ಇತರೆ

ಇದ್ದಿಲು ಕಾಂಡ ಕೊಳೆರೋಗ

Macrophomina phaseolina

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಪ್ರೌಢ ಕಾಂಡದ ಆಂತರಿಕ ಅಂಗಾಂಶಗಳ ಕಪ್ಪಾಗುವಿಕೆಯು, ಅವುಗಳು ಸುಟ್ಟಂತೆ ಕಾಣುವಂತೆ ಮಾಡುತ್ತದೆ.
  • ಕಪ್ಪು ಶಿಲೀಂಧ್ರ ಚುಕ್ಕೆಗಳೊಂದಿಗೆ ಗಡುಸಾದ ತಂತು ಅಂಗಾಂಶಗಳು ಒಳಗೆಣ್ಣುಗಳಲ್ಲಿ ಗೋಚರಿಸುತ್ತವೆ.
  • ಸಸ್ಯಗಳು ಮುಂಚಿತವಾಗಿ ಪ್ರೌಢತೆ ಪಡೆಯುತ್ತವೆ ಮತ್ತು ದುರ್ಬಲ ಕಾಂಡಗಳನ್ನು ಹೊಂದಿರುತ್ತವೆ.
  • ಇದರಿಂದಾಗಿ ಮುರಿಯುವುದು ಅಥವಾ ನೆಲಕ್ಕೆ ಕುಸಿಯುವುದು ಉಂಟಾಗುತ್ತದೆ.
  • ಮೇಲ್ಭಾಗದ ಎಲೆಗಳು ಮೊದಲು ಹಳದಿಯಾಗಿ ಬದಲಾಗುತ್ತವೆ ಮತ್ತು ಒಣಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ಇತರೆ

