ಮಾವು

ಮಾವಿನ ಡೈಬ್ಯಾಕ್ ರೋಗ

Botryosphaeria rhodina

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಮರದ ತೊಗಟೆ, ಕೊಂಬೆಗಳು ಮತ್ತು ಎಲೆಗಳು ಕಪ್ಪಗಾಗುತ್ತಾ ಕಳೆಗುಂದುತ್ತಾ ಹೋಗುತ್ತವೆ.
  • ಎಲೆಗಳು ಮ್ಗೇಲ್ಮುಖವಾಗಿ ಸುರುಳಿಯಾಗಿ ಉದುರಿ ಹೋಗುತ್ತವೆ.
  • ರೆಂಬೆಗಳು ಮತ್ತು ಕೊಂಬೆಗಳಿಂದ ಮರದ ಅಂಟು ಸುರಿಯಲುತೊಡಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮಾವು

ರೋಗಲಕ್ಷಣಗಳು

ಬಾಟ್ರಿಯೊಸ್ಫೇರಿಯಾ ರೋಡಿನಾ ಎಂಬ ಶಿಲೀಂಧ್ರದ ಸೋಂಕು ಮಾವಿನ ಮರಗಳಲ್ಲಿ ಕೊಂಬೆಗಳು ಒಣಗುವ ಮೂಲಕ ಪ್ರಕಟಗೊಳ್ಳುತ್ತದೆ. ಇದು ಎಲೆಗಳು ಪೂರ್ತಿ ಉದುರಿ ಹೋಗುವುದಕ್ಕೆ ಕಾರಣವಾಗಬಹುದು. ರೋಗದ ಆರಂಭಿಕ ಹಂತದಲ್ಲಿ ತೊಗಟೆಯು ಬಣ್ಣಗೆಟ್ಟು ಕಪ್ಪಗಾಗುತ್ತದೆ. ಮುಂದಿನ ಹಂತಗಳಲ್ಲಿ ಎಳೆಯ ಕೊಂಬೆಗಳು ಬುಡದಿಂದ ಕಳೆಗುಂದತೊಡಗಿ ಎಲೆಗಳನ್ನು ಬಾಧಿಸುವವರೆಗೂ ಕೊಂಬೆಯ ತುದಿಗೆ ಹಬ್ಬುತ್ತದೆ. ನಾಳಗಳು ಕಂದು ಬಣ್ಣಕ್ಕೆ ತಿರುಗಿದಂತೆ ಎಲೆಗಳು ಮೇಲಕ್ಕೆ ಸುರುಳಿ ಸುತ್ತಿಕೊಂಡು, ಕೊನೆಗೆ ಉದುರುತ್ತವೆ. ಈ ಸೋಂಕಿನ ಕೊನೆಯ ಹಂತಗಳಲ್ಲಿ, ರೆಂಬೆ-ಕೊಂಬೆಗಳು ಅಂಟನ್ನು ಸ್ರವಿಸುತ್ತವೆ. ಆರಂಭದಲ್ಲಿ ಸಣ್ಣ ಹನಿಗಳು ಕಾಣಿಸುತ್ತವೆಯಾದರೂ ರೋಗವು ಪೂರ್ತಿ ಕೊಂಬೆಯನ್ನು ಆವರಿಸಿದಂತೆ ಸಂಪೂರ್ಣವಾಗಿ ಅಂಟಿನಿಂದ ಮುಚ್ಚಿಹೋಗುತ್ತದೆ. ರೋಗ ತೀವ್ರವಾದಲ್ಲಿ, ಮರದ ತೊಗಟೆ ಅಥವಾ ಸಂಪೂರ್ಣ ಕೊಂಬೆಯೇ ಸಾಯುತ್ತದೆ ಹಾಗೂ ಬಿರುಕು ಬಿಡುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಮರದ ಸೋಂಕಿತ ಭಾಗಗಳನ್ನು ತಕ್ಷಣ ತೆಗೆದು ನಾಶ ಮಾಡಿ. ರೋಗಕಾರಕವು ಪೂರ್ತಿಯಾಗಿ ನಿರ್ಮೂಲವಾಗುವುದನ್ನು ಖಚಿತಪಡಿಸಿಕೊಳ್ಳಲು ಹಾನಿಯಾದ ರೆಂಬೆಯ ಸುತ್ತಮುತ್ತಲಿರುವ ಕೆಲವು ಆರೋಗ್ಯಕರ ರೆಂಬೆಗಳನ್ನೂ ಸಹ ಕತ್ತರಿಸಿ.

ರಾಸಾಯನಿಕ ನಿಯಂತ್ರಣ

ಗಿಡದ ರೆಂಬೆಗಳನ್ನು ಕತ್ತರಿಸಿದ ನಂತರ ಗಾಯಗಳ ಮೇಲೆ 0.3% ನಷ್ಟು ಸಾಂದ್ರತೆಯಿರುವ ತಾಮ್ರದ ಆಕ್ಸಿಕ್ಲೋರೈಡನ್ನು ಬಳಸಿ. ಮರದ ಮೇಲೆ ಸೋಂಕಿನ ಪ್ರಮಾಣವನ್ನು ಕಡಿಮೆ ಮಾಡಲು ವರ್ಷಕ್ಕೆ ಎರಡು ಬಾರಿ ಬೋರ್ಡಾಕ್ಸ್ ಮಿಶ್ರಣವನ್ನು ಬಳಸಿ. ಈ ಶಿಲೀಂಧ್ರದ ಎದುರು ಥಿಯೊಫನೇಟ್-ಮೀಥೈಲ್ ಶಿಲೀಂಧ್ರನಾಶಕವಿರುವ ಸಿಂಪಡಣೆಗಳು ಪರಿಣಾಮಕಾರಿಯಾಗಿದೆ. ಮರಗಳ ಮೇಲೆ ಬೈಫೆಂತ್ರಿನ್ ಅಥವಾ ಪರ್ಮೆತ್ರಿನ್ ಅನ್ನು ಬಳಸಿ ತೊಗಟೆ ಜೀರುಂಡೆಗಳು ಅಥವಾ ಕೊರಕಹುಳುಗಳನ್ನು ನಿಯಂತ್ರಿಸಿ.

