Colletotrichum lindemuthianum
ಶಿಲೀಂಧ್ರ
ಸೋಂಕಿತ ಬೀಜಗಳಿಂದ ಬೆಳೆದ ಸಸಿಗಳಲ್ಲಿ ಸಾಮಾನ್ಯವಾಗಿ ದುಂಡನೆಯ, ಗಾಢ ಕಂದು ಬಣ್ಣದಿಂದ ಕಪ್ಪು ಗುಳಿ ಬಿದ್ದ ಕಲೆಗಳು ಎಲೆಗಳು ಮತ್ತು ಕಾಂಡಗಳ ಮೇಲೆ ಕಾಣಿಸಿಕೊಳ್ಳುತ್ತದೆ. ಸಸಿಯ ಬೆಳವಣಿಗೆಗೆ ಧಕ್ಕೆಯಾಗುತ್ತದೆ ಮತ್ತು ಕುಂಠಿತ ಬೆಳವಣಿಗೆ ಉಂಟಾಗುತ್ತದೆ ಅಥವಾ ಅವು ಬೇಗ ಸಾಯುತ್ತವೆ. ದ್ವಿತೀಯಕ ಸೋಂಕಿನ ಸಂದರ್ಭದಲ್ಲಿ, ಮೊದಲು ಎಲೆಗಳ ಕೆಳಭಾಗದಲ್ಲಿ, ನಂತರ ಮೇಲಿನ ಭಾಗದಲ್ಲಿ ಕೂಡ ಎಲೆಯ ನಾಳಗಳು ಮತ್ತು ತೊಟ್ಟುಗಳ ಮೇಲೆ ಕೋನೀಯಾಕಾರದ ಇಟ್ಟಿಗೆ-ಕೆಂಪು ಬಣ್ಣದಿಂದ ಕಪ್ಪು ಬಣ್ಣದ ಗಾಯಗಳು ಬೆಳೆಯುತ್ತವೆ. ವೃತ್ತಾಕಾರದ, ಕಪ್ಪು ಬಣ್ಣದ ಅಂಚುಗಳಿರುವ ತಿಳಿ ಕಂದು ಬಣ್ಣದಿಂದ ತುಕ್ಕಿನ ಬಣ್ಣವಿರುವ ಗಾಯಗಳು, ಬೀಜಕೋಶಗಳು ಮತ್ತು ಕಾಂಡಗಳ ಮೇಲೆ ಕಾಣಿಸಿಕೊಳ್ಳುತ್ತವೆ. ತೀವ್ರವಾಗಿ ಸೋಂಕಿಗೊಳಗಾದ ಬೀಜಕೋಶಗಳಲ್ಲಿ, ಈ ಗಾಯಗಳು ಸ್ವಲ್ಪ ಕುಗ್ಗಿ, ವಿರೂಪಗೊಳ್ಳಬಹುದು. ಗುಳಿಬಿದ್ದಂತಹ ಕ್ಯಾಂಕರ್ ರೀತಿ ಕಾಣಬಹುದು. ಸೋಂಕಿಗೊಳಗಾದ ಬೀಜಗಳು ಹೆಚ್ಚಾಗಿ ಬಣ್ಣ ಕಳೆದುಕೊಳ್ಳುತ್ತವೆ ಮತ್ತು ಕಂದು ಅಥವಾ ಕಪ್ಪು ಬಣ್ಣದ ಕ್ಯಾಂಕರ್ಗಳಾಗಿ ಬೆಳೆಯುತ್ತವೆ. ಸಾಮಾನ್ಯ ಬೀನ್ಸ್ ಸಸ್ಯಗಳು ಈ ರೋಗಕ್ಕೆ ತುಂಬಾ ಒಳಗಾಗುತ್ತವೆ.
ಬೆಳೆಯುವ ಋತುವಿನ ಉದ್ದಕ್ಕೂ, ಬೆಚ್ಚಗಿನ ಅವಧಿಯಲ್ಲಿ, ಪ್ರತಿ 7 ರಿಂದ 10 ದಿನಗಳಿಗೊಮ್ಮೆ ಬೇವಿನ ಎಣ್ಣೆಯನ್ನು ಬಳಸುವುದರಿಂದ ಶಿಲೀಂಧ್ರದ ಬೆಳವಣಿಗೆಯನ್ನು ತಡೆಯುತ್ತದೆ. ಸೋಂಕನ್ನು ನಿಯಂತ್ರಿಸಲು ಜೈವಿಕ ಏಜೆಂಟ್ ಸಹ ಸಹಾಯ ಮಾಡುತ್ತದೆ. ಉದಾಹರಣೆಗೆ ಶಿಲೀಂಧ್ರ ಟ್ರೈಕೊಡೆರ್ಮ ಹಾರ್ಜಿಯಾನಂ ಮತ್ತು ಬ್ಯಾಕ್ಟೀರಿಯಾ ಸೂಡೊಮೊನಸ್ ಫ್ಲೋರೊಸೆನ್ಸ್ ಗಳಂತಹ ಜೈವಿಕ ನಿಯಂತ್ರಣ ಏಜೆಂಟ್ ಗಳನ್ನು ಬೀಜ ಚಿಕಿತ್ಸೆಯಲ್ಲಿ ಬಳಸಿದರೆ ಕೊಲೆಟೊಟ್ರಿಚಮ್ ಲಿಂಡಮುಥಿಯನಮ್ ಬೆಳವಣಿಗೆಯನ್ನು ಮಿತಿಗೊಳಿಸಬಹುದು. ಶಿಲೀಂಧ್ರಗಳನ್ನು ಕೊಲ್ಲಲು ಬೀಜಗಳನ್ನು ಬಿಸಿ ನೀರಿನಲ್ಲಿ (50 °C) 10 ನಿಮಿಷಗಳ ಕಾಲ ಮುಳುಗಿಸಿ.
ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಒಂದು ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಬೀಜ ಶಿಲೀಂಧ್ರನಾಶಕಗಳ ಎಲೆಗಳ ಸಿಂಪಡಿಕೆಗಳು ಜಮೀನಿನಲ್ಲಿ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು, ಆದರೆ ಇದು ಆರ್ಥಿಕವಾಗಿ ಲಾಭದಾಯಕವಾಗುವುದು ಅಪರೂಪ. ಎಲೆ ಒಣಗಿರುವಾಗ ಮಂಕೊಜೆಬ್, ಕ್ಲೋರೊಥಲೋನಿಲ್, ಫ್ಲುಟ್ರಿಯಾಫೊಲ್, ಪೆನ್ಕೋನಜೋಲ್, ಅಥವಾ ತಾಮ್ರ ಆಧಾರಿತ ಉತ್ಪನ್ನಗಳನ್ನು ಹೊಂದಿರುವ ಶಿಲೀಂಧ್ರನಾಶಕಗಳನ್ನು ಬಳಸಿ.
ಕಪ್ಪು ಚುಕ್ಕೆ ರೋಗವು ಕೊಲೆಟೊಟ್ರಿಚಮ್ ಲಿಂಡಮುಥಿಯನಮ್ ನಿಂದ ಉಂಟಾಗುತ್ತದೆ. ಇದು ಮುಖ್ಯವಾಗಿ ಬೀಜದಿಂದ-ಹುಟ್ಟುತ್ತದೆ, ಆದರೆ ಬೆಳೆಯ ಉಳಿಕೆಗಳು ಮತ್ತು ಪರ್ಯಾಯ ಆಶ್ರಯದಾತ ಸಸ್ಯಗಳಲ್ಲೂ ಬದುಕುಳಿಯುತ್ತದೆ. ಪರಿಸರದ ಪರಿಸ್ಥಿತಿಗಳು ಅನುಕೂಲಕರವಾದಾಗ, ಅದು ಬೀಜಕಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ಗಾಳಿ ಮತ್ತು ಮಳೆಯ ಮೂಲಕ ಜಮೀನಿನಲ್ಲಿ ಹರಡುತ್ತದೆ. ತಂಪು - ಮಧ್ಯಮ ತಾಪಮಾನ (13-21 °C), ಹೆಚ್ಚಿನ ತೇವಾಂಶ, ಹಿಮ, ಆರ್ದ್ರ ಎಲೆಗಳು ಅಥವಾ ಆಗಾಗ್ಗೆ ಮಳೆ ಬೀಳುವಿಕೆಯು ಶಿಲೀಂಧ್ರದ ಜೀವನ ಚಕ್ರವನ್ನು ಮತ್ತು ರೋಗದ ಪ್ರಗತಿಯನ್ನು ಪ್ರೋತ್ಸಾಹಿಸುತ್ತದೆ. ಶಿಲೀಂಧ್ರವು ನೀರಿನ ಉಪಸ್ಥಿತಿಯಲ್ಲಿ ಹರಡಲ್ಪಟ್ಟಿರುವುದರಿಂದ, ಎಲೆಗಳು ಆರ್ದ್ರವಾಗಿದ್ದಾಗ ಜಮೀನಿನಲ್ಲಿ ಕೆಲಸ ಮಾಡುವ ಸಮಯದಲ್ಲಿ ಉಂಟಾಗುವ ಯಾಂತ್ರಿಕ ಗಾಯಗಳಿಂದ ಕೂಡಾ ಹರಡಬಹುದು. ಶಿಲೀಂಧ್ರವು ಬೀಜಕೋಶಗಳ ಮೇಲೆ ಆಕ್ರಮಣ ಮಾಡಬಹುದು ಮತ್ತು ಕಾಟಿಲೆಡಾನ್ ಅಥವಾ ಬೀಜ ಕವಚಕ್ಕೂ ಸೋಂಕು ಉಂಟುಮಾಡಬಹುದು.