ರೋಗಲಕ್ಷಣಗಳು

ಈ ಮಣ್ಣಿನಿಂದ ಹುಟ್ಟಿದ ಶಿಲೀಂಧ್ರ ಸಸಿ ಹಂತದಲ್ಲಿ ಬೇರುಗಳನ್ನು ಆಕ್ರಮಿಸುತ್ತದೆ ಮತ್ತು ಕ್ರಮೇಣ ರೋಗಲಕ್ಷಣಗಳಿಲ್ಲದೆ ಕಾಂಡಗಳಲ್ಲಿ ಸೇರುತ್ತದೆ. ನಂತರ, ಪ್ರಬುದ್ಧ ಕಾಂಡಗಳು ಅವುಗಳ ಆಂತರಿಕ ಅಂಗಾಂಶಗಳ ಕಪ್ಪಾಗುವಿಕೆಯನ್ನು ತೋರಿಸುತ್ತ. ಇದರಿಂದ ಅವು ಸುಟ್ಟಂತೆ ಕಾಣುತ್ತವೆ. ಹೀಗಾಗಿ, ರೋಗಕ್ಕೆ ಆ ಹೆಸರು ಬಂದಿದೆ. ಕೊಳೆತ ನಿಧಾನವಾಗಿ ನಾಳೀಯ ಅಂಗಾಂಶವನ್ನು ಆಕ್ರಮಿಸುತ್ತದೆ ಮತ್ತು ಕಪ್ಪು ಶಿಲೀಂಧ್ರದ ಚುಕ್ಕೆಗಳೊಂದಿಗೆ ಗಡುಸಾದ ನಾರಿನ ಅಂಗಾಂಶಗಳು ಗೆಣ್ಣುಗಳ ನಡುವೆ ಗೋಚರಿಸುತ್ತವೆ. ಸಾರಿಗೆ ಅಂಗಾಂಶಗಳ ನಾಶವು ನೀರಿನ ಕೊರತೆಯಲ್ಲಿ ಆಗುವಂತಹ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ. ಸಸ್ಯಗಳು ಮುಂಚಿತವಾಗಿ ಪ್ರೌಢತೆ ಪಡೆಯುತ್ತವೆ ಮತ್ತು ದುರ್ಬಲ ಕಾಂಡಗಳನ್ನು ಹೊಂದಿರುತ್ತವೆ. ಇದರಿಂದಾಗಿ ಮುರಿಯುವಿಕೆ ಅಥವಾ ನೆಲಕ್ಕೆ ಬಾಗುವಿಕೆ ಉಂಟಾಗುತ್ತದೆ. ಮೇಲ್ಭಾಗದ ಎಲೆಗಳು ಮೊದಲು ಹಳದಿಯಾಗಿ ಬದಲಾಗುತ್ತವೆ ಮತ್ತು ನಂತರ ಒಣಗುತ್ತವೆ. ಕಂದು, ನೀರಿನಲ್ಲಿ-ನೆನೆಸಿದಂತಹ ಗಾಯಗಳು ಬೇರುಗಳಲ್ಲಿ ಇರುತ್ತವೆ. ಬಲವಾದ ಸೋಂಕಿನ ಸಂದರ್ಭಗಳಲ್ಲಿ, 50% ಗಿಂತ ಹೆಚ್ಚು ಸಸ್ಯಗಳು ಮುರಿಯುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಮ್ಯಾಗ್ರೋಫೋಮಿನ ರೋಗಗಳನ್ನು ನಿಯಂತ್ರಿಸಲು ಜಮೀನಿನ ಗೊಬ್ಬರ, ಬೇವಿನ ಎಣ್ಣೆ ಸಾರ ಮತ್ತು ಸಾಸಿವೆ ಕೇಕ್ಗಳಂತಹ ಸಾವಯವ ಚಿಕಿತ್ಸೆಯನ್ನು ಬಳಸಬಹುದು. ಸಜ್ಜೆ ಮತ್ತು ಕಳೆ ಆಧಾರಿತ ಮಿಶ್ರಗೊಬ್ಬರದಿಂದ ಮಣ್ಣನ್ನು ಸರಿಪಡಿಸುವುದು, ಮಣ್ಣಿನಲ್ಲಿ ಶಿಲೀಂಧ್ರದ ಸಂಖ್ಯೆ 20-40% ವರೆಗೆ ಇಳಿಯಲು ಕಾರಣವಾಗಬಹುದು. ಬಿತ್ತನೆ ಮಾಡುವ ಸಮಯದಲ್ಲಿ ಟ್ರೈಕೋಡರ್ಮಾ ವೈರಿಡ್ ಅನ್ನು ಮಣ್ಣಿಗೆ ಹಾಕುವುದು (250 ಕೆ.ಜಿ. ವರ್ಮಿಕಾಮ್ಪೋಸ್ಟ್ ಅಥವಾ ಎಫ್ವೈಎಂನಲ್ಲಿ 5 ಕೆ.ಜಿ.ಗಳಷ್ಟು ) ಸಹಾಯ ಮಾಡುತ್ತದೆ.

ರಾಸಾಯನಿಕ ನಿಯಂತ್ರಣ

ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಯಾವಾಗಲೂ ಸಮಗ್ರ ವಿಧಾನವನ್ನು ಪರಿಗಣಿಸಿ. ಮೊದಲ ಲಕ್ಷಣಗಳು ಉಂಟಾದಾಗ ಹಾನಿ ಈಗಾಗಲೇ ಸಂಭವಿಸಿರುವುದರಿಂದ ಶಿಲೀಂಧ್ರನಾಶಕಗಳನ್ನು ಎಲೆಗಳ ಮೇಲೆ ಹಾಕುವುದು ಪರಿಣಾಮಕಾರಿಯಾಗಿರುವುದಿಲ್ಲ. ಶಿಲೀಂಧ್ರನಾಶಕಗಳಿಂದ ಸಂಸ್ಕರಿಸಿದ ಬೀಜಗಳು (ಉದಾಹರಣೆಗೆ ಮ್ಯಾಂಕೊಜೆಬ್ ಜೊತೆ) ಸಸಿ ಬೆಳವಣಿಗೆಯ ಸಮಯದಲ್ಲಿ ರಕ್ಷಣೆ ನೀಡಬಹುದು. ಎರಡು ಭಾಗಗಳಲ್ಲಿ 80 ಕೆಜಿ / ಎಮ್ಒಪಿ ಹಾಕುವುದರಿಂದ, ಇದು ಸಸ್ಯಗಳನ್ನು ಬಲಪಡಿಸುತ್ತದೆ ಮತ್ತು ಈ ಶಿಲೀಂಧ್ರಕ್ಕೆ ಹೆಚ್ಚು ಸಹಿಷ್ಣುವಾಗುವಂತೆ ಮಾಡುತ್ತದೆ.

