ಇತರೆ

ವರ್ಟಿಸಿಲಿಯಮ್ ವಿಲ್ಟ್

Verticillium spp.

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳು ಹಳದಿಯಾಗುವುದು- ಅಂಚುಗಳಿಂದ ಪ್ರಾರಂಭವಾಗಿ.
  • ಎಲೆಗಳ ಮುಖ್ಯ ಸಿರೆಗಳು ಹಸಿರಾಗಿಯೇ ಇರುತ್ತವೆ.
  • ಕಾಂಡಗಳ ಮೇಲೆ ಕಪ್ಪು ಪಟ್ಟೆಗಳು.
  • ಸಸ್ಯ ಬಾಡುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

26 ಬೆಳೆಗಳು
ಜಲ್ದರು ಹಣ್ಣು
ಹುರುಳಿ
ಹಾಗಲಕಾಯಿ
ಎಲೆಕೋಸು
ಇನ್ನಷ್ಟು

ಇತರೆ

ರೋಗಲಕ್ಷಣಗಳು

ವಿವಿಧ ಬೆಳೆಗಳ ನಡುವೆ ರೋಗಲಕ್ಷಣಗಳಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಮೊಟ್ಟಮೊದಲು ಹಳೆಯ ಎಲೆಗಳ ಮೇಲೆ ಕ್ಲೋರೋಸಿಸ್ ಕಾಣಿಸಿಕೊಳ್ಳುತ್ತದೆ, ನಂತರದಲ್ಲಿ ನೆಕ್ರೋಸಿಸ್ ಕಾಣಿಸುತ್ತದೆ. ಕೆಲವು ಹಂತದಲ್ಲಿ, ಎಲೆಗಳ ಒಂದು ಭಾಗದಲ್ಲಿ ಮಾತ್ರ, ಕೆಲವೊಮ್ಮೆ ಸೆಕ್ಟರ್ ಕ್ಲೋರೋಸಿಸ್ ಅಥವಾ "ಒಂದು-ಬದಿಯ ಬಾಡುವಿಕೆ" ಎಂದು ಕರೆಯಲಾಗುವ ಲಕ್ಷಣ ಕಾಣಿಸಿಕೊಳ್ಳುತ್ತದೆ. ಎಲೆಗಳ ಒಂದು ಬದಿ ಮಾತ್ರ ಬಾಡಿದಂತಾಗುತ್ತದೆ. ಬೆಚ್ಚನೆಯ ಬಿಸಿಲಿನ ವಾತಾವರಣದಲ್ಲಿ ಇದು ತೀವ್ರಗೊಳ್ಳುತ್ತದೆ. ಕಾಂಡದ ಮೇಲೆ ಕಪ್ಪು ಪಟ್ಟೆಯೊಂದು ಕಾಣಿಸಿಕೊಳ್ಳುತ್ತದೆ ಮತ್ತು ಕೆಳಗಿನಿಂದ ಮೇಲೆ ಹರಡುತ್ತದೆ. ಆದರೆ ವಾಸ್ತವದಲ್ಲಿ ಅದು ಕಾಂಡವನ್ನು ಸಂಪೂರ್ಣವಾಗಿ ಸುತ್ತುವರಿದಿರುತ್ತದೆ. ಶಿಲೀಂಧ್ರಗಳ ಬೆಳವಣಿಗೆಯಿಂದ ನಾಳೀಯ ಅಂಗಾಂಶಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಾಗ, ಚಿಗುರುಗಳು ಕೂಡ ಬಾಡಲು ಆರಂಭಿಸುತ್ತವೆ, ಮತ್ತು ನಾಳೀಯ ಅಂಗಾಂಶಗಳು ಕಂದು ಬಣ್ಣಕ್ಕೆ ತಿರುಗುತ್ತವೆ. ಮರಗಳಲ್ಲಿ ಕಳಪೆ ಬೆಳವಣಿಗೆ, ಎಲೆ ಅಕಾಲಿಕವಾಗಿ ಹಣ್ಣಾಗುವುದು ಮತ್ತು ಮರದ ಅಂಗಾಂಶಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳುವುದು ಲಕ್ಷಣಗಳಾಗಿವೆ. ಕೆಲವೊಮ್ಮೆ, ಲೆನ್ಸ್ ನ ಸಹಾಯದಿಂದ ಪರಿಶೀಲಿಸಿದರೆ, ಸಾಯುತ್ತಿರುವ ಅಂಗಾಂಶಗಳಲ್ಲಿ ಅಥವಾ ಜೀವಂತ ಅಂಗಾಂಶಗಳಲ್ಲೂ ಸಣ್ಣ ಕಪ್ಪು ಚುಕ್ಕೆಗಳು ಗೋಚರಿಸುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸ್ಟ್ರೆಪ್ಟೊಮೈಸಸ್ ಲಿಡಿಕಸ್ ಅನ್ನು ಹೊಂದಿರುವ ಜೈವಿಕ ಶಿಲೀಂಧ್ರನಾಶಕಗಳು ಶಿಲೀಂಧ್ರಗಳ ಜೀವನ ಚಕ್ರವನ್ನು ಕತ್ತರಿಸುತ್ತವೆ, ಮತ್ತು ರೋಗದ ಪ್ರಗತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ಮಾರ್ಗವನ್ನು ಮೊದಲು ಪರಿಗಣಿಸಿ. ಮರಗಳು ಈ ರೋಗಕ್ಕೆ ತುತ್ತಾಗಿದ್ದರೆ ಅದನ್ನು ತೊಡೆದುಹಾಕುವುದು ಬಹಳ ಕಷ್ಟ. ಮಣ್ಣಿನ ಫ್ಯೂಮಿಗಂಟ್ಗಳ ಬಳಕೆ ಪರಿಣಾಮಕಾರಿ, ಆದರೆ ಅದೊಂದು ದುಬಾರಿ ನಿಯಂತ್ರಣ ತಂತ್ರವಾಗಿದೆ. ಪರಿಣಾಮಕಾರಿತ್ವವು ಬಳಸಿದ ರಾಸಾಯನಿಕ, ಪ್ರಮಾಣ, ಮತ್ತು ಪರಿಸರದ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಪೀಡಿತ ಸಸ್ಯದ ಭಾಗಗಳ ಚಿಕಿತ್ಸೆಯನ್ನು ಕೂಡಾ ಕಂಡುಕೊಳ್ಳಬಹುದು.

