ಇತರೆ

ಕಂದು ಕೊಳೆತ

Monilinia laxa

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಹೂವುಗಳ ಬಾಡಿ ಕಂದು ಬಣ್ಣಕ್ಕೆ ತಿರುಗುತ್ತವೆ.
  • ಅಂಟಾದ ರಾಶಿಯಲ್ಲಿ ಕೊಂಬೆಗೆ ಅಂಟಿಕೊಂಡಿರುತ್ತವೆ.
  • ಮೃದುವಾದ, ಕಂದು ಬಣ್ಣದ ತೇಪೆಗಳು ಮತ್ತು ಹಣ್ಣುಗಳು.
  • ಹಣ್ಣುಗಳು ಸತ್ತಂತೆ ಸೊರಗುತ್ತವೆ.
  • ಸಂಗ್ರಹಿಸಿದ ಹಣ್ಣುಗಳು ಕಪ್ಪು ಬಣ್ಣಕ್ಕೆ ತಿರುಗಬಹುದು.

ಇವುಗಳಲ್ಲಿ ಸಹ ಕಾಣಬಹುದು

7 ಬೆಳೆಗಳು
ಬಾದಾಮಿ
ಸೇಬು
ಜಲ್ದರು ಹಣ್ಣು
ಚೆರ್ರಿ
ಇನ್ನಷ್ಟು

ಇತರೆ

ರೋಗಲಕ್ಷಣಗಳು

ರೋಗಲಕ್ಷಣಗಳು ಬೆಳೆಯನ್ನು ಅವಲಂಬಿಸಿ ಬದಲಾಗುತ್ತವೆ ಮತ್ತು ಮುಖ್ಯವಾಗಿ ಹೂವು ಕೊಳೆತ ಮತ್ತು ಹಣ್ಣು ಕೊಳೆಯುವ ಹಂತದಿಂದ ನಿರೂಪಿಸಲ್ಪಡುತ್ತವೆ. ಬ್ಲಾಸಮ್ ಬ್ಲೈಟ್‌ನ ಮೊದಲ ಲಕ್ಷಣವೆಂದರೆ ಹೂವುಗಳು ಒಣಗುವುದು. ಇದು ಕಂದು ಬಣ್ಣಕ್ಕೆ ತಿರುಗುತ್ತದೆ ಮತ್ತು ಅಂಟಾದ ರಾಶಿಯಾಗಿ ರೆಂಬೆಗೆ ಅಂಟಿಕೊಂಡಿರುತ್ತದೆ. ಸೋಂಕುಗಳು ರೆಂಬೆಯೊಳಗೆ ಹರಡಬಹುದು ಮತ್ತು ಅದನ್ನು ಆವರಿಸಿಕೊಳ್ಳಬಹುದು. ಚಿಗುರುಗಳು ಸಂಪೂರ್ಣವಾಗಿ ಸಾಯದಿದ್ದರೆ, ಸೋಂಕು ಮೊಗ್ಗಿನಿಂದ ಬೆಳೆಯುತ್ತಿರುವ ಎಲೆಗಳು ಮತ್ತು ಹಣ್ಣುಗಳಿಗೆ ಸಾಗುತ್ತದೆ. ಎಲೆಗಳು ಒಣಗುತ್ತವೆ ಆದರೆ ವರ್ಷವಿಡೀ ಮರದಲ್ಲೇ ಉಳಿಯುತ್ತವೆ. ಹಣ್ಣು ಕೊಳೆತವು ಮರಗಳ ಮೇಲೆ ನೇತಾಡುವ ಹಣ್ಣುಗಳು ಮತ್ತು ಸಂಗ್ರಹಿಸಿದ ಹಣ್ಣುಗಳ ಮೇಲೂ ಸಹ ಪರಿಣಾಮ ಬೀರಬಹುದು. ಹಣ್ಣುಗಳ ಮೇಲೆ ಮೃದುವಾದ, ಕಂದು ಬಣ್ಣದ ತೇಪೆಗಳು ಕಾಣಿಸಿಕೊಳ್ಳುತ್ತವೆ. ತೇಪೆಗಳು ಬೆಳೆದಂತೆ, ಬಿಳಿ ಅಥವಾ ಹಳದಿ ಬೊಕ್ಕೆಗಳು ಕಂದುಬಣ್ಣದ ಪ್ರದೇಶಗಳಲ್ಲಿ ಕೆಲವೊಮ್ಮೆ ಕೇಂದ್ರೀಕೃತ ವಲಯಗಳಲ್ಲಿ ಬೆಳೆಯುತ್ತವೆ. ಹಣ್ಣುಗಳು ಕ್ರಮೇಣ ನಿರ್ಜಲೀಕರಣಗೊಳ್ಳುತ್ತವೆ, ಕೊಳೆಯುತ್ತವೆ ಮತ್ತು ಮರದ ಮೇಲೆ ಸತ್ತಂತಾಗುತ್ತವೆ(ಮಮ್ಮಿಫೈ). ಸಂಗ್ರಹಿಸಿದ ಹಣ್ಣುಗಳ ಮೇಲೆ ಬೊಕ್ಕೆಗಳು ಬೆಳೆಯುವುದಿಲ್ಲ ಮತ್ತವು ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ತಿರುಗಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಹಣ್ಣಿನ ಕೊಳೆತ ಹಂತವನ್ನು ನಿಯಂತ್ರಿಸುವ ಅತ್ಯಂತ ಪರಿಣಾಮಕಾರಿ ವಿಧಾನವೆಂದರೆ ಗಾಯದ ಏಜೆಂಟ್ ಅನ್ನು ನಿರ್ಮೂಲನೆ ಮಾಡುವುದು. ವಾಹಕಗಳಾಗಿ ಕಾರ್ಯನಿರ್ವಹಿಸುವ ಅಥವಾ ಹಣ್ಣುಗಳ ಮೇಲೆ ಗಾಯಗಳನ್ನು ಉಂಟುಮಾಡುವ ಕೀಟಗಳು ಮತ್ತು ಪಕ್ಷಿಗಳ ನಿಯಂತ್ರಣವು ರೋಗದ ಸಂಭವವನ್ನು ಕಡಿಮೆ ಮಾಡಲು ಒಂದು ಮಾರ್ಗವಾಗಿದೆ. ಪಕ್ಷಿಗಳನ್ನು ಬೆದರು ಗೊಂಬೆಗಳಿಂದ ನಿಯಂತ್ರಿಸಬಹುದು. ಕಣಜದ ಗೂಡುಗಳನ್ನು ಹುಡುಕಿ ನಾಶಪಡಿಸಬೇಕು. ಹಣ್ಣುಗಳ ಪ್ಯಾಕಿಂಗ್ ಮತ್ತು ಶೇಖರಣೆಯಲ್ಲಿ ನಿರ್ದಿಷ್ಟ ಕಾಳಜಿಯ ಅಗತ್ಯವಿರುತ್ತದೆ. ಏಕೆಂದರೆ ಶಿಲೀಂಧ್ರವು ಹಣ್ಣುಗಳ ನಡುವೆ ಹರಡಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ಮುಂಜಾಗ್ರತಾ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಚೆರ್ರಿಗಳು ಈ ರೋಗಕ್ಕೆ ಅಷ್ಟಾಗಿ ಒಡ್ಡಿಕೊಳ್ಳದ ಸ್ಟೋನ್ ಹಣ್ಣುಗಳಾಗಿವೆ ಮತ್ತು ಹವಾಮಾನವು ಸೋಂಕಿಗೆ ವಿಶೇಷವಾಗಿ ಅನುಕೂಲಕರವಾಗಿದ್ದರೆ ಅಥವಾ ಹಣ್ಣಿನ ತೋಟವು ಈ ರೋಗದ ಇತಿಹಾಸವನ್ನು ಹೊಂದಿದ್ದರೆ ಹೊರತು ಮುಂಜಾಗ್ರತಾ ಸಿಂಪಡಣೆಗಳು ಅಗತ್ಯವಿರುವುದಿಲ್ಲ. ಡೈಫೆನೊಕೊನಜೋಲ್ ಮತ್ತು ಫೆನ್ಹೆಕ್ಸಾಮಿಡ್ ಆಧಾರಿತ ಶಿಲೀಂಧ್ರನಾಶಕಗಳ ಸಿಂಪಡಣೆಗಳಲ್ಲಿ ಒಂದು ಪರಿಣಾಮಕಾರಿಯಾಗಿದೆ. ಸೋಂಕಿನ ನಂತರದ ಹಂತದಲ್ಲಿ, ಶಿಲೀಂಧ್ರವನ್ನು ತೊಡೆದುಹಾಕಲು ಸಾಧ್ಯವಿಲ್ಲ. ಆಲಿಕಲ್ಲು ಮುಂತಾದ ಪ್ರತಿಕೂಲ ಹವಾಮಾನದ ನಂತರ ರಕ್ಷಣಾತ್ಮಕ ಶಿಲೀಂಧ್ರನಾಶಕವನ್ನು ಬಳಸಿ. ಕೀಟ ನಿಯಂತ್ರಣವು ಒಂದು ಪ್ರಮುಖ ಪರಿಗಣನೆಯಾಗಿರಬಹುದು ಏಕೆಂದರೆ ಮೊನಿಲಿಯಾ ಲಕ್ಸಾ ಗಾಯಗಳ ಮೂಲಕ ಸೋಂಕಿಗೆ ಆದ್ಯತೆ ನೀಡುತ್ತದೆ.

