ಮಾವು

ಪಪ್ಪಾಯ ಮತ್ತು ಮಾವಿನ ಚುಕ್ಕೆ ರೋಗ (ಆಂಥ್ರಾಕ್ನೋಸ್)

Colletotrichum gloeosporioides

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಹಣ್ಣುಗಳ ಮೇಲೆ ಸಾಮಾನ್ಯವಾಗಿ ನೀರು-ನಿಂತಂತೆ ಕಾಣುವ ದೊಡ್ಡ ಗಾತ್ರದ ಗಾಢ ಕಂದು ಬಣ್ಣದ ಗಾಯಗಳು ಕಾಣಿಸಿಕೊಳ್ಳುತ್ತವೆ.
  • ಗಾಯಗಳ ನಡುವೆ ನಸುಗೆಂಪು ಬಣ್ಣದಿಂದ ಹಿಡಿದು ಗುಲಾಬಿ ಬಣ್ಣದಲ್ಲಿರಬಹುದಾದ ಚುಕ್ಕೆಗಳು ಒಂದೇ ಕೇಂದ್ರದ ಸುತ್ತಲೂ ವಿವಿಧ ವ್ಯಾಸವಿರುವ ವೃತ್ತಗಳ ಜಾಡಿನಲ್ಲಿ ಬೆಳೆಯುತ್ತವೆ.
  • ಹಣ್ಣುಗಳು ಅಕಾಲಿಕವಾಗಿ ಉದುರುತ್ತವೆ.
  • ಕೊಯ್ಲಿನ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು, ಅದೂ ಕೂಡ ಹಣ್ಣುಗಳನ್ನು ಶೀತಲೀಕರಿಸಿದರೆ.

