ಸೌತೆಕಾಯಿ

ಸೌತೆಕಾಯಿಯ ಹಕ್ಕಳೆ ರೋಗ

Cladosporium cucumerinum

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಸಣ್ಣ, ನೀರಿನಲ್ಲಿ-ನೆನೆಸಿದಂತಹ ಅಥವಾ ತಿಳಿ ಹಸಿರು ಬಣ್ಣದ ಕಲೆಗಳು ಉಂಟಾಗುತ್ತವೆ.
  • ಇವು ನಂತರ ಒಣಗಿ, ಚಿಂದಿಯಂತಹ ರಂಧ್ರಗಳನ್ನು ಉಳಿಸುತ್ತವೆ.
  • ಸಣ್ಣ, ಬೂದು ಬಣ್ಣದ, ಅಂಟು ಸ್ರವಿಸುವ ಕಲೆಗಳು ಹಣ್ಣುಗಳ ಮೇಲೆ ಕಾಣಿಸಿಕೊಳ್ಳುತ್ತವೆ.
  • ಇವು ನಂತರ ಕುಳಿಗಳನ್ನು ಸೃಷ್ಟಿಸುತ್ತವೆ.
  • ದ್ವಿತೀಯ ಬ್ಯಾಕ್ಟೀರಿಯಾ ಸೋಂಕಿನಿಂದಾಗಿ ಹಣ್ಣು ಕೊಳೆಯುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸೌತೆಕಾಯಿ

ರೋಗಲಕ್ಷಣಗಳು

ಎಲೆಯ ಮೇಲೆ ರೋಗಲಕ್ಷಣಗಳು ಸಣ್ಣ, ಹಲವಾರು, ನೀರಿನಲ್ಲಿ-ನೆನೆಸಿದಂತಹ ಅಥವಾ ತಿಳಿ ಹಸಿರು ಬಣ್ಣದ ಕಲೆಗಳಂತೆ ಕಾಣಿಸುತ್ತವೆ. ಇವು ಕ್ರಮೇಣ ಒಣಗಿ ಸಾಯುತ್ತದೆ, ಬಿಳಿ ಬಣ್ಣ ಅಥವಾ ಬೂದು ಬಣ್ಣಕ್ಕೆ ತಿರುಗಿ ಕ್ರಮೇಣ ಕೋನೀಯವಾಗಿ ಮಾರ್ಪಡುತ್ತವೆ. ಸಾಮಾನ್ಯವಾಗಿ, ಈ ಕಲೆಗಳು ಹಳದಿ ವೃತ್ತದಿಂದ ಸುತ್ತುವರಿದಿರುತ್ತದೆ. ಅವುಗಳ ಕೇಂದ್ರವು ಹರಿದು ಹೋಗಿ ಎಲೆಗಳಲ್ಲಿ ಚಿಂದಿಯಂತಹ ರಂಧ್ರಗಳನ್ನು ಉಳಿಸುತ್ತವೆ. ಸೋಂಕಿತ ಹಣ್ಣುಗಳ ಮೇಲೆ ತೀವ್ರವಾದ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಮತ್ತು ಕೀಟ ಕಡಿತದಂತಹ ಗಾಯಗಳನ್ನು ಹೋಲುತ್ತವೆ. ಸಣ್ಣ (ಸುಮಾರು 3 ಮಿಮೀ), ಬೂದು ಬಣ್ಣದ, ಸ್ವಲ್ಪ ಗುಳಿಬಿದ್ದಂತಹ, ಅಂಟು-ಜಿನುಗಿಸುವ ಕಲೆಗಳು ಮೊದಲಿಗೆ ಕಾಣಿಸಿಕೊಳ್ಳುತ್ತವೆ. ಇವು ನಂತರ, ದೊಡ್ಡದಾಗುತ್ತವೆ ಮತ್ತು ಅಂತಿಮವಾಗಿ ವಿಶಿಷ್ಟ ಗುಳಿಬಿದ್ದ ಕುಳಿಗಳು ಅಥವಾ ಹಕ್ಕಳೆಗಳಂತೆ ಮಾರ್ಪಡುತ್ತವೆ. ಬಾಧಿತ ಹಣ್ಣುಗಳು ಸಾಮಾನ್ಯವಾಗಿ ಅವಕಾಶವಾದಿ ರೋಗಕಾರಕಗಳ ಆಕ್ರಮಣಕ್ಕೆ ಒಳಗಾಗುತ್ತವೆ. ಉದಾಹರಣೆಗೆ ಮೆತ್ತನೆಯ, ಕೆಟ್ಟ ವಾಸನೆಯ ಕೊಳೆತವನ್ನು ಉತ್ಪತ್ತಿ ಮಾಡುವ ಸಾಫ್ಟ್ ರಾಟಿಂಗ್ ಬ್ಯಾಕ್ಟೀರಿಯಾಗಳು. ಹೆಚ್ಚು ನಿರೋಧಕ ಹಣ್ಣುಗಳಲ್ಲಿ, ವಿಶೇಷವಾಗಿ ಕೆಲವು ಸಿಹಿಕುಂಬಳ ಮತ್ತು ಸ್ಕ್ಯಾಶ್ ಗಳಲ್ಲಿ ಅನಿಯಮಿತ, ಗಂಟು-ರೀತಿಯ ರಚನೆಗಳು ಬೆಳೆಯಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸೌತೆಕಾಯಿ ಹಕ್ಕಳೆ ರೋಗಕ್ಕೆ ನೇರ ಜೈವಿಕ ಚಿಕಿತ್ಸೆ ಇಲ್ಲ. ಪ್ರಮಾಣೀಕೃತ ಸಾವಯವವಾಗಿರುವ ತಾಮ್ರ-ಅಮೋನಿಯಮ್ ಸಂಯುಕ್ತವನ್ನು ಆಧರಿಸಿದ ಶಿಲೀಂಧ್ರನಾಶಕಗಳನ್ನು ಬಳಸಿ ರೋಗಕಾರಕದ ಹರಡುವಿಕೆಯನ್ನು ನಿಧಾನಗೊಳಿಸಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ , ಜೈವಿಕ ಚಿಕಿತ್ಸೆಗಳ ಜೊತೆ ತಡೆಗಟ್ಟುವ ಕ್ರಮಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಕ್ಲೋರೊಥಲೋನಿಲ್ ಒಳಗೊಂಡಿರುವ ಅಥವಾ ತಾಮ್ರ-ಅಮೋನಿಯಮ್ ಸಂಯುಕ್ತವನ್ನು ಆಧರಿಸಿದ ಶಿಲೀಂಧ್ರನಾಶಕಗಳನ್ನು ಬಳಸಿ. ರೋಗಕಾರಕವನ್ನು ತೊಡೆದುಹಾಕಲು ಬೀಜಗಳನ್ನು 0.5% ಸೋಡಿಯಂ ಹೈಪೊಕ್ಲೋರೈಟ್ ಅಲ್ಲಿ 10 ನಿಮಿಷಗಳ ಕಾಲ ನೆನೆಸುವ ಮೂಲಕ ಮೇಲ್ಮೈಯನ್ನು ಸೋಂಕುರಹಿತವಾಗಿಸಬಹುದು. ಡಿಥಿಯೋಕಾರ್ಬಮೇಟ್ಸ್, ಮನೆಬ್, ಮನ್ಕೊಜೆಬ್, ಮೆಟಿರಾಮ್, ಕಪ್ಟಾಫೋಲ್, ಕ್ಲೋರೊಥಲೋನಿಲ್ ಮತ್ತು ಅನೈಲಜೈನ್ ಗಳನ್ನು ಒಳಗೊಂಡಿರುವ ಶಿಲೀಂಧ್ರನಾಶಕಗಳು ಸಿ ಕ್ಯುಕುಮೆರಿನಮ್ ವಿರುದ್ಧ ಪರಿಣಾಮಕಾರಿಯಾಗಿವೆ.

