ಹುಲ್ಲುಜೋಳ

ಹುಲ್ಲು ಜೋಳದ ಒರಟು ಎಲೆ ಚುಕ್ಕೆ

Ascochyta sorghi

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಸಣ್ಣ ಕೆಂಪು ಬಣ್ಣದ ಕಲೆಗಳು ಹಿಗ್ಗುತ್ತವೆ ಮತ್ತು ಸಣ್ಣ ಕಪ್ಪು ಗಂಟುಗಳಾಗಿ ಬೆಳೆಯುತ್ತವೆ.
  • ಅವು ಮುರಿದುಹೋಗುವಾಗ, ಅವು ವಲಯವಿರುವ ಬಿಳಿ ಕುಳಿಗಳನ್ನು ಬಿಡುತ್ತವೆ.
  • ಸಣ್ಣ, ಕಪ್ಪು, ಗಡುಸಾದ ಮತ್ತು ಉಬ್ಬಿದ ಶಿಲೀಂಧ್ರ ರಚನೆಗಳು ಗಾಯಗಳಲ್ಲಿ ಕಾಣಿಸಿಕೊಳ್ಳುತ್ತವೆ, ಇದರಿಂದಲೇ ಅವುಗಳು ಗಡುಸಾಗುತ್ತವೆ.
  • ಅಂತಿಮ ಹಂತದಲ್ಲಿ ಎಲೆಗಳು ಸಾಯುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಹುಲ್ಲುಜೋಳ

ರೋಗಲಕ್ಷಣಗಳು

ಸೋಂಕಿನ ಆರಂಭಿಕ ಹಂತದಲ್ಲಿ, ಸಣ್ಣ ಕೆಂಪು ಕಲೆಗಳು ಎಲೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಈ ಕಲೆಗಳು ಕ್ರಮೇಣವಾಗಿ ಉಬ್ಬುತ್ತವೆ ಮತ್ತು ಸಣ್ಣ ಕಪ್ಪು ಗಂಟುಗಳಾಗಿ ಬೆಳೆಯುತ್ತವೆ, ಮುಖ್ಯವಾಗಿ ಮೇಲಿನ ಎಲೆ ಮೇಲ್ಮೈಯಲ್ಲಿ ಗೋಚರಿಸುತ್ತವೆ. ಅವು ಅಂತಿಮವಾಗಿ ಮುರಿದುಹೋಗುವಾಗ, ಕಪ್ಪು ವಲಯವಿರುವ ಬಿಳಿ ಕುಳಿಗಳನ್ನು ಬಿಡುತ್ತವೆ. ನಂತರದ ಹಂತದಲ್ಲಿ, ಗಾಯಗಳು ಅಂಡಾಕೃತಿಯಲ್ಲಿ ಹಿಗ್ಗುತ್ತವೆ ಮತ್ತು ಕಂದು ಬಣ್ಣದ ಕೇಂದ್ರದೊಂದಿಗೆ ಕಡು ಕೆಂಪು ಬಣ್ಣದಿಂದ ಕೆನ್ನೇರಳೆಯಾಗಿ ಬದಲಾಗಬಹುದು. ಅವು ಒಂದುಗೂಡಿ. ಕಿರಿದಾದ, ಗಾಢ ಕೆಂಪು ಅಂಚಿನೊಡನೆ ವ್ಯಾಪಕವಾದ ಕಂದು ಬಣ್ಣದ ಕಲೆಗಳಾಗಬಹುದು. ಸಣ್ಣ, ಕಪ್ಪು, ಗಡುಸಾದ ಮತ್ತು ಉಬ್ಬಿದ ಶಿಲೀಂಧ್ರ ರಚನೆಗಳು ಗಾಯಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇದರಿಂದಲೇ ಅವುಗಳು ಗಡುಸಾಗುತ್ತವೆ. ಇದನ್ನು ಪಿಕ್ನಿಡಿಯಾ ಎಂದೂ ಕರೆಯುತ್ತಾರೆ. ಅವುಗಳನ್ನು ಕೆಲವೊಮ್ಮೆ ಎಲೆಗಳ ಗರಿಗಳ ಆರೋಗ್ಯಕರ ಹಸಿರು ಭಾಗಗಳಲ್ಲಿ ಸಹ ಗಮನಿಸಬಹುದು. ಎಲೆಗಳ ಪೊರೆಗಳಲ್ಲಿ ಮತ್ತು ಕೆಲವೊಮ್ಮೆ ಕಾಂಡಗಳ ಮೇಲೆ ಇದೇ ರೀತಿಯ ಗಾಯಗಳು ಉಂಟಾಗಬಹುದು. ಅಂತಿಮ ಹಂತದಲ್ಲಿ ಎಲೆಗಳು ಸಾಯಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕ್ಷಮಿಸಿ, ರೋಗಕಾರಕ ಆಸ್ಕೋಚಿತ ಸೊರ್ಗಿ ವಿರುದ್ಧ ಯಾವುದೇ ಜೈವಿಕ ಚಿಕಿತ್ಸೆ ನಮಗೆ ತಿಳಿದಿಲ್ಲ. ರೋಗದ ವ್ಯಾಪ್ತಿಯನ್ನು ಮತ್ತು / ಅಥವಾ ತೀವ್ರತೆಯನ್ನು ಕಡಿಮೆ ಮಾಡಲು ನಿಮಗೆ ಯಾವುದೇ ವಿಧಾನ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಿಮ್ಮ ಪ್ರತಿಕ್ರಿಯೆಗಾಗಿ ನಾವು ಎದುರುನೋಡುತ್ತೇವೆ.