ಇವುಗಳಲ್ಲಿ ಸಹ ಕಾಣಬಹುದು


ಮಾವು

ರೋಗಲಕ್ಷಣಗಳು

ಆಂಥ್ರಾಕ್ನೋಸ್ ಎಲೆಗಳು ಮತ್ತು ತೊಟ್ಟುಗಳ ಮೇಲೆ ಪ್ರಕಟವಾಗಬಹುದು, ಆದರೆ ಇದು ಮುಖ್ಯವಾಗಿ ಹಣ್ಣಿನ ರ್ದೋಗವಾಗಿದೆ. ಎಲೆಗಳ ಮೇಲಿನ ಲಕ್ಷಣಗಳು ಗಾಢ ಬಣ್ಣದ ಅಂಚುಗಳು ಮತ್ತು ಹಳದಿ ಬಣ್ಣದ ಪ್ರಭಾಲಯವಿರುವ ಬೂದು ಬಣ್ಣದಿಂದ ಕಂದು ಬಣ್ಣದ ಕಲೆಗಳಾಗಿ ಕಂಡುಬರುತ್ತವೆ. ಕಲೆಗಳು ನಂತರ ದೊಡ್ಡದಾಗುತ್ತವೆ ಮತ್ತು ಒಂದುಗೂಡೀ ಕೊಳೆತ ಪ್ರದೇಶಗಳಾಗುತ್ತವೆ. ಸಣ್ಣ, ತಿಳಿ ಬಣ್ಣದ ಕಲೆಗಳು ಮೊದಲನೆಯದಾಗಿ ಹಣ್ಣುಗಳ ಸಿಪ್ಪೆಯ ಮೇಲೆ ಕಾಣಿಸುತ್ತವೆ. ಅವು ಬೆಳೆದಂತೆ, ಕಲೆಗಳು ಗಾತ್ರದಲ್ಲಿ ಗಣನೀಯವಾಗಿ ಬೆಳೆಯುತ್ತವೆ (5 ಸೆಂ.ಮೀ. ವರೆಗೆ) ಮತ್ತು ದುಂಡಗಿನ, ಗಾಢ ಕಂದು ಬಣ್ಣದ ಗಾಯಗಳಾಗಿ ಮಾರ್ಪಡುತ್ತವೆ, ಸಾಮಾನ್ಯವಾಗಿ ನೀರು-ತುಂಬಿದಂತೆ ಅಥವಾ ಊದಿದಂತೆ ಕಾಣುತ್ತವೆ. ಗಾಯಗಳ ನಡುವೆ ನಸುಗೆಂಪು ಬಣ್ಣದಿಂದ ಹಿಡಿದು ಗುಲಾಬಿ ಬಣ್ಣದಲ್ಲಿರಬಹುದಾದ ಚುಕ್ಕೆಗಳು ಒಂದೇ ಕೇಂದ್ರದ ಸುತ್ತಲೂ ವಿವಿಧ ವ್ಯಾಸವಿರುವ ವೃತ್ತಗಳ ಜಾಡಿನಲ್ಲಿ ಬೆಳೆಯುತ್ತವೆ. ಸಣ್ಣ, ಕೆಂಪು-ಕಂದು, ಗುಳಿಬಿದ್ದ ಕಲೆಗಳು (2 ಸೆಂ.ಮೀ ವರೆಗೆ) ಕಂಡುಬರುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಬ್ಯಾಸಿಲಸ್ ಸಬ್ಟಿಲಿಸ್ ಅಥವಾ ಬ್ಯಾಸಿಲಸ್ ಮೈಲೊಲಿಕ್ಫ್ಯಾಸಿಯನ್ಸನ್ನು ಆಧರಿಸಿದ ಸಾವಯವ ಶಿಲೀಂಧ್ರನಾಶಕಗಳನ್ನು ಅನುಕೂಲಕರ ಹವಾಮಾನ ಇರುವಾಗ ಬಳಸಿದರೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಬೀಜ ಅಥವಾ ಹಣ್ಣುಗಳನ್ನು ಬಿಸಿನೀರಲ್ಲಿ ಸಂಸ್ಕರಿಸಿದರೆ (20 ನಿಮಿಷಗಳ ಕಾಲ 48 ಡಿಗ್ರಿ ಸಿ) ಉಳಿದಿರಬಹುದಾದ ಶಿಲೀಂಧ್ರ ನಾಶವಾಗುತ್ತದೆ ಮತ್ತು ತೋಟದಲ್ಲಿ ಅಥವಾ ಸಾಗಣೆಯ ಸಮಯದಲ್ಲಿ ರೋಗ ಹರಡುವುದನ್ನು ತಡೆಗಟ್ಟುತ್ತದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಅಝಾಕ್ಸಿಸ್ಟ್ರೋಬಿನ್, ಕ್ಲೋರೊಥಲೋನಿಲ್ ಅಥವಾ ತಾಮ್ರದ ಸಲ್ಫೇಟನ್ನು ಹೊಂದಿರುವ ಶಿಲೀಂಧ್ರನಾಶಕಗಳನ್ನು ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ನಿಯಮಿತವಾಗಿ ಸಿಂಪಡಿಸಬಹುದು. ಈ ಸಂಯುಕ್ತಗಳನ್ನುಪಯೋಗಿಸಿ ಬೀಜವನ್ನು ಸಂಸ್ಕರಿಸಬಹುದು ಕೂಡ. ಅಂತಿಮವಾಗಿ, ಕೊಯ್ಲಿನ ನಂತರ ಶಿಲೀಂಧ್ರನಾಶಕಗಳನ್ನು ಆಹಾರ-ದರ್ಜೆಯ ಮೇಣದೊಂದಿಗೆ ಮಿಶ್ರ ಮಾಡಿ ಹಚ್ಚುವುದರಿಂದ ಕಡಲಾಚೆಯ ಮಾರುಕಟ್ಟೆಗಳಿಗೆ ಕಳುಹಿಸಬೇಕಾದ ಹಣ್ಣುಗಳಲ್ಲಿ ರೋಗ ಸಂಭವವನ್ನು ಕಡಿಮೆ ಮಾಡಬಹುದು.

