ಬಟಾಣಿ

ಬೋಟ್ರೈಟಿಸ್ ಸೋಂಕು

Botrytis cinerea

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳು, ಚಿಗುರುಗಳು, ಹಣ್ಣು ಅಥವಾ ಬೀಜಕೋಶಗಳಲ್ಲಿ ಬೂದುಬಣ್ಣದ ಬೂಷ್ಟು ಕಾಣಿಸಿಕೊಳ್ಳುತ್ತದೆ.
  • ಅಂಗಾಂಶಗಳ ಮೇಲೆ ಶಿಲೀಂಧ್ರಗಳ ಬೆಳವಣಿಗೆಯ ಕೂದಲು ಮತ್ತು ಬೂದು ಬಣ್ಣದಿಂದ ಕಂದು ಬಣ್ಣದ ತೇಪೆಗಳು.
  • ಬಾಧಿತ ಸಸ್ಯ ಭಾಗಗಳು ಬಾಡುತ್ತವೆ, ಕಂದು ಬಣ್ಣಕ್ಕೆ ತಿರುಗಿ ಸಾಯುತ್ತವೆ.
  • ಕೊಂಬೆಗಳ ಡೈ ಬ್ಯಾಕ್ ಮತ್ತು ಮರದ ಬೆಳೆಗಳಲ್ಲಿ ಕ್ಯಾಂಕರ್ ರೂಪುಗೊಳ್ಳುವುದು.

