Uromyces appendiculatus
ಶಿಲೀಂಧ್ರ
ಮೊದಲ ಲಕ್ಷಣಗಳೆಂದರೆ ಮುಖ್ಯವಾಗಿ ಕೆಳಭಾಗದಲ್ಲಿ, ಹಳೆಯ ಎಲೆಗಳ ಎಪಿಡರ್ಮಿಸ್ ಅನ್ನು ಸೂಕ್ಷ್ಮವಾದ ಕಂದು ಬಣ್ಣದಿಂದ ಹಳದಿ ಬಣ್ಣದ ಬೊಕ್ಕೆಗಳು ಛಿದ್ರಗೊಳಿಸುತ್ತದೆ. ಸಮಯ ಕಳೆದಂತೆ, ಅವುಗಳನ್ನು ಹಳದಿ ಕ್ಲೋರೋಟಿಕ್ ಅಂಗಾಂಶದ ಹೊರವೃತ್ತವು ಸುತ್ತುಗಟ್ಟಿರಬಹುದು ಮತ್ತು ಅವು ಗಾಢ ಬಣ್ಣಕ್ಕೆ ತಿರುಗಬಹುದು. ಅದೇ ರೀತಿಯ ಉದ್ದನೆಯ ಬೊಕ್ಕೆಗಳು ತೊಟ್ಟುಗಳು, ಕಾಂಡಗಳು ಮತ್ತು ಬೀಜಕೋಶಗಳಲ್ಲಿ ಕಾಣಿಸಿಕೊಳ್ಳಬಹುದು. ಎಲೆಗಳು ಬಣ್ಣ ಕಳೆದುಕೊಂಡು, ಒಣಗಬಹುದು, ಮತ್ತು ಬೇಗನೆ ಉದುರಬಹುದು. ಇಳುವರಿಯ ಮೇಲೆ ಪರಿಣಾಮ ಬೀರುವಂತೆ ಎಲೆಗಳು ಉದುರಬಹುದು. ಹುರುಳಿ ತುಕ್ಕು ರೋಗ ಎಳೆಯ ಸಸ್ಯಗಳನ್ನು ಕೊಲ್ಲುತ್ತದೆ. ಹಳೆಯ ಸಸ್ಯಗಳಲ್ಲಿ ಶಿಲೀಂಧ್ರವು ಇಳುವರಿಯ ಮೇಲೆ ಬಹಳ ಕಡಿಮೆ ಪರಿಣಾಮ ಬೀರುತ್ತದೆ.
ಬಾಸಿಲಸ್ ಸಬ್ಟಿಲಿಸ್, ಆರ್ತ್ರೋಬ್ಯಾಕ್ಟರ್ ಮತ್ತು ಸ್ಟ್ರೆಪ್ಟೊಮೈಸಸ್ ಜಾತಿಗಳನ್ನು ಆಧರಿಸಿದ ಜೈವಿಕ-ಕೀಟನಾಶಕಗಳು ಈ ರೋಗದ ಬೆಳೆವಣಿಗೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ.
ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಟ್ರಯಾಝೋಲ್ ಮತ್ತು ಸ್ಟ್ರೋಬಿಲ್ಯೂರಿನ್ ಶಿಲೀಂಧ್ರನಾಶಕಗಳು ಹುರುಳಿ ತುಕ್ಕು ನಿಯಂತ್ರಿಸುವಲ್ಲಿ ಒಳ್ಳೆಯ ಫಲಿತಾಂಶಗಳನ್ನು ತೋರಿಸಿವೆ.
ಮಣ್ಣಿನಲ್ಲಿರುವ ಸಸ್ಯದ ಉಳಿಕೆಗಳಲ್ಲಿ ಉರೊಮೈಸಸ್ ಅಪೆಂಡಿಕ್ಯುಲಾಟಸ್ ಶಿಲೀಂಧ್ರ ಚಳಿಗಾಲವನ್ನು ಕಳೆಯುತ್ತದೆ. ಇದು ಕಡ್ಡಾಯವಾಗಿ ಪರಾವಲಂಬಿಯಾಗಿದೆ. ಇದರ ಅರ್ಥವೇನೆಂದರೆ ಇದಕ್ಕೆ ಬದುಕಲು ಸಸ್ಯ ಜೀವಕೋಶಗಳು ಅಗತ್ಯವಾಗಿರುತ್ತದೆ. ಗಾಳಿ, ನೀರು ಮತ್ತು ಕೀಟಗಳ ಮೂಲಕ ಬೀಜಕಗಳು ಸಸ್ಯಗಳಿಗೆ ಹರಡಿದಾಗ ಆರಂಭಿಕ ಸೋಂಕು ಸಂಭವಿಸುತ್ತದೆ. ಶಿಲೀಂಧ್ರವು ಅಧಿಕ ಆರ್ದ್ರತೆ ಮತ್ತು ಹೆಚ್ಚಿನ ಉಷ್ಣಾಂಶದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಈ ಪರಿಸ್ಥಿತಿಯಲ್ಲಿ ಬೀಜಕಗಳು ಬಹಳ ವೇಗವಾಗಿ ಹರಡಬಹುದು. ದೀರ್ಘಕಾಲದ ಬೆಚ್ಚಗಿನ, ತೇವಾಂಶದ ವಾತಾವರಣದಲ್ಲಿ ರೋಗವು ಹೆಚ್ಚು ತೀವ್ರವಾಗಿರುತ್ತದೆ.