ಅದಕ್ಕೆ ಏನು ಕಾರಣ

ಮಣ್ಣಿನಲ್ಲಿನ ಬಿರುಕುಗಳಲ್ಲಿ ಅಥವಾ ಸೋಂಕಿತ ಬೀಜಗಳಲ್ಲಿ ಅಥವಾ ಸಸ್ಯದ ಉಳಿಕೆಗಳಲ್ಲಿ ಪ್ರತಿಕೂಲ ಕಾಲವನ್ನು ಕಳೆಯುವ ಕ್ಲ್ಯಾಡೋಸ್ಪೊರಿಯಮ್ ಕ್ಯುಕುಮೆರಿನಮ್ ಎಂಬ ಶಿಲೀಂಧ್ರದಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಆರಂಭಿಕವಾಗಿ ವಸಂತ ಋತುವಿನಲ್ಲಿ ಸೋಂಕು ಈ ಯಾವುದೇ ಮೂಲಗಳಿಂದ ಬರಬಹುದು. ಶಿಲೀಂಧ್ರವು ಬೀಜಕ-ಉತ್ಪಾದಿಸುವ ರಚನೆಗಳನ್ನು ಬೆಳೆಸಿಕೊಳ್ಳುತ್ತದೆ ಮತ್ತು ಬೀಜಕಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ. ಕೀಟಗಳು, ಬಟ್ಟೆ ಅಥವಾ ಉಪಕರಣಗಳ ಮೂಲಕ ಬೀಜಕಗಳನ್ನು ಹರಡುತ್ತವೆ ಅಥವಾ ತೇವಾಂಶದ ಗಾಳಿಯ ಮೂಲಕ ದೂರದವರೆಗೂ ಹರಡುತ್ತದೆ. ಹೆಚ್ಚಿನ ಗಾಳಿಯ ಆರ್ದ್ರತೆ ಮತ್ತು ಮಧ್ಯಮ ತಾಪಮಾನಗಳು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತವೆ. 17 °C ಮತ್ತು ಸುಮಾರು 12-25 °C ನಡುವಿನ ತಾಪಮಾನ, ತೇವಾಂಶವುಳ್ಳ ಹವಾಮಾನ, ನಿಯಮಿತವಾದ ಮಂಜು, ಹಿಮ, ಅಲ್ಪ ಮಳೆ, ಶಿಲೀಂಧ್ರದ ಬೆಳವಣಿಗೆಗೆ ಹೆಚ್ಚು ಅನುಕೂಲಕರವಾಗಿರುತ್ತದೆ. ಶಿಲೀಂಧ್ರಗಳು ಸಸ್ಯ ಅಂಗಾಂಶಗಳ ಒಳಹೊಕ್ಕ ನಂತರ 3 ರಿಂದ 5 ದಿನಗಳೊಳಗೆ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಸಸ್ಯಗಳಿಂದ ಅಥವಾ ಪ್ರಮಾಣೀಕೃತ ಮೂಲಗಳಿಂದ ಮಾತ್ರ ಬೀಜಗಳನ್ನು ಬಳಸಿ.
  • ಲಭ್ಯವಿದ್ದರೆ ಬೇಗ ಚೇತರಿಸಿಕೊಳ್ಳಬಲ್ಲ ಪ್ರಬಲ ಸಸ್ಯ ಪ್ರಭೇದಗಳನ್ನು ನೆಡಿ.
  • ನಿಮ್ಮ ಕೃಷಿಗಾಗಿ ಚೆನ್ನಾಗಿ ನೀರು ಬಸಿದು ಹೋಗಿರುವ ಭೂಮಿಗಳನ್ನು ಆಯ್ಕೆಮಾಡಿ.
  • ವಸಂತ ಋತುವಿನ ಕೊನೆಯಲ್ಲಿ, ಬೇಸಿಗೆಯಲ್ಲಿ ಮತ್ತು ಶರತ್ಕಾಲದ ಆರಂಭದಲ್ಲಿ ಕುಕುರ್ಬಿಟ್ ಜಾತಿಯ ಬೆಳೆಗಳನ್ನು ಬೆಳೆಯಿರಿ.
  • ಉಷ್ಣಾಂಶ ಹೆಚ್ಚಿದ್ದಾಗ ಹಕ್ಕಳೆಗಳ ರಚನೆ ಆಗುವುದಿಲ್ಲ.
  • ಮೆಕ್ಕೆ ಜೋಳದಂತಹ ಆಶ್ರಯದಾತವಲ್ಲದ ಬೆಳೆಗಳನ್ನು ಸರದಿ ಬೆಳೆಯಾಗಿ ಬೆಳೆಯಿರಿ.
  • (2 ಅಥವಾ ಹೆಚ್ಚಿನ ವರ್ಷಗಳು).
  • ಕಳೆಗಳನ್ನು ಮತ್ತು ತಾವಾಗೇ ಹುಟ್ಟಿಕೊಳ್ಳುವ ಕುಕುರ್ಬಿಟ್ ಜಾತಿಯ ಸಸ್ಯಗಳನ್ನು ನಿಯಂತ್ರಿಸಿ.
  • ಸಸ್ಯಗಳು ಮಳೆ ಅಥವಾ ಹಿಮದಿಂದ ತೇವವಾಗಿದ್ದಾಗ ಅಲ್ಲಿ ಕೆಲಸ ಮಾಡಬೇಡಿ.
  • ತೇವಾಂಶವನ್ನು ತಗ್ಗಿಸಲು ಸಸ್ಯಗಳ ನಡುವೆ ಸಾಕಷ್ಟು ಸ್ಥಳಾವಕಾಶ ಮತ್ತು ಗಾಳಿಯಾಡಲು ಆವಕಾಶ ಇರುವಂತೆ ನೋಡಿಕೊಳ್ಳಿ.
  • ಹೆಚ್ಚು ನೀರು ಹಾಕಬೇಡಿ ಮತ್ತು ತುಂತುರು ನೀರಾವರಿ ತಪ್ಪಿಸಿ.
  • ರೋಗಲಕ್ಷಣಗಳಿಗಾಗಿ ನಿಯಮಿತವಾಗಿ ಬೆಳೆಗಳನ್ನು ಪರಿಶೀಲಿಸಿ.
  • ಸೋಂಕು ತಗುಲಿದ ಸಸ್ಯಗಳು ಮತ್ತು ಸಸ್ಯದ ಉಳಿಕೆಗಳನ್ನು ತೆಗೆದುಹಾಕಿ ಮತ್ತು ನಾಶಗೊಳಿಸಿ ( ಸುಟ್ಟು ಬಿಡಿ ಅಥವಾ ಹೂತು ಬಿಡಿ).
  • ಕುಕುರ್ಬಿಟ್ ಬೆಳೆಗಳನ್ನು ಬೆಳೆಯಲು ಮತ್ತು ಅದರ ಕೊಯ್ಲಿಗೆ ಬಳಸುವ ಹೂವಿನ ಪೆಟ್ಟಿಗೆಗಳು ಮತ್ತು ಕುಂಡಗಳು ಮಾತ್ರವಲ್ಲದೆ ಇತರ ಉಪಕರಣಗಳು ಮತ್ತು ವಸ್ತುಗಳು ಸೋಂಕು ಮುಕ್ತವಾಗಿರುವಂತೆ ನೋಡಿಕೊಳ್ಳಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