Ustilago segetum var. tritici
ಶಿಲೀಂಧ್ರ
ಹೂಬಿಡುವ ಹಂತದ ಮೊದಲು ಅಥವಾ ಆ ಹಂತದಲ್ಲಿ ರೋಗಲಕ್ಷಣಗಳು ಕಂಡುಬರುತ್ತವೆ ಮತ್ತು ಪುಡಿಪುಡಿಯಾದ ಕಪ್ಪು ಧಾನ್ಯಗಳೊಂದಿಗೆ ಕಪ್ಪಾದ ಮೇಲ್ಭಾಗ ಮತ್ತು ವಿಶಿಷ್ಟವಾದ "ಸತ್ತ ಮೀನು" ವಾಸನೆ ಹೊಂದಿರುವ ರೋಗ ಲಕ್ಷಣಗಳನ್ನು ಹೊಂದಿರುತ್ತವೆ. ಅಭಿವೃದ್ಧಿ ಹೊಂದುತ್ತಿರುವ ಕಾಳುಗಳು, ಶಿಲೀಂಧ್ರಗಳ ಬೆಳವಣಿಗೆಯಾಗಿ ಬದಲಾಗುತ್ತವೆ ಮತ್ತು ಸೋಂಕಿತ ಮೇಲ್ಭಾಗಗಳಲ್ಲಿ ಯಾವುದೇ ಧಾನ್ಯಗಳು ಬೆಳೆಯುವುದಿಲ್ಲ. ಪ್ರಪಂಚದ ಗೋಧಿ-ಬೆಳೆಯುತ್ತಿರುವ ಪ್ರದೇಶಗಳಲ್ಲಿ ಇದು ಸಾಮಾನ್ಯ ರೋಗವಾಗಿದೆ. ಸೋಂಕಿತ ತೆನೆಗಳಲ್ಲಿ ಪೂರ್ತಿ ಇಳುವರಿ ನಷ್ಟವಾಗುತ್ತದೆ.
4-6 ಗಂಟೆಗಳ ಕಾಲ 20-30 ° ಸಿ ನೀರಿನಲ್ಲಿ ಬೀಜಗಳನ್ನು ನೆನೆಸಿ. ನಂತರ, ಅವುಗಳನ್ನು 2 ನಿಮಿಷಗಳ ಕಾಲ 49 ° ಸಿ ಬಿಸಿ ನೀರಿನಲ್ಲಿ ಅದ್ದಿ. ಮುಂದಿನ ಹಂತದಲ್ಲಿ ಪ್ಲ್ಯಾಸ್ಟಿಕ್ ಶೀಟ್ ಗಳ ಮೇಲೆ ಬೀಜಗಳನ್ನು ಇರಿಸಿ ಮತ್ತು ಸೂರ್ಯನ ಬೆಳಕಿಗೆ ಮತ್ತೆ 4 ಗಂಟೆಗಳ ಕಾಲ ಬಿಡಿ. ಬಿತ್ತನೆ ಮಾಡುವ ಮೊದಲು ಬೀಜಗಳು ಸಂಪೂರ್ಣವಾಗಿ ಗಾಳಿಯಲ್ಲಿ ಒಣಗಿರಬೇಕು. ಈ ಚಿಕಿತ್ಸೆ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಇದು ಬೀಜಗಳ ಮೊಳಕೆಯೊಡೆಯುವಿಕೆಯ ಪ್ರಮಾಣದ ಮೇಲೆ ಪರಿಣಾಮ ಬೀರಬಹುದು.
ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಬೀಜಗಳಿಗೆ ವ್ಯವಸ್ಥಿತ ಶಿಲೀಂಧ್ರನಾಶಕಗಳಾದ ಕಾರ್ಬಾಕ್ಸಿನ್ ಅಥವಾ ಟ್ರಿಯಾಡಿಮಿನೋಲ್ನೊಂದಿಗೆ ಚಿಕಿತ್ಸೆ ನೀಡಬಹುದು. ಇವನ್ನು ಮೊಳಕೆಯೊಡೆಯುವ ಬೀಜಗಳು ಒಳಗೆ ತೆಗೆದುಕೊಳ್ಳುತ್ತವೆ ಮತ್ತು ಬೀಜದ ಒಳಗಿರುವ ಶಿಲೀಂಧ್ರವನ್ನು ಈ ಕೀಟನಾಶಕಗಳು ಸಾಯಿಸುತ್ತವೆ ಅಥವ ತಡೆಯುತ್ತವೆ. ಟ್ರೈಟಿಕೊನಾಜೋಲ್, ಡೈಫಿನೊಕೊನಜೋಲ್ ಮತ್ತು ಟೆಬುಕೋನಜೋಲ್ ನಂತಹ ಅನೇಕ ರೀತಿಯ ಇನ್ನಿತರ ಸಂಯುಕ್ತಗಳು ಬೀಜಗಳ ಚಿಕಿತ್ಸೆಗಾಗಿ ಲಭ್ಯವಿದೆ.
