ಬ್ಲೇಡ್ಗಳಲ್ಲಿ ಹಳದಿ ಗಡಿಗಳೊಂದಿಗಿನ ಸ್ಪಷ್ಟವಾದ ಕಂದು ಬಣ್ಣದ ಗಾಯಗಳು.
  • ನೆಕ್ರೋಸಿಸ್ ತುದಿಯಿಂದ ಎಲೆಯ ಉಳಿದ ಭಾಗಕ್ಕೆ ವಿಸ್ತರಿಸುವುದು.
  • ಗುಲಾಬಿ ಅಥವಾ ಕೆಂಪು ಬಣ್ಣದ ಧಾನ್ಯಗಳು (ಕೆಂಪು ಸ್ಮಾಡ್ಜ್) ಅಥವಾ ಕಪ್ಪು ಬಣ್ಣಕ್ಕೆ ತಿರುಗಿ ಕಂದುವ ಸಾಧ್ಯತೆ ಇದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಗೋಧಿ

ರೋಗಲಕ್ಷಣಗಳು

ರೋಗಲಕ್ಷಣಗಳು ನೆಕ್ರೋಸಿಸ್ ಅಥವಾ ಕ್ಲೋರೋಸಿಸ್ ಅಥವಾ ಎರಡೂ ರೀತಿಯಲ್ಲಿ ಎಲೆಗಳಲ್ಲಿ ಸ್ಪಷ್ಟವಾಗಿ ತೋರಬಹುದು. ಎಲೆಗಳ ಮೇಲಿನ ಮತ್ತು ಕೆಳಗಿನ ಭಾಗದಲ್ಲಿ ಕಂದು ಬಣ್ಣದ ನೆಕ್ರೋಟಿಕ್ ಕಲೆಗಳು ಕಾಣಿಸಿಕೊಳ್ಳುತ್ತವೆ. ಅವುಗಳು ನಂತರ ಲೆನ್ಸ್ ಆಕಾರದ, ಕಂದು ಗಾಯಗಳಂತೆ ಅನಿಯಮಿತ ಗಾತ್ರದ ತಿಳಿ ಹಸಿರು ಅಥವಾ ಹಳದಿ ಕ್ಲೋರೊಟಿಕ್ ಗಡಿಗಳೊಂದಿಗೆ ವಿಸ್ತರಿಸುತ್ತವೆ. ಗಾಯದ ಮಧ್ಯಭಾಗವು ಒಣಗಬಹುದು ಮತ್ತು ಬೂದು ಬಣ್ಣಕ್ಕೆ ತಿರುಗಬಹುದು. ತೇವಾಂಶವುಳ್ಳ ಎಲೆಗಳಿರುವ ಹೆಚ್ಚಿನ ಆರ್ದ್ರತೆ ಪರಿಸರದಲ್ಲಿ, ಕಲೆಗಳು ಕಪ್ಪು ಮಧ್ಯಭಾಗಗಳನ್ನು ಪ್ರದರ್ಶಿಸುತ್ತವೆ. ಆರಂಭಿಕ ಕಲೆಗಳು ದೊಡ್ಡ ಬೊಬ್ಬೆಗಳಾಗಿ ಸಂಯೋಜಿಸುತ್ತವೆ. ಇದು ಎಲೆಗಳ ಸಾವು ಮತ್ತು ಸಸ್ಯದ ವಿಪರ್ಣನೆಗೆ ಕಾರಣವಾಗುತ್ತದೆ. ರೋಗಕಾರಕವು ಗುಲಾಬಿ ಅಥವಾ ಕೆಂಪು ಬಣ್ಣದ ಧಾನ್ಯಗಳ (ರೆಡ್ ಸ್ಮೂಡ್ಜ್) ಅಥವಾ ಇತರ ಶಿಲೀಂಧ್ರಗಳ ಜೊತೆಗೂಡಿ ಕಂದಿದ ಕಪ್ಪು ಬಣ್ಣವನ್ನು ಉಂಟುಮಾಡಬಹುದು. ಆದರೆ, ಕಾಳಿನ ಹೊಟ್ಟುಗಳಿಗೆ ಪರಿಣಾಮ ಬೀರುವುದಿಲ್ಲ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಮಣ್ಣಿನಲ್ಲಿ ಪ್ರತಿಕೂಲದ ಸೂಕ್ಷ್ಮಾಣುಜೀವಿಗಳ ವಸಾಹತು ಉತ್ತೇಜಿಸಲು ಸಮತೋಲಿತ ಫಲೀಕರಣವನ್ನು ಬಳಸಿ. ಆಲ್ಟರ್ನೇರಿಯಾ ಆಲ್ಟರ್ನೇಟಾ, ಫುಸರಿಯಮ್ ಪಲಿಡೋರೋಸಿಯಮ್, ಅಸಿನೆಟೋಬ್ಯಾಕ್ಟರ್ ಕ್ಯಾಲ್ಕೋಕೇಟಿಕಸ್, ಸೆರೆಟಿಯ ಲಿಕ್ಫಸಿಯೆನ್ಸ್, ಮತ್ತು ಬಿಳಿ ಯೀಸ್ಟಗಳು ಕಂದು ಬಣ್ಣದ ಚುಕ್ಕೆ ಶಿಲೀಂಧ್ರದೊಂದಿಗೆ ಸ್ಪರ್ಧಿಸುತ್ತವೆ ಮತ್ತು ತನ್ಮೂಲಕ ಅದರ ಸಂಭವವನ್ನು ತಗ್ಗಿಸುತ್ತವೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಪಿರಾಕ್ಲೋಸ್ಟ್ರೋಬಿನ್, ಪಿಕೋಕ್ಸಿಸ್ಟ್ರೋಬಿನ್, ಪ್ರೊಪಿಕೊನಜೋಲ್ ಮತ್ತು ಪ್ರೊಥಿಯೊಕೊನಜೋಲ್ಗಳನ್ನು ಆಧರಿಸಿದ ಎಲೆಗಳ ಮೇಲೆ ಸಿಂಪಡಿಸಲ್ಪಡುವ ಶಿಲೀಂಧ್ರನಾಶಕಗಳು ಕಂದು ಬಣ್ಣದ ಚುಕ್ಕೆ ವಿರುದ್ಧ ಹೆಚ್ಚಿನ ಪರಿಣಾಮವನ್ನು ತೋರಿಸಿವೆ.

