ಇತರೆ

ಪ್ಲಮ್ ನ ತುಕ್ಕು ರೋಗ

Tranzschelia pruni spinosae

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಸಣ್ಣ, ಪ್ರಕಾಶಮಾನವಾದ ಹಳದಿ ಕಲೆಗಳು ಮೇಲಿನ ಎಲೆಯ ಮೇಲ್ಮೈಯಲ್ಲಿ ಮೊಸಾಯಿಕ್ ಮಾದರಿಯನ್ನು ರೂಪಿಸುತ್ತವೆ.
  • ಕೆಳಗಿನ ಎಲೆಯ ಮೇಲ್ಮೈಯಲ್ಲಿ ಈ ಕಲೆಗಳ ಕೆಳಗೆ ತುಕ್ಕು ಬಣ್ಣದ ತಿಳಿ ಕಂದು ಬಣ್ಣದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.
  • ತೀವ್ರವಾಗಿ ಸೋಂಕಿತ ಎಲೆಗಳು ಒಣಗುತ್ತವೆ, ಕಂದು ಬಣ್ಣಕ್ಕೆ ತಿರುಗುತ್ತವೆ ಮತ್ತು ಬೇಗ ಬೀಳುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

3 ಬೆಳೆಗಳು
ಬಾದಾಮಿ
ಜಲ್ದರು ಹಣ್ಣು
ಪೀಚ್

ಇತರೆ

ರೋಗಲಕ್ಷಣಗಳು

ಈ ರೋಗವು ಪ್ಲಮ್ ಮರಗಳು ಮತ್ತು ಸಾಂದರ್ಭಿಕವಾಗಿ ಇತರ ಸ್ಟೋನ್ ಹಣ್ಣಿನ ಮರಗಳ ಮೇಲೆ ಪರಿಣಾಮ ಬೀರುತ್ತದೆ. ವಸಂತಕಾಲದ ಕೊನೆಯಲ್ಲಿ ಎಲೆಗಳ ಮೇಲೆ ರೋಗಲಕ್ಷಣಗಳು ಕಂಡುಬರುತ್ತವೆ ಮತ್ತು ಮರದ ಜಾತಿಗಳನ್ನು ಅವಲಂಬಿಸಿ ಅದು ಸ್ವಲ್ಪ ಬದಲಾಗಬಹುದು. ಆರಂಭದಲ್ಲಿ, ಸಣ್ಣ, ಕೋನೀಯ, ಪ್ರಕಾಶಮಾನವಾದ ಹಳದಿ ಕಲೆಗಳು ಮೇಲಿನ ಎಲೆಯ ಮೇಲ್ಮೈಯಲ್ಲಿ ಮೊಸಾಯಿಕ್ ಮಾದರಿಯನ್ನು ರೂಪಿಸುತ್ತವೆ. ರೋಗವು ಮುಂದುವರೆದಂತೆ, ಕೆಳಗಿನ ಎಲೆಗಳ ಮೇಲ್ಮೈಯಲ್ಲಿ ಈ ಕಲೆಗಳ ಕೆಳಗೆ ತುಕ್ಕು ಹಿಡಿದಂತೆ ಕಾಣುವ ತಿಳಿ ಕಂದು ಬಣ್ಣದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ನಂತರದ ಋತುವಿನಲ್ಲಿ, ಅವು ಗಾಢ ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ತೀವ್ರವಾಗಿ ಸೋಂಕಿತವಾದ ಎಲೆಗಳು ಒಣಗುತ್ತವೆ, ಕಂದು ಬಣ್ಣಕ್ಕೆ ತಿರುಗುತ್ತವೆ ಮತ್ತು ವೇಗವಾಗಿ ಬೀಳುತ್ತವೆ. ಎಲೆಗಳ ಅಕಾಲಿಕ ಉದುರುವಿಕೆ ಮುಂದಿನ ಋತುಗಳಲ್ಲಿ ಹೂವಿನ ಬೆಳವಣಿಗೆ ಮತ್ತು ಹಣ್ಣಿನ ಗುಣಮಟ್ಟದ ಮೇಲೆ ಪ್ರತಿಕೂಲವಾಗಿ ಪರಿಣಾಮ ಬೀರಬಹುದು. ಇದಲ್ಲದೆ, ಇದು ವರ್ಷದಿಂದ ವರ್ಷಕ್ಕೆ ಒಂದೇ ಮರದ ಮೇಲೆ ಮುಂದುವರಿದರೆ, ಅದು ಮರದ ಶಕ್ತಿಯನ್ನು ದುರ್ಬಲಗೊಳಿಸಬಹುದು. ಹಣ್ಣುಗಳು ದೋಷಪೂರಿತವಾಗಬಹುದು ಮತ್ತು ಇದರಿಂದ ಮಾರಾಟವಾಗದೇ ಉಳಿಯಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಇದು ನೇರವಾಗಿ ಹಣ್ಣಿನ ಮೇಲೆ ಪರಿಣಾಮ ಬೀರುವುದಿಲ್ಲವಾದ್ದರಿಂದ, ಹೆಚ್ಚಿನ ಸಂದರ್ಭಗಳಲ್ಲಿ, ರೋಗಕಾರಕವು ಅನಿಯಮಿತವಾಗಿ ಕಾಣಿಸಿಕೊಳ್ಳುವುದರಿಂದ ಚಿಕಿತ್ಸೆಗಳ ಅಗತ್ಯವಿಲ್ಲ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಸೋಂಕಿನ ಮೊದಲ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಶಿಲೀಂಧ್ರನಾಶಕ ಸ್ಪ್ರೇಗಳನ್ನು ಪ್ರಾರಂಭಿಸಬೇಕು. ಮೈಕ್ಲೋಬುಟಾನಿಲ್, ಪೈರಾಕ್ಲೋಸ್ಟ್ರೋಬಿನ್, ಬೋಸ್ಕಾಲಿಡ್, ಮ್ಯಾಂಕೋಜೆಬ್, ಟ್ರೈಫ್ಲೋಕ್ಸಿಸ್ಟ್ರೋಬಿನ್ ಅಥವಾ ಡೈಫೆನೋಕೊನಜೋಲ್ ಆಧಾರಿತ ಉತ್ಪನ್ನಗಳ ಬಳಕೆಯು ರೋಗವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ತಡವಾಗಿ ಸೋಂಕು ಬಂದ ಸಂದರ್ಭದಲ್ಲಿ, ಸಾಧ್ಯವಾದರೆ, ಕೊಯ್ಲು ಮಾಡಿದ ನಂತರ ನೇರವಾಗಿ ಚಿಕಿತ್ಸೆ ನೀಡಬೇಕು.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಟ್ರಾಂಜಸ್ಚೆಲಿಯಾ ಪ್ರುನಿ-ಸ್ಪಿನೋಸೇ ಎಂಬ ಶಿಲೀಂಧ್ರದಿಂದ ಉಂಟಾಗುತ್ತವೆ, ಇದು ಕಡ್ಡಾಯ ಪರಾವಲಂಬಿಯಾಗಿದೆ. ಅಂದರೆ ಅದರ ಜೀವನ ಚಕ್ರವನ್ನು ಪೂರ್ಣಗೊಳಿಸಲು ಜೀವಂತ ಅಂಗಾಂಶಗಳ ಅಗತ್ಯವಿದೆ. ಶಿಲೀಂಧ್ರವು ಕೊಂಬೆಗಳ ತೊಗಟೆಯಲ್ಲಿ ಅಥವಾ ಮೊಗ್ಗಿನ ಸ್ಕೇಲ್ ಗಳಲ್ಲಿ ಬೀಜಕಗಳಾಗಿ ಚಳಿಗಾಲವನ್ನು