ಅದಕ್ಕೆ ಏನು ಕಾರಣ

ವರ್ಟೆಸಿಲಿಯಂ ವಿಲ್ಟ್ ಮಣ್ಣಿನಿಂದ ಹುಟ್ಟುವ ಶಿಲೀಂಧ್ರಗಳಿಂದ ಉಂಟಾಗುತ್ತದೆ. ಇದು ಆಶ್ರಯದಾತ ಸಸ್ಯಗಳು ಲಭ್ಯವಿಲ್ಲದಿದ್ದಾಗ ಮಣ್ಣಿನಲ್ಲಿರುವ ಬೆಳೆಯ ಉಳಿಕೆಗಳಲ್ಲಿ ಬದುಕಬಲ್ಲದು. ಇದು ತೊಗಟೆಯಲ್ಲಿನ ಸಣ್ಣಬೇರುಗಳು ಅಥವಾ ಗಾಯಗಳ ಮೂಲಕ ನಾಳೀಯ ಅಂಗಾಂಶವನ್ನು ಪ್ರವೇಶಿಸುತ್ತದೆ. ಒಮ್ಮೆ ಸಸ್ಯ ಅಥವಾ ಮರದ ಒಳಗೆ ಪ್ರವೇಶಿದ ನಂತರ, ಇದು ವೇಗವಾಗಿ ಬೆಳೆಯುತ್ತದೆ ಮತ್ತು ನೀರು ಹಾಗು ಪೋಷಕಾಂಶಗಳ ಸಾಗಣೆಯನ್ನು ನಿರ್ಬಂಧಿಸುತ್ತದೆ. ಇದರಿಂದಾಗಿ ಗಿಡದ ಮೇಲಿನ ಭಾಗಗಳು (ಎಲೆಗಳು ಮತ್ತು ಕಾಂಡಗಳು) ಬಾಡುತ್ತವೆ ಮತ್ತು ಕೊಳೆಯಲು ಆರಂಭಿಸುತ್ತದೆ. ಬೆಚ್ಚಗಿನ ಬಿಸಿಲಿನ ವಾತಾವರಣದಿಂದ ಇದು ತೀವ್ರಗೊಳ್ಳುತ್ತದೆ. ರೋಗದ ನಂತರದ ಹಂತಗಳಲ್ಲಿ, ಶಿಲೀಂಧ್ರವು ಸಾಯುತ್ತಿರುವ ಅಂಗಾಂಶಗಳಲ್ಲಿ ನೆಲೆಸಿ ಕಪ್ಪನೆಯ ರಚನೆಯನ್ನು ರೂಪಿಸುತ್ತದೆ ಮತ್ತು ಇದನ್ನು ಭೂತಗನ್ನಡಿಯಲ್ಲಿ ವೀಕ್ಷಿಸಬಹುದು. ಶಿಲೀಂಧ್ರವು ಹಲವಾರು ವರ್ಷಗಳ ಕಾಲ ಒಂದು ಸ್ಥಳದಲ್ಲಿ ಬದುಕಬಲ್ಲದು.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಅಥವಾ ಸಹಿಷ್ಣು ಸಸ್ಯ ಪ್ರಭೇದಗಳನ್ನು ಬಳಸಿ.
  • ರೋಗ ಹರಡಲು ಕಾರಣಗುವಂತಹ ಸಂಭವನೀಯ ಅಂತರಬೆಳೆಗಳನ್ನು ಬಳಸಬೇಡಿ.
  • ಸಾರಜನಕ-ಭರಿತ ರಸಗೊಬ್ಬರಗಳನ್ನು ಮತ್ತು ನೀರಿನ ಅತೀ ಹೆಚ್ಚು ಬಳಕೆ ಮಾಡಬೇಡಿ.
  • ಸೋಂಕಿನ ವಿರುದ್ಧ ಸಸ್ಯಗಳನ್ನು ಬಲಪಡಿಸಲು ಸಸ್ಯದ ಫೋರ್ಟಿಫೈಯರ್ ಗಳನ್ನು ಬಳಸಿ.
  • ಸೋಂಕಿತ ಸಸ್ಯ ವಸ್ತುವನ್ನು ಕತ್ತರಿಸಿ, ತೆಗೆದುಹಾಕಿ ಮತ್ತು ಸುಟ್ಟು ಹಾಕಿ.ಸೋಂಕಿತ ಸಸ್ಯಗಳನ್ನು ನಿರ್ವಹಿಸಿದ ನಂತರ ಎಲ್ಲಾ ಉಪಕರಣಗಳು ಮತ್ತು ಸಲಕರಣೆಗಳನ್ನು ಸ್ವಚ್ಛಗೊಳಿಸಿ.
  • ಎಲೆಗಳು ತೇವವಾಗಿದ್ದಾಗ ಜಮೀನಿನಲ್ಲಿ ಕೆಲಸ ಮಾಡಬೇಡಿ.
  • ಕೃಷಿ ಕೆಲಸ ಮಾಡುವಾಗ ಬೇರುಗಳಿಗೆ ಹಾನಿಯಾಗದಂತೆ ಎಚ್ಚರವಹಿಸಿ.
  • ಕಾಲಕಾಲಕ್ಕೆ ಸೌರ ವಿಕಿರಣಗಳಿಗೆ ಮಣ್ಣನ್ನು ಒಡ್ಡಿ (ಸೌರೀಕರಣ).
  • ಸಸ್ಯದ ಉಳಿಕೆಗಳನ್ನು ತೆಗೆದುಹಾಕಿ ಮಣ್ಣಿನಲ್ಲಿ ಆಳವಾಗಿ ಹೂತುಬಿಡಿ ಅಥವಾ ಅವುಗಳನ್ನು ಸುಟ್ಟು ಬಿಡಿ.
  • ರೋಗಕ್ಕೆ ಆಶ್ರಯ ನೀಡದ ಸಸ್ಯಗಳನ್ನು ಸರದಿ ಬೆಳೆಗಳಾಗಿ ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