Cercospora penniseti
ಶಿಲೀಂಧ್ರ
ಮಧ್ಯದಲ್ಲಿ ಬೂದುಬಣ್ಣವಿರುವ ಸಣ್ಣ, ಕಪ್ಪು ಮತ್ತು ಅಂಡಾಕಾರದ ಗಾಯಗಳು ಎಲೆಗಳು ಮತ್ತು ಕಾಂಡಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಈ ಗಾಯಗಳ ಮೇಲೆ ಕಪ್ಪು ಮತ್ತು ಉಬ್ಬಿದ ಚುಕ್ಕೆಗಳು ಬೆಳೆಯುತ್ತವೆ.
ಈ ರೋಗಕ್ಕೆ ಪರ್ಯಾಯ ಚಿಕಿತ್ಸೆ ಇಲ್ಲ. ಮುಂದಿನ ಬೆಳೆಯ ಋತುವಿನಲ್ಲಿ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ತಡೆಗಟ್ಟುವ ಕ್ರಮಗಳನ್ನು ಜಾರಿಗೊಳಿಸಿ.
ಈ ರೋಗಕ್ಕೆ ಯಾವುದೇ ರಾಸಾಯನಿಕ ಚಿಕಿತ್ಸೆಯ ಅಗತ್ಯವಿಲ್ಲ. ಮುಂದಿನ ಬೆಳೆಯ ಋತುವಿನಲ್ಲಿ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ತಡೆಗಟ್ಟುವ ಕ್ರಮಗಳನ್ನು ಜಾರಿಗೊಳಿಸಿ.
ಹೆಚ್ಚಿನ ಉಷ್ಣತೆ ಮತ್ತು ಅಧಿಕ ಆರ್ದ್ರತೆ ರೋಗಕ್ಕೆ ಅನುಕೂಲಕರ. ಶಿಲೀಂಧ್ರ ಗಾಳಿ ಮತ್ತು ಮಳೆಯಿಂದ ಹರಡುತ್ತದೆ. ಇದು ಬೆಳೆಯ ಉಳಿಕೆಗಳು ಮತ್ತು ಕಳೆಗಳಂತಹ ಆಶ್ರಯದಾತ ಸಸ್ಯಗಳ ಮೇಲೆ ರಕ್ಷಣೆ ಪಡೆಯುತ್ತದೆ. ಇಳುವರಿ ನಷ್ಟಗಳು ಹೆಚ್ಚಾಗಿ ಸಣ್ಣ ಮಟ್ಟದ್ದಾಗಿರುತ್ತವೆ.