ಅದಕ್ಕೆ ಏನು ಕಾರಣ

ಈ ರೋಗವು ಬಿಸಿ ಮತ್ತು ಶುಷ್ಕ ಪರಿಸರದಲ್ಲಿ ಬೆಳೆಯುವ ಶಿಲೀಂಧ್ರ ಮ್ಯಾಕ್ರೊಫೊಮಿನ ಫೆಸಿಯೋಲಿನದಿಂದ ಉಂಟಾಗುತ್ತದೆ. ಇದು ರೋಗಕ್ಕೊಳಗಾಗುವ ಬೆಳೆ ಉಳಿಕೆಗಳು ಅಥವಾ ಮಣ್ಣಿನಲ್ಲಿ ಸುಮಾರು ಮೂರು ವರ್ಷಗಳವರೆಗೆ ಚಳಿಗಾಲವನ್ನು ಕಳೆಯಬಲ್ಲದು. ಕಾಂಡದ ಬೇರುಗಳು ಮತ್ತು ಸಾಗಣೆ ಅಂಗಾಂಶಗಳ ಸೋಂಕು ನೀರು ಮತ್ತು ಪೋಷಕಾಂಶಗಳ ಸಾಗಾಣಿಕೆಯ ಅಡಚಣೆಗೆ ಕಾರಣವಾಗುತ್ತದೆ, ಇದರಿಂದಾಗಿ ಸಸ್ಯದ ಮೇಲಿನ ಭಾಗಗಳು ಒಣಗುವುದು, ಅಕಾಲಿಕ ಪಕ್ವವಾಗುವಿಕೆ ಮತ್ತು ದುರ್ಬಲ ಕಾಂಡಗಳಿರುವುದು. ಶಿಲೀಂಧ್ರ ಹರಡುವಿಕೆಗೆ ಮತ್ತಷ್ಟು ಅನುಕೂಲಕರವಾದ ಪರಿಸ್ಥಿತಿಗಳನ್ನು ಕೀಟಗಳು, ಹಾನಿಗೊಳಗಾದ ಬೇರುಗಳು ಮತ್ತು ಚಿಗುರುಗಳು ಮತ್ತು ಇತರ ಸಸ್ಯ ರೋಗಗಳು ಒದಗಿಸುತ್ತವೆ. ಬರ / ಜಲಕ್ಷಾಮದ ಸಮಯದಲ್ಲಿ, ಹೆಚ್ಚಿನ ಮಣ್ಣಿನ ಉಷ್ಣಾಂಶ(28 ° C ಗಿಂತ ಹೆಚ್ಚು) ಮತ್ತು ಸಸ್ಯದ ಬೆಳವಣಿಗೆಯ ನಂತರದ ಹಂತಗಳಲ್ಲಿ ಅತಿಯಾದ ರಸಗೊಬ್ಬರ ಬಳಕೆಯಿಂದ ರೋಗಲಕ್ಷಣಗಳು ಹದಗೆಡುತ್ತವೆ.


