ಇತರೆ

ಪೆನ್ಸಿಲಿಯಂ ತೆನೆ ಕೊಳೆತ

Penicillium spp.

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಶಿಲೀಂಧ್ರಗಳು ಜೋಳದ ತೆನೆಗಳನ್ನು ಸೋಂಕಿಗೆ ಒಳಪಡಿಸುತ್ತವೆ.
  • ಪ್ರವೇಶ ಬಿಂದುಗಳು ಕೀಟಗಳಿಂದಾದ ಗಾಯಗಳು ಅಥವಾ ಯಾಂತ್ರಿಕ ಗಾಯಗಳಾಗಿರಬಹುದು.
  • ಜೊಂಡಿನ ಮೇಲ್ಮೈ ಮತ್ತು ಕಾಳಿನಲ್ಲಿ ಬೂದು ಬಣ್ಣದ ಹಸಿರು-ಬೆಳವಣಿಗೆ ಕಾಣುತ್ತದೆ.
  • ಸೋಂಕಿತ ಕಾಳುಗಳು ವಿಶಿಷ್ಟವಾಗಿ ಬಿಳಿಚಿಕೊಂಡಿರುತ್ತವೆ ಮತ್ತು ಆಂತರಿಕವಾಗಿ ಕೊಳೆತಿರುತ್ತವೆ (ನೀಲಿ ಕಣ್ಣು ಎಂದು ಕರೆಯಲಾಗುವ ರೋಗಲಕ್ಷಣ).
  • ಕೆಲವೊಮ್ಮೆ ಈ ಮೋಲ್ಡಿನ ಬೆಳವಣಿಗೆ ಸುಗ್ಗಿಯ ನಂತರ ಅಥವಾ ಶೇಖರಣೆಯ ಸಮಯದಲ್ಲಿ ಮಾತ್ರ ಗೋಚರಿಸುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಇತರೆ

