Corynespora cassiicola
ಶಿಲೀಂಧ್ರ
ಆರಂಭದಲ್ಲಿ, ಹಳೆಯ ಎಲೆಗಳಲ್ಲಿ ಸಣ್ಣ ಕೋನೀಯ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಅವು ಕ್ರಮೇಣ ಮೇಲ್ಮುಖವಾಗಿ ಹರಡುತ್ತವೆ. ರೋಗವು ಹೆಚ್ಚಾದಂತೆ, ಚುಕ್ಕೆಗಳು ದೊಡ್ಡದಾಗಿ ತೆಳು ಬೂದು ಬಣ್ಣಕ್ಕೆ ತಿರುಗುತ್ತವೆ ಮತ್ತು ಅದಕ್ಕೆ ಗಾಢವಾದ ಅಂಚು ಇರುತ್ತದೆ. ಅವುಗಳ ಸುತ್ತಲೂ ಹಳದಿ ಬಣ್ಣದ ಹಾಲೋ ಇರುತ್ತದೆ. ಅವುಗಳ ಮಧ್ಯದಲ್ಲಿ ನೆಕ್ರೋಸಿಸ್ ಆಗಬಹುದು ಮತ್ತು ಅವು ಉದುರುತ್ತವೆ (ಶಾಟ್-ಹೋಲ್), ಇದರಿಂದ ಎಲೆಯು ಹರಿದು ಚಿಂದಿಯಾದಂತೆ ಕಾಣುತ್ತದೆ. ಆರ್ದ್ರ ವಾತಾವರಣದಲ್ಲಿ, ಚುಕ್ಕೆಗಳು ಹೆಚ್ಚು ದೊಡ್ಡದಾಗಿ ಬೆಳೆದು ಒಟ್ಟಾಗಿ ಸೇರುತ್ತವೆ ಮತ್ತು ಇದರಿಂದ ಟಾರ್ಗೆಟ್ ತರಹದ ಅಂಶವನ್ನು ಅಭಿವೃದ್ಧಿಪಡಿಸುವುದು. ದೀರ್ಘವೃತ್ತಾಕಾರದ, ಗಾಢ ಕಂದು ಬಣ್ಣದ ಚುಕ್ಕೆಗಳು ಕೆಲವೊಮ್ಮೆ ತೊಟ್ಟುಗಳು ಮತ್ತು ಕಾಂಡಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಹಣ್ಣುಗಳು ರೋಗಲಕ್ಷಣಗಳನ್ನು ತೋರುವುದಿಲ್ಲ, ಆದರೆ ಕೆಲವು ಸಂದರ್ಭಗಳಲ್ಲಿ, ದೀರ್ಘಕಾಲದ ಆರ್ದ್ರ ವಾತಾವರಣವಿದ್ದಾಗ ಕಂದು ಬಣ್ಣದ ನೀರು ತುಂಬಿದ ಕಲೆಗಳು ಕಂಡುಬರುತ್ತವೆ.
ಎಲೆಗಳ ಮೇಲಿನ ಗಾಯಗಳ ಗಾತ್ರವನ್ನು ನಿಯಂತ್ರಿಸಲು ಸಿಲೋನ್ ಸಿನ್ನಾಮನ್ ನ (0.52 μL / mL) ಸಾರಭೂತ ತೈಲದ ಸಾರಗಳನ್ನು ಹಾಕಬಹುದು. ಹಣ್ಣುಗಳಿಗೆ ಸೋಂಕಾಗುವ ಮುನ್ನವೆ ಬೆಳೆಗಳನ್ನು ಸಂಸ್ಕರಿಸುವುದು ಬಹಳ ಮುಖ್ಯ, ಇಲ್ಲದಿದ್ದರೆ ಸಂಸ್ಕರಣೆಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ರೋಗಲಕ್ಷಣಗಳು ತೀವ್ರವಾಗಿದ್ದರೆ, ಉದಾಹರಣೆಗೆ ಎಲೆಗಳು ಅತಿಯಾಗಿ ಕೊಳೆತಾಗ, ಮ್ಯಾಂಕೊಜೆಬ್, ತಾಮ್ರ ಅಥವಾ ಕ್ಲೋರೊಥಲೋನಿಲ್ ಅನ್ನು ಹೊಂದಿರುವ ಶಿಲೀಂಧ್ರನಾಶಕಗಳನ್ನು ನಿರ್ದಿಷ್ಟ ಅವಧಿಗಳಲ್ಲಿ ಹಾಕಿದರೆ ಅವು ಈ ರೋಗವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಶಿಲೀಂಧ್ರನಾಶಕ ಬೆಂಜಮಿಡಾಜೋಲ್ನ ಕೆಲವು ಪ್ರತಿರೋಧವು ಕಂಡುಬಂದಿದೆ.
ಈ ರೋಗವು ಕೊರಿನೆಸ್ಪೊರಾ ಕ್ಯಾಸಿಕೋಲಾ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಉಷ್ಣವಲಯ ಮತ್ತು ಉಪೋಷ್ಣವಲಯ ಪ್ರದೇಶಗಳಲ್ಲಿ ಕಂಡುಬರುತ್ತದೆ. ಇದು ಸೌತೆಕಾಯಿಯ ಮತ್ತು ಟೊಮೆಟೊದ ಪ್ರಮುಖ ರೋಗಕಾರಕವಾಗಿದ್ದು, ಕೆಲವೊಮ್ಮೆ ಪಪ್ಪಾಯಿಯ ಮೇಲೂ ಪರಿಣಾಮ ಬೀರುತ್ತದೆ. ಎಲೆಗಳ ಕೆಳಭಾಗದಲ್ಲಿ ಬೆಳೆಯುವ ಬೀಜಕಗಳ ಮೂಲಕ ಇದು ಹರಡುತ್ತದೆ. ಬೀಜಕಗಳು ಗಾಳಿ ಮತ್ತು ಮಳೆಯ ಮೂಲಕ ಸಸ್ಯದಿಂದ ಸಸ್ಯಕ್ಕೆ ಹರಡುತ್ತವೆ. ತೇವವಾದ, ಆರ್ದ್ರ ವಾತಾವರಣಗಳು ಸೋಂಕನ್ನು ತೀವ್ರಗೊಳಿಸುತ್ತವೆ. ಎಲೆಗಳ ಕೊಳೆತವು ಹೆಚ್ಚಾದರೆ ಇಳುವರಿಯಲ್ಲಿ ಅಧಿಕ ನಷ್ಟವಾಗುತ್ತದೆ ಮತ್ತು ಹಣ್ಣಿನ ಗುಣಮಟ್ಟ ಕಡಿಮೆಯಾಗುತ್ತದೆ. ದ್ವಿತೀಯಕ ಹೋಸ್ಟ್ ಗಳೆಂದರೆ, ಅನೇಕ ವಿಧದ ಕಳೆಗಳು ಮತ್ತು ಆವಕಾಡೊ, ಬ್ರೆಡ್ ಫ್ರೂಟ್, ಕಸ್ಸೇವ, ಸೋಯಾಬೀನ್ ಅಥವಾ ಬದನೆಕಾಯಿ.