ಇತರೆ

ಹಣ್ಣು ಕೊಳೆತ

Monilinia fructigena

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಹೂವುಗಳು ಒಣಗುತ್ತವೆ ಮತ್ತು ಕಂದು ಬಣ್ಣಕ್ಕೆ ತಿರುಗುತ್ತವೆ.
  • ಮರದ ಅಂಗಾಂಶದಲ್ಲಿ ಹುಣ್ಣು ಭಾಗಗಳು ಬೆಳೆಯುತ್ತವೆ.
  • ಹಣ್ಣಿನ ಮೇಲೆ ಹಳದಿ-ಕಂದು ಬಣ್ಣದ, ವೃತ್ತಾಕಾರದ ಕಲೆಗಳು.
  • ಹೂವು, ಕೊಂಬೆಗಳು ಮತ್ತು ಹಣ್ಣಿನ ಮೇಲೆ ಬೂದಿ-ಬೂದು-ಕಂದು ಬೀಜಕ ಗೆಡ್ಡೆಗಳು.
  • ಮರಗಳ ಮೇಲಿನ ಹಣ್ಣುಗಳು ಬಾಡುತ್ತವೆ ಮತ್ತು "ಸತ್ತಂತೆ (ಮಮ್ಮಿ)" ಆಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