ರೋಗಲಕ್ಷಣಗಳು

ಪೆನ್ಸಿಲಿಯಂ ತೆನೆ ಕೊಳೆತ ವನ್ನು ಸುಗ್ಗಿಯ ನಂತರ ಮೊದಲು ಜೋಳದ ಕಾಳಿನ ಮೇಲೆ ಗಮನಿಸಬಹುದು. ಇದರಿಂದಲೇ ಇದಕ್ಕೆ ಈ ಹೆಸರಿದೆ. ಸಸ್ಯಕ ಹಂತದಲ್ಲಿ ಸೋಂಕಿತವಾದ ಸಸ್ಯಗಳು ಕುಂಠಿತ ಬೆಳವಣಿಗೆ, ಸೊರಗುವಿಕೆ ಮತ್ತು ಹಸಿರು ಬಣ್ಣ ಕಳೆದುಕೊಳ್ಳುವಿಕೆಯನ್ನು ತೋರಿಸುತ್ತವೆ. ನಂತರದ ಹಂತಗಳಲ್ಲಿ, ಶಿಲೀಂಧ್ರಗಳು ತೆನೆಗಳನ್ನು ಸೋಂಕಿತಗೊಳಿಸಬಹುದು. ಕೀಟಗಳಿಂದಾದ ಗಾಯಗಳು ಅಥವಾ ಯಾಂತ್ರಿಕ ಗಾಯಗಗಳು ಸೋಂಕಿಗೆ ಪ್ರವೇಶ ಬಿಂದುಗಳಾಗಿ ಕಾರ್ಯನಿರ್ವಹಿಸುತ್ತವೆ. ಗದ್ದೆಯ ಕೆಲಸ ಅಥವಾ ಸುಗ್ಗಿಯ ಸಮಯದಲ್ಲಿ ಯಾಂತ್ರಿಕ ಗಾಯಗಳು ಉಂಟಾಗಬಹುದು. ಎತ್ತರದ ತಾಪಮಾನಗಳು ಮತ್ತು ಅಧಿಕ ಆರ್ದ್ರತೆಗಳು ಜೊಂಡಿನ ಮೇಲ್ಮೈ ಮತ್ತು ತಿರುಳಿನ ಮೇಲೆ ಬೂದು ನೀಲಿ-ಹಸಿರು ಬೆಳವಣಿಗೆಗೆ ಕಾರಣವಾಗುತ್ತವೆ. ಸೋಂಕು ತಗುಲಿದ ಕಾಳುಗಳು ವಿಶಿಷ್ಟವಾಗಿ ಬಿಳಚುತ್ತವೆ ಮತ್ತು ಗೆರೆಗಳಿಂದ ಕೂಡಿರುತ್ತವೆ ಹಾಗು ಆಂತರಿಕವಾಗಿ ಕೊಳೆಯುತ್ತಿರುತ್ತವೆ ಕೂಡ (ನೀಲಿ ಕಣ್ಣು ಎಂದು ಕರೆಯಲಾಗುವ ರೋಗಲಕ್ಷಣ). ಕೆಲವೊಮ್ಮೆ ಈ ಮೋಲ್ಡಿನ ಬೆಳವಣಿಗೆ ಸುಗ್ಗಿಯ ನಂತರ ಅಥವಾ ಶೇಖರಣೆಯ ಸಮಯದಲ್ಲಿ ಮಾತ್ರ ಗೋಚರಿಸುತ್ತದೆ. ಕೊಳೆಯುತ್ತಿರುವ ಕಾಳುಗಳು ಇಳುವರಿ ಅಥವಾ ನಂತರದ ಸುಗ್ಗಿಯ ನಷ್ಟಗಳಿಗೆ ಕಾರಣವಾಗಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕ್ಷಮಿಸಿ, ಪೆನಿಸಿಲಿಯಂ ಎಸ್ಪಿಪಿಯ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ಗೊತ್ತಿಲ್ಲ. . ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದನ್ನಾದರೂ ನೀವು ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಸಿ. ನಿಮ್ಮ ಪ್ರತಿಕ್ರಿಯೆಗಾಗಿ ನಾವು ಎದುರುನೋಡುತ್ತೇವೆ.

ರಾಸಾಯನಿಕ ನಿಯಂತ್ರಣ

ರಾಸಾಯನಿಕ ನಿಯಂತ್ರಣ ಕ್ರಮಗಳನ್ನು ಆರಿಸಿಕೊಳ್ಳುವುದಕ್ಕೂ ಮುನ್ನ ಯಾವಾಗಲೂ ಸಮಗ್ರ ವಿಧಾನವನ್ನು ಪರಿಗಣಿಸಿ. ನಿಜವಾಗಿಯೂ ಅಗತ್ಯವಿದ್ದರೆ, ಮಂಕೋಜೆಬ್ ಅಥವಾ ಕ್ಯಾಪ್ಟನ್ ಹೊಂದಿರುವ ಶಿಲೀಂಧ್ರನಾಶಕಗಳನ್ನು ಹಾಕಬಹುದು.

