ಆಲೂಗಡ್ಡೆ

ಆಲೂಗೆಡ್ಡೆಯ ಲೇಟ್ ಬ್ಲೈಟ್

Phytophthora infestans

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳ ಸುಳಿವುಗಳು ಮತ್ತು ಅಂಚಿನಲ್ಲಿ ಗಾಢ ಕಂದು ಬಣ್ಣದ ಕಲೆಗಳು.
  • ಬಿಳಿ ಬಣ್ಣದ ಶಿಲೀಂಧ್ರಗಳ ಕವಚವು ಎಲೆ ದಳದ ಕೆಳಭಾಗದಲ್ಲಿ ಬೆಳೆಯುತ್ತದೆ.
  • ಎಲೆಗಳು ಸೊರಗುತ್ತವೆ ಮತ್ತು ಸಾಯುತ್ತವೆ.
  • ಆಲೂಗಡ್ಡೆ ಗೆಡ್ಡೆಗಳ ಮೇಲೆ ಬೂದು-ನೀಲಿ ಕಲೆಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಆಲೂಗಡ್ಡೆ

ರೋಗಲಕ್ಷಣಗಳು

ಗಾಢ ಕಂದು ಬಣ್ಣದ ಚುಕ್ಕೆಗಳು ಎಲೆಗಳ ತುದಿ ಅಥವಾ ಎಲೆ ಅಂಚುಗಳಲ್ಲಿ ಪ್ರಾರಂಭವಾಗಿ ಸಂಪೂರ್ಣ ಎಲೆಯ ಮೇಲೆ ಬೆಳೆಯುತ್ತವೆ. ಆರ್ದ್ರ ವಾತಾವರಣದಲ್ಲಿ, ಈ ಕಲೆಗಳು ನೀರಿನಲ್ಲಿ ನೆನೆಸಿದ ಗಾಯಗಳಾಗಿ ಮಾರ್ಪಡುತ್ತವೆ. ಎಲೆಗಳ ಕೆಳಭಾಗದಲ್ಲಿ ಬಿಳಿ ಬಣ್ಣದ ಶಿಲೀಂಧ್ರದ ಕವಚವನ್ನು ಕಾಣಬಹುದು. ರೋಗವು ಮುಂದುವರೆದಂತೆ, ಇಡೀ ಎಲೆಗಳು ನೆಕ್ರೋಟಿಕ್ ಆಗುತ್ತವೆ, ಕಂದು ಬಣ್ಣಕ್ಕೆ ತಿರುಗಿ ಸಾಯುತ್ತವೆ. ಕಾಂಡಗಳು ಮತ್ತು ತೊಟ್ಟುಗಳಲ್ಲಿ ಇದೇ ರೀತಿಯ ಗಾಯಗಳು ಬೆಳೆಯುತ್ತವೆ. ಆಲೂಗಡ್ಡೆ ಗೆಡ್ಡೆಗಳ ಸಿಪ್ಪೆಯ ಮೇಲೆ ಬೂದು-ನೀಲಿ ಕಲೆಗಳಿರುತ್ತವೆ ಮತ್ತು ಅವುಗಳ ತಿರುಳು ಕಂದು ಬಣ್ಣಕ್ಕೆ ತಿರುಗುತ್ತದೆ, ಇದರಿಂದಾಗಿ ಅವುಗಳನ್ನು ಸೇವಿಸಲಾಗದಂತೆ ಆಗುತ್ತದೆ. ಸೋಂಕಿತ ಜಾಗಗಳು ಕೊಳೆತರೆ ವಿಶಿಷ್ಟವಾದ ವಾಸನೆಯನ್ನು ನೀಡುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಒಣ ಹವಾಮಾನದ ಮೊದಲು ತಾಮ್ರ ಆಧಾರಿತ ಶಿಲೀಂಧ್ರನಾಶಕಗಳನ್ನು ಹಾಕಿ. ಸಾವಯವ ಲೇಪನ ಏಜೆಂಟ್ಗಳನ್ನು ಎಲೆಗಳ ಮೇಲೆಸಿಂಪಡಿಸಿದರೆ ಅದು ಸೋಂಕನ್ನು ತಡೆಗಟ್ಟಬಹುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಶಿಲೀಂಧ್ರನಾಶಕ ಅನ್ವಯಿಕೆಗಳು ಲೇಟ್ ಬ್ಲೈಟ್ಅನ್ನು ನಿಯಂತ್ರಿಸಲು, ವಿಶೇಷವಾಗಿ ಆರ್ದ್ರ ಪ್ರದೇಶಗಳಲ್ಲಿ, ಮುಖ್ಯವಾಗಿರುತ್ತವೆ. ಸೋಂಕು ತಗುಲುವದಕ್ಕಿಂತ ಮುಂಚೆ ಸಂಪರ್ಕ ಶಿಲೀಂಧ್ರನಾಶಕಗಳನ್ನು ಹಾಕುವುದರಿಂದ ಮತ್ತು, ಅವುಗಳು ಎಲೆಗಳ ಮೇಲೆ ಲೇಪನವಾಗುವುದರಿಂದ ಪರಿಣಾಮಕಾರಿಯಾಗಿರುತ್ತವೆ ಮತ್ತು ಶಿಲೀಂಧ್ರಗಳು ಇದಕ್ಕೆ ಪ್ರತಿರೋಧವನ್ನು ಬೆಳೆಸಿಕೊಳ್ಳುವುದಿಲ್ಲ. ಮ್ಯಾಂಡಿಪ್ರೊಪಾಮಿಡ್, ಕ್ಲೋರೊಥಲೋನಿಲ್, ಫ್ಲುಝಿನಾಮ್, ಟ್ರೈಫೆನಿಲ್ಟಿನ್, ಅಥವಾ ಮನ್ಕೊಜೆಬ್ಗಳನ್ನು ಹೊಂದಿರುವ ಶಿಲೀಂಧ್ರನಾಶಕಗಳನ್ನು ಸಹ ತಡೆಗಟ್ಟುವ ಚಿಕಿತ್ಸೆಯಾಗಿ ಬಳಸಬಹುದು. ಮಂಕೋಜೆಬ್ ನಂತಹ ಶಿಲೀಂಧ್ರನಾಶಕಗಳ ಜೊತೆಯಲ್ಲಿ ಬಿತ್ತನೆ ಮಾಡುವ ಮೊದಲು ಬೀಜ ಚಿಕಿತ್ಸೆ ಸಹ ಕೆಲಸ ಮಾಡುತ್ತದೆ.

