ಗೋಧಿ

ಹಳದಿ ಪಟ್ಟಿ ಬೂಷ್ಟು

Puccinia striiformis

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಪಟ್ಟೆಗಳಲ್ಲಿ ಚಿಕ್ಕದಾದ, ಬೂಷ್ಟು ಹಿಡಿದಂತಹ ಗುಳ್ಳೆಗಳು ಜೋಡಿಸಲ್ಪಟ್ಟಿರುತ್ತವೆ.
  • ಕಾಂಡಗಳು ಮತ್ತು ತೆನೆಗಳ ಮೇಲೂ ಪರಿಣಾಮವಾಗಬಹುದು.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು
ಬಾರ್ಲಿ
ಗೋಧಿ

ಗೋಧಿ

ರೋಗಲಕ್ಷಣಗಳು

ರೋಗದ ತೀವ್ರತೆಯು ಸಸ್ಯದ ರೋಗಕ್ಕೊಳಗಾಗುವ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ. ದುರ್ಬಲ ಪ್ರಭೇದಗಳಲ್ಲಿ, ಶಿಲೀಂಧ್ರವು ಚಿಕ್ಕದಾದ, ಹಳದಿ- ಕಿತ್ತಳೆ ಬಣ್ಣದ ("ಬೂಷ್ಟು ಹಿಡಿದ ") ಗಂಟುಗಳನ್ನು ಉತ್ಪಾದಿಸುತ್ತದೆ ಮತ್ತು ಅವು ಎಲೆಗಳ ಸಿರೆಗಳಿಗೆ ಸಮಾನಾಂತರವಾದ ಕಿರಿದಾದ ಪಟ್ಟಿಗಳನ್ನು ರೂಪಿಸುವ ಸಾಲುಗಳಲ್ಲಿ ಜೋಡಿಸಲ್ಪಟ್ಟಿರುತ್ತವೆ. ಅವುಗಳು ಅಂತಿಮವಾಗಿ ವಿಲೀನಗೊಳ್ಳುತ್ತವೆ ಮತ್ತು ಇಡೀ ಎಲೆಯನ್ನು ಆವರಿಸಬಹುದು, ಇದು ಮೊದಲು ಎಳೆಯ ಸಸ್ಯಗಳಲ್ಲಿ ಕಾಣಿಸಿಕೊಳ್ಳುವುದು ಇದರ ಒಂದು ಲಕ್ಷಣವಾಗಿದೆ. ಈ ಗಂಟುಗಳು (ವ್ಯಾಸದಲ್ಲಿ 0.5 ರಿಂದ 1 ಮಿಮೀ) ಕೆಲವೊಮ್ಮೆ ಕಾಂಡಗಳು ಮತ್ತು ತೆನೆಗಳ ಮೇಲೆ ಕಂಡುಬರುತ್ತವೆ. ಕಾಯಿಲೆಯ ನಂತರದ ಹಂತಗಳಲ್ಲಿ, ಉದ್ದನೆಯ, ಕೊಳೆತ, ತಿಳಿ ಕಂದು ಪಟ್ಟೆಗಳು ಅಥವಾ ಎಲೆಗಳ ಮೇಲೆ ಗುರುತು ಗೋಚರಿಸುತ್ತವೆ. ಇದು ಹೆಚ್ಚಾಗಿ ಬೂಷ್ಟು ಹಿಡಿದ ಕಲೆಗಳಿಂದ ತುಂಬಿರುತ್ತದೆ. ತೀವ್ರ ಸೋಂಕುಗಳಲ್ಲಿ, ಸಸ್ಯಗಳ ಬೆಳವಣಿಗೆ ಗಂಭೀರವಾಗಿ ರಾಜಿಯಾಗಿದ್ದು, ಅಂಗಾಂಶಗಳು ಹಾನಿಗೊಳಗಾಗುತ್ತವೆ. ಕಡಿಮೆಯಾದ ಎಲೆ ಪ್ರದೇಶವು ಉತ್ಪಾದಕತೆಯನ್ನು ಕಡಿಮೆ ಮಾಡುತ್ತದೆ, ಪ್ರತಿ ಸಸ್ಯಕ್ಕೆ ಕಡಿಮೆ ಸ್ಪೈಕ್ಗಳು ಮತ್ತು ಸ್ಪೈಕ್ಗೆ ಕಡಿಮೆ ಧಾನ್ಯಗಳು. ಒಟ್ಟಾರೆ, ತೀವ್ರವಾದ ರೋಗವು ಬೆಳೆ ನಷ್ಟಕ್ಕೆ ಕಾರಣವಾಗಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಅನೇಕ ಜೈವಿಕ ಫಂಗೈಸಿಡ್ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. 