ಅದಕ್ಕೆ ಏನು ಕಾರಣ

ಮೊನಿಲಿಯಾ ಲ್ಯಾಕ್ಸಾವು ಅನೇಕ ಅತಿಥೇಯಗಳಿಗೆ ಸಸ್ಯಗಳಿಗೆ ಸೋಂಕು ತರುತ್ತದೆ. ವಿಶೇಷವಾಗಿ ಬಾದಾಮಿ, ಸೇಬು, ಏಪ್ರಿಕಾಟ್, ಚೆರ್ರಿ, ಪೀಚ್, ಪಿಯರ್, ಪ್ಲಮ್ ಅಥವಾ ಕ್ವಿನ್ಸ್‌ನಂತಹ ಸ್ಟೋನ್ ಹಣ್ಣುಗಳು. ಈ ಶಿಲೀಂಧ್ರವು ಮರಗಳಿಂದ ನೇತಾಡುವ ಒಣ ಎಲೆಗಳು ಅಥವಾ ಸತ್ತ ಹಣ್ಣುಗಳಲ್ಲಿ ಚಳಿಗಾಲವನ್ನು ಕಳೆಯುತ್ತದೆ ಮತ್ತು ಅದರ ಬೀಜಕಗಳು ಗಾಳಿ, ನೀರು ಅಥವಾ ಕೀಟಗಳ ಮೂಲಕ ಹರಡುತ್ತವೆ. ಹಣ್ಣುಗಳ ಮೇಲಿರುವ ಗಾಯಗಳು (ಪಕ್ಷಿಗಳು, ಕೀಟಗಳಿಂದ) ಅಥವಾ ಆರೋಗ್ಯಕರ ಮತ್ತು ಸೋಂಕಿತ ಭಾಗಗಳ ನಡುವಿನ ಸಂಪರ್ಕಗಳು ಸೋಂಕಿಗೆ ಸೂಕ್ತ ಪರಿಸ್ಥಿತಿ ಒದಗಿಸುತ್ತವೆ. ಹೂಬಿಡುವ ಸಮಯದಲ್ಲಿ ಹೆಚ್ಚಿನ ಆರ್ದ್ರತೆ, ಮಳೆ ಅಥವಾ ಇಬ್ಬನಿ ಮತ್ತು ಮಧ್ಯಮ ತಾಪಮಾನವು (15 ° ನಿಂದ 25 °C) ಸೋಂಕಿನ ಪ್ರಕ್ರಿಯೆಗೆ ಅನುಕೂಲಕರವಾಗಿರುತ್ತದೆ. ಈ ಪರಿಸ್ಥಿತಿಗಳಲ್ಲಿ ಹಣ್ಣುಗಳ ಮೇಲೆ ಬೊಕ್ಕೆಗಳ ಬೆಳವಣಿಗೆಯು ವಿಶೇಷವಾಗಿ ಎದ್ದುಕಾಣುತ್ತದೆ. ಹಣ್ಣುಗಳ ಮೇಲೆ ರೋಗಲಕ್ಷಣಗಳು ಬೇಸಿಗೆಯ ಮಧ್ಯದಿಂದ ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಅವುಗಳು ಮರದ ಮೇಲೆ ಅಥವಾ ಶೇಖರಣೆಯಲ್ಲಿದ್ದಾಗ. ಸಂಗ್ರಹಿಸಿದ ಹಣ್ಣುಗಳು ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ತಿರುಗಬಹುದು ಆದರೆ ಬೊಕ್ಕೆಗಳು ಬರುವುದಿಲ್ಲ. ಪ್ರಸರಣದ ಹೆಚ್ಚಿದ ಅಪಾಯದಿಂದಾಗಿ, ತೋಟಗಳಲ್ಲಿ ಅಥವಾ ಶೇಖರಣೆಯಲ್ಲಿ ಗಮನಾರ್ಹವಾದ ನಷ್ಟವನ್ನು ನಿರೀಕ್ಷಿಸಬಹುದು.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲಗಳಿಂದ ಆರೋಗ್ಯಕರ ಸಸ್ಯ ವಸ್ತುಗಳನ್ನು ಬಳಸಿ.
