Helminthosporium solani
ಶಿಲೀಂಧ್ರ
ರೋಗಲಕ್ಷಣಗಳು ಸಾಮಾನ್ಯವಾಗಿ ಕೊಯ್ಲಿನ ಸಮಯದಲ್ಲಿ ಕಂಡುಬರುತ್ತವೆ ಆದರೆ ರೋಗವು ಶೇಖರಣೆಯಲ್ಲಿ ಬೆಳವಣಿಗೆಯಾಗುತ್ತದೆ. ಶೇಖರಣೆಯ ಸಮಯದಲ್ಲಿ, ರೇಖೀಯವಾದ ಕಂದು ಬಣ್ಣದ ಅಂಚಿರುವ ಬೆಳ್ಳಿಯ ಗಾಯಗಳು ಆಲೂಗೆಡ್ಡೆಗಳ ಮೇಲೆ ಕಾಣಿಸುತ್ತವೆ. ಗಾಯಗಳು ನಂತರ ಒಗ್ಗೂಡುತ್ತವೆ ಮತ್ತು ಕಂದು ಬಣ್ಣಕ್ಕೆ ತಿರುಗಬಹುದು, ಅವು ತೊಳೆಯದ ಆಲೂಗಡ್ಡೆಗಳ ಮೇಲೆ ಕಾಣದೇ ಇರಬಹುದು. ವಿವಿಧ ಆಲೂಗಡ್ಡೆ ವೈವಿಧ್ಯತೆಗಳಲ್ಲಿ ಸಿಪ್ಪೆಯು ವಿವಿಧ ರೀತಿಗಯಲ್ಲಿರುವ ಕಾರಣದಿಂದಾಗಿ ಗಾಯಗಳು ವ್ಯಾಪಕವಾಗಿ ಬದಲಾಗುತ್ತವೆ. ಸೋಂಕಿತ ಆಲೂಗಡ್ಡೆಗಳ ಹೊರ ಚರ್ಮದ ಪದರವು ಮೃದುವಾಗುತ್ತದೆ ಮತ್ತು ಸುಕ್ಕುಗಳು ಮೂಡಿ ಅಂತಿಮವಾಗಿ ಸಿಪ್ಪೆ ಕಿತ್ತುಬರುತ್ತದೆ. ಇತರ ರೋಗಕಾರಕಗಳಿಂದ ದ್ವಿತೀಯ ಸೋಂಕುಗಳು ಸಹ ತಗುಲಬಹುದು.
ನೈಸರ್ಗಿಕ ಬಯೋಸೈಡ್ಗಳು (ಹೈಡ್ರೋಜನ್ ಪೆರಾಕ್ಸೈಡ್) ಅಥವಾ ಜೈವಿಕ ಉತ್ಪನ್ನಗಳು (ಬ್ಯಾಸಿಲಸ್ ಸಬ್ಟಿಲಿಸ್, ಲವಂಗ ಎಣ್ಣೆ) ಬೆಳ್ಳಿ ಪೊರೆಯಿಂದ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸ್ವಲ್ಪ ಮಟ್ಟಿಗೆ ಪರಿಣಾಮಕಾರಿತ್ವವನ್ನು ತೋರಿಸಿವೆ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ನಾಟಿ ಮಾಡುವ ಮೊದಲು ಅಥವಾ ಕೊಯ್ಲಿಗೆ ಮುಂಚೆ ಬೀಜ ಆಲೂಗೆಡ್ಡೆಗಳ ಮೇಲೆ ಶಿಲೀಂಧ್ರನಾಶಕಗಳನ್ನು ಹಾಕಿದರೆ ಸೋಂಕನ್ನು ತಡೆಗಟ್ಟಬಹುದು. ಥೈಬೇಂಡಜೋಲ್ ಅನ್ನು, ಗೆಡ್ಡೆಗಳ ಮೇಲೆ ಪುಡಿ ರೀತಿಯಲ್ಲಿ ಬಳಸುವುದರಿಂದ, ಮುಂದಿನ ಋತುವಿನಲ್ಲಿ ಅಥವಾ ಶೇಖರಣೆಯ ಸಮಯದಲ್ಲಿ ಬೆಳ್ಳಿಪೊರೆ ರೋಗದ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ.
ಬೆಳ್ಳಿಪೊರೆ ರೋಗವು ಬೀಜದಿಂದ ಹರಡುವ ಶಿಲೀಂಧ್ರವಾದ ಹೆಲ್ಮಿನ್ಥೋಸ್ಪೋರಿಯಮ್ ಸೊಲಿನಿಯಿಂದ ಉಂಟಾಗುತ್ತದೆ. ಇದು ದೀರ್ಘಕಾಲದವರೆಗೆ ಗೆಡ್ಡೆಗಳಲ್ಲಿ ಇರುತ್ತದೆ ಮತ್ತು ಸಿಪ್ಪೆಕೆ ಸೋಂಕು ಮಾಡುತ್ತದೆ. ಮಣ್ಣಿನ ಮೂಲಕ, ಸೋಂಕಿತ ಬೀಜ ಗೆಡ್ಡೆಗಳು ಅಥವಾ ಶೇಖರಣಾ ಕೊಠಡಿಗಳಲ್ಲಿ ಉಳಿದ ಬೀಜಕಗಳನ್ನು ಬಳಸುವುದರಿಂದ ಸೋಂಕು ಉಂಟಾಗಬಹುದು. ಶೇಖರಣೆಯ ಸಮಯದಲ್ಲಿ ತಾಪಮಾನವು 3 ಡಿಗ್ರಿ ಸೆಲ್ಶಿಯಸ್ ಇದ್ದಾಗ ಮತ್ತು ಆರ್ದ್ರತೆಯು ಶೇ. 90 ಗಿಂತ ಕಡಿಮೆಯಿದ್ದಾಗ ರೋಗದ ಬೆಳವಣಿಗೆಯನ್ನು ತಡೆಗಟ್ಟಬಹುದು. ಶೇಖರಣೆಯ ಸಮಯದಲ್ಲಿ ಗೆಡ್ಡೆಗಳ ಮೇಲೆ ಘನೀಕರಣದ ರಚನೆಯಾದರೆ (ಬೆಚ್ಚಗಿನ ಗಾಳಿಯು ತಣ್ಣನೆಯ ಗೆಡ್ಡೆಗಳನ್ನು ಮುಟ್ಟಿದಾಗ) ಅದು ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ಆಲೂಗಡ್ಡೆ ಇನ್ನೂ ತಿನ್ನಲಾರ್ಹವಾಗಿದ್ದರೂ, ಅವುಗಳ ಮಾರುಕಟ್ಟೆ ಮೌಲ್ಯವು ಗಣನೀಯವಾಗಿ ಕಡಿಮೆಯಾಗುತ್ತದೆ.