7 ರಿಂದ 14 ದಿನಗಳ ಮಧ್ಯಂತರದಲ್ಲಿ ಅನ್ವಯವಾಗುವ ಬ್ಯಾಸಿಲಸ್ ಪ್ಯುಮಿಲಸ್ ಆಧಾರಿತ ಉತ್ಪನ್ನಗಳು ಶಿಲೀಂಧ್ರದ ವಿರುದ್ಧ ಪರಿಣಾಮಕಾರಿಯಾಗುವುದು ಮತ್ತು ಇದನ್ನು ಉದ್ಯಮದ ಪ್ರಮುಖ ವ್ಯಕ್ತಿಗಳು ಮಾರಾಟ ಮಾಡುತ್ತಾರೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಸ್ಟ್ರೋಬಿಲ್ಯೂರಿನ್ ವರ್ಗಕ್ಕೆ ಸೇರಿದ ಶಿಲೀಂಧ್ರನಾಶಕಗಳನ್ನು ಎಲೆಗಳ ಮೇಲೆ ಸಿಂಪಡಿಸುವುದರಿಂದ ಈ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಈಗಾಗಲೇ ಸೋಂಕಿತ ಹೊಲಗಳಲ್ಲಿ , ತ್ರಿಜೋಲ್ ಗುಂಪಿಗೆ ಸೇರಿದ ಉತ್ಪನ್ನಗಳನ್ನು ಅಥವಾ ಎರಡೂ ಉತ್ಪನ್ನಗಳ ಮಿಶ್ರಣಗಳನ್ನು ಬಳಸಿ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಪ್ಯುಸಿನಿಯ ಸ್ಟರೈಫಾರ್ಮಿಸ್ನಿಂದ ಉಂಟಾಗುತ್ತವೆ, ಇದು ಬದುಕುಳಿಯಲು ಜೀವಂತ ಸಸ್ಯ ವಸ್ತುಗಳ ಅಗತ್ಯವಿದ್ದು ಇದು ಕಡ್ಡಾಯ ಪರಾವಲಂಬಿಯಾಗಿದೆ. ಬೀಜಕಣಗಳು ನೂರಾರು ಕಿಲೋಮೀಟರುಗಳವರೆಗೆ ಗಾಳಿ ಪ್ರವಾಹಗಳಿಂದ ಚದುರಿಹೋಗುತ್ತದೆ ಮತ್ತು ಕಾಯಿಲೆಯ ಋತುಮಾನದ ಸಾಂಕ್ರಾಮಿಕ ರೋಗಗಳನ್ನು ಪ್ರಾರಂಭಿಸಬಹುದು. ಶಿಲೀಂಧ್ರವು ಸಸ್ಯವನ್ನು ರಂಧ್ರಗಳ (ಸ್ಟೊಮ್ಯಾಟ) ಮೂಲಕ ಪ್ರವೇಶಿಸುತ್ತದೆ ಮತ್ತು ಕ್ರಮೇಣ ಎಲೆ ಅಂಗಾಂಶಗಳನ್ನು ಆವರಿಸುತ್ತದೆ. ರೋಗವು ಮುಖ್ಯವಾಗಿ ಬೆಳವಣಿಗೆಯ ಋತುವಿನ ಆರಂಭದಲ್ಲಿ ಕಂಡುಬರುತ್ತದೆ. ಶಿಲೀಂಧ್ರ ಮತ್ತು ಸೋಂಕಿನ ಅಭಿವೃದ್ಧಿಯ ಅನುಕೂಲಕರವಾದ ಸ್ಥಿತಿಗಳು: ಅತಿ ಎತ್ತರ, ಹೆಚ್ಚಿನ ಆರ್ದ್ರತೆ (ಇಬ್ಬನಿ ), ಮಳೆ ಮತ್ತು 7 ಹಾಗು 15 ಡಿಗ್ರಿ ಸೆಲ್ಸಿಯಸ್ ನಡುವಿನ ತಂಪಾದ ವಾತಾವರಣಗಳು. ತಾಪಮಾನವು ಸ್ಥಿರವಾಗಿ 21-23 ಡಿಗ್ರಿ ಸೆಲ್ಸಿಯಸ್ನಲ್ಲಿ ಉಂಟಾಗುವಾಗ ಸೋಂಕನ್ನು ತಡೆಗಟ್ಟುತ್ತದೆ, ಏಕೆಂದರೆ ಈ ತಾಪಮಾನದಲ್ಲಿ ಶಿಲೀಂಧ್ರದ ಜೀವನ ಚಕ್ರಕ್ಕೆ ಅಡ್ಡಿಯಾಗುತ್ತದೆ. ಪರ್ಯಾಯ ಅತಿಥೇಯಗಳೆಂದರೆ ಗೋಧಿ, ಬಾರ್ಲಿ ಮತ್ತು ರಾಗಿ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ರೋಗ ನಿರೋಧಕ ಪ್ರಭೇದಗಳನ್ನು ಬೆಳೆಸಿಕೊಳ್ಳಿ.
  • ಸಾಕಷ್ಟು ಸಾರಜನಕ ರಸಗೊಬ್ಬರ ಬಳಕೆಯನ್ನು ಖಚಿತಪಡಿಸಿಕೊಳ್ಳಿ.
  • ಆದರೆ ಹೆಚ್ಚು ಸಾರಜನಕ ಬಳಕೆ ತಪ್ಪಿಸಿ.
  • ನಿಯಮಿತವಾಗಿ ಆ ಜಾಗದಲ್ಲಿ ತಾವಾಗಿ ಬೆಳೆದ ಸಸ್ಯಗಳಿಗಾಗಿ ಪರಿಶೀಲಿಸಿ ಮತ್ತು ಅವುಗಳನ್ನು ತೆಗೆದುಹಾಕಿ.
  • ಸುಗ್ಗಿಯ ನಂತರ ಮಣ್ಣಿನಲ್ಲಿನ ಬೆಳೆ ಉಳಿಕೆಗಳನ್ನು ಆಳವಾಗಿ ಉಳುಮೆ ಮಾಡಿ ಮತ್ತು ಅಗೆಯಿರಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