Ustilago maydis
ಶಿಲೀಂಧ್ರ
ಈ ಶಿಲೀಂಧ್ರದಿಂದ ಸಸ್ಯದ ಎಲ್ಲಾ ಸಕ್ರಿಯವಾಗಿ ಬೆಳೆಯುತ್ತಿರುವ ಭಾಗಗಳಿಗೆ ಸೋಂಕಾಗಬಹುದು. ಗಾಯಗಳಿಗೆ ತುತ್ತಾಗುವಂತಹ ಅವುಗಳ ಪ್ರವೃತ್ತಿ ಮತ್ತು ಅವುಗಳ ಬೆಳವಣಿಗೆಯ ಸಾಧ್ಯತೆಯ ಕಾರಣದಿಂದ ಅವುಗಳಿಂದ ಬರುವ ರೋಗಲಕ್ಷಣಗಳು ಅತ್ಯಂತ ಅನಿರೀಕ್ಷಿತವಾಗಿರುತ್ತವೆ. ಸಸಿ ಹಂತದಲ್ಲಿರುವ ಸಸ್ಯಗಳು ಈ ಸೋಂಕಿಗೆ ಬೇಗ ತುತ್ತಾಗುತ್ತವೆ. ಆ ಸಂದರ್ಭದಲ್ಲಿ, ಸಸ್ಯದ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಮತ್ತು ಅವು ಹೂಗೊಂಚಲು ಅಥವಾ ತೆನೆಗಳನ್ನು ಉತ್ಪತ್ತಿ ಮಾಡದಿರಬಹುದು. ಹಳೆಯ ಸಸ್ಯಗಳಲ್ಲಿ, ಸೋಂಕಿನ ಕಾರಣದಿಂದ, ಹೋಸ್ಟ್ ಮತ್ತು ಶಿಲೀಂಧ್ರಗಳ ಅಂಗಾಂಶಗಳ ಸಂಯೋಜನೆಯಿಂದ ಗೆಡ್ಡೆಗಳು ಹುಟ್ಟಿಕೊಳ್ಳುತ್ತವೆ. ಸ್ಮಟ್ ಗೆಡ್ಡೆಗಳು ತಮ್ಮ ಆರಂಭಿಕ ಹಂತಗಳಲ್ಲಿ ಹಸಿರು ಮಿಶ್ರಿತ ಬಿಳಿ ಬಣ್ಣದ್ದಾಗಿರುತ್ತವೆ ಮತ್ತು ಅವು ಬೆಳೆದಂತೆ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಅವು ವಿಶೇಷವಾಗಿ ತೆನೆಗಳ ಮೇಲೆ ವಿಶಿಷ್ಟ ಲಕ್ಷಣವನ್ನು ತೋರುತ್ತವೆ, ಅಲ್ಲಿ ಪ್ರತಿಯೊಂದು ಕಾಳುಗಳ ಮೇಲೂ ಒಂದು ಗೆಡ್ಡೆ ಬೆಳೆಯುವ ಸಾಧ್ಯತೆಯಿದೆ. ಅವು ಒಡೆದಾಗ, ಅವು ಪುಡಿ ರೀತಿಯ ಕಪ್ಪು ವಸ್ತುವನ್ನು ಹೊರಹಾಕುತ್ತವೆ. ಎಲೆಗಳ ಮೇಲೆ ಬೆಳೆಯುವ ಗೆಡ್ಡೆಯು ಸಾಮಾನ್ಯವಾಗಿ ಚಿಕ್ಕದಾಗಿರುತ್ತವೆ ಮತ್ತು ಒಡೆಯದೆ ಒಣಗಿಹೋಗುತ್ತವೆ.
ಶಿಲೀಂಧ್ರದ ನೇರ ನಿಯಂತ್ರಣ ಕಷ್ಟವಾಗಿದ್ದು, ಇಲ್ಲಿಯವರೆಗೆ ಈ ರೋಗಕಾರಕ ಶಿಲೀಂಧ್ರಗಳ ವಿರುದ್ಧ ಪರಿಣಾಮಕಾರಿ ವಿಧಾನವನ್ನು ಕಂಡುಹಿಡಿದಿಲ್ಲ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಶಿಲೀಂಧ್ರನಾಶಕಗಳನ್ನು ಬೀಜಗಳ ಮೇಲೆ ಮತ್ತು ಎಲೆಗಳ ಮೇಲೆ ಹಾಕುವುದರಿಂದ ಮೆಕ್ಕೆ ಜೋಳದ ಸಾಮಾನ್ಯ ಸ್ಮಟ್ ಸೋಂಕಿನ ಪ್ರಮಾಣವನ್ನು ಕಡಿಮೆಗೊಳಿಸುವುದಿಲ್ಲ.
ಮೆಕ್ಕೆ ಜೋಳದ ಸಾಮಾನ್ಯ ಸ್ಮಟ್ ರೋಗವು ಅಸ್ಟಿಲಾಗೊ ಮೆಯಿಡಿಸ್ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ, ಇದು ಹಲವು ವರ್ಷಗಳ ಕಾಲ ಮಣ್ಣಿನಲ್ಲಿ ಬದುಕಬಲ್ಲದು. ಬೀಜಕಗಳು ಗಾಳಿ, ಮಣ್ಣಿನ ಧೂಳು ಮತ್ತು ಮಳೆ ಹನಿಗಳ ಮೂಲಕ ಸಸ್ಯಗಳ ಮೇಲೆ ಹರಡುತ್ತವೆ. ಕೀಟಗಳು, ಪ್ರಾಣಿಗಳು, ತಪ್ಪಾದ ಕೃಷಿ ಅಭ್ಯಾಸಗಳು ಅಥವಾ ಆಲಿಕಲ್ಲುಗಳಿಂದ ಉಂಟಾಗುವಂತಹ ಗಾಯಗಳು ಸೋಂಕು ಪ್ರಕ್ರಿಯೆಗೆ ಸೂಕ್ತ ಪರಿಸ್ಥಿತಿಗಳು. ಸಸ್ಯದಿಂದ ಸಸ್ಯಕ್ಕೆ ನೇರವಾಗಿ ದ್ವಿತೀಯಕ ಹರಡುವಿಕೆ ಆಗುವುದಿಲ್ಲ. ರೋಗಲಕ್ಷಣಗಳು ನಿರ್ದಿಷ್ಟವಾಗಿ ತೀವ್ರವಾದ ಬೆಳವಣಿಗೆಯ ಸಾಮರ್ಥ್ಯವಿರುವ (ತೆನೆಗಳು ಅಥವಾ ಬೆಳೆಯುತ್ತಿರುವ ತುದಿಗಳಂತೆ) ಭಾಗಗಳ ಅಂಗಾಂಶಗಳಲ್ಲಿ ಅಧಿಕವಾಗಿರುತ್ತವೆ. ಕಡಿಮೆ ಪ್ರಮಾಣದ ಪರಾಗ ಉತ್ಪಾದನೆ ಮತ್ತು ಪರಾಗಸ್ಪರ್ಶ ಪ್ರಮಾಣವನ್ನು ಕಡಿಮೆ ಮಾಡುವ ವಿಪರೀತ ಹವಾಮಾನ ಪರಿಸ್ಥಿತಿಗಳು (ಬರದ / ಜಲಕ್ಷಾಮದ ನಂತರ ಬರುವ ಭಾರೀ ಮಳೆ) ಶಿಲೀಂಧ್ರದ ಪ್ರಸರಣಕ್ಕೆ ಅನುಕೂಲವಾಗುವಂತೆ ಮಾಡುತ್ತವೆ.