ಇತರೆ

ಫಿಲೋಸ್ಟಿಕ್ಟಾ ಎಲೆ ಚುಕ್ಕೆ

Nothophoma arachidis-hypogaeae

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಗುರುತುಮಾಡಿದ ಕೆಂಪು-ಕಂದು ಬಣ್ಣದ ಅಂಚುಗಳಿಂದ ಸುತ್ತುವರಿದ ವೃತ್ತಾಕಾರದಿಂದ ಅನಿಯಮಿತಾಕಾರದವರೆಗೂ ಕಂಡು ಬರುವ ತಿಳಿಯಾದ ಕಂದು ಬಣ್ಣದ ಗಾಯಗಳು ಎಲೆಗಳಲ್ಲಿ ಕಾಣಿಸುತ್ತವೆ.
  • ಕಾಯಿಲೆಯು ಮುಂದುವರೆದಂತೆ, ಗಾಯವು ಬೂದು ಬಣ್ಣಕ್ಕೆ ತಿರುಗುತ್ತದೆ ಮತ್ತು ಒಣಗಿ, ಅಂತಿಮವಾಗಿ ಉದುರುತ್ತದೆ, ಇದು ರಂಧ್ರವನ್ನುಂಟು ಮಾಡುತ್ತದೆ, ಇದರಿಂದ ಎಲೆಗಳು ಕಿತ್ತು ಹೋಗಿರುವಂತೆ ಭಾಸವಾಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಇತರೆ

ರೋಗಲಕ್ಷಣಗಳು

ಗುರುತುಮಾಡಿದ ಕೆಂಪು-ಕಂದು ಬಣ್ಣದ ಅಂಚುಗಳಿಂದ ಸುತ್ತುವರಿದ ವೃತ್ತಾಕಾರದಿಂದ ಅನಿಯಮಿತವರೆಗೆ ಇರುವ ತಿಳಿ ಕಂದು ಬಣ್ಣದ ಗಾಯಗಳು (1.5 to 5 ಮಿಮೀ) ಎಲೆಗಳಲ್ಲಿ ಕಾಣಿಸುತ್ತವೆ. ಕಾಯಿಲೆಯು ಮುಂದುವರೆದಂತೆ, ಗಾಯದ ಮಧ್ಯಭಾಗವು ಬೂದು ಬಣ್ಣದಲ್ಲಿರುತ್ತದೆ ಮತ್ತು ಒಣಗಿರುತ್ತದೆ, ಕೆಲವು ಸಂದರ್ಭಗಳಲ್ಲಿ ಅಂತಿಮವಾಗಿ ಉದುರಿ ಹೋಗುತ್ತವೆ, ಇದು ರಂಧ್ರವನ್ನುಂಟು ಮಾಡುತ್ತವೆ ಮತ್ತು ಇದರಿಂದ ಎಲೆಗಳು ಕಿತ್ತು ಹೋದಂತೆ ಭಾಸವಾಗುತ್ತದೆ. ಗಾಯಗಳು ದೊಡ್ಡ, ಅನಿಯಮಿತ, ಕೊಳೆತ ಮಚ್ಚೆಗಳನ್ನು ರೂಪಿಸಲು ಒಂದಾಗಬಹುದು. ಕಪ್ಪು, ಮೆಣಸು-ತರಹದ ಶಿಲೀಂಧ್ರದ ಚುಕ್ಕೆಗಳು ಎಲೆಗಳ ಮೇಲ್ಮೈಗಳ ಮೇಲೆ ರೋಗಗ್ರಸ್ತ ಅಂಗಾಂಶದಲ್ಲಿ ಗೋಚರಿಸುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕ್ಷಮಿಸಿ, ನಾಥೊಫೋಮಾ ಅರಾಚಿಡಿಸ್-ಹೈಪೊಗ್ಯಾಯ್ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ಗೊತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದನ್ನಾದರೂ ನೀವು ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ . ನಿಮ್ಮ ಪ್ರತಿಕ್ರಿಯೆಯನ್ನು ನಾವು ಎದುರು ನೋಡುತ್ತಿರುತ್ತೇವೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಫಿಲೋಸ್ಟಿಕ್ಕಾದ ಎಲೆ ಚುಕ್ಕೆಯಿಂದ ಉಂಟಾಗುವ ಹಾನಿ ಸಾಮಾನ್ಯವಾಗಿ ಕಡಿಮೆಯಾಗಿದೆ, ಆದ್ದರಿಂದ ಇದಕ್ಕೆ ಶಿಲೀಂಧ್ರನಾಶಕಗಳನ್ನು ವಿರಳವಾಗಿ ಶಿಫಾರಸು ಮಾಡಲಾಗುತ್ತದೆ.

