ಇತರೆ

ರೈಂಚೋಸ್ಪೊರಿಯಮ್

Rhynchosporium secalis

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಕ್ಲೋರೊಟಿಕ್, ಅನಿಯಮಿತ ಅಥವಾ ವಜ್ರದ ಆಕಾರದ ಗಾಯಗಳು ಹಳೆಯ ಎಲೆಗಳಲ್ಲಿ ಹರಡುತ್ತವೆ.
  • ಗಾಯಗಳ ಮಧ್ಯಭಾಗವು ಒಣಗುತ್ತವೆ ಮತ್ತು ಬಿಳುಚಿಕೊಳ್ಳುತ್ತವೆ ಹಾಗೆಯೇ ಅಂಚುಗಳು ಕಂದು ಬಣ್ಣಕ್ಕೆ ತಿರುಗುತ್ತವೆ.
  • ಸಣ್ಣ ಗಾಯಗಳು ದೊಡ್ಡದಾಗುತ್ತವೆ ಮತ್ತು ಒಂದಾಗಿ ಎಲೆಗಳ ಅಗಲಕ್ಕೂ ಹರಡುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಬಾರ್ಲಿ

ಇತರೆ

ರೋಗಲಕ್ಷಣಗಳು

ರೈಂಚೋಸ್ಪೊರಿಯಮ್ ಸೋಂಕಿನ ವಿಶಿಷ್ಟವಾದ ಲಕ್ಷಣಗಳೆಂದರೆ, ಕೊಲೊಪ್ಟೈಲ್, ಎಲೆಗಳು, ಎಲೆಯ ಪೊರೆಗಳು, ಕಾಳಿನ ಹೊಟ್ಟುಗಳು, ಹೂವಿನ ಪತ್ರಕಗಳು ಮತ್ತು ಚುಂಗುಗಳ (ಹೂವುಗಳಿಂದ ಹೊರಬರುವ ಕೂದಲಿನಂತಹ ಉಪಾಂಗಗಳು) ಮೇಲೆ ಉಂಟಾಗುವ ವಿಶಿಷ್ಟವಾದ ಗಾಯಗಳು. ರೋಗಲಕ್ಷಣಗಳು ಮೊಟ್ಟಮೊದಲ ಬಾರಿಗೆ ಹಳೆಯ ಎಲೆಗಳ ಪೊರೆ ಅಥವಾ ಆಕ್ಸಿಲ್ ಗಳ ಮೇಲೆ ಕ್ಲೋರೊಟಿಕ್, ಅನಿಯಮಿತ ಅಥವಾ ಡೈಮಂಡ್-ಆಕಾರದ ಗಾಯಗಳಾಗಿ (1-2 ಸೆಂ.ಮೀ) ಕಾಣಿಸುತ್ತವೆ. ನಂತರ, ಗಾಯಗಳು ಸಾಮಾನ್ಯವಾಗಿ ನೀರಿನಂತೆ ಕಾಣಿಸಿಕೊಳ್ಳುವ ಮೂಲಕ ಬೂದು ಬಣ್ಣಕ್ಕೆ ತಿರುಗುತ್ತವೆ. ನಂತರ, ಗಾಯಗಳ ಮಧ್ಯಭಾಗವು ಒಣಗುತ್ತದೆ ಮತ್ತು ಬಿಳುಚಿಕೊಳ್ಳುತ್ತದೆ, ತೆಳು ಬೂದು, ಕಂದು ಅಥವಾ ಬಿಳಿ ಬಣ್ಣಕ್ಕೆ ತಿರುಗುತ್ತವೆ. ಅವುಗಳ ಅಂಚುಗಳು ಗಾಢ ಕಂದು ಬಣ್ಣಕ್ಕೆ ತಿರುಗಿ ಹಳದಿ ಕ್ಲೋರೋಟಿಕ್ ಹಾಲೊನಿಂದ ಆವೃತವಾಗುತ್ತವೆ. ಅವು ದೊಡ್ಡದಾಗುತ್ತಿದ್ದಂತೆ, ಎಲೆಗಳ ಸಿರೆಗಳಿಗೆ ಸೀಮಿತವಾಗದೆ ಗಾಯಗಳು ವಿಲೀನಗೊಂಡು ಅಂಡಾಕಾರದಿಂದ ಆಯತಾಕಾರವರೆಗೆ ಮಾರ್ಪಡುತ್ತವೆ. ತೀವ್ರವಾದ ಸೋಂಕಿನ ಸಂದರ್ಭದಲ್ಲಿ ಅಥವಾ ನಂತರದ ಹಂತಗಳಲ್ಲಿ ಕಿರಿಯ ಎಲೆಗಳು ಮತ್ತು ಹೂಗೊಂಚಲುಗಳು ಸಹ ಸೋಂಕಿಗೆ ಒಳಗಾಗಬಹುದು. ಹೂವಿಗಾಗುವ ಸೋಂಕಿನ ಲಕ್ಷಣವೆಂದರೆ ಚುಂಗುಗಳ ತಳದಲ್ಲಿ ತೆಳುವಾದ ಹಳದಿ ಬಣ್ಣದ ಮಧ್ಯಭಾಗವಿರುವ ಗಾಢ ಕಂದು ಬಣ್ಣದ ಅಂಚಿರುವ ಗಾಯಗಳು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕ್ಷಮಿಸಿ, ರೈಂಚೋಸ್ಪೊರಿಯಮ್ ಸೆಕೇಲಿಸ್ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ಗೊತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದಾದರೂ ವಿಧ ನಿಮಗೆ ತಿಳಿದಿದ್ದರೆ ದಯವಿಟ್ಟು ನಮಗೆ ತಿಳಿಸಿ. ನಿಮ್ಮ ಪ್ರತಿಕ್ರಿಯೆಯನ್ನು ನಾವು ಎದುರು ನೋಡುತ್ತೇವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳನ್ನು ಒಳಗೊಂಡಂತೆ ಒಂದು ಸಂಯೋಜಿತ ಕೀಟ ನಿರ್ವಹಣೆ ಅನ್ನು ಯಾವಾಗಲೂ ಪರಿಗಣಿಸಿ. ಋತುವಿನ ಆರಂಭದ ಸಾಂಕ್ರಾಮಿಕ ಸೋಂಕಿನ ಸಂಭವನೀಯತೆಯನ್ನು ಕಡಿಮೆ ಮಾಡಲು ಶಿಲೀಂಧ್ರನಾಶಕಗಳೊಂದಿಗಿನ ಬೀಜಗಳ ಸಂಸ್ಕರಣೆ ಸಹಾಯ ಮಾಡುತ್ತದೆ. ಸ್ಟ್ರೊಬಿಲ್ಯೂರಿನ್ ಮತ್ತು ಅನಿಲಿನೋಪೈಮಿಡಿನ್ ಗುಂಪಿನ ಶಿಲೀಂಧ್ರನಾಶಕ ಮಿಶ್ರಣಗಳನ್ನು ವಿಭಿನ್ನ ಕ್ರಮಗಳ ಮೂಲಕ ಬಳಸಿ.

