ಎಲೆಕೋಸು

ಕ್ಲಬ್ ರೂಟ್

Plasmodiophora brassicae

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳ ಹಳದಿಯಾಗುವಿಕೆ ಮತ್ತು ಬಾಡುವಿಕೆ.
  • ಬೇರುಗಳ ಮೇಲೆ ಗಂಟಿನಂತಹ ಊತ.
  • ಕುಂಠಿತ ಬೆಳವಣಿಗೆ.
  • ಕಡಿಮೆ ಇಳುವರಿ.
  • ಸಸ್ಯಗಳು ಕೊಳೆಯುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು
ಎಲೆಕೋಸು
ಹೂಕೋಸು

ಎಲೆಕೋಸು

ರೋಗಲಕ್ಷಣಗಳು

ರೋಗಲಕ್ಷಣಗಳನ್ನು ನೆಲದ ಮೇಲೆ ಮತ್ತು ನೆಲದ ಕೆಳಗೆ ಎರಡು ಕಡೆ ಗಮನಿಸಲಾಗಿದೆ. ಒಟ್ಟಾರೆಯಾಗಿ, ಸಸ್ಯಗಳು ಕ್ಷೀಣಿಸುತ್ತವೆ, ಕುಂಠಿತವಾದ ಬೆಳವಣಿಗೆ ಮತ್ತು ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಶುಷ್ಕ ಹವಾಮಾನದಲ್ಲಿ ಅವುಗಳು ಬಾಡುತ್ತವೆ, ಆದರೆ ಒದ್ದೆಯಾದ ಪರಿಸ್ಥಿತಿಗಳಲ್ಲಿ ಚೇತರಿಸಿಕೊಳ್ಳುತ್ತವೆ. ಎಲೆಗಳು ನೇರಳೆ ಬಣ್ಣಕ್ಕೆ ಕೂಡ ತಿರುಗಬಹುದು. ನೆಲದ ಕೆಳಗಿನ ರೋಗಲಕ್ಷಣಗಳೆಂದರೆ ಬೇರುಗಳ ಮೇಲೆ ಗಂಟಿನಂತಹ ಊತಗಳ ಬೆಳವಣಿಗೆ ಮತ್ತು ಸಣ್ಣ ಬೇರುಗಳಿಗೆ ಹಾನಿ (ಬೇರಿನ ಕೂದಲು ಎಂದು ಕೂಡ ಕರೆಯಲಾಗುತ್ತದೆ). ಕಾಲಾನಂತರದಲ್ಲಿ, ಉಬ್ಬುವಿಕೆಗಳು ತೀವ್ರ ವಿರೂಪತೆಗೆ ಕಾರಣವಾಗುತ್ತವೆ. ಸಾಮಾನ್ಯವಾದ ಸೂಕ್ಷ್ಮ ಜಾಲದ ಬದಲಾಗಿ ಬೇರುಗಳು ಕ್ಲಬ್-ಆಕಾರದ ಅಂಶದೊಂದಿಗೆ ಕೊನೆಗೊಳ್ಳುತ್ತದೆ (ಅದರಿಂದಾಗಿಯೇ ರೋಗಕ್ಕೆ ಈ ಸಾಮಾನ್ಯ ಹೆಸರು). ಬೆಳವಣಿಗೆ ಮತ್ತು ಇಳುವರಿ ತೀವ್ರವಾಗಿ ಕಡಿಮೆಯಾಗುತ್ತದೆ ಮತ್ತು ಅತ್ಯಂತ ಕೆಟ್ಟದಾಗಿ ಸಸ್ಯಗಳ ಮೇಲೆ ಪ್ರಬಾವ ಬೀರುತ್ತದೆ ಮತ್ತು ಸಸ್ಯಗಳು ಸಾಯುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸಿಂಪಿಯ ಚಿಪ್ಪು ಅಥವಾ ಡಾಲಮೈಟ್ ಸುಣ್ಣವನ್ನು ಶರತ್ಕಾಲದಲ್ಲಿ (ಸಣ್ಣ ತೋಟಗಾರರು ಮತ್ತು ರೈತರು) ಮಣ್ಣಿಗೆ ಮಿಶ್ರಣ ಮಾಡುವ ಮೂಲಕ ಮಣ್ಣಿನ pH ಅನ್ನು ಹೆಚ್ಚಿಸಿ (7.2 ಗೆ) ಹೆಚ್ಚು ಕ್ಷಾರೀಯ ಮಣ್ಣನ್ನು ಪಡೆಯುವುದು ಮಾತ್ರ ಲಭ್ಯವಿರುವ ಜೈವಿಕ ನಿಯಂತ್ರಣ. ಆಗಾಗ್ಗೆ ಪಿಹೆಚ್ ಅನ್ನು ಪರೀಕ್ಷಿಸಲು ಸರಳ ಮತ್ತು ಅಗ್ಗವಾದ ಮಣ್ಣಿನ ಪರೀಕ್ಷಾ ಕಿಟ್ ಗಳು ಲಭ್ಯವಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಮಣ್ಣಿನ ಫ್ಯೂಮಿಗೆಷನ್ ಅನ್ನು ಶಿಫಾರಸು ಮಾಡುವುದಿಲ್ಲ. ಏಕೆಂದರೆ ಅವುಗಳು 100 ಪ್ರತಿಶತ ಪರಿಣಾಮಕಾರಿಯಾಗಿರುವುದಿಲ್ಲ. ನೆಡುವುದಕ್ಕೆ ಮುಂಚಿತವಾಗಿ ಸುಣ್ಣ (ಕ್ಯಾಲ್ಸಿಯಂ ಕಾರ್ಬೊನೇಟ್ CaC03) ಮತ್ತು ಹೈಡ್ರೀಕರಿಸಿದ ಸುಣ್ಣ (ಕ್ಯಾಲ್ಸಿಯಂ ಹೈಡ್ರಾಕ್ಸೈಡ್ Ca (OH) 2) ಸೇರಿಸುವ ಮೂಲಕ pH ಅನ್ನು (7.2) ಹೆಚ್ಚಿಸುವುದರಿಂದ ರೋಗದ ಸಂಭವನೀಯತೆಯನ್ನು ಕಡಿಮೆಗೊಳಿಸಬಹುದಾಗಿದೆ.