  • ಸರಿಯಾದ ನೀರಾವರಿಯೊಂದಿಗೆ ಉತ್ತಮ ಪೋಷಣೆಯ ಕೆಲಸವನ್ನು ಜಾರಿಗೊಳಿಸಿ.
  • ಉತ್ತಮ ಒಳಚರಂಡಿ ಮತ್ತು ಹೊಲದಲ್ಲಿ ಉತ್ತಮ ಗಾಳಿಯನ್ನು ಒದಗಿಸಿ.
  • ಪಕ್ಷಿಗಳಿಂದ ಹಾನಿಯನ್ನು ಕಡಿಮೆ ಮಾಡಲು ಬಲೆಗಳನ್ನು ಬಳಸಿ.
  • ನಿಯಮಿತವಾಗಿ ಹಣ್ಣಿನ ತೋಟವನ್ನು ಮೇಲ್ವಿಚಾರಣೆ ಮಾಡಿ ಮತ್ತು ಹಾನಿಗೊಳಗಾದ ಶಾಖೆಗಳನ್ನು ಅಥವಾ ಸತ್ತ ಹಣ್ಣುಗಳನ್ನು ನಾಶಮಾಡಿ.
  • ಹಣ್ಣುಗಳಿಗೆ ಗಾಯವಾಗುವುದಂತೆ ಮತ್ತು ಅವು ಮುರಿಯುವುದಂತೆ ನೋಡಿಕೊಳ್ಳಿ.
  • ಎಲೆಗಳ ವಾತಾಯನವನ್ನು ಹೆಚ್ಚಿಸುವ ವಿಧಾನಗಳೊಂದಿಗೆ ತಡವಾದ ಸಮರುವಿಕೆಯನ್ನು ಶಿಫಾರಸು ಮಾಡಲಾಗುತ್ತದೆ.
  • ಸಸ್ಯದ ಅವಶೇಷಗಳನ್ನು ನೆಲದಡಿಯಲ್ಲಿ ಹೂತುಹಾಕಲು ಆಳವಾಗಿ ಉಳುಮೆ ಮಾಡಿ.
  • ಶೇಖರಣಾ ಕೊಠಡಿಯು ಸ್ವಚ್ಛವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
  • 5 °C ತಾಪಮಾನದಲ್ಲಿ ಶುದ್ಧ, ಒಣ ಕೋಣೆಯಲ್ಲಿ ಹಣ್ಣುಗಳನ್ನು ಸಂಗ್ರಹಿಸಿ.
  • ಹಣ್ಣುಗಳನ್ನು ಕೊಯ್ಲು ಮಾಡುವಾಗ ತೊಟ್ಟು ಎಳೆದು ತೆಗೆಯದಂತೆ ನೋಡಿಕೊಳ್ಳಿ.
  • ಸಾಮಾನ್ಯ ನೈರ್ಮಲ್ಯವು ಸೋಂಕಿನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
  • ಶೇಖರಣೆಯಲ್ಲಿರುವ ಹಣ್ಣುಗಳನ್ನು ನಿಯಮಿತವಾಗಿ ಪರಿಶೀಲಿಸಿ ಮತ್ತು ಹಾನಿಗೊಳಗಾದವುಗಳನ್ನು ನಾಶಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