ರಾಸಾಯನಿಕ ನಿಯಂತ್ರಣ

ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಯಾವಾಗಲೂ ಸಮಗ್ರ ವಿಧಾನವನ್ನು ಪರಿಗಣಿಸಿ. ಬೋರ್ಡೆಕ್ಸ್ ಮಿಶ್ರಣದಂತಹ ತಾಮ್ರ ಆಧಾರಿತ ಶಿಲೀಂಧ್ರನಾಶಕಗಳನ್ನು ರೋಗ ಹರಡುವಿಕೆಯನ್ನು ಕಡಿಮೆ ಮಾಡಲು ಬಳಸಬಹುದು. ಆದಾಗ್ಯೂ, ಇದು ಸಸ್ಯಗಳಲ್ಲಿ ವಿಷಕಾರಿ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು ಎಂಬುದನ್ನು ಗಮನಿಸಿ.

ಅದಕ್ಕೆ ಏನು ಕಾರಣ

ವಿಶಿಷ್ಟ ರೋಗಲಕ್ಷಣಗಳು ಫಂಗಸ್ ಆಸ್ಕೋಚೈಟಾ ಸೊರ್ಗಿಗಳಿಂದ ಉಂಟಾಗುತ್ತವೆ. ಇದು ಬೆಳೆ ಉಳಿಕೆಗಳ ಮೇಲೆ ಉಳಿದುಕೊಂಡಿರುತ್ತವೆ. ಹೆಚ್ಚಿನ ಆರ್ದ್ರತೆಯು ಗಂಟುಗಳಲ್ಲಿ ಉತ್ಪತ್ತಿಯಾದ ಬೀಜಕಗಳ ಮೂಲಕ ಸೋಂಕಿಗೆ ನೆರವಾಗುತ್ತದೆ. ಅಮೆರಿಕಾದ ಹೆಚ್ಚಿನ ಪ್ರದೇಶಗಳಲ್ಲಿ, ಏಷ್ಯಾ, ಆಫ್ರಿಕಾ, ಮತ್ತು ಯೂರೋಪಿನಾದ್ಯಂತ ಎಲ್ಲ ಹುಲ್ಲುಜೋಳ ಬೆಳೆಯುವ ಪ್ರದೇಶಗಳಲ್ಲಿ ಈ ರೋಗಕಾರಕ ಕಂಡುಬರುತ್ತದೆ. ಆದಾಗ್ಯೂ, ಎ ಸೊರ್ಗಿ ಸಾಮಾನ್ಯವಾಗಿ ಕಡಿಮೆ ಬೆಳೆ ನಷ್ಟವನ್ನು ಉಂಟುಮಾಡುತ್ತದೆ ಮತ್ತು ಇದು ಹುಲ್ಲುಜೋಳದ ಉತ್ಪಾದನೆಯ ಮೇಲೆ ಬಹಳ ಕಡಿಮೆ ಪರಿಣಾಮ ಬೀರುತ್ತದೆ ಎಂದು ಪರಿಗಣಿಸಲಾಗಿದೆ. ಹುಲ್ಲು ಜೋಳಗಳಲ್ಲಿ ಪ್ರತಿರೋಧದ ಲಕ್ಷಣಗಳನ್ನು ಬೆಳೆಸಿರುವುದರಿಂದ ಒರಟು ಎಲೆ ಚುಕ್ಕೆಗೆ ಆರ್ಥಿಕ ಪ್ರಾಮುಖ್ಯತೆ ಇಲ್ಲವಾಗಿದೆ.