ಅದಕ್ಕೆ ಏನು ಕಾರಣ

ಬಾಟ್ರಿಯೊಸ್ಫೇರಿಯಾ ರೋಡಿನಾ ಎಂಬ ಶಿಲೀಂಧ್ರವು ದೀರ್ಘಕಾಲದವರೆಗೆ ಗಿಡದ ಕೊಳೆಯುವ ಅಂಗಾಂಶದಲ್ಲಿ ಉಳಿದುಕೊಳ್ಳುತ್ತದೆ. ಇದು ಕಾಂಡ ಮತ್ತು ರೆಂಬೆಗಳಲ್ಲಿನ ಗಾಯಗಳ ಮೂಲಕ ಮಾವಿನ ಮರಗಳ ನಾಳೀಯ ವ್ಯವಸ್ಥೆಯನ್ನು ಆಕ್ರಮಿಸುತ್ತದೆ. ಸೋಂಕಿನ ನಿಖರವಾದ ಕಾರ್ಯವಿಧಾನವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವಾಗಿಲ್ಲ. ತೋಟದ ಕೆಲಸದ ಸಮಯದಲ್ಲಾದ ಗಾಯಗಳ ಅಥವಾ ಕೀಟಗಳಿಂದಾದ (ಜೀರುಂಡೆಗಳು) ಗಾಯಗಳ ಮೂಲಕ ಶಿಲೀಂಧ್ರವು ದಾಳಿ ಶುರು ಮಾಡುತ್ತದೆ. ಕೊಂಬೆಗಳ ಸತ್ತ ತೊಗಟೆಯಲ್ಲಿನ ಬೀಜಕಗಳು ಸೋಂಕಿನ ಪ್ರಾಥಮಿಕ ಮೂಲವಾಗಬಹುದು. ಈ ಬೀಜಕಗಳು ಮರವು ಬೆಳೆಯುವ ಸಮಯದಲ್ಲಿ ಮರದಲ್ಲಿಯೇ ಇದ್ದು ಕೊಯ್ಲಿನ ಸಮಯದಲ್ಲಿ ಹರಡುತ್ತವೆ. ಕಬ್ಬಿಣ, ಸತು ಮತ್ತು ಮ್ಯಾಂಗನೀಸಿನ ಕೊರತೆಯು ರೋಗವು ಒಮ್ಮೆಗೆ ಕಾಣಿಸಿಕೊಳ್ಳಲು ಕಾರಣವಾಗಬಹುದು. ನೀರು ಮತ್ತು ಫ್ರೀಝಿಂಗ್ ಸ್ಟ್ರೆಸ್ (ಮಣ್ಣು ಮತ್ತು ಗಿಡದಲ್ಲಿರುವ ನೀರಿನ ಅಂಶ ಹಿಮ ಅಥವಾ ಗಟ್ಟಿಯಾಗುವ ಪ್ರಕ್ರಿಯೆ) ಕೂಡ ಈ ರೋಗಕ್ಕೆ ಸಂಬಂಧಿಸಿವೆ. ರೋಗವು ವರ್ಷದ ಯಾವುದೇ ಸಮಯದಲ್ಲಿ ತಗುಲಬಹುದು ಆದರೆ ಬೆಳೆಯ ಬೆಳವಣಿಗೆಯ ಕೊನೆಯ ಹಂತಗಳಲ್ಲಿ ಅತ್ಯಂತ ಗಮನಾರ್ಹವಾಗಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಮರದ ಆರೋಗ್ಯ ಕಾಪಾಡಿ ಹಾಗೂ ನಿಯಮಿತವಾಗಿ ನೀರುಣಿಸಿ.
  • ಫ್ರೀಝಿಂಗ್ ಸ್ಟ್ರೆಸ್ (ಮಣ್ಣು ಮತ್ತು ಗಿಡದಲ್ಲಿರುವ ನೀರಿನ ಅಂಶ ಹಿಮ ಅಥವಾ ಗಟ್ಟಿಯಾಗುವ ಪ್ರಕ್ರಿಯೆ) ಅಥವಾ ಪೌಷ್ಟಿಕಾಂಶದ ಕೊರತೆಯ ಸಾಧ್ಯತೆಯಿರುವ ಪ್ರದೇಶಗಳಲ್ಲಿ ಗಿಡಗಳನ್ನು ನೆಡಬೇಡಿ.
  • ಆರಂಭಿಕ ಹಂತದಲ್ಲೇ ಸಂಭವನೀಯ ಸೋಂಕನ್ನು ಗುರುತಿಸಲು ಹೊಲವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ.
  • ಶಿಲೀಂಧ್ರ ದಾಳಿಗೆ ದಾರಿ ಮಾಡಿಕೊಡುವುದರಿಂದ ಏಟಾಗುವುದನ್ನು ಮತ್ತು ಗಾಯವಾಗುವುದನ್ನು ತಪ್ಪಿಸಿ.
  • ಮರದ ಸತ್ತ ಭಾಗಗಳನ್ನು ಹೊಲದಿಂದ ಕೂಡಲೇ ತೆಗೆದು ಹಾಕಿ.
  • ಸಮತೋಲಿತ ಫಲವತ್ತತೆಯನ್ನು ಕಾಪಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