ಕಳೆಯಬಹುದು. ಪರ್ಯಾಯವಾಗಿ, ಇದು ಬೇಸಿಗೆಯ ಕೊನೆಯಲ್ಲಿ ಅತಿಥೇಯ ಸಸ್ಯಗಳನ್ನು ಬದಲಾಯಿಸುತ್ತದೆ ಮತ್ತು ಪ್ಲಮ್ ಮರಗಳು ಸುಪ್ತವಾಗಿರುವಾಗ ಎನಿಮೋನ್ ಕುಲದ ಜಾತಿಗಳ ಮೇಲೆ ಉಳಿದುಕೊಳ್ಳುತ್ತದೆ. ಎಲೆಗಳ ಕೆಳಭಾಗದಲ್ಲಿರುವ ಚುಕ್ಕೆಗಳು ಬೀಜಕ-ಉತ್ಪಾದಿಸುವ ರಚನೆಗಳನ್ನು ಒಳಗೊಂಡಿರುತ್ತವೆ. ಅದು ಎರಡು ರೀತಿಯ ಬೀಜಕಗಳನ್ನು ನೀಡುತ್ತದೆ: ಒಂದು ವಸಂತಕಾಲದ ಕೊನೆಯಲ್ಲಿ ಮತ್ತು ಬೇಸಿಗೆಯಲ್ಲಿ ಸ್ಟೋನ್ ಹಣ್ಣುಗಳಲ್ಲಿ ಸೋಂಕು ತರುತ್ತದೆ ಅಥವಾ ಇನ್ನೊಂದು ಋತುವಿನ ಕೊನೆಯಲ್ಲಿ ಪರ್ಯಾಯ ಸಂಕುಲಗಳಿಗೆ ಪ್ರತ್ಯೇಕವಾಗಿ ಸೋಂಕು ತರುತ್ತದೆ. ಎರಡೂ ಸಂದರ್ಭಗಳಲ್ಲಿ, ಬೀಜಕಗಳು ಎಲೆಗಳ (ಇಬ್ಬನಿ ಅಥವಾ ಮಳೆ) ತೇವಾಂಶದ ಉಪಸ್ಥಿತಿಯಲ್ಲಿ ಸುಲಭವಾಗಿ ಮೊಳಕೆಯೊಡೆಯುತ್ತವೆ. ಕಡಿಮೆ ಎತ್ತರ, ಆರ್ದ್ರ ಸ್ಥಳಗಳು ಮತ್ತು ರೋಗಕ್ಕೆ ಒಳಗಾಗುವ ಪ್ರಭೇದಗಳು ಶಿಲೀಂಧ್ರದ ರೋಗದ ಸಂಭವವನ್ನು ಸುಗಮಗೊಳಿಸುತ್ತದೆ. ಪ್ರಪಂಚದ ಹೆಚ್ಚಿನ ಭಾಗಗಳಲ್ಲಿ ಈ ರೋಗವನ್ನು ಗಮನಿಸಲಾಗಿದೆ. ಇದು ವೇಗವಾಗಿ ಹರಡುತ್ತದೆ ಮತ್ತು ಹವಾಮಾನ ಪರಿಸ್ಥಿತಿಗಳು ಅದರ ಬೆಳವಣಿಗೆಗೆ ಅನುಕೂಲಕರವಾಗಿದ್ದರೆ ಸಾಂಕ್ರಾಮಿಕ ರೋಗದ ಹಂತ ತಲುಪಬಹುದು.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಆಯ್ಕೆಮಾಡಿ.
  • ಎಲೆಗೊಂಚಲುಗಳ ಉತ್ತಮ ವಾತಾಯನಕ್ಕೆ ಅನುವು ಮಾಡುವಂತೆ ಸಮರುವಿಕೆಯನ್ನು ಮಾಡಿ.
  • ಸಾರಜನಕ ಗೊಬ್ಬರಗಳ ಅತಿಯಾದ ಬಳಕೆಯನ್ನು ತಪ್ಪಿಸಿ.
  • ಜಮೀನುಗಳಲ್ಲಿ ಮತ್ತು ಸುತ್ತಮುತ್ತ ಯಾವುದೇ ಪರ್ಯಾಯ ಆಶ್ರಯದಾತ ಸಸ್ಯಗಳು ಇರದಂತೆ ಖಚಿತಪಡಿಸಿಕೊಳ್ಳಿ.
  • ಎಲೆಯಿಂದ ಕಲುಷಿತ ಎಲೆ ಕಸವನ್ನು ತೆಗೆದುಹಾಕಿ ಮತ್ತು ಅದನ್ನು ಸುಟ್ಟುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