Pyrenophora teres
ಶಿಲೀಂಧ್ರ
ನೆಟ್ ಬ್ಲಾಚ್ ಗೆ ಎರಡು ರೂಪಗಳಿವೆ: ಕಲೆಯ ರೂಪ ಮತ್ತು ಜಾಲ-ರೀತಿಯ ರೂಪ. ರೋಗಲಕ್ಷಣಗಳು ಸಾಮಾನ್ಯವಾಗಿ ಎಲೆಗಳಲ್ಲಿ ಕಂಡುಬರುತ್ತವೆ, ಆದರೆ ಸಾಂದರ್ಭಿಕವಾಗಿ ಎಲೆಯ ಕವಚಗಳು ಮತ್ತು ಹೂವಿನ ಹಿಡಿಗಳಲ್ಲಿ ಕಂಡುಬರುತ್ತವೆ. ಜಾಲ ರೀತಿಯ ರೂಪವು ಸೂಜಿಮೊನೆಯಂತಹ ಕಂದು ಬಣ್ಣದ ಗಾಯಗಳಿಂದ ಪ್ರಾರಂಭವಾಗುತ್ತವೆ ಮತ್ತು ಇದು ಉದ್ದವಾಗುತ್ತಾ ಎಲೆಯ ದಳದ ಉದ್ದಕ್ಕೂ ಮತ್ತು ಅಗಲಕ್ಕೂ ತೆಳುವಾದ, ಗಾಢ ಕಂದು ಬಣ್ಣದ ಪಟ್ಟೆಗಳನ್ನು ಉತ್ಪತ್ತಿ ಮಾಡುತ್ತದೆ ಮತ್ತು ವಿಶಿಷ್ಟವಾದ ಜಾಲ ಮಾದರಿಯನ್ನು ರಚಿಸುತ್ತದೆ. ಹಳೆಯ ಗಾಯಗಳು ಎಲೆಯ ಸಿರೆಗಳ ಉದ್ದಕ್ಕೂ ಹರಡುತ್ತವೆ ಮತ್ತು ಸಾಮಾನ್ಯವಾಗಿ ಹಳದಿ ಅಂಚುಗಳಿಂದ ಆವೃತವಾಗಿರುತ್ತವೆ. ಆರಂಭದಲ್ಲಿ ಈ ಕಲೆಗಳು ಹಳದಿ ಅಂಚುಗಳಿಂದ ಆವೃತವಾಗಿರುವ ಸಣ್ಣ ಗಟ್ಟಿಯಾದ ಕಂದು ಬಣ್ಣದ ಅಂಡಾಕಾರದ ಗಾಯಗಳಾಗಿರುತ್ತವೆ. ನಂತರ, ಈ ಕಲೆಗಳು 3-6 ಮಿಮೀ ವ್ಯಾಸದ ತಿಳಿ ಅಥವಾ ಗಾಢ ಕಂದು ಬಣ್ಣದ ಬೊಬ್ಬೆಗಳಾಗಿ ಬೆಳೆಯುತ್ತವೆ. ಜೊಂಡಿಗೂ ಸೋಂಕಾಗಬಹುದು. ಹೂವಿನ ಹಿಡಿಗಳ ಮೇಲೆ ಸಣ್ಣ ಕಂದು ಬಣ್ಣದ ಗೆರೆಗಳು, ಯಾವುದೇ ಜಾಲದ ಮಾದರಿಯಿಲ್ಲದೆ ಬೆಳೆಯುತ್ತವೆ, ಇದರಿಂದಾಗಿ ಇಳುವರಿ ಕಡಿಮೆಯಾಗುತ್ತದೆ ಮತ್ತು ಬೀಜಗಳು ಸುಕ್ಕುಗಟ್ಟುತ್ತವೆ. ಸೋಂಕಿತ ಕಾಳುಗಳ ತಳದಲ್ಲಿ ಅಸ್ಪಷ್ಟ ಕಂದು ಬಣ್ಣದ ಗಾಯಗಳಿರುತ್ತವೆ.