ಅದಕ್ಕೆ ಏನು ಕಾರಣ

ಮಣ್ಣಿನಲ್ಲಿ ವಾಸಿಸುವ ರೋಗಕಾರಕ ಪ್ಲಾಸ್ಮೋಡಿಯೊಫೊರಾ ಬ್ರಾಸ್ಸಿಕೆಯಿಂದಾಗುವ ಬೇರುಗಳ ಸೋಂಕಿನಿಂದ ರೋಗದ ಲಕ್ಷಣಗಳು ಉಂಟಾಗುತ್ತವೆ. ಇದೊಂದು ಕರಾರಿನ ಪರಾವಲಂಬಿಯಾಗಿದ್ದು, ಬ್ರಸೆಲ್ಸ್ ಸ್ಪ್ರೌಟ್ಸ್, ಎಲೆಕೋಸುಗಳು, ಹೂಕೋಸುಗಳು, ಟರ್ನಿಪ್ಗಳು, ಮತ್ತು ಕೆಂಪು ಮೂಲಂಗಿಯಂತಹ ಪ್ರಮುಖ ಬೆಳೆಗಳ ಜೊತೆಗೆ ಇತರ ಸಸ್ಯಗಳ ಮೇಲೂ ಪ್ರಭಾವ ಬೀರುತ್ತವೆ . ಶಿಲೀಂಧ್ರದ ಕಾರ್ಯನೀತಿಯೆಂದರೆ 20 ವರ್ಷಗಳ ಕಾಲ ಮಣ್ಣನ್ನು ಕಲುಷಿತಗೊಳಿಸುವ ಸುಪ್ತ ಬೀಜಕಗಳನ್ನು ಉತ್ಪತ್ತಿ ಮಾಡುವುದು. ಸೋಂಕಿಗೆ ಈಡಾಗುವ ಸಸ್ಯದ ಬೇರುಗಳ ಉಪಸ್ಥಿತಿಯಲ್ಲಿ, ಈ ಬೀಜಕಗಳು ಬೇರಿನ ಕೂದಲಿನಲ್ಲಿ ಮೊಳಕೆಯೊಡೆಯುತ್ತವೆ ಮತ್ತು ಸೋಂಕು ತರುತ್ತವೆ. ಇದರಿಂದಾಗಿ ರೋಗವು ಅದರ ಬೇರುಗಳಲ್ಲಿ ಉಬ್ಬುವಿಕೆಯನ್ನು ಉಂಟುಮಾಡುತ್ತದೆ. ಅದಕ್ಕೆ ಈ ಹೆಸರು ಬಂದಿದೆ. ಈ ಊತಗಳು ನಂತರ ಹೆಚ್ಚು ಬೀಜಕಗಳನ್ನು ಉತ್ಪಾದಿಸುವ ಮೂಲಕ ಚಕ್ರವನ್ನು ಪೂರ್ಣಗೊಳಿಸುತ್ತವೆ. ತೇವಾಂಶವುಳ್ಳ ಮತ್ತು ಬೆಚ್ಚಗಿನ ಮಣ್ಣು ಈ ರೋಗಕ್ಕೆ ಅನುಕೂಲಕರವಾಗಿದೆ. ಮಣ್ಣಿನ ಪಿಹೆಚ್ ಅನ್ನು ಸುಣ್ಣ ಸೇರಿಸಿ ಹೆಚ್ಚು ಮಾಡುವ ಮೂಲಕ ಕ್ಲಬ್ ಬೇರನ್ನು ಕಡಿಮೆಗೊಳಿಸಬಹುದು. (ಆದರೆ ನಿರ್ಮೂಲನೆ ಸಾಧ್ಯವಿಲ್ಲ).