ಮುಂಜಾಗ್ರತಾ ಕ್ರಮಗಳು

  • ಬರ ಸಹಿಷ್ಣು ಪ್ರಭೇದಗಳನ್ನು ಬೆಳೆಸಿ.
  • ನೆಲಕ್ಕೆ ಕುಸಿಯದಂತಹ ನಿರೋಧಕ ಪ್ರಭೇದಗಳನ್ನು ನೆಡಿ.
  • ಹೂಬಿಡುವ ನಂತರದ ಹಂತವು ಬೆಳೆಯುವ ಋತುವಿನ ಅತ್ಯಂತ ಶುಷ್ಕ ಅವಧಿಯಾಗದಂತೆ ಬಿತ್ತನೆಯ ದಿನಾಂಕವನ್ನು ಹೊಂದಿಸಿ.
  • ಸಸ್ಯಗಳ ನಡುವೆ ಹೆಚ್ಚು ಅಂತರವನ್ನು ಬಿಡಿ.
  • ನೀರಾವರಿ ಮೂಲಕ ಉತ್ತಮ ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳಿ, ಅದರಲ್ಲೂ ವಿಶೇಷವಾಗಿ ಹೂಬಿಡುವ ಕಾಲದಲ್ಲಿ.
  • ಸಮತೋಲಿತ ರಸಗೊಬ್ಬರ ಬಳಕೆಯನ್ನು ಖಚಿತಪಡಿಸಿಕೊಳ್ಳಿ ಮತ್ತು ವಿಪರೀತ ಸಾರಜನಕದ ಬಳಕೆಯನ್ನು ತಪ್ಪಿಸಿ.
  • ಪ್ರಮುಖ ಇಳುವರಿ ನಷ್ಟವನ್ನು ತಪ್ಪಿಸಲು ಮೊದಲೇ ಉಳುಮೆ ಮಾಡಿ.
  • ಸಣ್ಣ ಗೋಧಿ, ಓಟ್ಸ್, ಅಕ್ಕಿ, ಬಾರ್ಲಿ ಮತ್ತು ರೈಗಳಂತಹ ಆಶ್ರಯದಾತವಲ್ಲದ ಬೆಳೆಗಳೊಂದಿಗೆ ಮೂರು ವರ್ಷಗಳ ಕಾಲ ಸರದಿ ಬೆಳೆ ಮಾಡಿ.
  • ಮಣ್ಣಿನಲ್ಲಿ ರೋಗಕಾರಕದ ಇನಾಕ್ಯುಲಮ್ ಅನ್ನು ತಗ್ಗಿಸಲು ಬೇಸಿಗೆಯಲ್ಲಿ ಆಳವಾಗಿ ಉಳುಮೆ ಮಾಡಿ.
  • ಇದು ಮಣ್ಣಿನಲ್ಲಿ ಶಿಲೀಂಧ್ರದ ಸಂಖ್ಯೆಯನ್ನು ಕಡಿಮೆ ಮಾಡಲು ನೆರವಾಗಬಹುದು.
  • ಮಣ್ಣಿನ ಸೌರೀಕರಣ ಅಥವಾ ಬೇಸಾಯದ ನಂತರ ದೀರ್ಘಾವಧಿ ಹೊಲ ಖಾಲಿ ಬಿಡುವುದು ಸಹ ಪರಿಣಾಮಕಾರಿಯಾಗಬಹುದು.
  • ರೋಗಕ್ಕೆ ತುತ್ತಾಗಬಹುದಾದ ಪ್ರದೇಶಗಳಲ್ಲಿ ಮೆಕ್ಕೆ ಜೋಳದ ಬಿತ್ತನೆ ಮಾಡುವ ಮೊದಲು ಮಣ್ಣಿನಲ್ಲಿ ಹಸಿರು ಗೊಬ್ಬರವನ್ನು ಸೇರಿಸಲು ರೈತರಿಗೆ ಸಲಹೆ ನೀಡಲಾಗುತ್ತದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