Spongospora subterranea
ಶಿಲೀಂಧ್ರ
ಭೂಮಿಯ ಮೇಲೆ ಯಾವುದೇ ರೋಗಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಆಲೂಗಡ್ಡೆ ಗೆಡ್ಡೆಗಳ ಮೇಲೆ ಕಂಡುಬರುವ ಆರಂಭಿಕ ರೋಗಲಕ್ಷಣಗಳೆಂದರೆ, ಚಿಕ್ಕದಾದ, ಕೆನ್ನೀಲಿ-ಕಂದು ಬಣ್ಣದ ಗುಳ್ಳೆಗಳು ಮತ್ತು ಅವು ಗಾತ್ರದಲ್ಲಿ ನಿಧಾನವಾಗಿ ಹೆಚ್ಚಾಗುತ್ತವೆ. ನಂತರ ಅವು ಒಡೆಯುತ್ತವೆ, ಆಲೂಗಡ್ಡೆಯ ಸಿಪ್ಪೆಯನ್ನು ಸೀಳುತ್ತವೆ ಮತ್ತು ಆಲೂಗೆಡ್ಡೆ ಗೆಡ್ಡೆಗಳ ಸಿಪ್ಪೆಗಳಿಂದ ಗಾಢ ಕಂದು ಬಣ್ಣದ ಪುಡಿ ರೀತಿಯ ವಸ್ತು ಹೊರಬರುತ್ತದೆ. ಸ್ಕ್ಯಾಬ್ ಎಂದು ಕರೆಯಲ್ಪಡುವ ಬೆಂಡಾದ ಆಳವಿಲ್ಲದ ಗುರುತುಗಳು ಕಾಣಿಸಿಕೊಳ್ಳುತ್ತವೆ. ಹೆಚ್ಚಿನ ತೇವಾಂಶವಿರುವ ಮಣ್ಣುಗಳಲ್ಲಿ, ಗಾಯಗಳು ಒಳಮುಖವಾಗಿ ಹರಡಿ ಆಳವಾದ ಗುಂಡಿಗಳನ್ನು ರಚಿಸುತ್ತವೆ ಮತ್ತು ಒಳಗಿನ ಅಂಗಾಂಶಗಳನ್ನು ನಾಶಮಾಡುತ್ತವೆ. ಊತಗಳು ಮತ್ತು ಗುಳ್ಳೆಗಳು ಹರಡುತ್ತವೆ, ಮತ್ತು ವಿರೂಪಗೊಂಡ ಆಲೂಗಡ್ಡೆಗಳನ್ನು ಮಾರುಕಟ್ಟೆಯಲ್ಲಿ ಮಾರಲಾಗುವುದಿಲ್ಲ. ಶೇಖರಣೆಯ ಸಮಯದಲ್ಲಿ ವೈಪರೀತ್ಯಗಳು ಹೆಚ್ಚಾಗುತ್ತಾ ಹೋಗುತ್ತವೆ.
ಈ ರೋಗಕಾರಕದ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆ ಲಭ್ಯವಿಲ್ಲ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಮೆಟಾಮ್ ಸೋಡಿಯಂ ಅಥವಾ ಫ್ಲಝಿನಾಮ್ ಗಳನ್ನು ಉಪಯೋಗಿಸಿ ಮಣ್ಣನ್ನು ನಾಟಿಗೆ ಮೊದಲೇ ಸಂಸ್ಕರಿಸಿದರೆ, ಅವು ಕೆಲವು ಸಂದರ್ಭಗಳಲ್ಲಿ ಚೆನ್ನಾಗಿ ಕೆಲಸ ಮಾಡುತ್ತವೆ ಮತ್ತು ಇದು ಸಾಮಾನ್ಯವಾಗಿ ಪರಿಸರದ ಸ್ಥಿತಿಗಳನ್ನು ಅವಲಂಬಿಸಿರುತ್ತದೆ.
ಪೌಡರಿ ಸ್ಕ್ಯಾಬ್ ರೋಗವು ಮಣ್ಣಿನಿಂದ ಹರಡುವ ರೋಗಕಾರಕವೊಂದರಿಂದ ಉಂಟಾಗುತ್ತದೆ ಮತ್ತು ಇದು ಮಣ್ಣಿನಲ್ಲಿ ಸುಮಾರು 6 ವರ್ಷಗಳ ವರೆಗೆ ಬದುಕುಳಿಯಬಲ್ಲದು. ತಣ್ಣನೆಯ ತಾಪಮಾನದಲ್ಲಿ (12 ರಿಂದ 18 °C) ಮತ್ತು ಗಟ್ಟಿ, ಆಮ್ಲೀಯ ಮಣ್ಣುಗಳಲ್ಲಿ ನೀರು ನಿಲ್ಲುವುದು ಸಾಮಾನ್ಯವಾದ್ದರಿಂದ, ಅಂತಹ ಪರಿಸ್ಥಿತಿಗಳಲ್ಲಿ ಈ ರೋಗವು ಸಾಮಾನ್ಯವಾಗಿರುತ್ತದೆ. ಪರ್ಯಾಯವಾಗಿ, ತೇವವಾದ ಮತ್ತು ಶುಷ್ಕ ವಾತಾವರಣಗಳೂ ಸಹ ಈ ರೋಗದ ಬೆಳವಣಿಗೆಗೆ ಅನುಕೂಲಕರವಾಗಿರುತ್ತದೆ. ಸೋಂಕಿತ ಬೀಜ ಗೆಡ್ಡೆಗಳು, ಬಟ್ಟೆ, ಉಪಕರಣಗಳು ಅಥವಾ ಗೊಬ್ಬರವು ರೋಗಕಾರಕದ ವಾಹಕಗಳಾಗಿರಬಹುದು. ಗುಪಟೆ, ಕಣ್ಣುಗಳು ಅಥವಾ ಗೆಡ್ಡೆಗಳ ಗಾಯಗಳ ಮೂಲಕ ಗೆಡ್ಡೆ ಹುಟ್ಟುವ ಸಮಯದಲ್ಲಿ ಸೋಂಕಾಗುತ್ತದೆ. ರುಸೆಟ್ ಆಲೂಗೆಡ್ಡೆ ಪ್ರಭೇದಗಳು ಈ ಹಾನಿಯ ರೋಗಲಕ್ಷಣಗಳನ್ನು ಅಷ್ಟಾಗಿ ತೋರುವುದಿಲ್ಲ. ಪೌಡರಿ ಸ್ಕ್ಯಾಬ್ ರೋಗವು ಸೋಲಾನೇಸಸ್ ಕುಟುಂಬದ ಅನೇಕ ತರಕಾರಿಗಳಿಗೆ ಸೋಂಕುಂಟುಮಾಡಬಹುದು.