ಅದಕ್ಕೆ ಏನು ಕಾರಣ

ಪೆನ್ಸಿಲಿಯಮ್ ಎಸ್ಪಿಪಿ ಶಿಲೀಂಧ್ರವು ಪರಿಸರದಲ್ಲಿ ವಾಯುಗಾಮಿ ಮತ್ತು ಎಲ್ಲೆಡೆ ಇರುತ್ತದೆ. ಅವು ಕಡಿಮೆ ನೀರಿನ ಲಭ್ಯತೆಯಲ್ಲೂ ಬೆಳೆಯುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಮಣ್ಣಿನಲ್ಲಿ ಅಥವಾ ಶೇಖರಣಾ ಸೌಲಭ್ಯಗಳಲ್ಲಿ ಸೋಂಕಿತ ಸಸ್ಯದ ಉಳಿಕೆಗಳಲ್ಲಿ ಬದುಕುಳಿಯುತ್ತದೆ. ಅವು ಸಾಮಾನ್ಯವಾಗಿ ಗಾಳಿ ಮತ್ತು ಮಳೆ ನೀರು ಸಿಡಿಯುವ ಮೂಲಕ ಹರಡುತ್ತವೆ ಮತ್ತು ಗಾಯಗಳ ಮೂಲಕ ತೆನೆಗಳಿಗೆ ಸೋಂಕು ತಗುಲಿಸುತ್ತವೆ. ಅವು ಹೆಚ್ಚಿನ ಆರ್ದ್ರತೆ ಮತ್ತು ಹೆಚ್ಚಿನ ತಾಪಮಾನದಲ್ಲಿ ಬೆಳೆಯುತ್ತವೆ. ಹೆಚ್ಚಾಗಿ ಹೂವು ಮತ್ತು ಹಣ್ಣಿನ ಬೆಳವಣಿಗೆಯ ಸಮಯದಲ್ಲಿ ರೋಗ ಸಾಮಾನ್ಯವಾಗಿದೆ. ಸಂಗ್ರಹಣೆಯ ಸಮಯದಲ್ಲಿ ಮಾತ್ರ ಮೊದಲ ಲಕ್ಷಣಗಳು ಗೋಚರಿಸಬಹುದು.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಸಸ್ಯದಿಂದ ಅಥವಾ ಪ್ರಮಾಣೀಕೃತ ಮೂಲಗಳಿಂದ ಬೀಜಗಳನ್ನು ಬಳಸಿ.
  • ಸಸ್ಯ ನಿರೋಧಕ ಅಥವಾ ಸಹಿಷ್ಣು ಪ್ರಭೇದಗಳನ್ನು ನೆಡಿ.
  • ಕಡಿಮೆ ಮಳೆ ಮತ್ತು ಕಡಿಮೆ ಆರ್ದ್ರತೆಯ ಸಮಯದಲ್ಲಿ ಧಾನ್ಯ ತುಂಬುವಿಕೆ ನಡೆಯುವಂತೆ ಬಿತ್ತನೆ ಸಮಯವನ್ನು ಸರಿಹೊಂದಿಸಿ.
  • ಉತ್ತಮ ಗಾಳಿಗಾಗಿ ಸಸ್ಯಗಳ ನಡುವೆ ಸಾಕಷ್ಟು ಜಾಗವನ್ನು ಬಿಡಿ.
  • ಕಳೆಗಳು ಮತ್ತು ಪರ್ಯಾಯ ಅತಿಥೇಯಗಳಿಂದ ಗದ್ದೆಯನ್ನು ತೆರವುಗೊಳಿಸಿ.
  • ನಿರ್ವಹಣೆಯ ಸಮಯದಲ್ಲಿ ಬೆಳೆಗಳಿಗೆ ಹಾನಿಯಾಗದಂತೆ ಹೆಚ್ಚು ಎಚ್ಚರಿಕೆಯಿಂದಿರಿ.
  • ಹಾನಿ ತಪ್ಪಿಸಲು ಸಾಧ್ಯವಾದಷ್ಟು ಬೇಗ ಉಳುಮೆ ಮಾಡಿ.
  • ಕಾಳುಗಳ ಮೇಲೆ ಶಿಲೀಂಧ್ರಗಳ ಬೆಳವಣಿಗೆಯನ್ನು ತಪ್ಪಿಸಲು ಶೇಖರಣೆಯಲ್ಲಿ 14% ಗಿಂತ ಕಡಿಮೆ ಬೀಜ ತೇವಾಂಶವನ್ನು ಕಾಪಾಡಿಕೊಳ್ಳಿ.
  • ಸೋಂಕಿತ ಧಾನ್ಯಗಳನ್ನು ನಂತರದ ಋತುಗಳಲ್ಲಿ ಬೀಜಗಳಾಗಿ ಬಳಸಬಾರದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