ಕ್ಷಮಿಸಿ, ಪೈರಿನೊಫೋರಾ ಟೆರೆಸ್ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ಗೊತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದಾದರೂ ವಿಧ ನಿಮಗೆ ತಿಳಿದಿದ್ದರೆ ದಯವಿಟ್ಟು ನಮಗೆ ತಿಳಿಸಿ. ನಿಮ್ಮ ಪ್ರತಿಕ್ರಿಯೆಯನ್ನು ನಾವು ಎದುರು ನೋಡುತ್ತೇವೆ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಟ್ರಿಯಾಜೋಲ್ ಮತ್ತು ಸ್ಟ್ರೋಬಿಲ್ಯೂರಿನ್ ಹೊಂದಿರುವ ಎಲೆಗಳ ಶಿಲೀಂಧ್ರನಾಶಕಗಳು ನೆಟ್ ಬ್ಲಾಚ್ ನ ಎರಡೂ ಸ್ವರೂಪಗಳನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿವೆ. ಟೆಬುಕೋನಜೋಲ್ ಅನ್ನು ಬಳಸಬೇಡಿ. ಹೆಚ್ಚಿನ ಮಳೆಯ ವಾತಾವರಣದಲ್ಲಿ ಎರಡು ಸಿಂಪಡೆಗಳನ್ನು ಮಾಡುವ ಅಗತ್ಯವಿರಬಹುದು. ಸಾಧ್ಯವಾದಾಗಲೆಲ್ಲಾ, ಶಿಲೀಂಧ್ರನಾಶಕಗಳನ್ನು ವಿವಿಧ ವಿಧಾನಗಳ ಕ್ರಮಗಳೊಂದಿಗೆ ಬದಲಿಸಿ, ಇದು ಪ್ರತಿರೋಧದ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಬೀಜ ಡ್ರೆಸಿಂಗ್ಗಳು ಜಾಲ ರೂಪದ ನೆಟ್ ಬ್ಲಾಚ್ ನ ವಿರುದ್ಧ ಮಾತ್ರ ಪರಿಣಾಮಕಾರಿಯಾಗಿರುತ್ತವೆ.
ನೆಟ್ ಬ್ಲಾಚ್ ಪೈರಿನೊಫೊರಾ ಟೆರೆಸ್ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಇದು ಬೆಳೆಯ ಉಳಿಕೆಗಳು ಮತ್ತು ತಾವಾಗೇ ಬೆಳೆದ ಗಿಡಗಳಲ್ಲಿ ಚಳಿಗಾಲವನ್ನು ಕಳೆಯುತ್ತದೆ. ರೋಗವು ಸೋಂಕಿಗೊಳಗಾದ ಬೀಜದಿಂದ ಕೂಡಾ ಉಂಟಾಗಬಹುದು, ಆದರೆ ಸಾಮಾನ್ಯವಾಗಿ ಸಣ್ಣ ಪ್ರಮಾಣದಲ್ಲಿ ಸಂಭವಿಸಬಹುದು. ಗಾಳಿಯಿಂದ ಹರಡುವ ಬೀಜಕಗಳು ಮತ್ತು ಮಳೆಯ ಎರಚಲಿನಿಂದ ರೋಗವು ಹರಡುತ್ತದೆ. 10 ºಸಿ ಮತ್ತು 25ºಸಿ ನಡುವಿನ ಉಷ್ಣಾಂಶದಲ್ಲಿ ಸುಮಾರು ಆರು ಗಂಟೆಗಳ ತೇವಾಂಶದ ಪರಿಸ್ಥಿತಿಗಳ ನಂತರ ಪ್ರಾಥಮಿಕ ಬೆಳೆ ಸೋಂಕು ಸಂಭವಿಸುತ್ತದೆ. ಪ್ರಾಥಮಿಕ ಸೋಂಕಿನ ನಂತರ ಪರಿಸ್ಥಿತಿಗಳು ಅನುಕೂಲಕರವಾಗಿದ್ದಾಗ 14 ರಿಂದ 20 ದಿನಗಳೊಳಗೆ ಬೀಜಕಗಳು ಗಾಳಿಯ ಮೂಲಕ ಪ್ರಸರಣವಾಗುತ್ತವೆ. ತೀವ್ರವಾದ ಸೋಂಕು ಹಸಿರು ಎಲೆ ಪ್ರದೇಶವನ್ನು ಮತ್ತು ಸಸ್ಯ ಉತ್ಪಾದಕತೆಯನ್ನು ಕಡಿಮೆ ಮಾಡುತ್ತದೆ ಮತ್ತು ಎಲೆಗಳನ್ನು ಅಕಾಲಿಕವಾಗಿ ನಾಶಮಾಡುತ್ತದೆ. ಶಿಲೀಂಧ್ರವು ಕಾಂಡದ ಒಳಗೆ ಕೂಡಾ ಬೆಳೆಯುತ್ತದೆ. ಕೊಯ್ಲಿನ ನಂತರ ಇದು ಉಳಿದ ಪೈರಿನ ಕೂಳೆಯಲ್ಲಿ ಉಳಿದುಕೊಂಡಿರುತ್ತದೆ, ಮುಂದಿನ ಋತುವಿನಲ್ಲಿ ಹೊಸ ಸೋಂಕು ಪ್ರಾರಂಭವಾಗಲು ಇದು ಸಹಾಯ ಮಾಡುತ್ತದೆ. ನೆಟ್ ಬ್ಲಾಚ್ ಮುಖ್ಯವಾಗಿ ಬೀಜದ ತೂಕ ಮತ್ತು ಧಾನ್ಯದ ಗುಣಮಟ್ಟವನ್ನು ಕಡಿಮೆಮಾಡುತ್ತದೆ.