ಭತ್ತ

ಭತ್ತದ ಕಂದು ಚುಕ್ಕೆ

Cochliobolus miyabeanus

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಳೆಯ ಎಲೆಗಳ ಮೇಲೆ ಬೂದು ಬಣ್ಣದಿಂದ ಬಿಳಿ ಬಣ್ಣದ ಮಧ್ಯಭಾಗ ಇರುವ ವೃತ್ತಾಕಾರದ, ಕಂದು ಬಣ್ಣದ ನೆಕ್ರೋಟಿಕ್ ಕಲೆಗಳು.
  • ಪ್ರೌಢ ಸಸ್ಯಗಳ ಮೇಲೆ ಕೆಂಪು ಮಿಶ್ರಿತ ಅಂಚುಗಳು.
  • ಕಾಂಡಗಳು ಮತ್ತು ಎಲೆಗಳ ಬಣ್ಣವು ಕ್ರಮೇಣ ಹಳದಿಯಾಗಿ ಬಾಡುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಈ ರೋಗವು ವ್ಯಾಪಕವಾದ ರೋಗ ಗುಣಲಕ್ಷಣಗಳನ್ನು ಹೊಂದಿದೆ. ಆದರೆ, ಟಿಲ್ಲರಿಂಗ್ ಹಂತದಲ್ಲಿ ಹಳದಿ ಬಣ್ಣದ ವರ್ತುಲ ಇರುವ ವೃತ್ತಾಕಾರದ ಅಥವಾ ಅಂಡಾಕಾರದ ಕಂದು ಚುಕ್ಕೆಗಳು ಸೋಂಕಿನ ಅತ್ಯಂತ ಗೋಚರ ಸಂಕೇತವಾಗಿದೆ. ಅವು ದೊಡ್ಡದಾಗುತ್ತಿದ್ದಂತೆ, ಈ ತಾಣಗಳ ಮಧ್ಯದಲ್ಲಿ ಒಂದು ಬೂದು ಕೇಂದ್ರವು ಬೆಳೆಯುತ್ತದೆ ಮತ್ತು ಕೆಂಪು ಬಣ್ಣದ ಕಂದು ಅಂಚು ಕಾಣುತ್ತದೆ. ಕಾಂಡಗಳು ಬಣ್ಣಗೆಡುವುದು ಮತ್ತೊಂದು ವಿಶಿಷ್ಟ ಲಕ್ಷಣವಾಗಿದೆ. ರೋಗಕ್ಕೆ ಒಳಗಾಗಬಲ್ಲ ಪ್ರಭೇದಗಳ ಮೇಲೆ, ಗಾಯಗಳು 5-14 ಮಿಮೀ ಉದ್ದವನ್ನು ತಲುಪಬಹುದು ಮತ್ತು ಎಲೆಗಳ ಸೊರಗುವಿಕೆಗೆ (ವಿಲ್ಟ್) ಕಾರಣವಾಗಬಹುದು. ನಿರೋಧಕ ಪ್ರಭೇದಗಳಲ್ಲಿ, ಗಾಯಗಳು ಹಳದಿ ಕಂದು ಮತ್ತು ಪಿನ್ ಹೆಡ್-ಗಾತ್ರಗಳಲ್ಲಿ ಇರುತ್ತವೆ. ಹೂವುಗಳ ಸೋಂಕು ಅಪೂರ್ಣವಾದ ಅಥವಾ ಅಸ್ತವ್ಯಸ್ತವಾದ ಧಾನ್ಯದ ತುಂಬುವಿಕೆಗೆ ಮತ್ತು ಧಾನ್ಯದ ಗುಣಮಟ್ಟ ಇಳಿಮುಖವಾಗುವುದಕ್ಕೆ ಕಾರಣವಾಗುವುದು .