ಇವುಗಳಲ್ಲಿ ಸಹ ಕಾಣಬಹುದು

27 ಬೆಳೆಗಳು
ಬಾದಾಮಿ
ಸೇಬು
ಹುರುಳಿ
ಎಲೆಕೋಸು
ಇನ್ನಷ್ಟು

ಬಟಾಣಿ

ರೋಗಲಕ್ಷಣಗಳು

ಎಲೆ, ಚಿಗುರು, ಮೊಗ್ಗು ಅಥವಾ ಹಣ್ಣುಗಳ ಮೇಲೆ ಅತಿಯಾದ ಬೂಷ್ಟಿನ ಬೆಳವಣಿಗೆಯು ಅತ್ಯಂತ ಗಮನಾರ್ಹವಾದ ಲಕ್ಷಣವಾಗಿದೆ. ಆರಂಭದಲ್ಲಿ, ನೆಲಕ್ಕೆ ತಾಕಿಕೊಂಡಿರುವ ಅಥವಾ ಏಟಾಗಿರುವ ಭಾಗಗಳಲ್ಲಿ ಗಾಢ ಕಂದು ಅಥವಾ ಕಂದು ಬಣ್ಣದಲ್ಲಿರುವ, ನೀರು ತುಂಬಿದ ಗಾಯಗಳು ಕಂಡುಬರುತ್ತವೆ. ಈ ಅಂಗಾಂಶಗಳ ಮೇಲೆ ಶಿಲೀಂಧ್ರಗಳ ಬೆಳವಣಿಗೆಯಿಂದಾಗಿ ಬೂದು ಅಥವಾ ಕಂದು ಬಣ್ಣದಲ್ಲಿರುವ ತುಂಬಾ ರೋಮಭರಿತ ತೇಪೆಗಳು ಕಾಣಿಸಿಕೊಳ್ಳುತ್ತವೆ. ನಂತರ ಎಳೆ ಹಣ್ಣುಗಳು ಮತ್ತು ಬೀಜಕೋಶಗಳ ಮೇಲೆ ಬೂಷ್ಟು ಬೆಳೆಯುತ್ತದೆ. ಇದರಿಂದ ಅದು ಜಾಳುಜಾಳಾಗಿ ಕಾಣುತ್ತದೆ. ಪರ್ಯಾಯವಾಗಿ, ಶೇಖರಣಾ ಸಮಯದಲ್ಲಿ ರೋಗಲಕ್ಷಣಗಳು ಕಂಡುಬರುತ್ತವೆ. ಎರಡೂ ಸಂದರ್ಭಗಳಲ್ಲಿ ತೀವ್ರವಾದ ನಷ್ಟವಾಗಬಹುದು. ರೆಂಬೆಯ ಬುಡದಲ್ಲಿರುವ ಎಲೆ ಮತ್ತು ಕಾಂಡದ ಕೊಳೆತವು ಈ ಸೋಂಕು ತಗುಲುವ ತೋಟಗಾರಿಕಾ ಬೆಳೆಗಳಲ್ಲಿ ಬೆಳೆ ವೈಫಲ್ಯಕ್ಕೆ ಕಾರಣವಾಗುತ್ತದೆ.(ಡ್ಯಾಮ್ಪಿಂಗ್ ಆಫ್) ಕೆಲವೊಮ್ಮೆ ಕೊಂಬೆಯು ತುದಿಯಿಂದ ಹಿಂದಕ್ಕೆ ಸಾಯುವುದು ಮತ್ತು ಗಿಡದಲ್ಲಿ ಕ್ಯಾಂಕರ್ ರೋಗವು ಕಾಣಿಸಿಕೊಳ್ಳುವುದು. ಇದು ಮರದ ಬೆಳೆಗಳಲ್ಲಿ ಕಂಡು ಬರುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಎದುರಾಳಿ ಶಿಲೀಂಧ್ರವನ್ನು ಹೊಂದಿರುವ ಜೈವಿಕ ಶಿಲೀಂಧ್ರನಾಶಕ ಟ್ರೈಕೊಡೆರ್ಮ ಹಾರ್ಝಿಯೇನಮ್ ವ್ಯಾಪಕ ಶ್ರೇಣಿಯ ಬೆಳೆಗಳಲ್ಲಿ ಬೂಷ್ಟು ಬೆಳೆಯುವುದನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ. ಸ್ಟ್ರೆಪ್ಟೊಮೈಸಸ್ ಗ್ರಿಸಿಯೋವೈರೈಡ್ಗಳನ್ನು ಆಧರಿಸಿದ ಉತ್ಪನ್ನಗಳನ್ನು ಲೆಟ್ಯೂಸ್ ಬೆಳೆಗಳ ಮೇಲೆ ಉಪಯೋಗಿಸಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಶಿಲೀಂಧ್ರದ ಬೆಳವಣಿಗೆ ತಡೆಯುವುದು ಕಷ್ಟವಾಗಬಹುದು, ಏಕೆಂದರೆ ಶಿಲೀಂಧ್ರವು ಕೊಯ್ಲು ಹತ್ತಿರವಿರುವಾಗ ಆಶ್ರಯದಾತ ಸಸ್ಯಗಳನ್ನು ಆಕ್ರಮಿಸಿಕೊಳ್ಳುವುದರಿಂದ ವಿಷಕಾರಿ ಪದಾರ್ಥಗಳನ್ನು ಉಳಿಸುವ ರಾಸಾಯನಿಕಗಳ ಬಳಕೆ ಸಾಧ್ಯವಾಗುವುದಿಲ್ಲ. ಕೊಯ್ಲಿಗೆ ತುಂಬಾ ಹಿಂದೆಯೇ ಸೋಂಕು ತಗುಲಿದ ಸಂದರ್ಭದಲ್ಲಿ, ಕ್ಲೋರೊಥಲೋನಿಲ್ಗಳನ್ನು ಎಲೆಗಳ ಮೇಲೆ ಸಿಂಪಡಿಸಿ ರೋಗ ವೇಗವಾಗಿ ಉಲ್ಬಣಿಸುವುದನ್ನು ತಡೆಯಬಹುದು. ಫ್ಲಝಿನಾಮ್, ಮತ್ತು ಥಿಯೊಫಾಂಟೆ-ಮೀಥೈಲ್ಗಳನ್ನು ಆಧರಿಸಿದ ಶಿಲೀಂಧ್ರನಾಶಕಗಳು ಸಹ ಕೆಲಸ ಮಾಡಬಹುದು. ಶಿಲೀಂಧ್ರನಾಶಕಗಳನ್ನು ಅತಿಯಾಗಿ ಬಳಸಿದಾಗ ಶಿಲೀಂಧ್ರವು ನಾಶಕದ ವಿರುದ್ಧ ಪ್ರತಿರೋಧ ಬೆಳೆಸಿಕೊಳ್ಳುವುದು ಸಾಮಾನ್ಯವಾಗಿದೆ.

