Mycosphaerella sp.
ಶಿಲೀಂಧ್ರ
ಮೊದಮೊದಲ ಲಕ್ಷಣ ಮೂರನೆ ಅಥವಾ ನಾಲ್ಕನೆಯ ಎಲೆಯಲ್ಲಿಯೇ ಕಂಡು ಬರುತ್ತದೆ. ಸಣ್ಣನೆಯ (1-2 ಮಿ.ಮೀಟರ್ ಉದ್ದದ) ಹಳದಿ ಬಣ್ಣದ ಚುಕ್ಕೆಗಳು ಎಲೆಯ ಮೇಲ್ಭಾಗದಲ್ಲಿ, ಎಲೆಯ ಸಣ್ಣ ನಾಳಗಳಿಗೆ ಸಮನಾಂತರವಾಗಿ ಕಾಣಿಸಿಕೊಳ್ಳುತ್ತವೆ. ಈ ಚುಕ್ಕೆಗಳು ತಕಲಿ ಆಕಾರದ ಕಡು ಹಸಿರು ಅಥವಾ ಕಂದು ಬಣ್ಣದ ಚಿಕ್ಕ ಕಲೆಗಳಾಗಿ ಬೆಳೆಯುತ್ತವೆ. ಈ ಗಾಯಗಳು ಎಲೆಯ ನಾಳಗಳಿಗೆ ಸಮಾನಾಂತರವಾಗಿ ವಿಸ್ತರಿಸಿ ನಡುವೆ ನೀರಿನಲ್ಲಿ ನೆನೆಸಿದಂತಿದ್ದು, ಸುತ್ತಲೂ ಹಳದಿ (4 ರಿಂದ 12 ಮಿಮೀ ಉದ್ದದ) ಪರಿಧಿಯಿರುವ ಉದ್ದವಾದ ಕೆಂಪು ಪಟ್ಟಿಗಳನ್ನು ರೂಪಿಸುತ್ತವೆ. ಗೆರೆಗಳ ಮಧ್ಯಭಾಗವು ಮೊದಲು ಬೂದು ಬಣ್ಣದಲ್ಲಿದ್ದು ಕ್ರಮೇಣ ಕಂದು ಬಣ್ಣಕ್ಕೆ ತಿರುಗುತ್ತವೆ. ಇದು ಎಲೆಯ ಈ ಭಾಗ ಸಾಯುತ್ತಿರುವ ಸೂಚನೆ. ಎಲೆಯ ಅಂಚಿನಲ್ಲಿ ಈ ಚುಕ್ಕೆಗಳೆಲ್ಲ ಗುಂಪಾಗಿ, ಸುತ್ತಲೂ ಹಳದಿ ಗುರುತುಗಳಿರುವ ಕಪ್ಪು ಅಥವಾ ಕಂದು ಬಣ್ಣದ ದೊಡ್ಡದಾದ ಗಾಯಗಳಾಗುತ್ತವೆ. ಎಲೆಗಳಲ್ಲಿರುವ ಬಿರುಕುಗಳಿಂದಾಗಿ ಅವು ಹರಿದಿರುವಂತೆ ಕಾಣುತ್ತವೆ.
ಟ್ರೈಕೋಡರ್ಮಾ ಆಟ್ರೊವೈರೈಡ್ ಆಧಾರಿತ ಜೈವಿಕ-ಶಿಲೀಂಧ್ರನಾಶಕಗಳು ಈ ರೋಗವನ್ನು ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿದೆ ಹಾಗೂ ಇದನ್ನು ಜೈವಿಕ ನಿಯಂತ್ರಣಾ ಕ್ರಮವಾಗಿ ಬಳಸುವ ನಿಟ್ಟಿನಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಗಿಡದ ರೆಂಬೆಗಳನ್ನು ಕತ್ತರಿಸುವ ಸ್ಥಳಗಳಲ್ಲಿ ಬೋರ್ಡೆಕ್ಸ್ ಸ್ಪ್ರೇ ಸಿಂಪಡಿಸುವುದರಿಂದ ಈ ಭಾಗಗಳಲ್ಲಿ ಸೋಂಕು ಹರಡುವುದನ್ನು ತಪ್ಪಿಸಬಹುದು.
ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ರೋಗವು ವ್ಯಾಪಕವಾಗಿರದಿದ್ದಾಗ ಮಂಕೋಜಝೆಬ್, ಕ್ಯಾಲಿಕ್ಸಿನ್ ಅಥವಾ ಕ್ಲೋರೊಥಲೋನಿಲ್ಗಳನ್ನು ಒಳಗೊಂಡಿರುವ ಶಿಲೀಂಧ್ರನಾಶಕಗಳನ್ನು ಎಲೆಗಳಿಗೆ ಸಿಂಪಡಿಸಬಹುದು. ಪ್ರೊಪಿಕೊನಜಝಾಲ್, ಫೆನ್ಬಕೊನಝಾಲ್ ಅಥವಾ ಅಝಾಕ್ಸಿಸ್ಟ್ರೋಬಿನ್ ಮುಂತಾದ ವ್ಯವಸ್ಥಿತ ಶಿಲೀಂಧ್ರನಾಶಕಗಳನ್ನು ಸರದಿಯಲ್ಲಿ ಬಳಸುವುದೂ ಕೂಡ ಉತ್ತಮ ಮಾರ್ಗವೇ. ಶಿಲೀಂಧ್ರವು ನಾಶಕಕ್ಕೆ ಒಗ್ಗಿಕೊಂಡು ಪ್ರತಿರೋಧ ಬೆಳೆಸುವುದನ್ನು ತಪ್ಪಿಸಲು ಇವನ್ನು ಸರದಿಯಲ್ಲಿ ಬಳಸುವುದು ಮುಖ್ಯ.
ಹಳದಿ ಸಿಗಾಟೋಕ ಮೈಕೋಸ್ಫೇರ್ರೆಲಾ ಮ್ಯೂಸಿಕೊಲಾ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಈ ರೋಗ ಪ್ರಪಂಚದಾದ್ಯಂತ ಕಂಡು ಬರುತ್ತದೆ. ಇದು ಬಾಳೆಗೆ ತಗುಲುವ ಅತ್ಯಂತ ವಿನಾಶಕಾರಿ ರೋಗಗಳಲ್ಲಿ ಒಂದಾಗಿದೆ. ಈ ರೋಗ ಎತ್ತರದ ಪ್ರದೇಶಗಳಲ್ಲಿ ಮತ್ತು ತಂಪಾದ ತಾಪಮಾನಗಳಲ್ಲಿ ಹೆಚ್ಚಿರುತ್ತದೆ, ಅಥವಾ ಬೆಚ್ಚಗಿನ ಹವೆ ಹಾಗೂ ಬೇರೆ ಪ್ರದೇಶಕ್ಕೆ ಹೋಲಿಸಿದಾಗ ಹೆಚ್ಚು ತೇವಾಂಶವಿರುವ ಸ್ಥಳಗಳಲ್ಲಿಯೂ ಕಂಡು ಬರುತ್ತದೆ. ಶಿಲೀಂಧ್ರವು ಸತ್ತ ಅಥವಾ ಜೀವಂತ ಸಸ್ಯ ಅಂಗಾಂಶಗಳಲ್ಲಿ ಬದುಕಿಕೊಂಡು, ಗಾಳಿ ಅಥವಾ ಮಳೆನೀರು ರಾಚಿದಾಗ ಬೀಜಕಗಳನ್ನು ಹರಡುತ್ತವೆ. ಶಿಲೀಂಧ್ರವು ಸುಮಾರು 27 °C ಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಹೆಚ್ಚಾಗಿ ಎಳೆಯ ಎಲೆಗಳು ಸೋಂಕಿಗೆ ಒಳಗಾಗುತ್ತವೆ. ಈ ರೋಗವು ಗಿಡದ ಉತ್ಪಾದನಾ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದು ಗೊನೆಯ ಗಾತ್ರದ ಮೇಲೆ ಪರಿಣಾಮ ಬೀರುವುದರಿಂದ ಹಣ್ಣು ಬೇಗನೆ ಮಾಗುತ್ತದೆ.