6 ಬೆಳೆಗಳು
ಬಾದಾಮಿ
ಸೇಬು
ಜಲ್ದರು ಹಣ್ಣು
ಚೆರ್ರಿ
ಇನ್ನಷ್ಟು

ಇತರೆ

ರೋಗಲಕ್ಷಣಗಳು

ರೋಗಲಕ್ಷಣಗಳು ಮರದ ಜಾತಿಗಳನ್ನು ಅವಲಂಬಿಸಿ ಬದಲಾಗುತ್ತವೆ. ಆದರೆ ಸಾಮಾನ್ಯವಾಗಿ ಹೂವು ರೋಗ, ರೆಂಬೆ ಕೊಳೆತ ಮತ್ತು ಹಣ್ಣುಗಳ ಕಂದು ಕೊಳೆತ ಎಂದು ಪ್ರತ್ಯೇಕಿಸಲ್ಪಡುತ್ತವೆ. ಸೋಂಕಿತ ಹೂವುಗಳು ಒಣಗುತ್ತವೆ, ಕಂದು ಬಣ್ಣಕ್ಕೆ ತಿರುಗುತ್ತವೆ ಮತ್ತು ಸಾಮಾನ್ಯವಾಗಿ ರೆಂಬೆಗೆ ಅಂಟಿಕೊಂಡಿರುತ್ತವೆ. ಕೊಳೆತ ಹುಣ್ಣಿನಂತಹ ಪ್ರದೇಶಗಳು ಮರದ ಅಂಗಾಂಶದಲ್ಲಿ ಬೆಳೆಯುತ್ತವೆ. ತೇವಾಂಶವುಳ್ಳ ಅಥವಾ ಆರ್ದ್ರ ಪರಿಸ್ಥಿತಿಗಳಲ್ಲಿ, ಬೂದಿ-ಬೂದು-ಕಂದು ಬಣ್ಣದ ಬೀಜಕ ಗೆಡ್ಡೆಗಳು ರೋಗಪೀಡಿತ ಹೂವುಗಳು ಮತ್ತು ಕೊಂಬೆಗಳ ಮೇಲೆ ರೂಪುಗೊಳ್ಳುತ್ತವೆ. ಒಂದು ಅಂಟಾದ ವಸ್ತುವು ಸಾಮಾನ್ಯವಾಗಿ ಕ್ಯಾಂಕರ್‌ಗಳಿಂದ ಹೊರಸೂಸುತ್ತದೆ. ಇದರಿಂದಾಗಿ ರೋಗ ತಗುಲಿದ ಹೂವುಗಳು ರೆಂಬೆಗೆ ಅಂಟಿಕೊಳ್ಳುತ್ತವೆ. ಸಾಮಾನ್ಯವಾಗಿ ಕೊಯ್ಲಿಗೆ 2 ರಿಂದ 3 ವಾರಗಳ ಮೊದಲು, ಪಕ್ವತೆಯ ಕೊನೆಯ ಹಂತಗಳಲ್ಲಿ ಕಂದು ಕೊಳೆತಕ್ಕೆ ಹಣ್ಣು ಒಳಗಾಗುವುದು ಹೆಚ್ಚಾಗುತ್ತದೆ. ಆರಂಭದಲ್ಲಿ, ಹಳದಿ-ಕಂದು, ವೃತ್ತಾಕಾರದ ಕಲೆಗಳು ಸಿಪ್ಪೆಯ ಮೇಲೆ ಗೋಚರಿಸುತ್ತವೆ. ಆರ್ದ್ರ ಪರಿಸ್ಥಿತಿಗಳಲ್ಲಿ, ಈ ಕಲೆಗಳಲ್ಲಿ ಬೀಜಕಗಳ ಬೂದಿ-ಬೂದು-ಕಂದು ರಾಶಿಗಳು ಬೆಳೆಯುತ್ತವೆ. ನೆಲಕ್ಕೆ ಬೀಳದ ರೋಗಗ್ರಸ್ತ ಹಣ್ಣುಗಳು ನಿರ್ಜಲೀಕರಣಗೊಳ್ಳುತ್ತವೆ ಮತ್ತು ಕೊಂಬೆಗೆ ಅಂಟಿಕೊಳ್ಳುವ "ಸತ್ತ ಹಣ್ಣುಗಳಂತೆ" (ಮಮ್ಮಿಗಳು) ಆಗುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಹೈಡ್ರೊ-ಕೂಲಿಂಗ್ ಎಂದು ಕರೆಯಲ್ಪಡುವ ಹಣ್ಣು-ಸಂರಕ್ಷಿಸುವ ವಿಧಾನವು ಸಂಗ್ರಹಣೆ ಅಥವಾ ಸಾಗಣೆಯ ಸಮಯದಲ್ಲಿ ಶಿಲೀಂಧ್ರಗಳ ಬೆಳವಣಿಗೆಯನ್ನು ತಡೆಯಬಹುದು. ಇದರಲ್ಲಿ ಹೊಸದಾಗಿ ಕೊಯ್ಲು ಮಾಡಿದ ಹಣ್ಣುಗಳು ಮತ್ತು ತರಕಾರಿಗಳ ಶಾಖವನ್ನು ಐಸ್ ನೀರಿನಲ್ಲಿ ಮುಳುಗಿಸುವ ಮಾಡುವ ಮೂಲಕ ತೆಗೆದುಹಾಕಲಾಗುತ್ತದೆ. ಬ್ಯಾಸಿಲಸ್ ಸಬ್ಟಿಲಿಸ್ ಆಧಾರಿತ ಜೈವಿಕ ಶಿಲೀಂಧ್ರನಾಶಕಗಳು ಮೊನಿಲಿನಿಯಾ ಫ್ರುಕ್ಟಿಜೆನಾಗೆ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ಮುಂಜಾಗ್ರತಾ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಡೈಕಾರ್ಬಾಕ್ಸಿಮೈಡ್ಸ್, ಬೆಂಜಿಮಿಡಾಜೋಲ್ಗಳು, ಟ್ರೈಫೊರಿನ್, ಕ್ಲೋರೊಥಲೋನಿಲ್, ಮೈಕ್ಲೋಬುಟಾನಿಲ್, ಫೆನ್ಬುಕೊನಜೋಲ್, ಪ್ರೊಪಿಕೊನಜೋಲ್, ಫೆನ್ಹೆಕ್ಸಾಮಿಡ್ ಮತ್ತು ಅನಿಲಿನೊಪಿರಿಮಿಡಿನ್ಗಳ ಆಧಾರದ ಮೇಲೆ ಶಿಲೀಂಧ್ರನಾಶಕಗಳ ಸಮಯೋಚಿತ ಮತ್ತು ಪುನರಾವರ್ತಿತ ಬಳಕೆಯು ರೋಗದ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿದೆ. ಹೊಸ ಶಿಲೀಂಧ್ರನಾಶಕಗಳಾದ ಪೈರಾಕ್ಲೋಸ್ಟ್ರೋಬಿನ್ ಮತ್ತು ಬೋಸ್ಕಲಿಡ್ ಕೂಡ ಪರಿಣಾಮಕಾರಿ. ಸರಿಯಾದ ಸಿಂಪಡಣೆಯು ಸ್ಕ್ಯಾಬ್, ಬೂದಿ ರೋಗ, ತುಕ್ಕು ರೋಗ, ರಸ್ಸೆಟ್ ಸ್ಕ್ಯಾಬ್ ಅಥವಾ ಬೂದು ರೋಗ ಮುಂತಾದ ಇತರ ರೋಗಗಳ ಏಕಕಾಲಿಕ ಸಂಭವವನ್ನು ಅವಲಂಬಿಸಿರುತ್ತದೆ. ಹಣ್ಣುಗಳಿಗೆ ಗಾಯಗಳನ್ನು ತಪ್ಪಿಸಲು ಕೀಟ ನಿಯಂತ್ರಣವೂ ಮುಖ್ಯವಾಗಿದೆ.

