ಗೋಧಿ

ಗೋಧಿ ಕಾಂಡದ ತುಕ್ಕುರೋಗ

Puccinia graminis

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಕೆಂಪು ಬಣ್ಣದ, ಅಂಡಾಕಾರ ಮತ್ತು ಪುಡಿ ಪುಡಿಯಾದ ಗಂಟುಗಳು ಕಾಂಡಗಳಲ್ಲಿ, ಎಲೆಯ ಪೊರೆಗಳಲ್ಲಿ ಮತ್ತು ಕೆಲವೊಮ್ಮೆ ಎಲೆಗಳ ಮೇಲೆ ಕಾಣಿಸುತ್ತವೆ.
  • ಗಂಟುಗಳು ಬೆಳೆಯುತ್ತವೆ ಮತ್ತು ದೊಡ್ಡ ಭಾಗವನ್ನು ಮುಚ್ಚುವಂತೆ ಒಗ್ಗೂಡುತ್ತವೆ.
  • ಇದರಿಂದ ಸಸ್ಯದ ಬಾಹ್ಯ ಪದರ ಒರಟಾಗಿ ಕಾಣುತ್ತದೆ.
  • ಭಾರೀ ಗಾಳಿ ಮತ್ತು ಮಳೆಗಳಲ್ಲಿ ಕಾಂಡಗಳು ದುರ್ಬಲಗೊಳ್ಳಬಹುದು ಮತ್ತು ಸಸ್ಯಗಳು ಬಿದ್ದು ಹೋಗುತ್ತವೆ.
  • ದುರ್ಬಲವಾದ ಸಸ್ಯಗಳು ಇತರ ರೋಗಕಾರಕಗಳಿಂದ ಸೋಂಕಿಗೆ ತುತ್ತಾಗಬಹುದು.
  • ಧಾನ್ಯ ಸಂಪೂರ್ಣವಾಗಿ ಭರ್ತಿಯಾಗುವುದಕ್ಕೆ ಮುಂಚಿತವಾಗಿ ರೋಗವು ತೀವ್ರವಾದರೆ ಇಳುವರಿ ನಷ್ಟಗಳು ಗಂಭೀರವಾಗಿರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು
ಬಾರ್ಲಿ
ಗೋಧಿ

ಗೋಧಿ

ರೋಗಲಕ್ಷಣಗಳು

ಸೋಂಕಿನ 7 ರಿಂದ 15 ದಿನಗಳ ನಂತರ ಮೊದಲ ರೋಗಲಕ್ಷಣಗಳು ಸಂಭವಿಸುತ್ತವೆ. ಕೆಂಪು-ಕಂದು ಬಣ್ಣದ, ಅಂಡಾಕಾರದ ಉದ್ದನೆಯ ಗಂಟುಗಳು ಕಾಂಡಗಳಿಂದ, ಎಲೆ ಕೋಶಗಳಿಂದ, ಎಲೆಗಳು ಮತ್ತು ಕೆಲವೊಮ್ಮೆ ಹೂಗೊಂಚಲುಗಳ ಮೇಲೆ ಹೊರಹೊಮ್ಮುತ್ತವೆ. ಮುಖ್ಯವಾಗಿ ಕಾಂಡಗಳು ಮತ್ತು ಎಲೆ ಪೊರೆಗಳ ಮೇಲೆ ಪರಿಣಾಮ ಇರುತ್ತದೆ. ಪುಡಿಪುಡಿಯಾದ ಗಂಟುಗಳು ಬೆಳೆಯುತ್ತವೆ ಮತ್ತು ಹೆಚ್ಚಾಗಿ ದೊಡ್ಡ ಪ್ರದೇಶಗಳನ್ನು ಒಳಗೊಳ್ಳಲು ಒಗ್ಗೂಡುತ್ತವೆ. ಸಸ್ಯದ ಬಾಹ್ಯತ್ವಚೆಗೆ ಉಂಟಾದ ಹಾನಿ, ಸಸ್ಯದ ಪೀಡಿತ ಭಾಗಗಳು ಒರಟಾಗಿ ಕಾಣುವಂತೆ ಮಾಡುತ್ತವೆ. ಸೋಂಕು ತೀವ್ರವಾದರೆ, ಕಾಂಡಗಳನ್ನು ದುರ್ಬಲಗೊಳಿಸಬಹುದು ಮತ್ತು ಸಸ್ಯಗಳು ಬಿಸಿ ಗಾಳಿ ಮತ್ತು ಮಳೆಗಳಿಗೆ ಬಗ್ಗುವುದು ಅಥವಾ ಬೀಳುತ್ತವೆ. ಶಿಲೀಂಧ್ರವು ನೀರು ಮತ್ತು ಪೌಷ್ಟಿಕಾಂಶದ ಸಾಗಣೆಯನ್ನು ತಡೆಗಟ್ಟುತ್ತದೆ ಮತ್ತು ನೀರಿನ ನಷ್ಟವನ್ನು ಉಂಟುಮಾಡುತ್ತದೆ. ಸಸ್ಯದ ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಧಾನ್ಯಕ್ಕೆ ಪೋಷಕಾಂಶದ ಸಾಗಣೆಯನ್ನು ಕಡಿಮೆ ಮಾಡುತ್ತದೆ. ಧಾನ್ಯಗಳು ಕಡಿಮೆಯಾಗುತ್ತವೆ. ಇದರಿಂದಾಗಿ ಕಡಿಮೆ ಇಳುವರಿ ಕಂಡುಬರುತ್ತದೆ. ಇಡೀ ಸಸ್ಯವು ದುರ್ಬಲಗೊಳ್ಳುವುದು. ಇದರಿಂದಾಗಿ ಇತರ ರೋಗಕಾರಕಗಳ ಜೊತೆಗೆ ಸೋಂಕಿನ ಅಪಾಯವನ್ನು ಉಂಟುಮಾಡುತ್ತದೆ. ಧಾನ್ಯ ಸಂಪೂರ್ಣವಾಗಿ ಸೋಂಕಿತವಾಗುವುದಕ್ಕೆ ಮುಂಚಿತವಾಗಿ ರೋಗವು ಉತ್ತಮವಾಗಿ ಅಭಿವೃದ್ಧಿಗೊಂಡರೆ ಇಳುವರಿ ನಷ್ಟಗಳು ಗಂಭೀರವಾಗಿರುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕ್ಷಮಿಸಿ, ಪುಸಿನಿಯಾ ಟ್ರಿಟಿಸಿನ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ಗೊತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದನ್ನಾದರೂ ನೀವು ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಿಮ್ಮ ಪ್ರತಿಕ್ರಿಯೆಗಾಗಿ ನಾವು ಎದುರು ನೋಡುತ್ತೇವೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಶಿಲೀಂಧ್ರಗಳನ್ನು ನಿಯಂತ್ರಿಸಲು ಟೆಬುಕೋನಜೋಲ್ ಅಥವಾ ಪ್ರೋಥೈಕೊನಜೋಲ್ ಅನ್ನು ಹೊಂದಿರುವ ಶಿಲೀಂಧ್ರನಾಶಕಗಳನ್ನು ಬಳಸಬಹುದು. ತಡೆಗಟ್ಟುವ ಚಿಕಿತ್ಸೆಯಲ್ಲಿ, ಟ್ರಯಾಜೋಲ್ಸ್ ಮತ್ತು ಸ್ಟ್ರೋಬಿಲ್ಯೂರಿನ್ಗಳನ್ನು ಒಳಗೊಂಡಿರುವ ಶಿಲೀಂಧ್ರನಾಶಕಗಳನ್ನು ಹಾಕಬಹುದು. ಸ್ಟ್ರೋಬಿಲ್ಯೂರಿನ್ಗಳ ಜೊತೆ ಸ್ವಲ್ಪ ಮಟ್ಟದ ಪ್ರತಿರೋಧವನ್ನು ಗಮನಿಸಲಾಗಿದೆ.

