ಕಬ್ಬು

ಕಬ್ಬಿನ ಸ್ಮಟ್

Sporisorium scitamineum

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಕಪ್ಪು, ಚಾವಟಿ ರೀತಿಯ ರಚನೆ ಸಸ್ಯದಲ್ಲಿ ಬೆಳೆಯುತ್ತದೆ.
  • ಸ್ಥಗಿತಗೊಂಡ ಸಸ್ಯ ಬೆಳವಣಿಗೆ.
  • ತೆಳುವಾದ, ಗಡುಸಾದ ಎಲೆಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಕಬ್ಬು

ರೋಗಲಕ್ಷಣಗಳು

ಕಪ್ಪು ಚಾವಟಿ-ರೀತಿಯ ರಚನೆಯು ಕಬ್ಬು ಬೆಳೆಯುವ ತುದಿಯಿಂದ ಹೊರಹೊಮ್ಮುತ್ತದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಸೋಂಕಿತ ಸಸ್ಯದ ಮೇಲ್ಭಾಗದದವರೆಗೂ ವಿಸ್ತರಿಸುತ್ತದೆ. ಈ ಬೆಳೆಯುತ್ತಿರುವ ಚಾವಟಿ ರಚನೆಯು ಸಸ್ಯ ಅಂಗಾಂಶ ಮತ್ತು ಶಿಲೀಂಧ್ರಗಳ ಅಂಗಾಂಶದ ಮಿಶ್ರಣವಾಗಿದೆ. ಶಿಲೀಂಧ್ರದ ಬೀಜಕಗಳನ್ನು ಚಾವಟಿ ರಚನೆಯ ಅಂಗಾಂಶದಲ್ಲಿ ಸಂಗ್ರಹಿಸಲಾಗುತ್ತದೆ. ಬೀಜಕಗಳನ್ನು ಬಿಡುಗಡೆ ಮಾಡಿದ ನಂತರ, ಚಾವವಟಿ ರಚನೆಯ ಮೂಲ ಮಾತ್ರ ಉಳಿಯುತ್ತದೆ. ಅದಲ್ಲದೆ, ಸಸ್ಯದ ಬೆಳವಣಿಗೆ ಕುಂಠಿತವಾಗಿದೆ ಮತ್ತು ಎಲೆಗಳು ತೆಳುವಾಗುತ್ತವೆ ಮತ್ತು ಗಡುಸಾಗುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸೋಂಕಿತ ಕಾಂಡಗಳನ್ನು ತೆಗೆದುಹಾಕಿ ಮತ್ತು ಸೋಂಕಿತ ಸಸ್ಯಗಳ ಎಲ್ಲಾ ಉಳಿಕೆಗಳನ್ನು ನಾಶಮಾಡಿ. ಕಾಯಿಲೆ-ಮುಕ್ತ ಬೀಜದ ವಸ್ತುಗಳನ್ನು ಖಚಿತಪಡಿಸಿಕೊಳ್ಳಲು, ನೀವು ಕಬ್ಬಿನ ಕಟ್ಟಿಂಗುಗಳನ್ನು 30 ನಿಮಿಷಗಳ ಕಾಲ 52 ° ಸಿ ಬಿಸಿ ನೀರಿನಲ್ಲಿ ಅದ್ದಬೇಕು. ಇಲ್ಲದಿದ್ದರೆ ನೀವು 2 ಗಂಟೆಗಳ ಕಾಲ 50 ° ಸಿ ಬಿಸಿನೀರಿನ ಸಂಸ್ಕರಣೆಯಲ್ಲಿ ಕಟ್ಟಿಂಗುಗಳನ್ನು ಅದ್ದಬಹುದು.

ರಾಸಾಯನಿಕ ನಿಯಂತ್ರಣ

ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಯಾವಾಗಲೂ ಸಮಗ್ರ ವಿಧಾನವನ್ನು ಪರಿಗಣಿಸಿ. ನೆಡುವ ಮೊದಲು ಬೆಂಜಿಮಿಡಾಜೋಲ್ನಂತಹ ಶಿಲೀಂಧ್ರನಾಶಕಗಳೊಂದಿಗೆ ಸೆಟ್ಟುಗಳ ಸಂಸ್ಕರಣೆಯು ಗದ್ದೆಗಳಲ್ಲಿನ ರೋಗವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅದಕ್ಕೆ ಏನು ಕಾರಣ

ವಿಶಿಷ್ಟವಾದ ಚಾವಟಿಯಲ್ಲಿ ಉತ್ಪತ್ತಿಯಾಗುವ ರೋಗದ ಬೀಜಕಗಳು ಗಾಳಿ ಮತ್ತು ಹಲವಾರು ಕೀಟಗಳ ಮೂಲಕ ಹರಡುತ್ತದೆ. ಬಿತ್ತನೆಗಾಗಿ ಸೋಂಕಿಗೊಳಗಾದ ಕಬ್ಬಿನ ಕಾಂಡಗಳ ಬಳಕೆಯು ಇನ್ನೊಂದು ಪ್ರಸರಣ ವಿಧಾನವಾಗಿದೆ. ಬೆಚ್ಚಗಿನ ಮತ್ತು ತೇವದ ಪರಿಸ್ಥಿತಿಗಳು ಸೋಂಕಿನ ಅಪಾಯಕ್ಕೆ ಅನುಕೂಲವಾಗುತ್ತವೆ. ಹಲವಾರು ತಿಂಗಳುಗಳವರೆಗೆ ಗೋಚರ ರೋಗಲಕ್ಷಣಗಳಿಲ್ಲದೆ ಸೋಂಕಿತ ಕಬ್ಬು ಬೆಳೆಯಬಹುದು. 2 ಅಥವಾ 4 ತಿಂಗಳುಗಳ ನಂತರ (ಕೆಲವೊಮ್ಮೆ ಒಂದು ವರ್ಷದವರೆಗೂ), ಕಬ್ಬು ಬೆಳೆಯುವ ತುದಿಯು "ಚಾವಟಿ" ಅನ್ನು ಉತ್ಪಾದಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಪ್ರಭೇದಗಳನ್ನು ನೆಡಿ.
  • ರೋಗಮುಕ್ತವಾದ ನಾಟಿ ಮಾಡುವ ವಸ್ತುವನ್ನು ಬಳಸಿ.
  • ವ್ಯಾಪಕ ಬೆಳೆ ಸರದಿ ಅಳವಡಿಸಿ.
  • ಬ್ರೀಡರ್ ಬೀಜ ಉತ್ಪಾದನೆಗೆ ಶಾಖ ಸಂಸ್ಕರಣೆ ಬಳಸಿ (ತೇವಾಂಶವುಳ್ಳ ಬಿಸಿ ಗಾಳಿಯ ಸಂಸ್ಕರಣೆ - ಎಂಎಚ್ ಎಟಿ - 54°ಸಿ ನಲ್ಲಿ 150 ನಿಮಿಷಗಳು ಅಥವಾ 50°ಸಿ ಯಲ್ಲಿ 2 ಗಂಟೆಗಳ ಕಾಲ ಬಿಸಿನೀರಿನ ಸಂಸ್ಕರಣೆ).

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