ಈ ಬೆಳೆಗಳೊಂದಿದೆ, ಆಸ್ಕೋಚಿಟಾ ಸೊರ್ಗಿ ಜಾನ್ಸನ್ ಹುಲ್ಲು (ಸೊರ್ಗಮ್ ಹಾಲೆಪೆನ್ಸ್), ಸುಡಾನ್ ಹುಲ್ಲು (ಹುಲ್ಲುಜೋಳ ಸುಡಾನೆನ್ಸ್) ಮತ್ತು ಬಾರ್ಲಿ (ಹಾರ್ಡಿಯಮ್ ವಲ್ಗರೆ) ನಂತಹ ಧಾನ್ಯದ ಬೆಳೆಗಳಿಗೆ ಸಹ ಸೋಂಕು ತರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಸ್ವಚ್ಛ ಮತ್ತು ಆರೋಗ್ಯಕರ ಬೀಜಗಳನ್ನು ಬಳಸಲು ಮರೆಯದಿರಿ.
  • ರೋಗಕ್ಕೆ ಒಳಗಾಗುವ ಹುಲ್ಲು ಜೋಳ (ಸೋರ್ಗಮ್) ಪ್ರಭೇದಗಳನ್ನು ನೆಡುವುದನ್ನು ತಪ್ಪಿಸಿ.
  • ಗಾಳಿಯಾಡುವುದನ್ನು ಹೆಚ್ಚಿಸಲು ಸಾಲುಗಳ ನಡುವೆ ಸಾಕಷ್ಟು ಜಾಗವನ್ನು ಒದಗಿಸಲು ಜಾಗರೂತೆವಹಿಸಿ.
  • ರೋಗಲಕ್ಷಣಗಳಿಗಾಗಿ ನಿಯಮಿತವಾಗಿ ಗದ್ದೆಯನ್ನು ಪರಿಶೀಲಿಸಿ.
  • ಅತಿಯಾಗಿ ನೀರೂಡಿಸುವುದು ಮತ್ತು ತುಂತುರು ನೀರಾವರಿಯನ್ನು ತಪ್ಪಿಸಿ.
  • ವೈವಿಧ್ಯಮಯ ಬೆಳೆ ಸರದಿ ಅಳವಡಿಸಿ.
  • ಸೂಡಾನ್ ಹುಲ್ಲು, ಬಾರ್ಲಿ ಅಥವಾ ಜಾನ್ಸನ್ ಹುಲ್ಲುಗಳಂತಹ ಪರ್ಯಾಯ ಆಶ್ರಯದಾತ ಸಸ್ಯಗಳನ್ನು ಗದ್ದೆಗಳಲ್ಲಿ ಅಥವಾ ಸುತ್ತಲಿನಲ್ಲಿ ಬೆಳೆಯದಂತೆ ನೋಡಿಕೊಳ್ಳಿ.
  • ಎಲೆಯ ಮೇಲ್ಮೈಗಳು ತೇವವಾಗಿದ್ದಾಗ ಗದ್ದೆಗಳಲ್ಲಿ ಕೆಲಸ ಮಾಡುವುದನ್ನು ತಪ್ಪಿಸಿ.
  • ಗದ್ದೆಗಳಲ್ಲಿ ಉತ್ತಮ ನೈರ್ಮಲ್ಯ ಮಟ್ಟವನ್ನು ಕಾಪಾಡಿಕೊಳ್ಳಿ.
  • ಸಸ್ಯದ ಉಳಿಕೆಗಳಲ್ಲಿ ರೋಗಕಾರಕವು ಬದುಕುವುದನ್ನು ಅಥವಾ ಅದು ಮಣ್ಣಿನಲ್ಲಿರುವ ರಚನೆಗಳಲ್ಲಿ ಚಳಿಗಾಲ ಕಳೆಯುವುದನ್ನು ತಪ್ಪಿಸಲು ಆಳವಾಗಿ ಉಳುಮೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