Fusarium oxysporum
ಶಿಲೀಂಧ್ರ
ಬಾಳೆಯ ವಿಧ ಮತ್ತು ಪರಿಸರ ಪರಿಸ್ಥಿತಿಗಳನ್ನು ಅವಲಂಬಿಸಿ ಲಕ್ಷಣಗಳು ಕೊಂಚ ಬದಲಾಗಬಹುದು. ಈ ರೋಗವು ಹಳೆಯ ಎಲೆಗಳ ಮೇಲೆ ಮೊದಲು ಪರಿಣಾಮ ಬೀರುತ್ತದೆ. ನಂತರ ಕ್ರಮೇಣವಾಗಿ ಹೊಸ ಎಲೆಗಳತ್ತ ಸಾಗುತ್ತದೆ. ಈ ರೋಗದ ಮುಖ್ಯ ಲಕ್ಷಣವೆಂದರೆ ಹಳದಿ ಮತ್ತು ಬಾಗಿರುವ ಎಲೆಗಳು ಮತ್ತು ತೊಟ್ಟುಗಳು ಮತ್ತು ಕಾಂಡದ ಕೆಳಭಾಗದಲ್ಲಿ ಸೀಳುವಿಕೆ. ರೋಗಪೀಡಿತ ಎಲೆಗಳು ಕಂದು ಬಣ್ಣಕ್ಕೆ ತಿರುಗಿ, ಒಣಗಿ ಅಂತಿಮವಾಗಿ ತೊಟ್ಟಿನಿಂದ ಬೀಳುತ್ತವೆ. ಕಾಂಡದ ಸುತ್ತಲೂ "ಅಂಚ"ನ್ನು ರೂಪಿಸುತ್ತವೆ. ಕಾಂಡದಲ್ಲಿ ಹಳದಿ ಬಣ್ಣದಿಂದ ಕೆಂಪು ಬಣ್ಣದ ಗೆರೆಗಳು ಗೋಚರಿಸುತ್ತವೆ. ಇದು ತಳಭಾಗದಲ್ಲಿ ಹೆಚ್ಚಾಗಿರುತ್ತದೆ. ಸೀಳಾಗಿರುವ ಭಾಗಗಳು ಆಂತರಿಕ ಅಂಗಾಂಶಗಳು ಗಾಢ ಕಂದು ಬಣ್ಣದಿಂದ ಕೆಂಪು ಬಣ್ಣಕ್ಕೆ ತಿರುಗಿರುವುದನ್ನು ತೋರಿಸುತ್ತದೆ. ಇದು ಶಿಲೀಂಧ್ರ ಬೆಳವಣಿಗೆಯ ಮತ್ತು ಅಂಗಾಂಶ ಕೊಳೆಯುತ್ತಿರುವುದರ ಸೂಚನೆ. ಅಂತಿಮವಾಗಿ, ನೆಲದ ಮೇಲಿನ ಮತ್ತು ಕೆಳಗಿನ ಎಲ್ಲಾ ಭಾಗಗಳು ಕೊಳೆತು ಸಾಯುತ್ತವೆ.
ಶಿಲೀಂಧ್ರ ಟ್ರೈಕೋಡರ್ಮಾ ವೈರೈಡ್ ಅಥವಾ ಬ್ಯಾಕ್ಟೀರಿಯಾ ಸೂಡೊಮೊನಸ್ ಫ್ಲೋರೊಸೆನ್ಸ್ ನಂತಹ ಜೈವಿಕ ನಿಯಂತ್ರಣ ಏಜೆಂಟ್ ಗಳನ್ನು ಮಣ್ಣಿಗೆ ಸೇರಿಸುವುದರಿಂದ ರೋಗದ ಸಂಭವನೀಯತೆ ಮತ್ತು ತೀವ್ರತೆಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು.
ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿರುವ ಸಮಗ್ರವಾದ ಮಾರ್ಗವಿದ್ದರೆ ಅದನ್ನು ಯಾವಾಗಲೂ ಮೊದಲು ಪರಿಗಣಿಸಿ. ಇತರ ಶಿಲೀಂಧ್ರ ರೋಗಗಳಂತೆ, ಫ್ಯುಸೇರಿಯಂ ಸೊರಗು ರೋಗವನ್ನು ಪತ್ತೆಯಾದ ನಂತರ ಶಿಲೀಂಧ್ರನಾಶಕಗಳ ಮೂಲಕ ನಿಯಂತ್ರಿಸಲು ಸಾಧ್ಯವಿಲ್ಲ. ನಿರ್ದಿಷ್ಟ ಶಿಲೀಂಧ್ರನಾಶಕಗಳಲ್ಲಿ (10 ಗ್ರಾಂ / 10 ಲೀಟರ್ ನೀರಿನಲ್ಲಿ) ಸಸಿಗಳನ್ನು ನೆನೆಸುವುದು ಮತ್ತು ಸಸಿ ನೆಟ್ಟ ನಂತರ 6 ತಿಂಗಳಿಂದ ಪ್ರಾರಂಭಿಸಿ ಪ್ರತಿ ಎರಡು ತಿಂಗಳಿಗೊಮ್ಮೆ ಮಣ್ಣನ್ನು ಒಣಗಿಸುವುದು ಉತ್ತಮ.
ಪನಾಮ ರೋಗವು (ಫ್ಯುಸಾರಿಯಮ್ ಸೊರಗು ರೋಗ ಎಂದೂ ಕರೆಯುತ್ತಾರೆ) ಫ್ಯುಸಾರಿಯಮ್ ಆಕ್ಸಿಪೋರಮ್ ಶಿಲೀಂಧ್ರದ ಉಪಜಾತಿಯಿಂದ ಉಂಟಾಗುತ್ತದೆ. ಇದು ದಶಕಗಳ ಕಾಲ ಮಣ್ಣಿನಲ್ಲಿ ಬದುಕಬಲ್ಲದು. ಇದು ಅತೀಸಣ್ಣದಾದ ಬೇರುಗಳ ಎಳೆಗಳ ಮೂಲಕ ಸಸ್ಯವನ್ನು ಪ್ರವೇಶಿಸುತ್ತದೆ. ಬೆಳಕಿನಲ್ಲಿ ಮತ್ತು ಚೆನ್ನಾಗಿ ನೀರು ಬಸಿಯದ ಮಣ್ಣಿನಲ್ಲಿ ಈ ಪ್ರಕ್ರಿಯೆ ಸುಗಮವಾಗಿ ನಡೆಯುತ್ತದೆ. ಮೇಲ್ಮೈ ನೀರು, ವಾಹನಗಳು, ಉಪಕರಣಗಳು ಮತ್ತು ಪಾದರಕ್ಷೆಗಳ ಮೂಲಕ ಇದು ಸ್ವಲ್ಪ ದೂರದವರೆಗೆ ಹರಡಬಲ್ಲದು. ಸೋಂಕಿತ ನಾಟಿ ವಸ್ತುಗಳು ಸಾಮಾನ್ಯವಾಗಿ ಈ ರೋಗಕ್ಕೆ ಬಹಳ ದೂರದವರೆಗೆ ಹರಡಲು ಸಹಾಯ ಮಾಡುತ್ತವೆ. ರೋಗದ ಬೆಳವಣಿಗೆಯಲ್ಲಿ ಅಧಿಕ ಉಷ್ಣಾಂಶವು ಒಂದು ಪ್ರಮುಖ ಅಂಶವಾಗಿದೆ. ಕಾಂಡದಲ್ಲಿನ ಸಾರಿಗೆ ಅಂಗಾಂಶಗಳ ಕೊಳೆಯುವಿಕೆಯಿಂದ ನೀರು ಮತ್ತು ಪೋಷಕಾಂಶಗಳ ಸಾಗಣಿಕೆಗೆ ತೊಂದರೆಯಾಗುತ್ತದೆ. ಇದರಿಂದ ಎಲೆಗಳ ಕ್ಲೋರೋಸಿಸ್ ಮತ್ತು ಸಸ್ಯದ ಚಟುವಟಿಕೆಯಲ್ಲಿ ಕೊರತೆ ಕಂಡುಬರುತ್ತದೆ. ಎಲ್ಲಾ ಪರಿಸ್ಥಿತಿಗಳು ರೋಗಕ್ಕೆ ಅನುಕೂಲಕರವಾಗಿದ್ದರೆ, ಫ್ಯುಸೇರಿಯಮ್ ಬಾಳೆಗೆ ಬಹಳ ವಿನಾಶಕಾರಿಯಾದ ರೋಗವಾಗಬಲ್ಲದು.