ಬಟಾಣಿ

ಬಟಾಣಿಯ ತುಕ್ಕು ರೋಗ

Uromyces pisi

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳು ಮತ್ತು ಕಾಂಡಗಳ ಮೇಲೆ ಕಂದು ಬೀಜಕಗಳ ಮೆತ್ತೆಗಳು ಕಂಡುಬರುತ್ತವೆ.
  • ಎಲೆಗಳು ವಿರೂಪಗೊಳ್ಳುತ್ತವೆ.
  • ಸಸ್ಯಗಳ ಬೆಳವಣಿಗೆ ಕುಂಠಿತವಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು


ಬಟಾಣಿ

ರೋಗಲಕ್ಷಣಗಳು

ಕಂದು ಬಣ್ಣದ ಬೀಜಕಗಳ ಮೆತ್ತೆಗಳು ಎಲೆಗಳ ಎರಡೂ ಬದಿಗಳಲ್ಲಿ ಹಾಗು ಕಾಂಡಗಳ ಮೇಲೆ ಕಂಡುಬರುತ್ತವೆ. ಶುಷ್ಕ ವಾತಾವರಣದಲ್ಲಿ ಈ ಬೀಜಕಣಗಳು ಹರಡುತ್ತವೆ. ಎಲೆಗಳು ವಿರೂಪಗೊಳ್ಳುತ್ತವೆ. ಮತ್ತು ಇಡೀ ಸಸ್ಯದ ಬೆಳವಣಿಗೆ ಕಡಿಮೆಯಾಗುತ್ತದೆ. ಆದರೆ, ಇಳುವರಿ ಸ್ವಲ್ಪ ಕಡಿಮೆಯಾಗುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ರೋಗದ ಕೊನೆಯ ಹಂತದಲ್ಲಿ ಈ ಹಾನಿ ಹೆಚ್ಚಾಗಿ ಕಂಡುಬರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಚಿಕಿತ್ಸೆ ಅನಿವಾರ್ಯವಲ್ಲ. ಏಕೆಂದರೆ ಆದಾಯದಲ್ಲಿ ಆಗುವ ನಷ್ಟ ಕಡಿಮೆ.

ರಾಸಾಯನಿಕ ನಿಯಂತ್ರಣ

ಟೆಬೂಕೊನಜೋಲ್ ಅನ್ನು ಆಧರಿಸಿದ ಶಿಲೀಂಧ್ರನಾಶಕಗಳನ್ನು ಬಳಸಬಹುದು

ಅದಕ್ಕೆ ಏನು ಕಾರಣ

ಶಿಲೀಂಧ್ರವು ಫೀಲ್ಡ್ ಬೀನ್ಸ್ (ಬೆಲ್ ಬೀನ್ಸ್, ದೊಡ್ಡ ಬೀನ್ಸ್ ಅಥವಾ ಇಂಗ್ಲಿಷ್ ಬೀನ್ಸ್ ಎಂದೂ ಕರೆಯಲ್ಪಡುತ್ತದೆ), ವೆಟ್ಚಸ್ ಮತ್ತು ಸ್ಪರ್ಜಿಯ ಪ್ರಭೇದಗಳ ಮೇಲೆ ಪ್ರತಿಕೂಲ ಹವಾಮಾನವನ್ನು ಕಳೆಯುತ್ತವೆ. ಅಲ್ಲಿಂದ ಮುಂದೆ ವಸಂತಕಾಲದಲ್ಲಿ ಬಟಾಣಿ ಸಸ್ಯಗಳಿಗೆ ಹರಡುತ್ತದೆ. ಚಳಿಗಾಲದಲ್ಲಿ, ಶಿಲೀಂಧ್ರವು ಹೊಸ ಆಶ್ರಯದಾತ ಸಸ್ಯಗಳ ಕಡೆ ಸಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ವಿಸಿಯಾ ಜಾತಿ (ದೊಡ್ಡ ಬೀನ್ಸ್) ಅಥವಾ ಲ್ಯಾಥಿರಸ್ (ವೆಚ್ಟ್ಲಿಂಗ್) ಮುಂತಾದ ಎಲ್ಲಾ ಪರ್ಯಾಯ ಆಶ್ರಯದಾತ ಸಸ್ಯಗಳನ್ನು ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