ಅದಕ್ಕೆ ಏನು ಕಾರಣ

ಚುಕ್ಕೆ ರೋಗ/ಆಂಥ್ರಾಕ್ನೋಸ್ ಪ್ರಪಂಚದಾದ್ಯಂತ ಒಂದು ಪ್ರಮುಖ ರೋಗವಾಗಿದೆ. ಇದು ಮಣ್ಣಿನಲ್ಲಿರುವ ಶಿಲೀಂಧ್ರವಾದ ಕೊಲೆಟೊಟ್ರೈಕಮ್ ಗ್ಲೋಯೋಸ್ಪೊರಿಯಾಯ್ಡಿನಿಂದ ಉಂಟಾಗುತ್ತದೆ. ಬೀಜಗಳಲ್ಲಿ ಅಥವಾ ಮಣ್ಣಿನಲ್ಲಿರುವ ಬೆಳೆಯ ಉಳಿಕೆಗಳಲ್ಲಿ ಶಿಲೀಂಧ್ರ ಉಳಿದುಕೊಂಡಿರುತ್ತದೆ. ಪರಿಸ್ಥಿತಿಗಳು ಅನುಕೂಲಕರವಾಗಿದ್ದಾಗ, ಗಾಳಿಯ ಮೂಲಕ ಮತ್ತು ರಾಚುವ ಮಳೆಯ ಮೂಲಕ ಆರೋಗ್ಯಕರ ಹಾಗೂ ಗಾಯಗಳಿಲ್ಲದ, ಇನ್ನೂ ಪೂರ್ತಿ ಮಾಗದ ಹಣ್ಣಿಗೆ ಶಿಲೀಂಧ್ರವು ಹರಡುತ್ತದೆ. ಮಾವು, ಬಾಳೆ ಮತ್ತು ಆವಕಾಡೊ - ಇವು ಈ ಶಿಲೀಂಧ್ರದ ಪರ್ಯಾಯ ಆಶ್ರಯದಾತ ಗಿಡಗಳಲ್ಲಿ ಕೆಲವು. ಮಧ್ಯಮ ತಾಪಮಾನ (ಗರಿಷ್ಟ 18 ಮತ್ತು 28 ಡಿಗ್ರಿ ಸೆಲ್ಸಿಯಸ್ ನಡುವೆ), ಹೆಚ್ಚಿನ ಆರ್ದ್ರತೆ (97% ಅಥವಾ ಅದಕ್ಕಿಂತ ಹೆಚ್ಚು) ಮತ್ತು ಕಡಿಮೆ ಪಿಹೆಚ್ (5.8 ರಿಂದ 6.5) ತೋಟ ರೋಗ ಹರಡುವುದಕ್ಕೆ ಅನುಕೂಲಕರ. ಒಣ ಹವಾಮಾನ, ಹೆಚ್ಚಿನ ಸೌರ ವಿಕಿರಣ ಅಥವಾ ತೀವ್ರ ತಾಪಮಾನಗಳು ಅದರ ಬೆಳವಣಿಗೆಗೆ ತಡೆಯೊಡ್ಡುತ್ತವೆ. ಶಿಲೀಂಧ್ರದ ಜೀವನಚಕ್ರ ಪೂರ್ತಿಯಾಗಲು ಸೋಂಕಿತ ಹಣ್ಣು ಒಂದು ಮಟ್ಟಕ್ಕೆ ಮಾಗುವುದು ಅವಶ್ಯವಾಗಿದೆ.


ಮುಂಜಾಗ್ರತಾ ಕ್ರಮಗಳು

  • ಕಡಿಮೆ ಮಳೆಯಾಗುವ ಸ್ಥಳಗಳನ್ನು ಆಯ್ಕೆ ಮಾಡಿ.
  • ನಿರೋಧಕ ಪ್ರಭೇದಗಳನ್ನು ಮತ್ತು ಆರೋಗ್ಯಕರ ಬೀಜಗಳನ್ನು ಬಳಸಿ.
  • ಗಿಡಗಳ ನಡುವೆ ಸಾಕಷ್ಟು ಅಂತರ ಬಿಡಿ.
  • ತೋಟದಲ್ಲಿ ಅಥವಾ ತೋಟದ ಸುತ್ತಮುತ್ತ ಸಿಟ್ರಸ್ ಹಣ್ಣಿನ ಗಿಡಗಳನ್ನು ಅಥವಾ ಕಾಫಿಯಂತಹ ಆಶ್ರಯ ನೀಡದ ಗಿಡಗಳನ್ನು ಬೆಳೆಸಿ.
  • ಪ್ರತಿ ವರ್ಷವೂ ಹೆಚ್ಚು ಬೆಳೆದ ರೆಂಬೆಗಳನ್ನು ಕತ್ತರಿಸಿ ತೆಗೆಯಿರಿ.
  • ಉದುರಿದ ಹಣ್ಣು ಮತ್ತು ಎಲೆಗಳನ್ನು ತೋಟದಿಂದ ತೆಗೆಯಿರಿ.
  • ತೋಟದಲ್ಲಿ ಕಳೆ ಬೆಳೆಯದಂತೆ ನೋಡಿಕೊಳ್ಳಿ.
  • ಉತ್ತಮ ಒಳಚರಂಡಿ ವ್ಯವಸ್ಥೆ ಮಾಡಿ.
  • ರೋಗ ಉಲ್ಬಣಿಸುವುದನ್ನು ತಡೆಯಲು ಬೇಗನೆ ಕೊಯ್ಲು ಮಾಡಿ.
  • ಚೆನ್ನಾಗಿ ಗಾಳಿಯಾಡುವ ಸ್ಥಳದಲ್ಲಿ ಹಣ್ಣುಗಳನ್ನು ಸಂಗ್ರಹಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