ಅದಕ್ಕೆ ಏನು ಕಾರಣ

ಪಂಗಸ್ ಪ್ಯುಕಿನಿಯಾ ಗ್ರಾಮಿನಿಸ್ ನಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ, ಇದು ಒಂದು ಕಡ್ಡಾಯವಾದ ಪರಾವಲಂಬಿಯಾಗಿದ್ದು, ಬದುಕಲು ಇದಕ್ಕೆ ಜೀವಂತ ಸಸ್ಯಗಳ ಅಂಗಾಂಶಗಳ ಅವಶ್ಯಕತೆಯಿದೆ. ಬೀಜಕಗಳು ಗಾಳಿಯಿಂದ ಬಹು ದೂರದವೆರೆಗೂ ಹರಡಬಲ್ಲವು ಮತ್ತು ಹರಿಯುವ ನೀರಿನ ಸಂಪರ್ಕಕ್ಕೆ ಬಂದ ಕೂಡಲೆ ಇವು ಮೊಳಕೆ ಒಡೆಯುತ್ತವೆ. ಯಂತ್ರಗಳು ಮತ್ತು ವಾಹನಗಳು, ಉಪಕರಣಗಳು, ಬಟ್ಟೆ ಮತ್ತು ಪಾದರಕ್ಷೆಗಳಂತಹವುಗಳು ಪ್ರಸರಣದ ಇತರ ಮಾರ್ಗಗಳಾಗಿವೆ. ಈ ಶಿಲೀಂಧ್ರವು ಎಲೆ ಮೇಲ್ಮೈಯಲ್ಲಿ ನೈಸರ್ಗಿಕ ರಂಧ್ರಗಳ ಮೂಲಕ ಸಸ್ಯಕ್ಕೆ ಸೋಂಕು ತಗುಲಿಸುತ್ತದೆ. ಈ ಪ್ರಕ್ರಿಯೆಗೆ ಕಡಿಮೆ ಬೆಳಕಿನ ತೀವ್ರತೆ (ಮುಂಜಾನೆ ಅಥವಾ ಮಧ್ಯಾಹ್ನ) ಮತ್ತು ದೀರ್ಘಕಾಲದ ಇಬ್ಬನಿ ಅಥವಾ ಮಳೆಯಿಂದ ಉಂಟಾಗುವ ದೀರ್ಘಕಾಲದ ಎಲೆ ಆರ್ದ್ರತೆ ಅನುಕೂಲಕರವಾಗಿರುತ್ತವೆ. ಅತಿ ಉಷ್ಣತೆಯ ದಿನಗಳು (25-30 ° ಸಿ) ಮತ್ತು ಇಬ್ಬನಿ ಉಂಟಾಗುವುದಕ್ಕೆ ಅನುಕೂಲವಾಗುವ ಸೌಮ್ಯವಾದ ರಾತ್ರಿಗಳು (15-20 ° ಸಿ) ಸಹ ಕಾಂಡದ ತುಕ್ಕಿಗೆ ಅನುಕೂಲಕರವಾಗಿರುತ್ತವೆ. ಈ ರೋಗವು ಸಾಮಾನ್ಯವಾಗಿ ಗೋಧಿಗೆ ಸೀಮಿತವಾಗಿರುತ್ತದೆ, ಆದರೆ ಇತರ ಸಸ್ಯಗಳು ರೋಗವಾಹಕಗಳಾಗಿ ವರ್ತಿಸಬಹುದು ಅಥವಾ ಪೀಡಿತವಾಗಲೂಬಹುದು (ಇತರ ಧಾನ್ಯಗಳು, ಹುಲ್ಲುಗಳು ಮತ್ತು ಬೆರ್ಬೆರಿಸ್ ಪೊದೆಸಸ್ಯಗಳು).


ಮುಂಜಾಗ್ರತಾ ಕ್ರಮಗಳು

  • ಕಾಯಿಲೆ-ನಿರೋಧಕ ಗೋಧಿ ಪ್ರಭೇದಗಳನ್ನು ಬಳಸಿ.
  • ಬೇಗನೆ ಪ್ರೌಢವಾಗುವ ಪ್ರಭೇದಗಳನ್ನು ಬಳಸಿ.
  • ಸಾಧ್ಯವಾದಷ್ಟು ವಸಂತಕಾಲದ ಆರಂಭದಲ್ಲಿ ನೆಡಿ.
  • ಪ್ರತಿಕೂಲ ಪರಿಸ್ಥಿತಿಯನ್ನು ತಪ್ಪಿಸಲು, ಸಾಧ್ಯವಾದಷ್ಟು ಶರತ್ಕಾಲದ ಕೊನೆಯಲ್ಲಿ ನೆಡಿ.
  • ರೋಗದ ಯಾವುದೇ ಚಿಹ್ನೆಗಾಗಿ ನಿಯಮಿತವಾಗಿ ಗದ್ದೆಯನ್ನು ಪರಿಶೀಲಿಸಿ.
  • ಈ ಪ್ರದೇಶದಲ್ಲಿ ಬೆಳೆಯುವ ಕಳೆಗಳು, ತಾವೇ ಬೆಳೆದ ಸಸ್ಯಗಳು ಮತ್ತು ಬೆರ್ಬೆರಿಸ್ ಪೊದೆಸಸ್ಯಗಳನ್ನು ತೆಗೆದುಹಾಕಿ.
  • ಅತಿಯಾದ ಸಾರಜನಕ ರಸಗೊಬ್ಬರ ಬಳಕೆ ತಪ್ಪಿಸಿ.
  • ಸಸ್ಯಗಳಿಗೆ ಉತ್ತಮ ಗಾಳಿ ದೊರೆಯುವಂತೆ ಸಸ್ಯಗಳ ನಡುವೆ ಸಾಕಷ್ಟು ಜಾಗವನ್ನು ಬಿಡಿ.
  • ಗದ್ದೆಯಲ್ಲಿನ ಶಿಲೀಂಧ್ರದ ಬದುಕುಳಿಯುವಿಕೆಯನ್ನು ತಡೆಗಟ್ಟಲು ಎಲ್ಲಾ ಸಸ್ಯದ ಉಳಿಕೆಗಳನ್ನು ತೆಗೆದುಹಾಕಿ ನಾಶಮಾಡಿ.
  • ಮತ್ತೊಂದು ಗದ್ದೆಯನ್ನು ಪ್ರವೇಶಿಸುವ ಮೊದಲು ಪಾದರಕ್ಷೆಗಳು, ಕೈಗಳು, ಪ್ಯಾಂಟ್ಗಳು ಮತ್ತು ಉಪಕರಣಗಳನ್ನು ಚೆನ್ನಾಗಿ ಶುದ್ಧಗೊಳಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