ಅದಕ್ಕೆ ಏನು ಕಾರಣ

ಈ ಶಿಲೀಂಧ್ರವು ಕಡ್ಡಾಯ ಪರಾವಲಂಬಿಯಾಗಿದೆ. ಇದರರ್ಥ ಅವು ಬದುಕಲು ಸಸ್ಯದ ಉಳಿಕೆಗಳು ಮತ್ತು ಗೆಡ್ಡೆಗಳು ಮತ್ತು ಪರ್ಯಾಯವಾದ ಅತಿಥೇಯಗಳ ಮೇಲೆ ಚಳಿಗಾಲವನ್ನು ಕಳೆಯಬೇಕಾಗುತ್ತದೆ. ಇದು ಸಿಪ್ಪೆಯಲ್ಲಿನ ಗಾಯಗಳು ಮತ್ತು ಕತ್ತರಿಸಿದ ಭಾಗಗಳ ಮೂಲಕ ಸಸ್ಯವನ್ನು ಪ್ರವೇಶಿಸುತ್ತದೆ. ಶಿಲೀಂಧ್ರದ ಬೀಜಕಗಳು ವಸಂತಕಾಲದಲ್ಲಿ ಹೆಚ್ಚಿನ ತಾಪಮಾನದಲ್ಲಿ ಕುಡಿಯೊಡೆಯುತ್ತವೆ ಮತ್ತು ಗಾಳಿ ಅಥವಾ ನೀರಿನಿಂದ ಹರಡುತ್ತವೆ. ತಂಪಾದ ರಾತ್ರಿಗಳು (18 °C ಗಿಂತಕಡಿಮೆ), ಬೆಚ್ಚಗಿನ ದಿನಗಳು (18 ಮತ್ತು 22 °C ನಡುವೆ), ಮತ್ತು ಮಳೆ ಮತ್ತು ಮಂಜು (90% ಸಾಪೇಕ್ಷ ಆರ್ದ್ರತೆ) ಮುಂತಾದ ವಿಸ್ತೃತ ಆರ್ದ್ರ ಪರಿಸ್ಥಿತಿಗಳಲ್ಲಿ ಈ ರೋಗವು ಹೆಚ್ಚು ತೀವ್ರವಾಗಿರುತ್ತದೆ. ಈ ಸ್ಥಿತಿಯಲ್ಲಿ, ತಡವಾದ ರೋಗ ಸೋಂಕುಗಳು ಉಂಟಾಗಬಹುದು.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಬೀಜಗಳನ್ನು ಅಥವಾ ಹೆಚ್ಚು ಸಹಿಷ್ಣು ಸಸ್ಯಗಳನ್ನು ಬಳಸಿ.
  • ಹೊಲವು ಉತ್ತಮ ಗಾಳಿ ಮತ್ತು ಚೆನ್ನಾಗಿ ಬರಿದುಹೋದ ಮಣ್ಣನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳಿ.
  • ಹೊಲವನ್ನು ಆಗಾಗ್ಗೆ ಪರಿಶೀಲಿಸಿ ಮತ್ತು ಸೋಂಕಿತ ಸಸ್ಯಗಳು ಮತ್ತು ಸುತ್ತಮುತ್ತಲಿರುವುದನ್ನು ತೆಗೆದುಹಾಕಿ.
  • ರೋಗಕ್ಕೆ ಸೂಕ್ಶ್ಃಮವಲ್ಲದ ಬೆಳೆಗಳೊಂದಿಗೆ ಎರಡು ಮೂರು ವರ್ಷಗಳ ಕಾಲ ಸರದಿ ಬೆಳೆ ಮಾಡಿ.
  • ಹೊಲದ ಸುತ್ತ ಮುತ್ತಲಿರುವ ತಾನಾಗೇ ಬೆಳೆದ ಹೋಸ್ಟ್ ಬೆಳೆಗಳನ್ನು ನಾಶಮಾಡಿ.
  • ಸಾರಜನಕದಿಂದ ಅತಿಯಾದ ಫಲೀಕರಣವನ್ನು ತಪ್ಪಿಸಿ.
  • ಸಸ್ಯ ರಕ್ಷಕಗಳನ್ನು ಬಳಸಿ.
  • ಕಡಿಮೆ ತಾಪಮಾನದಲ್ಲಿ ಮತ್ತು ಉತ್ತಮ ಗಾಳಿಗಳೊಂದಿಗೆ ಗೆಡ್ಡೆಗಳನ್ನು ಶೇಖರಣೆ ಮಾಡಿ.
  • ಕೊಯ್ಲು ಮಾಡಿದ ನಂತರ ಗೆಡ್ಡೆಗಳು ಮತ್ತು ಗಿಡಗಳ ಉಳಿಕೆಗಳನ್ನು ನಾಶಮಾಡಿ ಅವುಗಳನ್ನು ಎರಡು ಅಡಿ ಆಳದಲ್ಲಿ ಹೂತು ಹಾಕಿ ಅಥವಾ ಪ್ರಾಣಿಗಳಿಗೆ ಆಹಾರವಾಗಿ ನೀಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