ಅದಕ್ಕೆ ಏನು ಕಾರಣ

ಮಣ್ಣಿನ ಸೋಂಕಿತ ಬೆಳೆ ಉಳಿಕೆಗಳಲ್ಲಿಗಳಲ್ಲಿ ಸುಮಾರು ಒಂದು ವರ್ಷದವರೆಗೆ ಶಿಲೀಂಧ್ರವು ಜೀವಂತವಾಗಿರಬಹುದು. ಮಣ್ಣಿನಿಂದ, ಇದು ಸಾಮಾನ್ಯವಾಗಿ ಇತರ ಕಾಯಿಲೆಗಳಿಂದ ಅಥವಾ ಜಮೀನು ಕೆಲಸದಲ್ಲಿ (ದ್ವಿತೀಯಕ ಸೋಂಕು) ಗಾಯಗೊಂಡ ಸಸ್ಯಗಳ ಹಾನಿಗೊಳಗಾದ ಮತ್ತು ಕೊಳೆಯುವ ಅಂಗಾಂಶಗಳಿಗೆ ಸೋಂಕು ತರುತ್ತದೆ. ನಂತರ ಇದು ಆರೋಗ್ಯಕರ ಅಂಗಾಂಶಗಳಿಗೆ ಹರಡುತ್ತದೆ ಮತ್ತು ನಿರ್ದಿಷ್ಟ ಲಕ್ಷಣಗಳನ್ನು ಉಂಟುಮಾಡುತ್ತದೆ. ಶಿಲೀಂಧ್ರ ಅಭಿವೃದ್ಧಿ ಮತ್ತು ರೋಗದ ಬೆಳವಣಿಗೆಗೆ ಅತ್ಯುತ್ತಮ ಪರಿಸ್ಥಿತಿಗಳು 25-30 °C ನಡುವಿನ ಉಷ್ಣಾಂಶಗಳು ಮತ್ತು 5.5-6.5 ನಡುವಿನ PH ಮೌಲ್ಯಗಳು. ಫಿಲೋಸ್ಟಿಕ್ಟಾ ಎಲೆ ಚುಕ್ಕೆಯನ್ನು ಕಡಲೆಕಾಯಿಗೆ ಪ್ರಮುಖ ರೋಗವೆಂದು ಪರಿಗಣಿಸಲಾಗುವುದಿಲ್ಲ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಬಳಸಿ.
  • ಜಮೀನು ಕೆಲಸದ ಸಮಯದಲ್ಲಿ ಸಸ್ಯಗಳನ್ನು ಗಾಯಗೊಳಿಸದಂತೆ ಎಚ್ಚರಿಕೆಯಿಂದಿರಿ.
  • ಸುಗ್ಗಿಯ ನಂತರ ಬೆಳೆ ಉಳಿಕೆಗಳನ್ನು ತೆಗೆದುಹಾಕಿ ಮತ್ತು ಅದನ್ನು ಸುಟ್ಟು ಬಿಡಿ.
  • ಮಣ್ಣಿನ pH ಮೌಲ್ಯಗಳನ್ನು ಹೆಚ್ಚಿಸಲು ಜಮೀನುಗಳಲ್ಲಿ ಸುಣ್ಣವನ್ನು ಹರಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