Fusarium oxysporum
ಶಿಲೀಂಧ್ರ
ಈ ಶಿಲೀಂಧ್ರಗಳು ಬೆಳೆ-ನಿರ್ದಿಷ್ಟ ಮಾದರಿಯ ಹಾನಿಗಳನ್ನು ತೋರಿಸುತ್ತವೆ. ಕೆಲವು ಸಂದರ್ಭಗಳಲ್ಲಿ, ಎಳೆಯ ಹಂತದಲ್ಲೇ ಎಲೆಗಳು ಹಳದಿ ಬಣ್ಣಕ್ಕೆ ತಿರುಗುವ ಮೂಲಕ ಸಸ್ಯಗಳು ಬಾಡುವ ಲಕ್ಷಣಗಳನ್ನು ತೋರಿಸುತ್ತವೆ. ಬೆಳೆದ ಸಸ್ಯಗಳಲ್ಲಿ, ಸ್ವಲ್ಪ ಬಾಡುವಿಕೆಯು ಸಾಮಾನ್ಯವಾಗಿ ಸಸ್ಯಗಳ ಭಾಗಗಳಲ್ಲಿ ಕಂಡುಬರುತ್ತದೆ. ದಿನದಲ್ಲಿ ಉಷ್ಣಾಂಶ ಹೆಚ್ಚಿರುವ ಅವಧಿಗಳಲ್ಲಿ ಇದು ಅತ್ಯಂತ ಸಾಮಾನ್ಯವಾಗಿದೆ. ಎಲೆಗಳು ನಂತರ ಹಳದಿಯಾಗಲು ಆರಂಭಿಸುತ್ತವೆ. ಹೆಚ್ಚಾಗಿ ಒಂದೇ ಬದಿಯಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಕಾಂಡಗಳ ಉದ್ದ ಸೀಳುನೋಟವು ಆಂತರಿಕ ಅಂಗಾಂಶಗಳು ಕಂದು-ಕೆಂಪು ಬಣ್ಣಕ್ಕೆ ತಿರುಗಿರುವುದನ್ನು ತೋರಿಸುತ್ತವೆ. ಮೊದಲು ತಳಭಾಗದಲ್ಲಿ, ನಂತರ ಕಾಂಡದ ಮೇಲೆ ಈ ಲಕ್ಷಣ ಕಾಣುತ್ತದೆ.
ಬ್ಯಾಕ್ಟೀರಿಯಾಗಳು ಮತ್ತು F. ಆಕ್ಸಿಸ್ಪೋರಮ್ ನ ರೋಗಕಾರಕವಲ್ಲದ ತಳಿಗಳು ಸೇರಿದಂತೆ ರೋಗಕಾರಕಗಳೊಂದಿಗೆ ಪೈಪೋಟಿ ಮಾಡಬಲ್ಲ ಹಲವು ಜೈವಿಕ ನಿಯಂತ್ರಣ ಏಜೆಂಟ್ ಗಳನ್ನು ಫುಸ್ಯಾರಿಯಮ್ ವಿಲ್ಟ್ ನಿಯಂತ್ರಣಕ್ಕೆ ಕೆಲವು ಬೆಳೆಗಳಲ್ಲಿ ಬಳಸಲಾಗುತ್ತದೆ. ಟ್ರೈಕೋಡರ್ಮಾ ವೈರಿಡೇ ಅನ್ನು (10 ಗ್ರಾಂ / ಕೆಜಿ ಬೀಜ) ಬೀಜಗಳ ಸಂಸ್ಕರಣೆಗಾಗಿ ಬಳಸಬಹುದು. ಕೆಲವು ಮಣ್ಣುಗಳು ಫ್ಯುಸ್ಯಾರಿಯಮ್ ಬೆಳವಣಿಗೆಯನ್ನು ನಿಗ್ರಹಿಸುತ್ತದೆ. ಮಣ್ಣಿನ pH ಅನ್ನು 6.5-7.0 ಗೆ ಹೊಂದಿಸುವುದು ಮತ್ತು ಅಮೋನಿಯಮ್ ಬದಲಿಗೆ ನೈಟ್ರೇಟ್ ಅನ್ನು ನೈಟ್ರೋಜನ್ ಮೂಲವಾಗಿ ಬಳಸುವುದರಿಂದ ಈ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು.
ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಸೇರಿರುವ ಸಮಗ್ರವಾದ ಮಾರ್ಗವನ್ನು ಮೊದಲು ಪರಿಗಣಿಸಿ. ಯಾವುದೇ ಕ್ರಮಗಳು ಪರಿಣಾಮಕಾರಿಯಾಗಿಲ್ಲದಿದ್ದರೆ ಸೋಂಕಿತ ಸ್ಥಳಗಳಲ್ಲಿ ಮಣ್ಣು-ಆಧಾರಿತ ಶಿಲೀಂಧ್ರನಾಶಕಗಳನ್ನು ಹಾಕಿ. ಬಿತ್ತನೆ/ನಾಟಿ ಮಾಡುವ ಮೊದಲು 3 ಗ್ರಾಂ/ಲೀ ನೀರಿನಷ್ಟು ತಾಮ್ರದ ಆಕ್ಸಿಕ್ಲೋರೈಡ್ ನಲ್ಲಿ ಮಣ್ಣನ್ನು ನೆನೆಸುವುದು ಸಹ ಪರಿಣಾಮಕಾರಿಯಾಗಿರುತ್ತದೆ.
ಫ್ಯುಸಾರಿಯಮ್ ವಿಲ್ಟ್ ಸಸ್ಯಗಳ ಸಾರಿಗೆ ಅಂಗಾಂಶಗಳಲ್ಲಿ ಬೆಳೆಯುತ್ತದೆ ಮತ್ತು ಇದು ನೀರಿನ ಮತ್ತು ಪೌಷ್ಟಿಕಾಂಶದ ಪೂರೈಕೆಯ ಮೇಲೆ ಪರಿಣಾಮ ಬೀರುತ್ತದೆ. ಸಸ್ಯಗಳು ನೇರವಾಗಿ ಅವುಗಳ ಬೇರುಗಳ ಮೂಲಕ ಅಥವಾ ಬೇರುಗಳಲ್ಲಿರುವ ಗಾಯಗಳ ಮೂಲಕ ಸೋಂಕಿಗೆ ಒಳಗಾಗಬಹುದು. ರೋಗಕಾರಕವು ಒಮ್ಮೆ ಯಾವುದಾದರೂ ಸ್ಥಳದಲ್ಲಿ ಸ್ಥಾಪಿತವಾದರೆ, ಅದು ಹಲವು ವರ್ಷಗಳವರೆಗೆ ಅಲ್ಲಿ ಸಕ್ರಿಯವಾಗಿ ಇರುತ್ತದೆ.