ಶಿಫಾರಸುಗಳು

ಜೈವಿಕ ನಿಯಂತ್ರಣ

ಬೀಜಗಳು ಕಲುಷಿತವಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, ಬಿಸಿ ನೀರಿನಲ್ಲಿ ಬೀಜವನ್ನು (53 - 54 ° C) 10 ರಿಂದ 12 ನಿಮಿಷಗಳ ಕಾಲ ಮುಳುಗಿಸುವುದನ್ನು ಶಿಫಾರಸು ಮಾಡಲಾಗುವುದು. ಫಲಿತಾಂಶಗಳನ್ನು ಉತ್ತಮಗೊಳಿಸಲು, ಬಿಸಿನೀರಿನ ಸಂಸ್ಕರಣೆಯ ಮೊದಲು ತಣ್ಣಗಿನ ನೀರಿನಲ್ಲಿ 8 ಗಂಟೆಗಳ ಕಾಲ ಬೀಜಗಳನ್ನು ಇರಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳ ಜೊತೆ ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಬೀಜ ಚಿಕಿತ್ಸೆಗಳಂತೆ ಶಿಲೀಂಧ್ರನಾಶಕಗಳನ್ನು (ಉದಾ., ಐಪ್ರೊಡಿಯೋನ್, ಪ್ರೊಪಿಕಾನಜೋಲ್, ಅಜೋಕ್ಸಿಸ್ಟ್ರೋಬಿನ್, ಟ್ರೈಫ್ಲೋಕ್ಸಿಸ್ಟ್ರೋಬಿನ್) ಬಳಸುವುದು ಈ ರೋಗವನ್ನು ತಡೆಗಟ್ಟಲು ಉತ್ತಮ ಮಾರ್ಗವಾಗಿದೆ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಕೊಕ್ಲಿಯೊಬೋಲಸ್ ಮಿಯಾಬೀನಸ್ ಶಿಲೀಂಧ್ರದಿಂದ ಉಂಟಾಗುತ್ತವೆ. ಇದು ನಾಲ್ಕು ವರ್ಷಗಳಿಗಿಂತ ಹೆಚ್ಚು ಕಾಲ ಬೀಜಗಳಲ್ಲಿ ಬದುಕುಳಿಯಬಹುದು ಮತ್ತು ಸಸ್ಯದಿಂದ ಗಾಳಿಯಿಂದ ಪ್ರಸರಣವಾಗುವ ಬೀಜಕಗಳ ಮೂಲಕ ಸಸ್ಯಗಳಿಗೆ ಹರಡಬಹುದು. ಹೊಲದಲ್ಲಿ ಉಳಿದ ಸೋಂಕಿತ ಸಸ್ಯಗಳ ಉಳಿಕೆಗಳು ಮತ್ತು ಕಳೆಗಳು ರೋಗವನ್ನು ಹರಡಲು ಇರುವ ಸಾಮಾನ್ಯ ಮಾರ್ಗಗಳಾಗಿವೆ. ಬ್ರೌನ್ ಸ್ಪಾಟ್ ಎಲ್ಲಾ ಬೆಳೆ ಹಂತಗಳಲ್ಲಿ ಸಂಭವಿಸಬಹುದು, ಆದರೆ ಟಿಲ್ಲೆರಿಂಗ್ ನಿಂದ ಪಕ್ವತೆ ಹಂತಗಳವರೆಗಿನ ಸೋಂಕು ಗರಿಷ್ಟ ಮತ್ತು ಅತ್ಯಂತ ನಿರ್ಣಾಯಕವಾಗಿದೆ. ಮುಖ್ಯವಾಗಿ ಸೂಕ್ಷ್ಮಪೋಷಕಾಂಶಗಳ ವಿಷಯದಲ್ಲಿ ಮಣ್ಣಿನ ಫಲವತ್ತತೆಯ ದುರ್ನಿರ್ವಹಣೆಯಿರುವ ಹೊಲಗಳಲ್ಲಿ ರೋಗವು ಹೆಚ್ಚಾಗಿ ಕಂಡುಬರುತ್ತದೆ. ಸಿಲಿಕಾನ್ ರಸಗೊಬ್ಬರಗಳನ್ನು ಬಳಸಿ ಬ್ರೌನ್ ಸ್ಪಾಟ್ ನ ಗಮನಾರ್ಹ ನಿಯಂತ್ರಣವನ್ನು ಸಾಧಿಸಬಹುದು. ಜಾನುವಾರು ಗೊಬ್ಬರ ಮತ್ತು ರಾಸಾಯನಿಕ ರಸಗೊಬ್ಬರಗಳ ಮಿಶ್ರಣ ಸ್ವಲ್ಪಮಟ್ಟಿಗೆ ಅದರ ತೀವ್ರತೆಯನ್ನು ಕಡಿಮೆಗೊಳಿಸುತ್ತದೆ. ಹೆಚ್ಚಿನ ಆರ್ದ್ರತೆ (86-100%), ದೀರ್ಘಕಾಲದ ಎಲೆಗಳ ತೇವಾಂಶ ಮತ್ತು ಹೆಚ್ಚಿನ ತಾಪಮಾನವು (16-36 ° C) ಶಿಲೀಂಧ್ರಗಳಿಗೆ ಅನುಕೂಲಕರವಾಗಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ರೋಗನಿರೋಧಕ ಪ್ರಬೇಧಗಳನ್ನು ಬಳಸಿ.
  • ಸಿಲಿಕಾನ್ ಕಡಿಮೆ ಇರುವ ಮಣ್ಣುಗಳಿಗೆ, ನೆಡುವ ಮೊದಲು ಕ್ಯಾಲ್ಸಿಯಂ ಸಿಲಿಕೇಟ್ ಸ್ಲ್ಯಾಗ್ ಅನ್ನು ಹಾಕಿ.
  • ಸಾಧ್ಯವಾದರೆ ಪ್ರಮಾಣಿತ ಮೂಲಗಳಿಂದ ನಿಮ್ಮ ಬೀಜಗಳನ್ನು ಪಡೆದುಕೊಳ್ಳಿ.
  • ನಿರೋಧಕ ತಳಿಗಳು, ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ ಅವನ್ನು ನೆಡಿ.
  • ಸಮತೋಲಿತ ಪೌಷ್ಟಿಕಾಂಶದ ಪೂರೈಕೆಯನ್ನು ಖಚಿತಪಡಿಸಿಕೊಳ್ಳಿ ಮತ್ತು ನಿಯಮಿತವಾಗಿ ಮಣ್ಣಿನ ಪೌಷ್ಟಿಕಾಂಶಗಳನ್ನು ಪರಿಶೀಲಿಸಿ.
  • ಟಿಲ್ಲೆರಿಂಗ್ ಹಂತದಿಂದ ರೋಗದ ಚಿಹ್ನೆಗಳಿಗಾಗಿ ಹೊಲವನ್ನು ಪರಿಶೀಲಿಸಿ.
  • ನಿಮ್ಮ ಹೊಲದ ಮತ್ತು ಸುತ್ತಮುತ್ತಲಿನಲ್ಲಿ ಕಳೆಗಳನ್ನು ನಿಯಂತ್ರಿಸಿ ಮತ್ತು ತೆಗೆದುಹಾಕಿ.
  • ಸುಗ್ಗಿಯ ನಂತರ ಅವುಗಳನ್ನು ಸುಡುವ ಮೂಲಕ ಸೋಂಕಿತ ಸಸ್ಯಗಳನ್ನು ತೆಗೆದುಹಾಕಿ ಮತ್ತು ನಾಶಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