ಅದಕ್ಕೆ ಏನು ಕಾರಣ

ಮೊನಿಲಿನಿಯಾ ಫ್ರುಕ್ಟಿಜೆನಾ ಎಂಬ ಶಿಲೀಂಧ್ರದಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಬೆಚ್ಚಗಿನ, ಆರ್ದ್ರ ವಾತಾವರಣದಲ್ಲಿ ಬೆಳೆಯುತ್ತದೆ. ಕೆಲವು ಸಂದರ್ಭಗಳಲ್ಲಿ, ಇತರ ಶಿಲೀಂಧ್ರಗಳು ಇದನ್ನುಂಟುಮಾಡಬಹುದು. ಎಲ್ಲಾ ಸಂದರ್ಭಗಳಲ್ಲಿ, ಅವು ಸತ್ತ ಹಣ್ಣುಗಳಲ್ಲಿ ಅಥವಾ ಚಿಗುರುಗಳಲ್ಲಿ ಚಳಿನಿದ್ದೆ(ಹೈಬರ್ನೇಟ್)ಮಾಡುತ್ತವೆ. ಆರಂಭಿಕ ಸೋಂಕು ಸಾಮಾನ್ಯವಾಗಿ ಬೀಜಕಗಳ ಮೂಲಕ ಹೂವುಗಳ ಪರಾಗ ಅಥವಾ ಪುಷ್ಪಗರ್ಭದ ಮೇಲೆ ಇಳಿಯುತ್ತದೆ. ನಂತರ ಶಿಲೀಂಧ್ರವು ಹೂವುಗಳ ಒಳಗಿನ ಅಂಗಾಂಶಗಳನ್ನು (ಹೂವಿನ ಕೊಳವೆ, ಅಂಡಾಶಯ ಮತ್ತು ಪುಷ್ಪಮಂಜರಿ) ಆಕ್ರಮಿಸುತ್ತದೆ ಮತ್ತು ಹೂವು ಅಂಟಿಕೊಂಡಿರುವ ರೆಂಬೆಯನ್ನು ತಲುಪುತ್ತದೆ. ಹೂವುಗಳು ಮತ್ತು ಕೊಂಬೆಗಳು ಕ್ರಮವಾಗಿ ಕೊಳೆತ ಮತ್ತು ಬೊಕ್ಕೆಗಳನ್ನು ಕ್ರಮೇಣವಾಗಿ ಬೆಳೆಸಿಕೊಳ್ಳುತ್ತವೆ. ಫಂಗಸ್ ಬೀಜಕಗಳು ಮತ್ತಷ್ಟು ಸೋಂಕಿಗಾಗಿ ಮತ್ತೊಂದು ಮರದ ಕೊಂಬೆಗೆ ಪ್ರಯಾಣಿಸುವವರೆಗೆ ಸತ್ತ ಹಣ್ಣಿನ ಮೇಲೆ ನೆಲೆಸಬಹುದು. ಸೋಂಕಿತ ಹಣ್ಣುಗಳು ಮತ್ತು ವಿಶೇಷವಾಗಿ ಸತ್ತ ಹಣ್ಣುಗಳು ಸೋಂಕಿನ ಅತ್ಯಂತ ಹೇರಳವಾದ ಮೂಲವಾಗಿವೆ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ ರೋಗ ನಿರೋಧಕ ಪ್ರಭೇದಗಳನ್ನು ಆಯ್ಕೆಮಾಡಿ.
  • ಹೊಲದ ಕೆಲಸದ ಸಮಯದಲ್ಲಿ ಅಥವಾ ಕೀಟಗಳಿಂದ ಹಣ್ಣುಗಳಿಗೆ ಯಾವುದೇ ಗಾಯಗಳಾಗುವುದನ್ನು ತಪ್ಪಿಸಿ.
  • ಮೇಲಾವರಣವು ತೇವವಾಗದಂತೆ ನೋಡಿಕೊಳ್ಳಿ, ಉದಾಹರಣೆಗೆ ಸೂಕ್ತವಾದ ಸಮರುವಿಕೆಯ ಮೂಲಕ.
  • ಕೀಟಕ್ಕೆ ಪರ್ಯಾಯವಾಗಿ ಆಶ್ರಯ ನೀಡುವ ಹಣ್ಣಿನ ತೋಟದಲ್ಲಿರುವ ಕಳೆಗಳನ್ನು ತೆಗೆದುಹಾಕಿ.
  • ಸೋಂಕಿನ ಮೊದಲ ಚಿಹ್ನೆಯಲ್ಲೇ ಮರದ ಆರೋಗ್ಯಕರವಾಗಿರುವ ಭಾಗದಿಂದ 20 ರಿಂದ 30 ಸೆಂ.ಮೀ.ವರೆಗಿನ ಎಲ್ಲಾ ಸಾಯುತ್ತಿರುವ ಚಿಗುರುಗಳನ್ನು ಕತ್ತರಿಸಿ.
  • ಸೋಂಕು ಹರಡುವುದನ್ನು ತಡೆಗಟ್ಟಲು ಎಲ್ಲಾ ಸೋಂಕಿತ ಹಣ್ಣುಗಳು ಅಥವಾ ಕೊಂಬೆಗಳನ್ನು ತೆಗೆದುಹಾಕಿ ಮತ್ತು ನಾಶಮಾಡಿ (ಸುಟ್ಟು ಅಥವಾ ಹೂತುಹಾಕುವ ಮೂಲಕ).
  • ಹೆಚ್ಚಿನ ನೈರ್ಮಲ್ಯ ಗುಣಮಟ್ಟವನ್ನು ಕಾಪಾಡಿಕೊಳ್ಳುವುದನ್ನು ಮರೆಯಬೇಡಿ.
  • ಸಾರಜನಕ ಗೊಬ್ಬರಗಳ ಅತಿಯಾದ ಬಳಕೆಯನ್ನು ಮಾಡಬೇಡಿ.
  • ಸಂಗ್ರಹಿಸಿದ ಹಣ್ಣುಗಳಲ್ಲಿ ರೋಗ ಲಕ್ಷಣಗಳಿಗಾಗಿ ಮೇಲ್ವಿಚಾರಣೆ ಮಾಡಿ.
  • ಇದು ಪ್ರಮುಖ ಹರಡುವ ವಾಹಕವಾಗಿದೆ.
  • ಶೇಖರಣೆ ಅಥವಾ ಸಾಗಣೆಯ ಸಮಯದಲ್ಲಿ ಶಿಲೀಂಧ್ರದ ಬೆಳವಣಿಗೆಯನ್ನು ನಿಧಾನಗೊಳಿಸಲು ಹಣ್ಣುಗಳನ್ನು ಸುಮಾರು 5 °C ಗಿಂತ ಕಡಿಮೆ ತಾಪಮಾನದಲ್ಲಿ ತಣ್ಣಗಾಗಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