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಸಸ್ಯಗಳಿಂದ ಅಥವಾ ಪ್ರಮಾಣೀಕೃತ ಮೂಲಗಳಿಂದ ಬೀಜಗಳನ್ನು ಬಳಸಿ.
  • ಲಭ್ಯವಿದ್ದರೆ ಹೆಚ್ಚು ಚೇತರಿಸಿಕೊಳ್ಳುವ ಪ್ರಭೇದಗಳನ್ನು ನೆಡಬೇಕು.
  • ಸಸ್ಯ ಬೆಳೆದ ಜಾಗದಲ್ಲಿ ವಿಪರೀತ ತೇವಾಂಶವನ್ನು ತಪ್ಪಿಸಿ.
  • ಜಾಗದಲ್ಲಿ ಉತ್ತಮ ಒಳಚರಂಡಿ ಒದಗಿಸಿ ಮತ್ತು ಅತಿಯಾಗಿ ನೀರನ್ನು ಹಾಯಿಸಬೇಡಿ.
  • ಕಲುಷಿತವಾಗಿರಬಹುದಾದ ಮೂಲಗಳಿಂದ ನೀರಾವರಿ ಮಾಡಬೇಡಿ.
  • ಹಲವಾರು ವರ್ಷಗಳವರೆಗೆ ವೈವಿಧ್ಯಮಯ ಬೆಳೆ ಸರದಿ ಯೋಜನೆ ಮಾಡಿ.
  • ರೋಗದ ಇತಿಹಾಸವಿರುವ ಪ್ರದೇಶಗಳಲ್ಲಿ ಸಸ್ಯಗಳನ್ನು ನೆಡಬೇಡಿ.
  • ಉತ್ತಮ ಮಣ್ಣಿನ ರಚನೆ ಮತ್ತು ಹೆಚ್ಚು ಮಣ್ಣಿನ pH (7.2) ಅನ್ನು ಬೆಂಬಲಿಸಿ.
  • ಉದಾಹರಣೆಗೆ ಸುಣ್ಣ ಸೇರಿಸುವ ಮೂಲಕ.
  • ಉಪಕರಣಗಳು ಮತ್ತು ಸಲಕರಣೆಗಳು, ಅಥವಾ ಪಾದರಕ್ಷೆಗಳ ಮೇಲೆ ಕಲುಷಿತ ಮಣ್ಣಿನ ಹರಡುವಿಕೆಯ ಬಗ್ಗೆ ಎಚ್ಚರವಹಿಸಿ.
  • ಹೊಲ ಮತ್ತು ಅದರ ಸುತ್ತಲೂ ಕಳೆಗಳನ್ನು ನಿಯಂತ್ರಿಸಿ.
  • ಇನಾಕ್ಯುಲಮ್ ಮಟ್ಟವನ್ನು ಕಡಿಮೆ ಮಾಡಲು ಸುಗ್ಗಿಯ ನಂತರ ಮಣ್ಣಿನ ಸೌರೀಕರಣವನ್ನು ಮಾಡಿ.
  • ಪ್ರದೇಶದಿಂದ ಸೋಂಕಿತ ಬೇರುಗಳನ್ನು ತೆಗೆದುಹಾಕಿ, ನಾಶಮಾಡುವ ಮೂಲಕ ಇನಾಕ್ಯುಲಮ್ ಅನ್ನು ಕಡಿಮೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