ರೋಗಲಕ್ಷಣಗಳು ಬೀಜದಿಂದ ಹುಟ್ಟಿದ ಶಿಲೀಂಧ್ರ ಉಸ್ಟಿಲಾಗೊ ಟ್ರೈಟಿಸಿಯಿಂದ ಉಂಟಾಗುತ್ತವೆ. ಇದು ಸೋಂಕಿತ ಗೋಧಿ ಬೀಜಗಳಲ್ಲಿ ಸುಪ್ತ ಸ್ಥಿತಿಯಲ್ಲಿ ಉಳಿದುಕೊಂಡಿರುತ್ತದೆ. ಶಿಲೀಂಧ್ರದ ಬೆಳವಣಿಗೆ ಸಸ್ಯದ ಜೀವನ ಚಕ್ರದ ವೇಗದ ಜೊತೆ ಹೊಂದಿಕೊಳ್ಳುತ್ತದೆ. ಸೋಂಕಿತ ಬೀಜ ಮೊಳಕೆಯೊಡೆದಾಗ, ಶಿಲೀಂಧ್ರವು ಎಳೆಯ ಗೋಧಿ ಸಸ್ಯಗಳ ಚಿಗುರುಗಳ ಉದ್ದಕ್ಕೂ ಬೆಳವಣಿಗೆಯನ್ನು ಪುನರಾರಂಭಿಸುತ್ತದೆ ಮತ್ತು ಅಂತಿಮವಾಗಿ ಹೂವಿನ ಅಂಗಾಂಶಗಳಲ್ಲಿ ವಸಾಹತುಗೊಳ್ಳುತ್ತದೆ. ಪರಾಗವನ್ನು ಬಿಡುಗಡೆ ಮಾಡುವುದಕ್ಕೆ ಬದಲಾಗಿ, ಹೂವುಗಳು ಗಾಳಿಯಿಂದ ಆರೋಗ್ಯಕರ ಹೂವುಗಳಿಗೆ ಶಿಲೀಂಧ್ರ ಬೀಜಕಗಳನ್ನು ಹರಡುತ್ತವೆ. ಅಲ್ಲಿ, ಅವುಗಳು ಮೊಳಕೆಯೊಡೆಯುತ್ತವೆ ಮತ್ತು ಆಂತರಿಕ ಅಂಗಾಂಶಗಳನ್ನು ವಸಾಹತುವನ್ನಾಗಿ ಮಾಡಲು ಪ್ರಾರಂಭಿಸುತ್ತವೆ. ಅಂತಿಮವಾಗಿ ಹೊಸ ಬೀಜಗಳಲ್ಲಿ ಸೇರಿಕೊಳ್ಳುತ್ತದೆ. ಸೋಂಕಿತ ಬೀಜಗಳು ಸುಪ್ತ ಶಿಲೀಂಧ್ರವನ್ನು ಸಾಗಿಸುತ್ತವೆ ಆದರೆ ಆರೋಗ್ಯಕರವಾಗಿ ಕಾಣಿಸುತ್ತವೆ. ಈ ಬೀಜಗಳನ್ನು ನಾಟಿ ಮಾಡುವ ಮೂಲಕ ಸೋಂಕಿನ ಚಕ್ರ ಮತ್ತೆ ಪ್ರಾರಂಭವಾಗುತ್ತದೆ. ಇತರ ಪ್ರಸರಣ ವಿಧಾನಗಳೆಂದರೆ ಕೊಯ್ಲಿನ ಉಳಿಕೆಗಳು, ಮಳೆ ಮತ್ತು ಕೀಟಗಳು. ಬೀಜಕಣಗಳ ಕ್ಷಿಪ್ರಗತಿಯ ಮೊಳಕೆಯೊಡೆಯುವಿಕೆಗೆ ಅನುಕೂಲಕರವಾದ ಪರಿಸ್ಥಿತಿಗಳು ಆರ್ದ್ರ ಹವಾಮಾನ (60-85% ಸಾಪೇಕ್ಷ ಆರ್ದ್ರತೆ) , ಆಗಾಗ್ಗೆ ಮಳೆಯಾಗುವುದು ಅಥವಾ 16 ರಿಂದ 22 ° ಸಿ ನಡುವೆ ತಂಪಾದ ಉಷ್ಣಾಂಶಗಳಾಗಿವೆ.