ಅದಕ್ಕೆ ಏನು ಕಾರಣ

ಪಿರನೋಫೋರಾ ಟ್ರೈಟಿಸಿ-ರಿಪೆಂಟಿಸ್ ಶಿಲೀಂಧ್ರದಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಚಳಿಗಾಲದಲ್ಲಿ ಗೋಧಿ ಹುಲ್ಲು ಅಥವಾ ಬೀಜಗಳ ಮೇಲೆ ಅದು ಬದುಕುಳಿಯುತ್ತದೆ. ವಸಂತಕಾಲದ ಅವಧಿಯಲ್ಲಿ ಪಕ್ವತೆಯ ನಂತರ ಬೀಜಕಗಳು ರೂಪುಗೊಳ್ಳುತ್ತವೆ ಮತ್ತು ಬಿಡುಗಡೆಯಾಗುತ್ತವೆ ಮತ್ತು ಗಾಳಿ ಮತ್ತು ನೀರಿನ ಎರಚಲಿಂದ ಚದುರುತ್ತವೆ. ಅವುಗಳ ದೊಡ್ಡ ಗಾತ್ರದ ಕಾರಣದಿಂದ ಅವು ಕೇವಲ ಕಡಿಮೆ ದೂರದಲ್ಲಿ ಮಾತ್ರ ಹರಡಬಲ್ಲವು. ಅವುಗಳು ಕೆಳ ಎಲೆಗಳಿಗೆ ಸೋಂಕು ತಗುಲಿಸುತ್ತವೆ, ಅಲ್ಲಿ ಅವುಗಳು ಮೇಲಿನ ಎಲೆಗೊಂಚಲು ಮತ್ತು ಇತರೆ ಸಸ್ಯಗಳಿಗೆ ರೋಗವನ್ನು ಹರಡುವ ಹೆಚ್ಚಿನ ಬೀಜಕಗಳನ್ನು ಅಭಿವೃದ್ಧಿಪಡಿಸುತ್ತವೆ ಮತ್ತು ಉತ್ಪತ್ತಿ ಮಾಡುತ್ತವೆ. ಸಸ್ಯಗಳಲ್ಲಿನ ನೆಕ್ರೋಟಿಕ್ ಮತ್ತು ಕ್ಲೋರೋಟಿಕ್ ರೋಗಲಕ್ಷಣಗಳು ಶಿಲೀಂಧ್ರದಿಂದ ಜೀವಾಣು ಉತ್ಪಾದನೆಯ ಕಾರಣವಾಗಿ ಹೊರಹೊಮ್ಮುತ್ತವೆ, ಈ ಪ್ರಕ್ರಿಯೆಯು ಭಾಗಶಃ ಬೆಳಕನ್ನು ಅವಲಂಬಿಸಿರುತ್ತದೆ. ಬೀಜಕಗಳ ಉತ್ಪಾದನೆಗೆ 95% ಕ್ಕಿಂತ ಹೆಚ್ಚಿನ ಆರ್ದ್ರತೆಯು ಅನುಕೂಲಕರವಾಗಿರುತ್ತದೆ. ಎಲೆಗಳ ಆರ್ದ್ರತೆಯಿಂದ , ಹೆಚ್ಚಿನ ಸಾಪೇಕ್ಷ ಆರ್ದ್ರತೆ ಮತ್ತು 2 ದಿನಗಳವರೆಗೆ 10°ಸೆ ಮೇಲಿನ ಉಷ್ಣತೆಯು ದ್ವಿತೀಯ ಸೋಂಕು ಹರಡುವುದಕ್ಕೆ ಅನುಕೂಲಕರವಾಗಿವೆ. ಕಂದು ಬಣ್ಣದ ಚುಕ್ಕೆ ಹರಡಲು ಗರಿಷ್ಟ ಉಷ್ಣಾಂಶವೆಂದರೆ 20-25 ಡಿಗ್ರಿಗಳು.


