ಭತ್ತ

ಭತ್ತದ ಬೆಂಕಿ ರೋಗ

Magnaporthe oryzae

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಗಾಢ ಬಣ್ಣದ ಅಂಚುಗಳಿರುವ ತಿಳಿ ಬಣ್ಣದ ಗಾಯಗಳು.
  • ಗೆಣ್ಣುಗಳೂ ಕೂಡ ರೋಗಲಕ್ಷಣ ತೋರಿಸಬಹುದು.
  • ಸಸಿ ಅಥವಾ ಎಳೆಯ ಸಸ್ಯಗಳು ಸಾಯುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಬೆಂಕಿ ರೋಗ ಸಸ್ಯದ ಎಲ್ಲಾ ಮೇಲಿನ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ: ಎಲೆ, ಕಾಲರ್ , ಗೆಣ್ಣು, ಕುತ್ತಿಗೆ, ತೆನೆಯ ಭಾಗಗಳು, ಮತ್ತು ಕೆಲವೊಮ್ಮೆ ಎಲೆಯ ಕವಚ. ಎಲೆಗಳ ಮೇಲೆ ಹಳದಿಯಿಂದ ಹಸಿರು ಬಣ್ಣದ, ಕಣ್ಣಿನಾಕಾರದ, ಚೂಪಾದ ತುದಿ ಇರುವ, ಕ್ಲೋರೋಟಿಕ್ ಕಲೆಗಳು ಕಾಣಿಸಿಕೊಳ್ಳುತ್ತವೆ. ಈ ಗಾಯಗಳ ಅಂಚುಗಳು ಸತ್ತಂತಿದ್ದು, ಕೇಂದ್ರ ಬೂದು-ಬಿಳಿ ಬಣ್ಣದಲ್ಲಿರುತ್ತದೆ. ಗಾಯಗಳ ಗಾತ್ರವು ಸಸ್ಯದ ವಯಸ್ಸು, ಸೋಂಕಿನ ವಿಧ ಮತ್ತು ಸಮಯವನ್ನು ಅವಲಂಬಿಸಿರುತ್ತದೆ. ಗಾಯಗಳು ಬೆಳೆದಂತೆ, ಎಲೆಗಳು ಕ್ರಮೇಣ ಒಣಗುತ್ತವೆ. ಎಲೆ ಮತ್ತು ಎಲೆ ಕವಚಗಳ ಸೇರುವ ತಾಣಗಳು ಸೋಂಕಿತವಾದರೆ, ಕಾಲರ್ ಕೊಳೆತ ಕಾಣಿಸಿಕೊಳ್ಳಬಹುದು. ಮತ್ತು ಈ ಸೇರುವ ತಾಣಗಳ ಮೇಲ್ಭಾಗದಲ್ಲಿರುವ ಎಲೆಗಳು ಸಾಯುತ್ತವೆ. ಗೆಣ್ಣುಗಳ ಮೇಲೂ ಸಹ ಪರಿಣಾಮ ಬೀರಬಹುದು. ಇದು ಕಂದು ಗೆಣ್ಣುಗಳು ಮತ್ತು ಕಾಂಡಗಳ ಮುರಿಯುವಿಕೆಗೆ ಕಾರಣವಾಗುತ್ತದೆ. ಕೆಲವೊಮ್ಮೆ ಸಸಿ ಅಥವಾ ಎಳೆಯ ಸಸ್ಯಗಳ ಸಾವೂ ಸಂಭವಿಸುತ್ತದೆ. ನಂತರದ ಬೆಳವಣಿಗೆಯ ಹಂತಗಳಲ್ಲಿ, ತೀವ್ರ ಎಲೆಯ ಬೆಂಕಿ ರೋಗದ ಸೋಂಕು ಎಲೆಯ ಪ್ರದೇಶವನ್ನು ಕಡಿಮೆ ಮಾಡುತ್ತದೆ ಮತ್ತು ಇದರ ಪರಿಣಾಮವಾಗಿ ಧಾನ್ಯ ತುಂಬುವುದು ಮತ್ತು ಇಳುವರಿ ಕಡಿಮೆಯಾಗುತ್ತದೆ. ಇದು ಭತ್ತದ ಅತ್ಯಂತ ವಿನಾಶಕಾರಿ ರೋಗಗಳಲ್ಲಿ ಒಂದಾಗಿದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಇದುವರೆಗೂ, ಈ ರೋಗಕ್ಕೆ ಪರಿಣಾಮಕಾರಿಯಾದ ಜೈವಿಕ ನಿಯಂತ್ರಣವು ವಾಣಿಜ್ಯಿಕವಾಗಿ ಲಭ್ಯವಿಲ್ಲ. ಸ್ಟ್ರೆಪ್ಟೊಮೈಸಸ್ ಅಥವಾ ಸ್ಯೂಡೋಮೊನಸ್ ಬ್ಯಾಕ್ಟೀರಿಯಾ ಆಧರಿತ ಉತ್ಪನ್ನಗಳು ಶಿಲೀಂಧ್ರ ಮತ್ತು ರೋಗದ ವ್ಯಾಪ್ತಿ / ಹರಡುವಿಕೆಯ ಮೇಲೆ ಪರಿಣಾಮಕಾರಿಯೇ ಎಂಬ ಕುರಿತು ಪ್ರಯೋಗಗಳು ನಡೆಯುತ್ತಿವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಥೀರಮ್ ನೊಂದಿಗೆ ಬೀಜ ಚಿಕಿತ್ಸೆಯು ರೋಗದ ವಿರುದ್ಧ ಪರಿಣಾಮಕಾರಿಯಾಗಿದೆ. ಅಜೋಕ್ಸಿಸ್ಟ್ರೋಬಿನ್ ಅಥವಾ ಟ್ರಿಯಾಜೋಲ್ ಅಥವಾ ಸ್ಟ್ರೋಬಿಲ್ಯುರಿನ್ ಕುಟುಂಬಕ್ಕೆ ಸೇರಿದ ಕ್ರಿಯಾತ್ಮಕ ಪದಾರ್ಥಗಳನ್ನು ಒಳಗೊಂಡಿರುವ ಶಿಲೀಂಧ್ರನಾಶಕಗಳನ್ನು ನರ್ಸರಿ, ಟಿಲ್ಲರಿಂಗ್ ಮತ್ತು ತೆನೆ ಮೂಡುವ ಹಂತಗಳಲ್ಲಿ ಬೆಂಕಿ ರೋಗ ನಿಯಂತ್ರಿಸಲು ಸಿಂಪಡಿಸಲಾಗುತ್ತದೆ. ತೆನೆ ಮೂಡುವ ಸಮಯದಲ್ಲಿ ಒಂದು ಅಥವಾ ಎರಡು ಬಾರಿ ಶಿಲೀಂಧ್ರನಾಶಕ ಬಳಕೆ ಈ ರೋಗವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ.

ಅದಕ್ಕೆ ಏನು ಕಾರಣ

ಭತ್ತದ ಬೆಂಕಿ ರೋಗದ ಲಕ್ಷಣಗಳು ಶಿಲೀಂಧ್ರ ಮ್ಯಾಗ್ನಾಪೋರ್ಟೆ ಗ್ರಿಸಿಯದಿಂದ ಉಂಟಾಗುತ್ತವೆ. ಇದು ಭತ್ತದ ಅತ್ಯಂತ ವಿನಾಶಕಾರಿ ರೋಗಗಳಲ್ಲಿ ಒಂದಾಗಿದೆ. ಇದು ಗೋಧಿ, ರೈ, ಬಾರ್ಲಿ ಮತ್ತು ಸಜ್ಜೆ ಮುಂತಾದ ಇತರ ಮುಖ್ಯ ಕೃಷಿ ಧಾನ್ಯಗಳಲ್ಲೂ ಸಹ ಸೋಂಕು ಉಂಟು ಮಾಡುತ್ತದೆ. ಕೊಯ್ಲು ಮಾಡಿದ ನಂತರ ಬಿಟ್ಟ ಒಣಹುಲ್ಲಿನ ಮೇಲೆ ಈ ಶಿಲೀಂಧ್ರ ಬದುಕಬಲ್ಲದು ಮತ್ತು ಮುಂದಿನ ಋತುವಿನಲ್ಲೂ ಮುಂದುವರಿಯಬಹುದು. ಸಸ್ಯಗಳು ಸಾಮಾನ್ಯವಾಗಿ ಪ್ರೌಢಾವಸ್ಥೆಯಲ್ಲಿ ರೋಗಕಾರಕಗಳ ಪ್ರಭಾವಕ್ಕೆ ಒಳಗಾಗುವುದು ಕಡಿಮೆ. ತಂಪು ಉಷ್ಣಾಂಶ, ಆಗಾಗ್ಗೆ ಬೀಳುವ ಮಳೆ ಮತ್ತು ಕಡಿಮೆ ಮಣ್ಣಿನ ತೇವಾಂಶ ಈ ರೋಗವನ್ನು ಹೆಚ್ಚಿಸುತ್ತದೆ. ಎಲೆಯ ದೀರ್ಘಕಾಲದವರೆಗಿನ ತೇವಾಂಶವು ಸೋಂಕಿಗೆ ಅವಶ್ಯಕವಾಗಿದೆ. ಹಿಮ ಮೂಡುವ ಭತ್ತ ಬೆಳೆಯುವ ಮೇಲ್ಮಟ್ಟದ ಪ್ರದೇಶಗಳಲ್ಲೂ (ರಾತ್ರಿ ಮತ್ತು ಹಗಲಿನ ನಡುವಿನ ಉಷ್ಣತೆಯಲ್ಲಿನ ದೊಡ್ಡ ವ್ಯತ್ಯಾಸದಿಂದ) ಸೋಂಕಿನ ಅಪಾಯವಿದೆ. ಅಂತಿಮವಾಗಿ, ಹೆಚ್ಚಿನ ಸಾರಜನಕ ಅಥವಾ ಕಡಿಮೆ ಸಿಲಿಕಾನ್ ಮಟ್ಟಗಳನ್ನು ಹೊಂದಿರುವ ಮಣ್ಣಿನಲ್ಲಿ ನೆಟ್ಟ ಸಸ್ಯಗಳು, ರೋಗಕ್ಕೆ ಒಳಗಾಗುವ ಸಾಧ್ಯತೆಯಿದೆ.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಅಥವಾ ಪ್ರಮಾಣೀಕೃತ ಬೀಜ ವಸ್ತುಗಳನ್ನು ಬಳಸಿ.
  • ಪ್ರದೇಶದಲ್ಲಿ ಲಭ್ಯವಿರುವ ನಿರೋಧಕ ಪ್ರಭೇದಗಳನ್ನು ನೆಡಿ.
  • ಬೀಜಗಳನ್ನು ಋತುವಿನ ಆರಂಭದಲ್ಲೇ, ಮಳೆಗಾಲ ಆರಂಭವಾದ ನಂತರವೇ ಬಿತ್ತಿ.
  • ಅತಿಯಾದ ಸಾರಜನಕ ರಸಗೊಬ್ಬರ ಬಳಕೆ ತಪ್ಪಿಸಿ ಮತ್ತು ಅದನ್ನು ಎರಡು ಅಥವಾ ಹೆಚ್ಚಿನ ಬಳಕೆಯಾಗಿ ವಿಭಜಿಸಿ.
  • ನಿರಂತರವಾಗಿ ನೀರು ಹಾಕುವ ಮೂಲಕ ಸಸ್ಯಗಳ ಮೇಲೆ ಬರದ ಒತ್ತಡವನ್ನು ತಪ್ಪಿಸಿ.
  • ಭತ್ತ ಸರಿಯಾಗಿ ಬೆಳೆಯಲು ಭತ್ತದ ಗದ್ದೆಯಲ್ಲಿ ಸರಿಯಾದ ಪ್ರಮಾಣದಲ್ಲಿ ನೀರು ನಿಲ್ಲುವಂತೆ ನೋಡಿಕೊಳ್ಳಿ ಮತ್ತು ನೀರು ಹರಿದು ಹೋಗುವುದನ್ನು ತಪ್ಪಿಸಿ.
  • ಕಳೆ ಮತ್ತು ಪರ್ಯಾಯ ಆಶ್ರಯದಾತ ಸಸ್ಯಗಳ ಸಮಯೋಚಿತ ನಿಯಂತ್ರಣ ಮಾಡಿ.
  • ಸಿಲಿಕಾನ್ ಕೊರತೆಯಿರುವ ಮಣ್ಣಾದರೆ ಸಿಲಿಕಾನ್ ರಸಗೊಬ್ಬರಗಳನ್ನು ಹಾಕಿ.
  • ಸಿಲಿಕಾನ್ ನ ಅಗ್ಗದ ಮೂಲವೆಂದರೆ ಹೆಚ್ಚಿನ ಸಿಲಿಕಾನ್ ಅಂಶವನ್ನು ಒಳಗೊಂಡಿರುವ ಭತ್ತದ ಪ್ರಭೇದಗಳ ಒಣ ಹುಲ್ಲುಗಳು.
  • ನಿಮ್ಮ ಗದ್ದೆಯನ್ನು ನಿಯಮಿತವಾಗಿ ಪರಿಶೀಲಿಸಿ.
  • ಜಮೀನಿನಲ್ಲಿ ಶಿಲೀಂಧ್ರ ಸೋಂಕಿನ ಮುಂದುವರಿಕೆಯನ್ನು ತಡೆಗಟ್ಟಲು ಎಲ್ಲಾ ಸೋಂಕಿತ ಸಸ್ಯದ ಅವಶೇಷಗಳನ್ನು ನಾಶಮಾಡಿ.
  • ಕೀಟಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸರಳ ಮತ್ತು ಪರಿಣಾಮಕಾರಿ ಮಾರ್ಗವಾಗಿರುವ ಸರದಿ ಬೆಳೆಯನ್ನು ಯೋಜಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