ಇತರೆ

ಶಿರ ಕೊಳೆರೋಗ (ಕ್ರೌನ್ ರಾಟ್)

Phytophthora cactorum

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳು ಕಂದು ಬಣ್ಣಕ್ಕೆ ತಿರುಗುತ್ತವೆ.
  • ಇದು ಹೃದಯಾಕಾರದ ಎಲೆಗಳಿಂದ ಪ್ರಾರಂಭವಾಗುತ್ತದೆ.
  • ಕೊಳೆತ ಕಲೆಗಳು ಬೇರುಗಳಲ್ಲಿ ಕಾಣಿಸಿಕೊಳ್ಳುತ್ತವೆ.
  • ದೊಡ್ಡ ತೋಟಗಳಲ್ಲಿ ಒಂಟಿ ಸಸ್ಯಗಳ ಮೇಲೆ ಮಾತ್ರ ಇದು ಪರಿಣಾಮ ಬೀರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಸ್ಟ್ರಾಬೆರಿ

ಇತರೆ

ರೋಗಲಕ್ಷಣಗಳು

ಶಿರ ಕೊಳೆರೋಗವು ಸೋಂಕಾದ ನಂತರ, ಒಂದೊಂದೇ ಇರುವ ಎಲೆಗಳು ಕಂದು ಬಣ್ಣಕ್ಕೆ ತಿರುಗುತ್ತವೆ. ಹೃದಯಾಕಾರದ ಎಲೆಗಳಿಂದ ಪ್ರಾರಂಭಿಸಿ, ಸಸ್ಯದ ಮೇಲ್ಭಾಗವು ಸೊರಗುತ್ತದೆ ಮತ್ತು ಅಂತಿಮವಾಗಿ ಸಾಯುತ್ತದೆ. ಬೇರಿನ ಒಳಗೆ ಸ್ಪಷ್ಟವಾಗಿ ವಿಂಗಡಿಸಬಹುದಾದ, ಕೆಂಪು ಮಿಶ್ರಿತ ಕಂದು ಬಣ್ಣದ, ಕೊಳೆತ ಕಲೆಗಳನ್ನು ಕಾಣಬಹುದು. ಇವುಗಳು ಸಸ್ಯಗಳ ನೀರಿನ ಸರಬರಾಜಿಗೆ ಅಡ್ಡಿಪಡಿಸುತ್ತವೆ. ಶಿರ ಕೊಳೆರೋಗದ ಲಕ್ಷಣಗಳು ಹೂವರಳಿದ ಕೂಡಲೇ ವಸಂತಕಾಲದಲ್ಲಿ ಕಾಣಿಸಿಕೊಳ್ಳುತ್ತವೆ. ರೋಗದ ವಿಶಿಷ್ಟ ಲಕ್ಷಣವೆಂದರೆ ಸೋಂಕಿತ ಸಸ್ಯಗಳ ಪಕ್ಕದಲ್ಲೇ ಆರೋಗ್ಯಕರ ಸಸ್ಯಗಳು ಬೆಳೆಯುತ್ತವೆ. ವಸಂತದ ಸೆಕೆ ವಾತಾವರಣದಲ್ಲಿ, ಮೊದಲ ನಷ್ಟವು 4-6 ವಾರಗಳ ನಂತರ ಕಾಣಿಸಿಕೊಳ್ಳುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ನೇರ ಚಿಕಿತ್ಸೆ ಇಲ್ಲ. ಸೋಂಕನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಬಳಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿರುವ ಸಮಗ್ರ ಮಾರ್ಗವನ್ನು ಮೊದಲು ಪರಿಗಣಿಸಿ. ಮರುಸೋಂಕನ್ನು ತಡೆಗಟ್ಟಲು ಸೋಂಕಿತ ಪ್ರದೇಶಗಳಿಗೆ ಹನಿ ನೀರಾವರಿ ಮೂಲಕ ಮೆಫೆನೋಕ್ಸಾಮ್ ಮತ್ತು ಮೆಟಲಕ್ಸಿಲ್ ಅನ್ನು ಹಾಕಿ.

ಅದಕ್ಕೆ ಏನು ಕಾರಣ

ಶಿರ ಕೊಳೆರೋಗದ ರೋಗಕಾರಕವು ಶಿಲೀಂಧ್ರ (ಫೈಟೊಫ್ಥೊರಾ ಕ್ಯಾಕ್ಟೊರಮ್) ವಾಗಿದ್ದು, ಅದು ಹಲವಾರು ವರ್ಷಗಳ ಕಾಲ ಮಣ್ಣಿನಲ್ಲಿ ಬದುಕಬಲ್ಲದು. ಇದರ ಝೂಸ್ಫೋರ್ ಗಳು ಹರಿಯುವ ನೀರು ಮತ್ತು ನೀರಿನ ತುಂತುರಿನ ಮೂಲಕ ಹರಡುತ್ತವೆ. ನೀರು ನಿಲ್ಲುವುದು ಬೇರು ಕೊಳೆ ಶಿಲೀಂಧ್ರದ ಸೋಂಕಿನ ಸಾಮಾನ್ಯ ಮೂಲವಾಗಿದೆ.


ಮುಂಜಾಗ್ರತಾ ಕ್ರಮಗಳು

  • ಚೆನ್ನಾಗಿ ನೀರು ಬಸಿದು ಹೋಗಿರುವ ಪ್ರದೇಶಗಳಲ್ಲಿ ಸಸ್ಯಗಳನ್ನು ನೆಡಿ.
  • ಅತಿಯಾಗಿ ನೀರುಣಿಸುವುದನ್ನು ತಪ್ಪಿಸಿ.
  • ಮಣ್ಣಿನೊಂದಿಗೆ ಎಲೆಗಳು ಅಥವಾ ಹಣ್ಣುಗಳ ನೇರ ಸಂಪರ್ಕವನ್ನು ತಪ್ಪಿಸಿ.
  • ಮರದ ಉಣ್ಣೆ ಅಥವಾ ಒಣಹುಲ್ಲನ್ನು ಬಳಸಿ ಕೆಳಭಾಗವನ್ನು ಮುಚ್ಚಿ.
  • ಸೋಂಕಿತ ಪ್ರದೇಶಗಳಲ್ಲಿ ಸಸ್ಯಗಳನ್ನು ನೆಡಬೇಡಿ.
  • ಚೇತರಿಸಿಕೊಳ್ಳಬಲ್ಲ ಪ್ರಭೇದಗಳನ್ನು ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