ಮುಂಜಾಗ್ರತಾ ಕ್ರಮಗಳು

  • ಸೋಂಕಿತ ಬೀಜಕಣಗಳ ಮೂಲಕ ಶಿಲೀಂಧ್ರಗಳು ಆಗಾಗ್ಗೆ ಹರಡುತ್ತಲಿರುತ್ತವೆ ಆದ್ದರಿಂದ ಪ್ರಮಾಣೀಕೃತ ಬೀಜಗಳನ್ನು ಖರೀದಿಸಿ.
  • ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಬೆಳೆಯಿರಿ.
  • ಶಿಲೀಂಧ್ರ ಬೆಳವಣಿಗೆಯನ್ನು ತಡೆಗಟ್ಟಲು ನಿಮ್ಮ ಸಸ್ಯಗಳ ನಡುವೆ ವಿಶಾಲ ಅಂತರವನ್ನು ಬಳಸಿ.
  • ಸುಗ್ಗಿಯ ನಂತರ ಸಂಪೂರ್ಣವಾದ ಉಳುಮೆ ಮಾಡುವುದರಿಂದ ಕಂದು ಬಣ್ಣದ ಚುಕ್ಕೆಗಳ ಅಪಾಯವು ಗಣನೀಯವಾಗಿ ಕಡಿಮೆಯಾಗುತ್ತದೆ, ಏಕೆಂದರೆ ಶಿಲೀಂಧ್ರವು ಮಣ್ಣಿನಲ್ಲಿರುವ ಸೆಣಸುತ್ತಿರುವ ಸೂಕ್ಷ್ಮಜೀವಿಗಳಿಗೆ ಸಂವೇದಿಸುತ್ತದೆ.
  • ಪ್ರತಿ ಎರಡನೇ ಅಥವಾ ಮೂರನೇ ವರ್ಷಕ್ಕೆ ಸಾಸಿವೆ, ಅಗಸೆ, ಕ್ರಾಮ್ಬೆ, ಅಥವಾ ಸೋಯಾಬೀನ್ ರೀತಿಯ ನಾನ್ ಹೋಸ್ಟ್ ಸಸ್ಯಗಳೊಂದಿಗೆ ಬೆಳೆ ಸರದಿಯನ್ನು ಶಿಫಾರಸ್ಸು ಮಾಡಲಾಗಿದೆ.
  • ಚಿಗುರು ಮತ್ತು ಹೂಗೊಂಚಲು ಹಂತಗಳ ನಡುವೆ ಎಚ್ಚರಿಕೆಯಿಂದ ಸಸ್ಯಗಳನ್ನು ಪರಿಶೀಲಿಸಿ.
  • ಸುಗ್ಗಿಯ ನಂತರ ಎಲ್ಲಾ ಸಸ್ಯದ ಉಳಿಕೆಗಳನ್ನು ನೆಲಸಮ ಮಾಡಿ ಮತ್ತು ನಾಶಮಾಡಿ.
  • ಸಸ್ಯ ಪ್ರತಿರೋಧವನ್ನು ಹೆಚ್ಚಿಸಲು ಸಮತೋಲಿತ ಫಲೀಕರಣವನ್ನು ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