ಅದಕ್ಕೆ ಏನು ಕಾರಣ

ಮಣ್ಣಿನ ಮೂಲಕ ಹರಡುವ ಶಿಲೀಂಧ್ರವಾದ ಬೋಟ್ರೈಟಿಸ್ ಸಿನೇರಿಯಾದಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಗಿಡದ ಎಲ್ಲಾ ಭಾಗಗಳಿಗೆ ಹರಡಿ ಸೋಂಕು ತರುತ್ತದೆ. ಹೆಚ್ಚು ತೇವಾಂಶವಿರುವ ಹವಾಮಾನ, ಆಗಾಗ್ಗೆ ಬೀಳುವ ಮಳೆ ಮತ್ತು ತಂಪಾದ ತಾಪಮಾನವು ರೋಗಲಕ್ಷಣವು ಕಾಣಿಸಿಕೊಳ್ಳಲು ಅನುಕೂಲಕಾರಿ. ಲಭ್ಯವಿರುವ ಮಾಹಿತಿ ಪ್ರಕಾರ 15 ರಿಂದ 20 ಡಿಗ್ರೀ ಸೆಂ ಒಳಗಿನ ತಾಪಮಾನ ಶಿಲೀಂಧ್ರದ ಬೆಳವಣಿಗೆಗೆ, ಗುಂಪಲ್ಲಿ ನೆಲೆಸಲು ಹಾಗೂ ರೋಗ ಉಲ್ಬಣಿಸಲು ಅನುಕೂಲಕರ. ತೋಟದ ಕೆಲಸದ ಸಮಯದಲ್ಲಿ ಅಥವಾ ಆಲಿಕಲ್ಲು/ಹಿಮದಿಂದಾಗಿ ಗಾಯಗೊಂಡ ಎಲೆ ಅಥವಾ ಸಸ್ಯ ಭಾಗಗಳಲ್ಲಿ ರೋಗಲಕ್ಷಣಗಳು ಮೊದಲು ಗೋಚರಿಸುತ್ತವೆ. ರೆಂಬೆಯ ಬುಡದಲ್ಲಿರುವ ಎಲೆಗಳು ಹಾನಿಗೊಳಗಾಗುವ ಸಾಧ್ಯತೆ ಹೆಚ್ಚು. ಅತಿಯಾದ ನೀರಾವರಿ ಹಾಗೂ ಒತ್ತೊತ್ತಾಗಿರುವ ದಟ್ಟವಾದ ಮರಗಳ ಮೇಲ್ಛಾವಣಿ ಶಿಲೀಂಧ್ರದ ಬೆಳವಣಿಗೆಗೆ ಅನುಕೂಲಕರವಾದ ಆರ್ದ್ರ, ದಟ್ಟ ವಾತಾವರಣವನ್ನು ಒದಗಿಸುವ ಮೂಲಕ ರೋಗದ ಮಟ್ಟ ಹೆಚ್ಚಲು ಕಾರಣವಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲಗಳಿಂದ ಆರೋಗ್ಯಕರ ಸಸಿ ಮತ್ತು ಬೀಜಗಳನ್ನು ಬಳಸಿ.
  • ನಿರೋಧಕ ಅಥವಾ ಸಹಿಷ್ಣು ಪ್ರಭೇದಗಳನ್ನು ನೆಡಿ.
  • ಬೇಗನೆ ಮಾಗುವ ಪ್ರಭೇದಗಳನ್ನು ನೆಡಿ ಅಥವಾ ಋತುವಿಗಿಂತ ಮುಂಚೆಯೇ ನೆಡಿ.
  • ಗಿಡಗಳ ನಡುವೆ ಸೂಕ್ತ ಅಂತರವಿರಲಿ.
  • ಗಿಡದ ಸಾಲುಗಳ ಕೋನ ಸಮಂಜಸವಾಗಿರುವಂತೆ ನೋಡಿಕೊಳ್ಳಿ ಹಾಗೂ ಗಿಡಗಳು ನೇರವಾಗಿ ಬೆಳೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳಿ.
  • ಶಿಲೀಂಧ್ರದ ಜೀವನ ಚಕ್ರ ದುರ್ಬಲಗೊಳಿಸಲು ಗಿಡದ ಸುತ್ತಲೂ ಹಸಿ ಎಲೆ ಹರಡಿ.
  • ಇದರಿಂದ ಇನಾಕ್ಯುಲಂ ಸಹ ಕಡಿಮೆಯಾಗುತ್ತದೆ.
  • ಒಳಚರಂಡಿ ವ್ಯವಸ್ಥೆ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಿ.
  • ಸೂಕ್ತವಲ್ಲದ ನೀರಾವರಿ ಬೇಡ.
  • ತೋಟದ ಮೇಲ್ವಿಚಾರಣೆ ಮಾಡಿ ಕೊಳೆತ ಸಸ್ಯ ಅಂಗಾಂಶಗಳನ್ನು ತೆಗೆದುಹಾಕಿ.
  • ತೋಟದಲ್ಲಿ ಕೆಲಸ ಮಾಡುವಾಗ ಗಿಡಗಳಿಗೆ ಏಟಾಗದಂತೆ ಎಚ್ಚರಿಕೆಯಿಂದ ನೋಡಿಕೊಳ್ಳಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