ಅದಕ್ಕೆ ಏನು ಕಾರಣ

ರೈಂಚೋಸ್ಪೊರಿಯಮ್ ಬೀಜದಿಂದ ಹರಡುವ ಶಿಲೀಂಧ್ರವಾಗಿದ್ದು, ಇದು ಒಂದು ವರ್ಷದವರೆಗೆ ಸಸ್ಯದ ಉಳಿಕೆಗಳು ಅಥವಾ ತಾನಾಗೇ ಬೆಳೆದ ಸಸ್ಯಗಳಂತಹ ಸೋಂಕಿತ ಹೋಸ್ಟ್ ಉಳಿಕೆಗಳ ಮೇಲೆ ಸಹ ಬದುಕುಳಿಯಬಹುದು. ಬೀಜಕಣಗಳು ಮಳೆ ಎರಚಲಿನ ಮೂಲಕ ಸ್ವಲ್ಪ ದೂರದವರೆಗೆ ಮತ್ತು ಗಾಳಿಯ ಮೂಲಕ ಇನ್ನಷ್ಟು ದೂರದವರೆಗೆ ಹರಡಬಲ್ಲದು. ಬೀಜಕ ರಚನೆ ಮತ್ತು ಸೋಂಕು 5 °C ಮತ್ತು 30 °C ನಡುವಿನ ಉಷ್ಣಾಂಶದಲ್ಲಿ ಸಂಭವಿಸಬಹುದು. ಅನುಕೂಲಕರ ಪರಿಸರ ಪರಿಸ್ಥಿತಿಗಳೆಂದರೆ 15 °C ಮತ್ತು 20 °C ನಡುವಿನ ತಾಪಮಾನ ಮತ್ತು 7 ರಿಂದ 10 ಗಂಟೆಗಳ ಎಲೆಯ ಆರ್ದ್ರತೆ. ರೋಗಲಕ್ಷಣಗಳು ಮೊದಲಿಗೆ ಕಾಣಿಸಿಕೊಳ್ಳುತ್ತವೆ ಮತ್ತು ಹೆಚ್ಚಿನ ಉಷ್ಣಾಂಶದಲ್ಲಿ ಹೆಚ್ಚು ತೀವ್ರವಾಗಿರುತ್ತವೆ. ತೆನೆಯ ಮುಖ್ಯ ಎಲೆಗಳು ಮತ್ತು ಅವುಗಲ ಕೆಳಗಿರುವ ಎರಡು ಎಲೆಗಳಿಗೆ ಸೋಂಕಾದರೆ, ಇಳುವರಿಯಲ್ಲಿ ಕಡಿತ ಖಂಡಿತ. ಒಂದು ಸುಪ್ತ ಸೋಂಕು ಇದ್ದರೆ (ಲಕ್ಷಣವಿಲ್ಲದ), ರೋಗಕಾರಕವು ಋತುವಿನಿಂದ ಋತುವಿನವರೆಗೆ ಸಸ್ಯದ ಉಳಿಕೆಗಳಲ್ಲಿ ಬದುಕಬಲ್ಲದು.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಪ್ರದೇಶದಲ್ಲಿ ಲಭ್ಯವಿರುವ ಸಹಿಷ್ಣು ಪ್ರಭೇದಗಳನ್ನು ಬಳಸಿ.
  • ಚಳಿಗಾಲದ ಬಾರ್ಲಿ ಮತ್ತು ಚಳಿಗಾಲದ ಸಣ್ಣ ಗೋಧಿಯನ್ನು (ರೈ) ಋತುವಿನ ಕೊನೆಯಲ್ಲಿ ಬಿತ್ತನೆ ಮಾಡಿ.
  • ಗದ್ದೆಯ ಸುತ್ತ ಮುತ್ತಲಿನ ಕಳೆಗಳನ್ನು ನಿಯಂತ್ರಿಸಿ.
  • ಶಿಲೀಂಧ್ರಕ್ಕೆ ಅನುಕೂಲಕರವಾದ ಪರಿಸ್ಥಿತಿಗಳು ಇದ್ದಾಗ ರೋಗಗಳ ಯಾವುದೇ ಚಿಹ್ನೆಗಳಿಗೆ ಸಸ್ಯಗಳು ಅಥವಾ ಗದ್ದೆಯನ್ನು ಪರಿಶೀಲಿಸಿ.
  • ಹೋಸ್ಟ್-ಅಲ್ಲದ ಬೆಳೆಗಳೊಂದಿಗೆ ಸರದಿ ಮಾಡಿ.
  • ಆಳವಾಗಿ ಉಳುಮೆ ಮಾಡಿ ಮತ್ತು ಮಣ್ಣಿನ ಪದರದೊಳಗೆ ಸಸ್ಯದ ಉಳಿಕೆಗಳನ್ನು ಹೂತು ಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