ಇತರೆ

ದ್ವಿದಳ ಧಾನ್ಯಗಳಲ್ಲಿ ಸೆರ್ಕೊಸ್ಪೊರಾ ಎಲೆ ಚುಕ್ಕೆ

Cercospora canescens

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಸಣ್ಣ ತೆಳು-ಕಂದು ಬಣ್ಣದ ಉಂಗುರ ಕಲೆಗಳು, ಎಲೆಗಳು ಕೆಂಪು ಕಂದು ಅಂಚುಗಳಿಂದ ಆವೃತವಾಗಿರುತ್ತವೆ.
  • ಶಾಖೆಗಳು ಮತ್ತು ಹಸಿರು ಬೀಜಕೋಶಗಳ ಮೇಲಿನ ಕಲೆಗಳು.
  • ಎಲೆ ಉದುರುವುದು.
  • ಇಳುವರಿಯಲ್ಲಿ ಕಡಿತ.


ಇತರೆ

ರೋಗಲಕ್ಷಣಗಳು

ರೋಗಕಾರಕದ ಶಕ್ತಿ ಮತ್ತು ಸಸ್ಯದ ವಿಧವನ್ನು ಆಧರಿಸಿ ರೋಗಲಕ್ಷಣಗಳು ಸ್ವಲ್ಪಮಟ್ಟಿಗೆ ಬದಲಾಗುತ್ತವೆ. ನೀರಲ್ಲಿ-ನೆನೆಸಿದಂತಹ, ಕಂದು ಕೇಂದ್ರ ಬಿಂದು ಮತ್ತು ಹಳದಿ ಹೊರವೃತ್ತ ಇರುವ ಸಣ್ಣ, ವೃತ್ತಾಕಾರದ ಕಲೆಗಳು ಮೊದಲ ಬಾರಿಗೆ ಬೆಳೆಯನ್ನು ಬಿತ್ತನೆ ಮಾಡಿದ 3-5 ವಾರಗಳ ನಂತರ ಕಾಣಿಸುತ್ತದೆ. ರೋಗದ ನಂತರದ ಹಂತಗಳಲ್ಲಿ, ಚುಕ್ಕೆಗಳು ಹೆಚ್ಚಾಗುತ್ತವೆ ಮತ್ತು ಕೆಂಪು ಬಣ್ಣದ ಕಂದು ಅಂಚಿನ, ಸ್ವಲ್ಪ ತಗ್ಗಿದಂತೆ ಕಾಣಿಸುವ (ಕಂದು ಬಣ್ಣ) ಕಲೆಗಳು ಕೊಳೆತಂತೆ ಕಾಣುತ್ತವೆ. ಅವು ಎಲ್ಲ ಸಸ್ಯದ ಭಾಗಗಳಲ್ಲಿ, ಅದರಲ್ಲೂ ವಿಶೇಷವಾಗಿ ಹಸಿರು ಬೀಜಕೋಶಗಳಲ್ಲಿ ಸಹ ಬೆಳೆಯಬಹುದು. ಅನುಕೂಲಕರ ವಾತಾವರಣದ ಪರಿಸ್ಥಿತಿಗಳಲ್ಲಿ, ತೀವ್ರವಾದ ಎಲೆಚುಕ್ಕೆ ಹೂಬಿಡುವ ಮತ್ತು ಬೀಜಕೋಶ ರಚನೆಯ ಸಮಯದಲ್ಲಿ ಅತಿಯಾದ ಎಲೆ ಉದುರುವಿಕೆಗೆ ಕಾರಣವಾಗಬಹುದು. ಶಿಲೀಂಧ್ರವು ಬೀಜಕೋಶಗಳ ಮೇಲೆ ಮತ್ತು ಒಳಭಾಗದಲ್ಲಿ ಬೆಳೆದು, ಅವುಗಳನ್ನು ಸಂಪೂರ್ಣವಾಗಿ ಹಾನಿಗೊಳಿಸುತ್ತದೆ. ಮತ್ತು ಸಾಮಾನ್ಯವಾಗಿ 100% ಇಳುವರಿ ನಷ್ಟಕ್ಕೆ ಕಾರಣವಾಗುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಬೀಜಗಳಿಗೆ ಬಿಸಿನೀರಿನ ಚಿಕಿತ್ಸೆ ಸಾಧ್ಯವಿದೆ. ಬೇವಿನೆಣ್ಣೆಯ ಸಾರಗಳ ಬಳಕೆಯು ರೋಗದ ತೀವ್ರತೆಯನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿರುತ್ತದೆ (ಹೆಚ್ಚಿನ ಬೀಜಕೋಶ ಮತ್ತು ಬೀಜ ಸಂಖ್ಯೆಗಳು, ಆರೋಗ್ಯಕರ ಬೀಜಕೋಶಗಳು, ಮತ್ತು ಅಧಿಕ ತೂಕ).

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಒಂದು ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಶಿಲೀಂಧ್ರನಾಶಕಗಳೊಂದಿಗಿನ ಚಿಕಿತ್ಸೆಯು ಅಗತ್ಯವಿದ್ದಲ್ಲಿ, ಮನ್ಕೊಜೆಬ್ ಹೊಂದಿರುವ ಉತ್ಪನ್ನಗಳನ್ನು ಬಳಸಿ, ಕ್ಲೋರೊಥಲೋನಿಲ್ @ 1 ಗ್ರಾಂ / ಲೀ ಅಥವಾ ಥಿಯೊಫೆನೆಟ್ ಮೀಥೈಲ್ @ 1 ಮಿಲೀ ಎರಡು ಬಾರಿ 10 ದಿನಗಳ ಮಧ್ಯಂತರದಲ್ಲಿ.

ಅದಕ್ಕೆ ಏನು ಕಾರಣ

ಎಲೆ ಚುಕ್ಕೆ ರೋಗವು ಫೆಂಗಸ್ ಸೆರ್ಕೊಸ್ಪೊರಾ ಕ್ಯಾನೆಸೆನ್ಸ್ ಗಳಿಂದ ಉಂಟಾಗುತ್ತದೆ. ಇದು ಉದ್ದು ಮತ್ತು ಹೆಸರು ಕಾಳಿನಲ್ಲಿ ಒಂದೇ ರೀತಿ ಸೋಂಕು ತಗುಲಿಸುತ್ತದೆ. ಶಿಲೀಂಧ್ರವು ಬೀಜದಿಂದ ಹುಟ್ಟುತ್ತದೆ ಮತ್ತು ಮಣ್ಣಿನಲ್ಲಿರುವ ಸಸ್ಯದ ಅವಶೇಷಗಳಲ್ಲಿ 2 ವರ್ಷಗಳಿಗಿಂತ ಹೆಚ್ಚು ಕಾಲ ಬದುಕಬಲ್ಲದು. ಬೇರಿನ ವ್ಯವಸ್ಥೆಯನ್ನು ಅನುಸರಿಸಿ ಇದು ಮಣ್ಣಿನಲ್ಲಿ ತುಂಬಾ ದೂರ ಪ್ರಯಾಣಿಸಬಹುದು. ಇದು ಹೊಲದಲ್ಲಿನ ಪರ್ಯಾಯ ರೋಗ ಬರುವ ಸಸ್ಯಗಳು ಅಥವಾ ತಾನೇ ತಾನಾಗಿ ಬೆಳೆಯುವ ಬೆಳೆಗಳಲ್ಲೂ ಕೂಡ ಹುಲುಸಾಗಿ ಬೆಳೆಯುತ್ತದೆ. ಸಸ್ಯದ ಕೆಳ ಭಾಗಗಳಿಗೆ ಪ್ರಸರಣವು ನೀರಿನ ತುಂತುರು ಮತ್ತು ಗಾಳಿಯ ಮೂಲಕ ಸಂಭವಿಸುತ್ತದೆ. ಹೆಚ್ಚಿದ ದಿನ ಮತ್ತು ರಾತ್ರಿ ತಾಪಮಾನಗಳು, ತೇವಾಂಶವಿರುವ ಮಣ್ಣು, ಗಾಳಿಯಲ್ಲಿ ಹೆಚ್ಚಿದ ಆರ್ದ್ರತೆ ಅಥವಾ ಭಾರೀ ಬಿರುಗಾಳಿ ಸಹಿತ ಮಳೆಗಳು ಶಿಲೀಂಧ್ರದ ಹರಡುವಿಕೆಗೆ ಅನುಕೂಲಕರವಾದ ಸ್ಥಿತಿಗಳಾಗಿವೆ.


ಮುಂಜಾಗ್ರತಾ ಕ್ರಮಗಳು

  • ಮಣ್ಣಿನಲ್ಲಿ ನೀರು ಚೆನ್ನಾಗಿ ಬರಿದಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಆರೋಗ್ಯಕರ ಸಸ್ಯಗಳಿಂದ ಅಥವಾ ಪ್ರಮಾಣೀಕೃತ ರೋಗ-ಮುಕ್ತ ಮೂಲಗಳಿಂದ ಬೀಜಗಳನ್ನು ಪಡೆಯಿರಿ.
  • ನಿರೋಧಕ ಅಥವಾ ಸಹಿಷ್ಣು ಪ್ರಭೇದಗಳನ್ನು ನೆಡಿ.
  • ಹೂವಿನ ಭಾಗಗಳಿಗೆ ಹಾನಿಯಾಗುವುದನ್ನು ತಪ್ಪಿಸಲು ಸ್ವಲ್ಪ ತಡವಾಗಿ ನೆಡಿ.
  • ಕೃಷಿಸಾಲುಗಳ ನಡುವೆ ಕೀಟಗಳು ಹರಡುವುದನ್ನು ತಡೆಗಟ್ಟಲು ಉದ್ದವಾಗಿ ಬೆಳೆಯುವ ದ್ವಿದಳಧಾನ್ಯ ಸಸ್ಯಗಳನ್ನು ಅಂತರಬೆಳೆಯಾಗಿ ಬೆಳೆಯಿರಿ.
  • ಉತ್ತಮವಾಗಿ ಗಾಳಿಯಾಡುವ ಸಲುವಾಗಿ ಸಸ್ಯಗಳ ನಡುವೆ ಸಾಕಷ್ಟು ಜಾಗವನ್ನು ಬಿಡಿ.
  • ಶಿಲೀಂಧ್ರಗಳು ಕೆಳಗಿನ ಎಲೆಗಳಿಗೆ ಹರಡುವುದನ್ನು ತಪ್ಪಿಸಲು ಸಸ್ಯಗಳನ್ನು ಮಲ್ಚ್ ಮಾಡಿ.
  • ಸಸ್ಯದ ಎಲ್ಲಾ ಉಳಿಕೆಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ಸುಡುವ ಮೂಲಕ ನೈರ್ಮಲ್ಯವನ್ನು ಕಪಾಡಿಕೊಳ್ಳಿ.
  • ಕಲುಷಿತವಾದ ಉಪಕರಣಗಳನ್ನು ಸ್ವಚ್ಛಗೊಳಿಸಿ.
  • ಸಸ್ಯಗಳು ತೇವವಾಗಿದ್ದಾಗ ಹೊಲದಲ್ಲಿ ಕೆಲಸ ಮಾಡಬೇಡಿ.
  • ಈ ರೋಗ ತಗುಲದ ಬೆಳೆಗಳೊಂದಿಗೆ ಬೆಳೆ ಸರದಿಯನ್ನು ಶಿಫಾರಸು ಮಾಡಲಾಗಿದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